ಹಣಕಾಸು ವರ್ಷ ಇನ್ನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದ್ದು, ಹೊಸ ಹಣಕಾಸು ವರ್ಷ ಆರಂಭವಾಗಲಿದೆ. ಏಪ್ರಿಲ್‌ನಲ್ಲಿ ಖಾಸಗೀ ಬ್ಯಾಂಕುಗಳು ಹಾಗೂ ಸಾರ್ವಜನಿಕ ಬ್ಯಾಂಕ್‌ಗಳು ಹಲವಾರು ದಿನಗಳ ಕಾಲ ಬಂದ್ ಆಗಿರಲಿದೆ. ಬರೋಬ್ಬರಿ 15 ದಿನ ಬ್ಯಾಂಕ್ ರಜೆ ಇರಲಿದೆ. ಈ ನಿಟ್ಟಿನಲ್ಲಿ ನೀವು ಬ್ಯಾಂಕ್‌ಗೆ ಹೋಗುವ ಮುನ್ನ ರಜೆಯ ಪಟ್ಟಿಯನ್ನು ನೋಡಿಕೊಳ್ಳಿ.
ಆರ್‌ಬಿಐ ನಿಯಮದ ಪ್ರಕಾರ ರಜಾದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ. ವರ್ಗಾವಣೀಯ ಲಿಖಿತಗಳ ಅಧಿನಿಯಮ (ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್) ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಮೂರು ರಜಾ ವರ್ಗೀಕರಣವಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ರಜಾದಿನಗಳ ಪಟ್ಟಿಯ ಪ್ರಕಾರ, ಬ್ಯಾಂಕಿಂಗ್ ರಜಾದಿನಗಳು ದೇಶಾದ್ಯಂತ ಏಕಕಾಲದಲ್ಲಿ ನಡೆಯುವುದಿಲ್ಲ. ಅನೇಕ ರಜಾದಿನಗಳು ವಿವಿಧ ರಾಜ್ಯಗಳಲ್ಲಿ ಅಥವಾ ಆ ರಾಜ್ಯಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಆಚರಿಸಲಾಗುವ ಹಬ್ಬಗಳ ಮೇಲೆ ಆಧಾರಿತವಾಗಿರುತ್ತದೆ. ಈ ಎಲ್ಲಾ ರಜಾದಿನಗಳು ಎಲ್ಲಾ ರಾಜ್ಯಗಳಲ್ಲಿ ಅನ್ವಯಿಸುವುದಿಲ್ಲ.

ಮುಖ್ಯವಾಗಿ ಯುಗಾದಿ, ಅಂಬೇಡ್ಕರ್ ಜಯಂತಿ ಮೊದಲಾದ ದಿನಗಳಂದು ಬ್ಯಾಂಕ್ ರಜೆ ಇರಲಿದೆ. ಏಪ್ರಿಲ್‌ನಲ್ಲಿ ಇರುವ 15 ದಿನಗಳ ಬ್ಯಾಂಕ್ ರಜೆಗಳಲ್ಲಿ ರಾಷ್ಟ್ರೀಯ ರಜಾದಿನಗಳ ಹೊರತಾಗಿ, ಕೆಲವು ರಾಜ್ಯ-ವಾರು ರಜಾದಿನಗಳು ಎಲ್ಲಾ ಭಾನುವಾರಗಳ ರಜೆ, ಎರಡನೇ ನಾಲ್ಕನೇ ಶನಿವಾರ ಇದರಲ್ಲಿ ಸೇರ್ಪಡೆ ಆಗಿದೆ. ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಹಾಗೂ ಸಹಕಾರಿ ಬ್ಯಾಂಕ್ ಸೇರಿದಂತೆ ಪ್ರಾದೇಶಿಕ ಬ್ಯಾಂಕುಗಳು ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾ ದಿನವಿರಲಿದೆ. ಯಾವೆಲ್ಲಾ ದಿನಗಳು ಬ್ಯಾಂ ರಜೆ ಇದೆ ಎಂದು ಈ ಕೆಳಗೆ ಪಟ್ಟಿಯಲ್ಲಿ ನೀಡಲಾಗಿದೆ. ಮುಂದೆ ಓದಿ....
