ನಾವೀಗ ಹೊಸ ವರ್ಷ 2023ರ ಮೊದಲ ತಿಂಗಳ ಕೊನೆಯ ದಿನಗಳಿಗೆ ತಲುಪುತ್ತಿದ್ದೇವೆ. ವರ್ಷದ ಮೊದಲ ತಿಂಗಳು ಕೊನೆಯಾಗುತ್ತಿದ್ದಂತೆ ಹೊಸ ತಿಂಗಳ ಸ್ವಾಗತಕ್ಕೆ ಸಜ್ಜಾಗುತ್ತಿದ್ದೇವೆ. ಹೆಚ್ಚಿನ ಜನರು ತಿಂಗಳಲ್ಲಿ ತನ್ನ ಯಾವೆಲ್ಲ ಸ್ನೇಹಿತರ ಬರ್ತ್‌ಡೆ ಇದೆ, ಯಾವ ವಿವಾಹ ವಾರ್ಷಿಕೋತ್ಸವವಿದೆ, ಎಂಬುವುದನ್ನು ಗುರುತು ಮಾಡಿಕೊಳ್ಳುತ್ತಾರೆ. ಮೊಬೈಲ್‌ನಲ್ಲಿ ರಿಮೈಂಡರ್ ಇಟ್ಟುಕೊಳ್ಳುತ್ತಾರೆ. ಹಾಗಿರುವಾಗ ಮುಂದಿನ ತಿಂಗಳ ಬ್ಯಾಂಕ್ ರಜೆಯನ್ನು ನಾವು ತಿಳಿಯುವುದು ಬೇಡವೇ?
ಹೌದು, ನಮ್ಮ ಪ್ರೀತಿ ಪಾತ್ರರ ಜನುಮ ದಿನದ ಬಗ್ಗೆ ಮರೆತರೆ ನಮಗೆ ಎಷ್ಟು ನೋವಾಗುತ್ತದೆಯೋ ಹಾಗೆಯೇ ಯಾವ ದಿನ ಬ್ಯಾಂಕ್ ಬಂದ್ ಇಲ್ಲ ಎಂದು ತಿಳಿಯದೆ ಬ್ಯಾಂಕ್‌ಗೆ ಹೋದರೂ ನೋವುಂಟಾಗಲಿದೆ. ಯಾಕೆಂದರೆ ನಿಮ್ಮ ಸಮಯವು ವ್ಯರ್ಥ, ಬ್ಯಾಂಕ್‌ಗೆ ಹೋಗಲು ಮಾಡಿದ ಖರ್ಚು ಕೂಡಾ ವ್ಯರ್ಥವಾಗುತ್ತದೆ. ಹಾಗೆಯೇ ಬ್ಯಾಂಕ್ ರಜೆಗಳು ಹೆಚ್ಚಾಗಿ ನಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದಾಗಿ ನಾವು ಯಾವೆಲ್ಲ ದಿನ ಬ್ಯಾಂಕ್ ರಜೆ ಇರುತ್ತದೆ ಎಂದು ತಿಳೀಯುವುದು ಮುಖ್ಯವಾಗುತ್ತದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಾಹಿತಿ ಪ್ರಕಾರ 2023ರ ಫೆಬ್ರವರಿಯಲ್ಲಿ ಒಟ್ಟಾಗಿ 10 ಬ್ಯಾಂಕ್ ರಜೆಗಳು ಇರುತ್ತದೆ. ವಾರದ ರಜೆಗಳು ಹಾಗೂ ಹಬ್ಬ, ಸರ್ಕಾರಿ ರಜೆಗಳು ಸೇರಿ ಒಟ್ಟಾಗಿ ಫೆಬ್ರವರಿಯಲ್ಲಿ 10 ದಿನ ಬ್ಯಾಂಕ್ ರಜೆ ಇರಲಿದೆ. ಆದರೆ ಯುಪಿಐ, ಎಟಿಎಂ ವಹಿವಾಟು ಎಂದಿನಂತೆ ಇರಲಿದೆ. ಹಾಗಾದರೆ ಯಾವೆಲ್ಲ ದಿನ ಬ್ಯಾಂಕ್‌ಗಳು ಬಂದ್ ಆಗಿರಲಿದೆ, ನಿಗದಿತ ಹಬ್ಬದ ದಿನ ಯಾವೆಲ್ಲ ರಾಜ್ಯಗಳಲ್ಲಿ ಬ್ಯಾಂಕ್ ರಜೆ ಇರುತ್ತದೆ, ಕರ್ನಾಟಕ ರಾಜ್ಯದಲ್ಲಿ ಒಟ್ಟು ಎಷ್ಟು ದಿನ ಬ್ಯಾಂಕ್ ಬಂದ್ ಆಗಲಿದೆ ಎಂದು ತಿಳಿಯೋಣ ಮುಂದೆ ಓದಿ....
ಫೆಬ್ರವರಿಯ ಸಂಪೂರ್ಣ ಬ್ಯಾಂಕ್ ರಜಾ ಪಟ್ಟಿ
ಫೆಬ್ರವರಿ 5: ಭಾನುವಾರ, ವಾರದ ರಜೆ (ದೇಶಾದ್ಯಂತ)
ಫೆಬ್ರವರಿ 11: ಎರಡನೇ ಶನಿವಾರ (ದೇಶಾದ್ಯಂತ)
ಫೆಬ್ರವರಿ 12: ಭಾನುವಾರ, ವಾರದ ರಜೆ (ದೇಶಾದ್ಯಂತ)
ಫೆಬ್ರವರಿ 15: ಬುಧವಾರ, ಲೂಯಿ-ನ್ಗಾಯ್-ನಿ (ಹೈದರಾಬಾದ್)
ಫೆಬ್ರವರಿ 18: ಶನಿವಾರ, ಮಹಾಶಿವರಾತ್ರಿ (ಅಹಮದಾಬಾದ್, ಬೇಲಾಪುರ, ಬೆಂಗಳೂರು, ಹೈದರಾಬಾದ್, ಕಾನ್ಪುರ, ಲಕ್ನೋ, ಮುಂಬೈ, ನಾಗ್ಪುರ, ರಾಯ್‌ಪುರ, ರಾಂಚಿ, ಶಿಮ್ಲಾ, ತಿರುವನಂತಪುರಂ)
ಫೆಬ್ರವರಿ 19: ಭಾನುವಾರ, ವಾರದ ರಜೆ (ದೇಶಾದ್ಯಂತ)
ಫೆಬ್ರವರಿ 20: ಸೋಮವಾರ, ರಾಜ್ಯ ದಿನ (ಅಜ್ವಾಲ್)
ಫೆಬ್ರವರಿ 21: ಮಂಗಳವಾರ, ಲೂಸರ್ (ಗಾಂಗ್ಟಾಕ್)
ಫೆಬ್ರವರಿ 25: ಮೂರನೇ ಶನಿವಾರ (ದೇಶಾದ್ಯಂತ)
ಫೆಬ್ರವರಿ 26: ಭಾನುವಾರ, ವಾರದ ರಜೆ (ದೇಶಾದ್ಯಂತ)
ಕರ್ನಾಟಕದಲ್ಲಿ ಎಷ್ಟು ದಿನ ಬ್ಯಾಂಕ್ ಬಂದ್
ಫೆಬ್ರವರಿ 11: ಎರಡನೇ ಶನಿವಾರ (ದೇಶಾದ್ಯಂತ)
ಫೆಬ್ರವರಿ 12: ಭಾನುವಾರ, ವಾರದ ರಜೆ (ದೇಶಾದ್ಯಂತ)
ಫೆಬ್ರವರಿ 18: ಶನಿವಾರ, ಮಹಾಶಿವರಾತ್ರಿ
ಫೆಬ್ರವರಿ 19: ಭಾನುವಾರ, ವಾರದ ರಜೆ (ದೇಶಾದ್ಯಂತ)
ಫೆಬ್ರವರಿ 25: ಮೂರನೇ ಶನಿವಾರ (ದೇಶಾದ್ಯಂತ)
ಫೆಬ್ರವರಿ 26: ಭಾನುವಾರ, ವಾರದ ರಜೆ (ದೇಶಾದ್ಯಂತ)
ರಜಾದಿನಗಳ ಮೂರು ವರ್ಗೀಕರಣ
ಸಾಮಾನ್ಯವಾಗಿ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್ ರಾಷ್ಟ್ರೀಯ ರಜಾದಿನ, ಹಬ್ಬಕ್ಕಾಗಿ ರಜೆ ಇದ್ದಾಗ ಹಾಗೂ ಭಾನುವಾರ ಬಂದ್ ಆಗಿರುತ್ತದೆ. ಹಾಗೆಯೇ ದೇಶದಾದ್ಯಂತ ಪ್ರತಿ ತಿಂಗಳು ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ ರಜೆ ಇರಲಿದೆ. ಇನ್ನು ಈ ರಜಾದಿನಗಳ ಮಾತ್ರವಲ್ಲದೇ ಕೆಲವು ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಆಚರಣೆ ಮಾಡುವ ಸ್ಥಳೀಯ ಹಬ್ಬದ ಸಂದರ್ಭದಲ್ಲೂ ಬ್ಯಾಂಕ್‌ಗಳು ಬಂದ್ ಆಗಲಿದೆ. ಈ ಸಂದರ್ಭದಲ್ಲಿ ಬ್ಯಾಂಕ್‌ಗಳ ಸ್ಥಳೀಯ ಬ್ರಾಂಚ್‌ಗಳು ಮಾತ್ರ ಬಂದ್ ಆಗಿರುತ್ತದೆ. ಆರ್‌ಬಿಐ ನಿಯಮದ ಪ್ರಕಾರ ರಜಾದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ. ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಮೂರು ರಜಾ ವರ್ಗೀಕರಣವಾಗಿದೆ.


Click it and Unblock the Notifications