ನೀವು ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸವನ್ನು ಹೊಂದಿದ್ದರೆ, ಏಪ್ರಿಲ್ 2022 ರಲ್ಲಿ ಉಳಿದಿರುವ ಬ್ಯಾಂಕ್ ರಜಾದಿನಗಳನ್ನು ಪರಿಶೀಲನೆ ಮಾಡುವುದು ಉತ್ತಮವಾಗಿದೆ ಯಾಕೆಂದರೆ ಈ ವಾರದಲ್ಲಿ ಬ್ಯಾಂಕ್‌ಗಳು ನಾಲ್ಕು ದಿನಗಳವರೆಗೆ ಬಂದ್ ಆಗಲಿದೆ.
ಎಲ್ಲಾ ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್‌ಗಳು ಈ ತಿಂಗಳು (ಏಪ್ರಿಲ್ 2022) 15 ದಿನಗಳವರೆಗೆ ಮುಚ್ಚಲ್ಪಡುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾರ್ಗಸೂಚಿಗಳ ಪ್ರಕಾರ, ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು ಮತ್ತು ಭಾರತದ ಪ್ರಾದೇಶಿಕ ಬ್ಯಾಂಕ್‌ಗಳು ನಿಗದಿತ ದಿನಾಂಕಗಳಲ್ಲಿ ಮುಚ್ಚಬೇಕಾಗುತ್ತದೆ.
ಆರ್‌ಬಿಐ ನಿಯಮದ ಪ್ರಕಾರ ರಜಾದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ. ವರ್ಗಾವಣೀಯ ಲಿಖಿತಗಳ ಅಧಿನಿಯಮ (ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್) ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಎಂದು ವರ್ಗೀಕರಣ ಮಾಡಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಸೂಚನೆಯ ಪ್ರಕಾರ, ವಾರಾಂತ್ಯದ ರಜಾದಿನಗಳನ್ನು ಹೊರತುಪಡಿಸಿ ಬ್ಯಾಂಕಿಂಗ್ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗಬಹುದು. ಹಾಗಾದರೆ ಈ ವಾರ ಯಾವೆಲ್ಲಾ ಕಾರಣಕ್ಕೆ ಬ್ಯಾಂಕ್ ರಜೆ ಇರಲಿದೆ ಹಾಗೂ ಯಾವ ದಿನ ಬ್ಯಾಂಕ್ ರಜೆ ಇರಲಿದೆ ಎಂದು ತಿಳಿಯಲು ಮುಂದೆ ಓದಿ...
ಏಪ್ರಿಲ್ 14 ಮತ್ತು ಏಪ್ರಿಲ್ 16 ರ ನಡುವೆ ಬರುವ ಹಬ್ಬಗಳ ಪಟ್ಟಿ:
* ಡಾ.ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ
* ಮಹಾವೀರ ಜಯಂತಿ
* ಬೈಸಾಖಿ
* ವೈಶಾಖಿ
* ತಮಿಳು ಹೊಸ ವರ್ಷದ ದಿನ
* ಚೀರೋಬಾ
* ಬಿಸು ಹಬ್ಬ
* ಶುಭ ಶುಕ್ರವಾರ
* ಬಂಗಾಳಿ ಹೊಸ ವರ್ಷದ ದಿನ (ನವವರ್ಷ)
* ಹಿಮಾಚಲ ದಿನ
* ವಿಷು
* ಬೊಹಾಗ್ ಬಿಹು
ಮುಂದಿನ ವಾರ ಬ್ಯಾಂಕ್‌ಗಳು ಯಾವಾಗ ಮುಚ್ಚಲ್ಪಡುತ್ತವೆ? (ಏಪ್ರಿಲ್ 10 ರಿಂದ ಪ್ರಾರಂಭವಾಗುತ್ತದೆ)
* ಏಪ್ರಿಲ್ 10, 2022 - ಭಾನುವಾರ
* ಏಪ್ರಿಲ್ 14, 2022 (ಗುರುವಾರ) - ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ/ಮಹಾವೀರ್ ಜಯಂತಿ/ಬೈಸಾಖಿ/ವೈಶಾಖಿ/ತಮಿಳು ಹೊಸ ವರ್ಷದ ದಿನ/ಚೀರೋಬಾ/ಬಿಜು ಹಬ್ಬ/ಬೋಹಾಗ್ ಬಿಹು (ಮೇಘಾಲಯ ಮತ್ತು ಹಿಮಾಚಲ ಪ್ರದೇಶ ಹೊರತುಪಡಿಸಿ ಭಾರತದಾದ್ಯಂತ)
* ಏಪ್ರಿಲ್ 15, 2022 (ಶುಕ್ರವಾರ) - ಶುಭ ಶುಕ್ರವಾರ/ಬಂಗಾಳಿ ಹೊಸ ವರ್ಷದ ದಿನ (ನಬಬರ್ಷ)/ಹಿಮಾಚಲ ದಿನ/ವಿಶು/ಬೋಹಾಗ್ ಬಿಹು (ರಾಜಸ್ಥಾನ, ಜಮ್ಮು ಮತ್ತು ಶ್ರೀನಗರ ಹೊರತುಪಡಿಸಿ ಭಾರತದಾದ್ಯಂತ)
ಏಪ್ರಿಲ್ 16, 2022 (ಶನಿವಾರ) - ಬೊಹಾಗ್ ಬಿಹು (ಅಸ್ಸಾಂ)


Click it and Unblock the Notifications