ನವರಾತ್ರಿ, ದೀಪಾವಳಿ ಸಂಭ್ರಮಗಳು ಈಗಾಗಲೇ ಮುಗಿದಿದೆ. ಈ ಎರಡು ಹಬ್ಬಗಳ ಕಾರಣದಿಂದಾಗಿ ಅಕ್ಟೋಬರ್, ನವೆಂಬರ್ ತಿಂಗಳಿನಲ್ಲಿ ಹಲವಾರು ದಿನ ಬ್ಯಾಂಕ್ ಬಂದ್ ಆಗಿದೆ. ಈಗ ಮುಂದಿನ ಅಂದರೆ ಡಿಸೆಂಬರ್‌ನಲ್ಲಿ ಒಟ್ಟಾಗಿ 18 ದಿನಗಳು ಬ್ಯಾಂಕ್ ಬಂದ್ ಆಗಲಿದೆ.
ತುರ್ತು ಸಂದರ್ಭಗಳಲ್ಲಿ ನೀವು ಬ್ಯಾಂಕ್‌ಗೆ ಭೇಟಿ ನೀಡಲು ಬಯಸಿದರೆ, ಈ ಕೆಳಗೆ ಪಟ್ಟಿ ಮಾಡಲಾದ ರಜಾದಿನಗಳನ್ನು ಮೊದಲು ನೋಡುವುದು ಅತೀ ಮುಖ್ಯವಾಗುತ್ತದೆ. ಅದೇನೇ ಇದ್ದರೂ, ಎಲ್ಲಾ ದಿನಗಳಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ರಾಷ್ಟ್ರವ್ಯಾಪಿಯಾಗಿ ಲಭ್ಯವಿರುತ್ತವೆ.

ಆರ್‌ಬಿಐ ಪ್ರಕಾರ ಬ್ಯಾಂಕ್‌ಗಳು ಡಿಸೆಂಬರ್‌ನಲ್ಲಿ ಒಟ್ಟಾಗಿ 18 ದಿನಗಳ ಕಾಲ ಬಂದ್ ಆಗಿದ್ದರೆ, ಇದನ್ನು ಹೊರತುಪಡಿಸಿ ಬ್ಯಾಂಕ್ ಮುಷ್ಕರ ಕೂಡಾ ಇರಲಿದೆ. ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ (ಇಐಬಿಇಎ) ಡಿಸೆಂಬರ್‌ನಲ್ಲಿ 6 ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....
ಬ್ಯಾಂಕ್ ಮುಷ್ಕರ ಯಾವೆಲ್ಲ ದಿನ?
ಡಿಸೆಂಬರ್ 4: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ), ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)
ಡಿಸೆಂಬರ್ 5: ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ
ಡಿಸೆಂಬರ್ 6: ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ಡಿಸೆಂಬರ್ 7: ಇಂಡಿಯನ್ ಬ್ಯಾಂಕ್, ಯುಸಿಒ ಬ್ಯಾಂಕ್
ಡಿಸೆಂಬರ್ 8: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ
ಡಿಸೆಂಬರ್ 11: ಎಲ್ಲಾ ಖಾಸಗಿ ಬ್ಯಾಂಕ್‌ಗಳು
ಆರ್‌ಬಿಐ ಪ್ರಕಾರ ಬ್ಯಾಂಕ್ ರಜೆ
* ಡಿಸೆಂಬರ್ 1: ರಾಜ್ಯ ಉದ್ಘಾಟನಾ ದಿನದಂದು ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ನಲ್ಲಿ ಬ್ಯಾಂಕ್ ರಜೆ ಇರುತ್ತದೆ.
* ಡಿಸೆಂಬರ್ 3: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಡಿಸೆಂಬರ್ 4: ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಉತ್ಸವದ ಕಾರಣ ಗೋವಾದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
* ಡಿಸೆಂಬರ್ 9: ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
* ಡಿಸೆಂಬರ್ 10: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಡಿಸೆಂಬರ್ 12: ಪ-ತೋಗನ್ ನೆಂಗ್ಮಿಂಜ ಸಂಗ್ಮಾದ ಕಾರಣ ಮೇಘಾಲಯದಲ್ಲಿ ಬ್ಯಾಂಕ್ ರಜೆ ಇರುತ್ತದೆ.
