ಮುಂದಿನ ವಾರ ನೀವು ಬ್ಯಾಂಕ್‌ಗೆ ಹೋಗಿ ಯಾವುದೇ ಹಣಕಾಸು ವಹಿವಾಟು ನಡೆಸಬೇಕಾದರೆ ರಜಾ ದಿನಗಳ ಬಗ್ಗೆ ಮೊದಲೇ ತಿಳಿದಿರುವುದು ಅತೀ ಮುಖ್ಯವಾಗಿದೆ. ಮುಂದಿನ ವಾರ ಸಾಮಾನ್ಯವಾಗಿ ವಾರದಲ್ಲಿ ಬರುವ ರಜಾದಿನಗಳ ಜೊತೆಗೆ ಒಟ್ಟಾಗಿ ಹಲವು ರಾಜ್ಯಗಳಲ್ಲಿ ಬರೋಬ್ಬರಿ ನಾಲ್ಕು ದಿನಗಳ ಕಾಲ ಬ್ಯಾಂಕ್ ಬಂದ್ ಆಗಿರುತ್ತದೆ.
ಭಾನುವಾರ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರದಂದು, ಮುಂದಿನ ವಾರ ಭಾರತದ ಆಯ್ದ ರಾಜ್ಯಗಳಲ್ಲಿ ನಾಲ್ಕು ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಈ ನಡುವೆ ನಿಮ್ಮಲ್ಲಿ 2000 ರೂಪಾಯಿ ನೋಟುಗಳು ಡೆಪಾಸಿಟ್ ಮಾಡಬೇಕಾದರೆ, ಬದಲಾವಣೆ ಮಾಡಬೇಕಾದರೆ ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದೆ ಎಂಬುವುದು ಕೂಡಾ ಗಮನಾರ್ಹವಾಗಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಭಾನುವಾರ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳು ಸೇರಿದಂತೆ ಒಟ್ಟು 16 ಬ್ಯಾಂಕ್ ರಜೆಗಳಿವೆ. ಮುಂದಿನ ವಾರದಲ್ಲಿ ಹಲವಾರು ಬ್ಯಾಂಕ್ ರಜಾದಿನಗಳು ಇರುವುದರಿಂದ ಬ್ಯಾಂಕ್ ರಜೆಯ ಕ್ಯಾಲೆಂಡರ್ ಅನ್ನು ಎಚ್ಚರಿಕೆಯಿಂದ ನೋಡುವುದು ಬಹಳ ಮುಖ್ಯ. ಇಲ್ಲವಾದರೆ ಬ್ಯಾಂಕ್‌ಗೆ ಹೋಗಿ ಹಿಂದೆ ಬರಬೇಕಾಗುತ್ತದೆ.
ಮುಂದಿನ ವಾರ ಯಾವೆಲ್ಲ ದಿನ ಬ್ಯಾಂಕ್ ಬಂದ್?
* ಸೆಪ್ಟೆಂಬರ್ 25 - ಶ್ರೀಮಂತ ಶಂಕರದೇವರ ಜನ್ಮೋತ್ಸವ (ಗುವಾಹಟಿ ಮತ್ತು ರಾಂಚಿಯಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ)
* ಸೆಪ್ಟೆಂಬರ್ 27 - ಮಿಲಾದ್-ಇ-ಶೆರೀಫ್ (ಪ್ರವಾದಿ ಮುಹಮ್ಮದ್ ಅವರ ಜನ್ಮದಿನ) (ಜಮ್ಮು, ಕೊಚ್ಚಿ, ಶ್ರೀನಗರ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ)
* ಸೆಪ್ಟೆಂಬರ್ 28 - ಈದ್-ಇ-ಮಿಲಾದ್/ಈದ್-ಎ-ಮೀಲಾದುನ್ನಬಿ - (ಪ್ರವಾದಿ ಮೊಹಮ್ಮದ್ ಅವರ ಜನ್ಮದಿನ) (ಬಾರಾ ವಫತ್) ಗುಜರಾತ್, ಮಿಜೋರಾಂ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಉತ್ತರಾಖಂಡ, ತೆಲಂಗಾಣ, ಮಣಿಪುರ, ಉತ್ತರ ಪ್ರದೇಶ, ದೆಹಲಿ, ಛತ್ತೀಸ್‌ಗಢ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
* ಸೆಪ್ಟೆಂಬರ್ 29 - ಈದ್-ಇ-ಮಿಲಾದ್-ಉಲ್-ನಬಿ ದಿನ (ಸಿಕ್ಕಿಂ, ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.)
ಭಾರತದಲ್ಲಿನ ಎಲ್ಲಾ ರಾಜ್ಯಗಳಲ್ಲಿ ಬ್ಯಾಂಕ್ ರಜಾದಿನಗಳು ಒಂದೇ ಆಗಿರುವುದಿಲ್ಲ ಎಂಬುವುದನ್ನು ನೀವು ಗಮನಿಸಬೇಕು. ರಾಷ್ಟ್ರೀಯ ರಜಾದಿನಗಳನ್ನು ಹೊರತುಪಡಿಸಿ, ರಾಜ್ಯ ಸರ್ಕಾರಗಳು ಬ್ಯಾಂಕ್ ರಜಾದಿನಗಳನ್ನು ಗೊತ್ತುಪಡಿಸುತ್ತವೆ.
ರಜಾದಿನಗಳ ಮೂರು ವರ್ಗೀಕರಣ
ಸಾಮಾನ್ಯವಾಗಿ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್ ರಾಷ್ಟ್ರೀಯ ರಜಾದಿನ, ಹಬ್ಬಕ್ಕಾಗಿ ರಜೆ ಇದ್ದಾಗ ಹಾಗೂ ಭಾನುವಾರ ಬಂದ್ ಆಗಿರುತ್ತದೆ. ಹಾಗೆಯೇ ದೇಶದಾದ್ಯಂತ ಪ್ರತಿ ತಿಂಗಳು ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ ರಜೆ ಇರಲಿದೆ.
ಇನ್ನು ಈ ರಜಾದಿನಗಳ ಮಾತ್ರವಲ್ಲದೇ ಕೆಲವು ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಆಚರಣೆ ಮಾಡುವ ಸ್ಥಳೀಯ ಹಬ್ಬದ ಸಂದರ್ಭದಲ್ಲೂ ಬ್ಯಾಂಕ್‌ಗಳು ಬಂದ್ ಆಗಲಿದೆ. ಈ ಸಂದರ್ಭದಲ್ಲಿ ಬ್ಯಾಂಕ್‌ಗಳ ಸ್ಥಳೀಯ , ಬ್ರಾಂಚ್‌ಗಳು ಮಾತ್ರ ಬಂದ್ ಆಗಿರುತ್ತದೆ.
ಆರ್‌ಬಿಐ ನಿಯಮದ ಪ್ರಕಾರ ರಜಾದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ. ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಮೂರು ರಜಾ ವರ್ಗೀಕರಣವಾಗಿದೆ.


Click it and Unblock the Notifications