ಮಾರ್ಚ್ 2023 ಕೊನೆಯಾಗಲು ಇನ್ನು ಕೆಲವೇ ದಿನಗಳು ಉಳಿದಿದೆ. ಮಾರ್ಚ್ ತಿಂಗಳು ಅಂತ್ಯವೆಂದರೆ ಭಾರತದಲ್ಲಿ ಒಂದು ಹಣಕಾಸು ವರ್ಷದ ಅಂತ್ಯವಾಗಿದೆ. ಹಾಗೆಯೇ ಹೊಸ ಹಣಕಾಸು ವರ್ಷದಲ್ಲಿ ಬಜೆಟ್‌ನ ಎಲ್ಲ ಯೋಜನೆಗಳು ಜಾರಿಗೆ ಬರುತ್ತದೆ. ಕೆಲವು ವಸ್ತುಗಳು ದುಬಾರಿಯಾದರೆ, ಕೆಲವು ಅಗ್ಗವಾಗಲಿದೆ. ಹಾಗೆಯೇ ಬ್ಯಾಂಕುಗಳು ಕೂಡಾ ತಮ್ಮ ವಾರ್ಷಿಕ ಆಡಿಟ್ ಮಾಡಿಕೊಳ್ಳಬೇಕಾಗುತ್ತದೆ. ಹಣಕಾಸು ವರ್ಷ 2023-24 ಆರಂಭವಾಗುವ ಏಪ್ರಿಲ್ ತಿಂಗಳಿನಲ್ಲಿ ಹಲವಾರು ಬ್ಯಾಂಕ್ ರಜೆ ಇದೆ. ಸರಿಸುಮಾರು ಅರ್ಧ ತಿಂಗಳು ಬ್ಯಾಂಕ್ ಬಂದ್ ಆಗಿರುತ್ತದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಏಪ್ರಿಲ್ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿ ಪ್ರಕಾರವಾಗಿ ಭಾರತದಲ್ಲಿ ಏಪ್ರಿಲ್‌ನಲ್ಲಿ ಒಟ್ಟಾಗಿ 15 ದಿನಗಳು ಬ್ಯಾಂಕ್ ರಜೆ ಇರಲಿದೆ. ಇದರಲ್ಲಿ ಹಲವಾರು ಹಬ್ಬಗಳು, ವಾರದ ರಜೆಗಳು ಸೇರಿದೆ. ಮಹಾವೀರ ಜಯಂತಿ, ಗುಡ್ ಫ್ರೈಡೆ, ಅಂಬೇಡ್ಕರ್ ಜಯಂತಿ ಮೊದಲಾದ ಹಬ್ಬ, ಜನ್ಮದಿನಗಳ ಆಚರಣೆಗೆ ಬ್ಯಾಂಕ್ ರಜೆ ಇರಲಿದೆ. ನೀವು ಮುಂದಿನ ತಿಂಗಳು ಬ್ಯಾಂಕ್‌ಗೆ ತೆರಳಿ ಯಾವುದೇ ಹಣಕಾಸು ವಹಿವಾಟು ನಡೆಸಬೇಕೆಂದು ಇದ್ದರೆ, ಈಗಲೇ ಯಾವೆಲ್ಲ ದಿನಗಳು ಬ್ಯಾಂಕ್ ಬಂದ್ ಆಗಿರಲಿದೆ ಎಂದು ತಿಳಿಯುವುದು ಉತ್ತಮ. ಇಲ್ಲವಾದರೆ ನೀವು ಬ್ಯಾಂಕ್‌ವರೆಗೂ ಹೋಗಿ ಹೋದ ಕಾರ್ಯ ಮುಗಿಸದೆ ಹಿಂತಿರುಗಿ ಬರಬೇಕಾಗುತ್ತದೆ. ಬ್ಯಾಂಕ್ ರಜಾ ಪಟ್ಟಿ ಈ ಕೆಳಗಿದೆ ಮುಂದೆ ಓದಿ...
ಏಪ್ರಿಲ್ ತಿಂಗಳ ಬ್ಯಾಂಕ್ ರಜಾ ಪಟ್ಟಿ
ಏಪ್ರಿಲ್ 1, 2023: ಅಜ್ವಾಲ್, ಶಿಲ್ಲಾಂಗ್, ಶಿಮ್ಲಾ, ಚಂಡೀಗಢ ಹೊರತುಪಡಿಸಿ ದೇಶಾದಾದ್ಯಂತ ಹೊಸ ಹಣಕಾಸು ವರ್ಷದ ಆರಂಭದ ದಿನ ಬ್ಯಾಂಕ್ ಬಂದ್ ಆಗಲಿದೆ.
ಏಪ್ರಿಲ್ 2, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಏಪ್ರಿಲ್ 4, 2023: ಮಹಾವೀರ ಜಯಂತಿ, ಹಲವಾರು ನಗರಗಳಲ್ಲಿ ಬ್ಯಾಂಕ್ ಬಂದ್
ಏಪ್ರಿಲ್ 5, 2023: ಬಾಬು ಜಗ್‌ಜೀವನ್ ರಾಮ್ ಜನ್ಮ ದಿನ, ಹೈದಾರಾಬಾದ್‌ನಲ್ಲಿ ಬ್ಯಾಂಕ್ ರಜೆ
ಏಪ್ರಿಲ್ 7, 2023: ಗುಡ್ ಫ್ರೈಡೆ, ಅಗರ್ತಾಲ, ಅಹಮದಾಬಾದ್, ಗುವಾಹಟಿ, ಜೈಪುರ, ಜಮ್ಮು, ಶಿಮ್ಲಾ, ಶ್ರೀನಗರ ಹೊರತುಪಡಿಸಿ ಉಳಿದೆಡೆ ಬ್ಯಾಂಕ್ ರಜೆ
ಏಪ್ರಿಲ್ 8, 2023: ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
ಏಪ್ರಿಲ್ 9, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
ಏಪ್ರಿಲ್ 14, 2023: ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ, ಅಜ್ವಾಲ್, ಬೋಪಾಲ್, ನವದೆಹಲಿ, ರಾಯಪುರ, ಶಿಲ್ಲಾಂಗ್, ಶಿಮ್ಲಾ ಹೊರತುಪಡಿಸಿ ಉಳಿದೆಡೆ ಬ್ಯಾಂಕ್ ರಜೆ
ಏಪ್ರಿಲ್ 15, 2023: ಅಗರ್ತಾಲ, ಗುವಾಹಟಿ, ಕೊಚ್ಚಿ, ಕೋಲ್ಕತ್ತಾ, ಶಿಮ್ಲಾ, ತಿರುವನಂತಪುರದಲ್ಲಿ ವಿಷು (ಬಿಸು) ಹಬ್ಬ, ಬೊಹಾಂಗ್ ಬಿಹು, ಹಿಮಾಚಲ ದಿನ, ಬೆಂಗಾಳಿ ಹೊಸ ವರ್ಷದ ಪ್ರಯುಕ್ತ ಬ್ಯಾಂಕ್ ರಜೆ
ಏಪ್ರಿಲ್ 16, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
ಏಪ್ರಿಲ್ 18, 2023: ಶಾಬ್-ಇ-ಕ್ವಾದ್ರ್, ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್ ಬಂದ್ ಇರಲಿದೆ.
ಏಪ್ರಿಲ್ 21, 2023: ಈದ್-ಉಲ್-ಫಿತ್ರ್, ಅಗರ್ತಾಲ, ಜಮ್ಮು, ಕೊಚ್ಚಿ, ಶ್ರೀನಗರ, ತಿರುವನಂತಪುರಂನಲ್ಲಿ ಬ್ಯಾಂಕ್ ರಜೆ
ಏಪ್ರಿಲ್ 22, 2023: ಈದ್-ಉಲ್-ಫಿತ್ರ್ ಪ್ರಯುಕ್ತ ಹಲವಾರು ರಾಜ್ಯಗಳಲ್ಲಿ ಬ್ಯಾಂಕ್ ಬಂದ್, ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
ಏಪ್ರಿಲ್ 23, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
ಏಪ್ರಿಲ್ 30, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
ಕರ್ನಾಟಕದಲ್ಲಿ ಎಷ್ಟು ದಿನ ಬ್ಯಾಂಕ್ ಬಂದ್
ಏಪ್ರಿಲ್ 2, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಏಪ್ರಿಲ್ 4, 2023: ಮಹಾವೀರ ಜಯಂತಿ, ಹಲವಾರು ನಗರಗಳಲ್ಲಿ ಬ್ಯಾಂಕ್ ಬಂದ್
ಏಪ್ರಿಲ್ 7, 2023: ಗುಡ್ ಫ್ರೈಡೆ, ಕರ್ನಾಟಕದಲ್ಲಿ ಬ್ಯಾಂಕ್ ರಜೆ
ಏಪ್ರಿಲ್ 8, 2023: ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
ಏಪ್ರಿಲ್ 9, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
ಏಪ್ರಿಲ್ 14, 2023: ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ, ರಾಜ್ಯದಲ್ಲಿ ಬ್ಯಾಂಕ್ ರಜೆ
ಏಪ್ರಿಲ್ 22, 2023: ಈದ್-ಉಲ್-ಫಿತ್ರ್ ಪ್ರಯುಕ್ತ, ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
ಏಪ್ರಿಲ್ 23, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
ಏಪ್ರಿಲ್ 30, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
ರಜಾದಿನಗಳ ಮೂರು ವರ್ಗೀಕರಣ
ಸಾಮಾನ್ಯವಾಗಿ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್ ರಾಷ್ಟ್ರೀಯ ರಜಾದಿನ, ಹಬ್ಬಕ್ಕಾಗಿ ರಜೆ ಇದ್ದಾಗ ಹಾಗೂ ಭಾನುವಾರ ಬಂದ್ ಆಗಿರುತ್ತದೆ. ಹಾಗೆಯೇ ದೇಶದಾದ್ಯಂತ ಪ್ರತಿ ತಿಂಗಳು ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ ರಜೆ ಇರಲಿದೆ. ಇನ್ನು ಈ ರಜಾದಿನಗಳ ಮಾತ್ರವಲ್ಲದೇ ಕೆಲವು ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಆಚರಣೆ ಮಾಡುವ ಸ್ಥಳೀಯ ಹಬ್ಬದ ಸಂದರ್ಭದಲ್ಲೂ ಬ್ಯಾಂಕ್‌ಗಳು ಬಂದ್ ಆಗಲಿದೆ. ಈ ಸಂದರ್ಭದಲ್ಲಿ ಬ್ಯಾಂಕ್‌ಗಳ ಸ್ಥಳೀಯ , ಬ್ರಾಂಚ್‌ಗಳು ಮಾತ್ರ ಬಂದ್ ಆಗಿರುತ್ತದೆ. ಆರ್‌ಬಿಐ ನಿಯಮದ ಪ್ರಕಾರ ರಜಾದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ. ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಮೂರು ರಜಾ ವರ್ಗೀಕರಣವಾಗಿದೆ.


Click it and Unblock the Notifications