ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜಾರಿ ಮಾಡಿರುವ ಬ್ಯಾಂಕ್ ರಜಾ ದಿನಗಳ ಪಟ್ಟಿಯ ಪ್ರಕಾರ ಏಪ್ರಿಲ್ ತಿಂಗಳಲ್ಲಿ ದೇಶದಲ್ಲಿ ಒಟ್ಟಾಗಿ 15 ದಿನಗಳ ಕಾಲ ಬ್ಯಾಂಕ್ ಬಂದ್ ಆಗಿರುತ್ತದೆ. 2023ರ ಶುಭ ಶುಕ್ರವಾರವನ್ನು ಏಪ್ರಿಲ್ 7ರಂದು ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನೆಲೆ ಬ್ಯಾಂಕ್‌ಗಳು ಶುಕ್ರವಾರ (ಇಂದು) ಬಂದ್ ಆಗಿರಲಿದೆ. ಆದರೆ ದೇಶದಾದ್ಯಂತ ಬ್ಯಾಂಕ್ ಬಂದ್ ಆಗಿರದು, ಬದಲಾಗಿ ಕೆಲವು ನಿರ್ದಿಷ್ಟ ರಾಜ್ಯಗಳಲ್ಲಿ ಬ್ಯಾಂಕ್ ಬಂದ್ ಆಗಿರುತ್ತದೆ.
ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನವನ್ನು ಕ್ರೈಸ್ತ ಬಾಂಧವರು ಶುಭ ಶುಕ್ರವಾರವಾಗಿ ಆಚರಿಸುತ್ತಾರೆ. ಹಾಗೆಯೇ ಏಪ್ರಿಲ್ 9ರಂದು ಈಸ್ಟರ್ ಆಚರಣೆ ಮಾಡಲಾಗುತ್ತದೆ. ಅಜ್ವಾಲ್, ಬೆಲಾಪುರ, ಬೆಂಗಳೂರು, ಬೋಪಾಲ್, ಭುವನೇಶ್ವರ, ಚಂಡೀಗಡ, ಚೆನ್ನೈ, ಡೆಹ್ರಾಡೂನ್, ಹೈದಾರಾಬಾದ್, ಆಂಧ್ರಪ್ರದೇಶ, ತೆಲಂಗಾಣ, ಇಂಫಾಲ್, ಕಾನ್ಪುರ, ಕೊಚ್ಚಿ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಣಜಿ, ಪಾಟ್ನಾ, ರಾಯಪುರ, ರಾಂಚಿ, ಶಿಲ್ಲಾಂಗ್, ತಿರುವನಂತಪುರದಲ್ಲಿ ಬ್ಯಾಂಕ್ ಬಂದ್ ಆಗಿರುತ್ತದೆ.

ಇನ್ನು ಇಂದು ಸ್ಟಾಕ್ ಮಾರುಕಟ್ಟೆಯು ಕೂಡಾ ಬಂದ್ ಆಗಿರುತ್ತದೆ. ಸಾಮಾನ್ಯವಾಗಿ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್ ರಾಷ್ಟ್ರೀಯ ರಜಾದಿನ, ಹಬ್ಬಕ್ಕಾಗಿ ರಜೆ ಇದ್ದಾಗ ಹಾಗೂ ಭಾನುವಾರ ಬಂದ್ ಆಗಿರುತ್ತದೆ. ಹಾಗೆಯೇ ದೇಶದಾದ್ಯಂತ ಪ್ರತಿ ತಿಂಗಳು ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ ರಜೆ ಇರಲಿದೆ. ಇನ್ನು ಈ ರಜಾದಿನಗಳ ಮಾತ್ರವಲ್ಲದೇ ಕೆಲವು ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಆಚರಣೆ ಮಾಡುವ ಸ್ಥಳೀಯ ಹಬ್ಬದ ಸಂದರ್ಭದಲ್ಲೂ ಬ್ಯಾಂಕ್‌ಗಳು ಬಂದ್ ಆಗಲಿದೆ. ಈ ಸಂದರ್ಭದಲ್ಲಿ ಬ್ಯಾಂಕ್‌ಗಳ ಸ್ಥಳೀಯ , ಬ್ರಾಂಚ್‌ಗಳು ಮಾತ್ರ ಬಂದ್ ಆಗಿರುತ್ತದೆ.
ಏಪ್ರಿಲ್ ತಿಂಗಳ ಬ್ಯಾಂಕ್ ರಜಾ ಪಟ್ಟಿ
ಏಪ್ರಿಲ್ 1, 2023: ಅಜ್ವಾಲ್, ಶಿಲ್ಲಾಂಗ್, ಶಿಮ್ಲಾ, ಚಂಡೀಗಢ ಹೊರತುಪಡಿಸಿ ದೇಶಾದಾದ್ಯಂತ ಹೊಸ ಹಣಕಾಸು ವರ್ಷದ ಆರಂಭದ ದಿನ ಬ್ಯಾಂಕ್ ಬಂದ್ ಆಗಲಿದೆ.
ಏಪ್ರಿಲ್ 2, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಏಪ್ರಿಲ್ 4, 2023: ಮಹಾವೀರ ಜಯಂತಿ, ಹಲವಾರು ನಗರಗಳಲ್ಲಿ ಬ್ಯಾಂಕ್ ಬಂದ್
ಏಪ್ರಿಲ್ 5, 2023: ಬಾಬು ಜಗ್‌ಜೀವನ್ ರಾಮ್ ಜನ್ಮ ದಿನ, ಹೈದಾರಾಬಾದ್‌ನಲ್ಲಿ ಬ್ಯಾಂಕ್ ರಜೆ
ಏಪ್ರಿಲ್ 7, 2023: ಗುಡ್ ಫ್ರೈಡೆ, ಅಗರ್ತಾಲ, ಅಹಮದಾಬಾದ್, ಗುವಾಹಟಿ, ಜೈಪುರ, ಜಮ್ಮು, ಶಿಮ್ಲಾ, ಶ್ರೀನಗರ ಹೊರತುಪಡಿಸಿ ಉಳಿದೆಡೆ ಬ್ಯಾಂಕ್ ರಜೆ
ಏಪ್ರಿಲ್ 8, 2023: ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
ಏಪ್ರಿಲ್ 9, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
ಏಪ್ರಿಲ್ 14, 2023: ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ, ಅಜ್ವಾಲ್, ಬೋಪಾಲ್, ನವದೆಹಲಿ, ರಾಯಪುರ, ಶಿಲ್ಲಾಂಗ್, ಶಿಮ್ಲಾ ಹೊರತುಪಡಿಸಿ ಉಳಿದೆಡೆ ಬ್ಯಾಂಕ್ ರಜೆ
ಏಪ್ರಿಲ್ 15, 2023: ಅಗರ್ತಾಲ, ಗುವಾಹಟಿ, ಕೊಚ್ಚಿ, ಕೋಲ್ಕತ್ತಾ, ಶಿಮ್ಲಾ, ತಿರುವನಂತಪುರದಲ್ಲಿ ವಿಷು (ಬಿಸು) ಹಬ್ಬ, ಬೊಹಾಂಗ್ ಬಿಹು, ಹಿಮಾಚಲ ದಿನ, ಬೆಂಗಾಳಿ ಹೊಸ ವರ್ಷದ ಪ್ರಯುಕ್ತ ಬ್ಯಾಂಕ್ ರಜೆ
ಏಪ್ರಿಲ್ 16, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
ಏಪ್ರಿಲ್ 18, 2023: ಶಾಬ್-ಇ-ಕ್ವಾದ್ರ್, ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್ ಬಂದ್ ಇರಲಿದೆ.
ಏಪ್ರಿಲ್ 21, 2023: ಈದ್-ಉಲ್-ಫಿತ್ರ್, ಅಗರ್ತಾಲ, ಜಮ್ಮು, ಕೊಚ್ಚಿ, ಶ್ರೀನಗರ, ತಿರುವನಂತಪುರಂನಲ್ಲಿ ಬ್ಯಾಂಕ್ ರಜೆ
ಏಪ್ರಿಲ್ 22, 2023: ಈದ್-ಉಲ್-ಫಿತ್ರ್ ಪ್ರಯುಕ್ತ ಹಲವಾರು ರಾಜ್ಯಗಳಲ್ಲಿ ಬ್ಯಾಂಕ್ ಬಂದ್, ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
ಏಪ್ರಿಲ್ 23, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
ಏಪ್ರಿಲ್ 30, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್


Click it and Unblock the Notifications