ಮಾರ್ಚ್ 2022 ರಲ್ಲಿ ಬ್ಯಾಂಕ್ ರಜಾದಿನಗಳು:
ಏಪ್ರಿಲ್ 1: ಆರ್ಥಿಕ ಹಣಕಾಸು ವರ್ಷದ ಅಂತ್ಯ
ಏಪ್ರಿಲ್ 2: ಯುಗಾದಿ ಹಬ್ಬ/ನವರಾತ್ರಿಯ ಮೊದಲ ದಿನ/ತೆಲುಗು ಹೊಸ ವರ್ಷ/ಸಜಿಬು ನೊಂಗಂಪಾಂಬ (ಬೇಲಾಪುರ, ಬೆಂಗಳೂರು, ಚೆನ್ನೈ, ಹೈದರಾಬಾದ್, ಇಂಫಾಲ್, ಜಮ್ಮು, ಮುಂಬೈ, ನಾಗ್ಪುರ, ಪಣಜಿ ಮತ್ತು ಶ್ರೀನಗರ)
ಏಪ್ರಿಲ್ 4: ಸರಿಹುಲ್ (ರಾಂಚಿ)
ಏಪ್ರಿಲ್ 5: ಬಾಬು ಜಗಜೀವನ್ ರಾಮ್ ಅವರ ಜನ್ಮದಿನ (ಹೈದರಾಬಾದ್)
ಏಪ್ರಿಲ್ 14: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ/ ಮಹಾವೀರ ಜಯಂತಿ/ ಬೈಸಾಖಿ/ ತಮಿಳು ಹೊಸ ವರ್ಷ/ ಚೈರೋಬಾ, ಬಿಜು ಹಬ್ಬ/ ಬೋಹರ್ ಬಿಹು (ಶಿಲ್ಲಾಂಗ್ ಮತ್ತು ಶಿಮ್ಲಾ ಹೊರತುಪಡಿಸಿ ಇತರ ಸ್ಥಳಗಳಲ್ಲಿ ಬ್ಯಾಂಕ್ ಬಂದ್)
ಏಪ್ರಿಲ್ 15: ಭ ಶುಕ್ರವಾರ/ಬಂಗಾಳಿ ಹೊಸ ವರ್ಷ/ಹಿಮಾಚಲ ದಿನ/ವಿಷು/ಬೋಹಾಗ್ ಬಿಹು (ಜೈಪುರ, ಜಮ್ಮು ಮತ್ತು ಶ್ರೀನಗರ ಹೊರತುಪಡಿಸಿ ಇತರ ಸ್ಥಳಗಳಲ್ಲಿ ಬ್ಯಾಂಕ್ ಬಂದ್)
ಏಪ್ರಿಲ್ 16: ಬೊಹಾಗ್ ಬಿಹು (ಗುವಾಹಟಿ)
ಏಪ್ರಿಲ್ 21: ವಾಹನ ಪೂಜೆ (ಅಗರ್ತಲಾ)
ಏಪ್ರಿಲ್ 29: ಶಾಬ್-ಎ-ಕದ್ರ್/ಜುಮಾತ್-ಉಲ್-ವಿದಾ (ಜಮ್ಮು ಮತ್ತು ಶ್ರೀನಗರ)
ಶನಿವಾರ ಮತ್ತು ಭಾನುವಾರದ ರಜಾದಿನಗಳ ಪಟ್ಟಿ:
ಏಪ್ರಿಲ್ 3: ಭಾನುವಾರ (ವಾರದ ರಜೆ)
ಏಪ್ರಿಲ್ 9: ಶನಿವಾರ (ತಿಂಗಳ 2 ನೇ ಶನಿವಾರ)
ಏಪ್ರಿಲ್ 10: ಭಾನುವಾರ (ವಾರದ ರಜೆ)
ಏಪ್ರಿಲ್ 17: ಭಾನುವಾರ (ವಾರದ ರಜೆ)
ಏಪ್ರಿಲ್ 23: ಶನಿವಾರ (ತಿಂಗಳ ನಾಲ್ಕನೇ ಶನಿವಾರ)
ಏಪ್ರಿಲ್ 24: ಭಾನುವಾರ (ವಾರದ ರಜೆ)


Click it and Unblock the Notifications