* ಡಿಸೆಂಬರ್ 13: ಲೋಸುಂಗ್/ನಮ್‌ಸಂಗ್ ಕಾರಣ ಸಿಕ್ಕಿಂನಲ್ಲಿ ಬ್ಯಾಂಕ್ ರಜೆ ಇರುತ್ತದೆ.
* ಡಿಸೆಂಬರ್ 14: ಲೋಸುಂಗ್/ನಮ್‌ಸಂಗ್ ಕಾರಣ ಸಿಕ್ಕಿಂನಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
* ಡಿಸೆಂಬರ್ 17: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಡಿಸೆಂಬರ್ 18: ಯು ಸೋಸೋ ಥಾಮ್ ನಿಧನರಾದ ದಿನವಾದ ಕಾರಣ ಮೇಘಾಲಯದಲ್ಲಿ ಬ್ಯಾಂಕ್ ರಜೆ ಇರುತ್ತದೆ.
* ಡಿಸೆಂಬರ್ 19: ವಿಮೋಚನಾ ದಿನದ ಕಾರಣ ಗೋವಾದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
* ಡಿಸೆಂಬರ್ 23: ನಾಲ್ಕನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
* ಡಿಸೆಂಬರ್ 24: ಭಾನುವಾರ (ವಾರದ ರಜೆ), ದೇಶದಾದ್ಯಂತ ಬ್ಯಾಂಕ್ ರಜೆ
* ಡಿಸೆಂಬರ್ 25: ಕ್ರಿಸ್‌ಮಸ್ ಕಾರಣ ದೇಶದಾದ್ಯಂತ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
* ಡಿಸೆಂಬರ್ 26: ಕ್ರಿಸ್‌ಮಸ್ ಆಚರಣೆಯ ಕಾರಣ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಬ್ಯಾಂಕ್‌ಗಳು ತೆರೆಯುವುದಿಲ್ಲ.
* ಡಿಸೆಂಬರ್ 27: ಕ್ರಿಸ್‌ಮಸ್ ಕಾರಣ ನಾಗಾಲ್ಯಾಂಡ್‌ನಲ್ಲಿ ಬ್ಯಾಂಕ್ ರಜೆ.
* ಡಿಸೆಂಬರ್ 30: ಯು ಕಿಯಾಂಗ್ ನಂಗ್‌ಬಾದ ಕಾರಣ ಮೇಘಾಲಯದಲ್ಲಿ ಬ್ಯಾಂಕ್‌ಗಳು ತೆರೆಯುವುದಿಲ್ಲ.
* ಡಿಸೆಂಬರ್ 31: ಭಾನುವಾರ (ವಾರದ ರಜೆ), ದೇಶದಾದ್ಯಂತ ಬ್ಯಾಂಕ್ ರಜೆ
ಕರ್ನಾಟಕದಲ್ಲಿ ಬ್ಯಾಂಕ್ ರಜೆ
* ಡಿಸೆಂಬರ್ 3: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಡಿಸೆಂಬರ್ 9: ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
* ಡಿಸೆಂಬರ್ 10: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಡಿಸೆಂಬರ್ 17: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಡಿಸೆಂಬರ್ 23: ನಾಲ್ಕನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
* ಡಿಸೆಂಬರ್ 24: ಭಾನುವಾರ (ವಾರದ ರಜೆ), ದೇಶದಾದ್ಯಂತ ಬ್ಯಾಂಕ್ ರಜೆ
* ಡಿಸೆಂಬರ್ 25: ಕ್ರಿಸ್‌ಮಸ್ ಕಾರಣ ದೇಶದಾದ್ಯಂತ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
* ಡಿಸೆಂಬರ್ 31: ಭಾನುವಾರ (ವಾರದ ರಜೆ), ದೇಶದಾದ್ಯಂತ ಬ್ಯಾಂಕ್ ರಜೆ

Click it and Unblock the Notifications