ಜನವರಿ 2024 ರಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 16 ರಜಾದಿನಗಳು ಇದ್ದು, ಈ ಪೈಕಿ ಕೆಲವು ರಜಾದಿನಗಳು ನಿರಂತರವಾಗಿ ಇರಲಿದೆ. ಈ ಶುಕ್ರವಾರದಿಂದ ಪ್ರಾರಂಭವಾಗುವ ವಿಸ್ತೃತ ಮೂರು ದಿನಗಳ ವಾರಾಂತ್ಯಕ್ಕೆ ಬ್ಯಾಂಕುಗಳು ಸಜ್ಜಾಗುತ್ತಿವೆ. ಈ ನಡುವೆ ನೀವು ರಜೆಯ ಬಗ್ಗೆ ತಿಳಿದಿರಬೇಕಾಗುತ್ತದೆ.
ಈ ಒಟ್ಟು 16 ರಜಾದಿನಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳು, ಭಾನುವಾರಗಳು ಮತ್ತು ಹೆಚ್ಚುವರಿ ಪ್ರಾದೇಶಿಕ ರಜಾದಿನಗಳು ಸೇರಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರಾಷ್ಟ್ರೀಯ ಅಥವಾ ರಾಜ್ಯ ರಜಾದಿನಗಳು, ಸಾಂಸ್ಕೃತಿಕ ಅಥವಾ ಧಾರ್ಮಿಕ ಆಚರಣೆಗಳು, ಕಾರ್ಯಾಚರಣೆಯ ಅವಶ್ಯಕತೆಗಳು, ಸರ್ಕಾರಿ ಪ್ರಕಟಣೆಗಳು ಮತ್ತು ಇತರ ಬ್ಯಾಂಕ್‌ಗಳೊಂದಿಗಿನ ಸಮನ್ವಯದಂತಹ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.

ಕೆಲವು ರಾಜ್ಯಗಳಲ್ಲಿ ಮೂರು ದಿನಗಳ ಕಾಲ ರಜೆ ಇದ್ದರೆ, ಇನ್ನು ಕೆಲವು ರಾಜ್ಯಗಳಲ್ಲಿ ಸತತವಾಗಿ ನಾಲ್ಕು ದಿನಗಳ ಕಾಲ ರಜೆ ಇರಲಿದೆ. ಉತ್ತರ ಪ್ರದೇಶ (ಯುಪಿ) ರಾಜ್ಯದಲ್ಲಿ ಹಜರತ್ ಅಲಿ ಅವರ ಜನ್ಮದಿನದ ಅಂಗವಾಗಿ ಜನವರಿ 25 ರಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲಾಗುತ್ತದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....
ಈ ವಾರದ ಬ್ಯಾಂಕ್ ರಜೆಗಳ ವೇಳಾಪಟ್ಟಿ ಇಲ್ಲಿದೆ:
* ಜನವರಿ 25 (ಗುರುವಾರ): ಥಾಯ್ ಪೂಸಂ- ಹಜರತ್ ಅಲಿ ಅವರ ಜನ್ಮದಿನ - ತಮಿಳುನಾಡು, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಬ್ಯಾಂಕುಗಳು ಮುಚ್ಚಲಾಗುತ್ತದೆ.
* ಜನವರಿ 26 (ಶುಕ್ರವಾರ): ಗಣರಾಜ್ಯೋತ್ಸವ - ರಾಷ್ಟ್ರವ್ಯಾಪಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
* ಜನವರಿ 27 (ನಾಲ್ಕನೇ ಶನಿವಾರ): ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
* ಜನವರಿ 28 (ಭಾನುವಾರ): ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಈ ವರ್ಷ ಶುಕ್ರವಾರದಂದು ಬರುವ ಗಣರಾಜ್ಯೋತ್ಸವದಂದು ಬ್ಯಾಂಕ್ ಬಂದ್ ಆಗಿರುತ್ತದೆ. ಅದಾದ ಬಳಿಕ ನಾಲ್ಕನೇ ಶನಿವಾರ ಮತ್ತು ಭಾನುವಾರ ಇರಲಿದ್ದು, ಸತತವಾಗಿ ಬ್ಯಾಂಕ್ ಬಂದ್ ಆಗಿರುತ್ತದೆ. ಬ್ಯಾಂಕುಗಳಿಗೆ ವಾರಾಂತ್ಯವನ್ನು ವಿಸ್ತರಿಸಲು ಕಾರಣವಾಗುತ್ತದೆ. ಈ ರಜೆಯ ದಿನಗಳಲ್ಲಿ ನೀವು ಬ್ಯಾಂಕ್‌ಗೆ ಭೇಟಿ ನೀಡಲು ಆಗದಿದ್ದರೂ ನೀವು ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.
ಗ್ರಾಹಕರು ವಿವಿಧ ವಹಿವಾಟುಗಳಿಗೆ ಮೊಬೈಲ್ ಬ್ಯಾಂಕಿಂಗ್ ಅನ್ನು ಬಳಸಿಕೊಳ್ಳಬಹುದು. ಆದರೆ ಯಾವುದೇ ಇತರೆ ಬ್ಯಾಂಕ್‌ನ ಕೆಲಸಕ್ಕಾಗಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಒದಗಿಸಿದ ರಜಾದಿನಗಳ ಪಟ್ಟಿಯನ್ನು ಆಧರಿಸಿ ಯೋಜಿಸಬೇಕಾಗುತ್ತದೆ. 2024 ರ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿಯನ್ನು ಆರ್‌ಬಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ ಕಾಣಬಹುದು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications