ಭಾರತೀಯ ರಿಸರ್ವ್ ಬ್ಯಾಂಕ್ (RBI) ಆಗಸ್ಟ್‌ನ ಬ್ಯಾಂಕ್ ರಜಾ ದಿನಗಳ ಕ್ಯಾಲೆಂಡರ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆರ್‌ಬಿಐನ ಈ ಪಟ್ಟಿ ಪ್ರಕಾರ, ಆಗಸ್ಟ್ 2022 ರಲ್ಲಿ ಒಟ್ಟು 13 ದಿನಗಳವರೆಗೆ ಬ್ಯಾಂಕುಗಳು ಬಂದ್ ಆಗಲಿದೆ. ನೀವು ಬ್ಯಾಂಕ್‌ನ ಯಾವುದೇ ಕಾರ್ಯ ಮಾಡುವುದಕ್ಕೂ ಮುನ್ನ ಯಾವೆಲ್ಲಾ ದಿನ ರಜೆ ಇರಲಿದೆ ಎಂದು ತಿಳಿಯುವುದು ಉತ್ತಮ.
ಸಾಮಾನ್ಯವಾಗಿ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್ ರಾಷ್ಟ್ರೀಯ ರಜಾದಿನ, ರಾಜ್ಯಗಳಲ್ಲಿ ಆಚರಿಸುವ ಹಬ್ಬದ ಹಿನ್ನೆಲೆ ರಜಾ ಇದ್ದಾಗ ಹಾಗೂ ಭಾನುವಾರ ಬಂದ್ ಆಗಿರುತ್ತದೆ. ಹಾಗೆಯೇ ದೇಶದಾದ್ಯಂತ ಪ್ರತಿ ತಿಂಗಳು ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ ರಜೆ ಇರಲಿದೆ. ಇನ್ನು ಈ ರಜಾದಿನಗಳ ಮಾತ್ರವಲ್ಲದೇ ಕೆಲವು ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಆಚರಣೆ ಮಾಡುವ ಸ್ಥಳೀಯ ಹಬ್ಬದ ಸಂದರ್ಭದಲ್ಲೂ ಬ್ಯಾಂಕ್‌ಗಳು ಬಂದ್ ಆಗಲಿದೆ. ಈ ಸಂದರ್ಭದಲ್ಲಿ ಬ್ಯಾಂಕ್‌ಗಳ ಸ್ಥಳೀಯ ಬ್ರಾಂಚ್‌ಗಳು ಮಾತ್ರ ಬಂದ್ ಆಗಿರುತ್ತದೆ.
ನೀವು ಬ್ಯಾಂಕ್‌ಗೆ ಹೋದ ಬಳಿಕ ಬ್ಯಾಂಕ್ ರಜೆ ಎಂದು ತಿಳಿದು ಹಿಂದೆ ಬರುವುದನ್ನು ತಪ್ಪಿಸಲು ಮುಂದಿನ ತಿಂಗಳಿನಲ್ಲಿ ಬ್ಯಾಂಕ್‌ಗಳು ಎಷ್ಟು ದಿನ ಬಂದ್ ಆಗಿರಲಿದೆ ಎಂದು ಈಗಲೇ ತಿಳಿಯುವುದು ಉತ್ತಮ. ಯಾಕೆಂದರೆ ಆಗಸ್ಟ್‌ನಲ್ಲಿ ಸರಿ ಸುಮಾರು ಅರ್ಧ ತಿಂಗಳು ಬ್ಯಾಂಕ್ ರಜೆ ಇರಲಿದೆ. ಆದರೆ ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳು ಬಂದ್ ಆಗಲಾರದು. ಈ ಪೈಕಿ ಕೆಲವು ರಜೆಗಳು ಕೆಲವು ರಾಜ್ಯಗಳಲ್ಲಿ ಮಾತ್ರ ಇರಲಿದೆ.

ಆರ್‌ಬಿಐ ನಿಯಮದ ಪ್ರಕಾರ ರಜಾದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ. ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಮೂರು ರಜಾ ವರ್ಗೀಕರಣವಾಗಿದೆ. ಯಾವೆಲ್ಲಾ ದಿನಗಳು ಬ್ಯಾಂಕ್ ರಜೆ ಇದೆ ಎಂದು ಈ ಕೆಳಗೆ ಪಟ್ಟಿಯಲ್ಲಿ ನೀಡಲಾಗಿದೆ. ಮುಂದೆ ಓದಿ....
ವಾರದ ರಜೆ ಎಷ್ಟಿದೆ?
ಆಗಸ್ಟ್ 7: ಭಾನುವಾರ (ವಾರದ ರಜೆ)
ಆಗಸ್ಟ್ 13: ಎರಡನೇ ಶನಿವಾರ
ಆಗಸ್ಟ್ 14: ಭಾನುವಾರ (ವಾರದ ರಜೆ)
ಆಗಸ್ಟ್ 21: ಭಾನುವಾರ (ವಾರದ ರಜೆ)
ಆಗಸ್ಟ್ 27: ನಾಲ್ಕನೇ ಶನಿವಾರ
ಆಗಸ್ಟ್ 28: ಭಾನುವಾರ (ವಾರದ ರಜೆ)
ರಾಷ್ಟ್ರೀಯ ಹಾಗೂ ಸ್ಥಳೀಯ ರಜೆ
ಆಗಸ್ಟ್ 1: ದ್ರುಕ್ಪಾ ತ್ಶೆ-ಜಿ (ಸಿಕ್ಕಿಂ)
ಆಗಸ್ಟ್ 8 ಮತ್ತು 9: ಮೊಹರಂ
ಆಗಸ್ಟ್ 11 ಮತ್ತು 12: ರಕ್ಷಾ ಬಂಧನ
ಆಗಸ್ಟ್ 13: ದೇಶಪ್ರೇಮಿಗಳ ದಿನ
ಆಗಸ್ಟ್ 15: ಸ್ವಾತಂತ್ಯ ದಿನ
ಆಗಸ್ಟ್ 16: ಪಾರ್ಸಿ ಹೊಸ ವರ್ಷ (ಶಾಹೆನ್ಶಾಹಿ)
ಆಗಸ್ಟ್ 18: ಜನ್ಮಾಷ್ಟಮಿ
ಆಗಸ್ಟ್ 19: ಶ್ರವಣ ವಧ/ಕೃಷ್ಣ ಜಯಂತಿ
ಆಗಸ್ಟ್ 20: ಶ್ರೀ ಕೃಷ್ಣ ಜನ್ಮಾಷ್ಟಮಿ
ಆಗಸ್ಟ್ 29: ಶ್ರೀಮಂತ ಶಂಕರದೇವರ ತಿಥಿ
ಆಗಸ್ಟ್ 31: ಸಂವತ್ಸರಿ (ಚತುರ್ಥಿ ಪಕ್ಷ)/ಗಣೇಶ ಚತುರ್ಥಿ/ವರಸಿದ್ಧಿ ವಿನಾಯಕ ವ್ರತ/ವಿನಾಯಕ ಚತುರ್ಥಿ
ದೇಶಾದ್ಯಂತ ಆಗಸ್ಟ್ 15ರಂದು ಸ್ವಾತಂತ್ಯ ದಿನದ ಹಿನ್ನೆಲೆ ಬಂದ್ ಆಗಲಿದೆ. ಅದನ್ನು ಹೊರತುಪಡಿಸಿ ಬಹುತೇಕ ರಜೆಗಳು ಸ್ಥಳೀಯವಾಗಿದೆ. ಗಣೇಶ ಚತುರ್ಥಿ, ಮೊಹರಂ, ಕೃಷ್ಣ ಜನ್ಮಾಷ್ಟಮಿಯಂದು ಸ್ಥಳೀಯ ಬ್ರಾಂಚ್‌ಗಳು ಮುಚ್ಚಲಿದೆ. ಭಾನುವಾರ ಹಾಗೂ ಎರಡನೇ, ನಾಲ್ಕನೇ ಶನಿವಾರ ದೇಶಾದ್ಯಂತ ಬ್ಯಾಂಕ್‌ಗಳು ಬಂದ್ ಆಗಲಿದೆ.


Click it and Unblock the Notifications