ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬಿಡುಗಡೆ ಮಾಡಿದ ರಜಾ ಪಟ್ಟಿಯ ಪ್ರಕಾರ, ಮುಂಬರುವ ಫೆಬ್ರವರಿ 2023 ರಲ್ಲಿ 11 ದಿನಗಳ ಕಾಲ ಭಾರತದ ಬ್ಯಾಂಕ್‌ಗಳು ಮುಚ್ಚಲಾಗುತ್ತದೆ. ಖಾಸಗಿ ಅಥವಾ ಸಾರ್ವಜನಿಕ ವಲಯದ ಬ್ಯಾಂಕುಗಳು ಆಗಲಿ ಈ ರಜಾದಿನಗಳಲ್ಲಿಯೂ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಇರಲಿದೆ.
ಮುಂಬರುವ ಫೆಬ್ರವರಿ ತಿಂಗಳಲ್ಲಿ ಬ್ಯಾಂಕ್‌ಗಳು 18 ದಿನಗಳು ಮಾತ್ರ ಕಾರ್ಯನಿರ್ವಹಿಸುತ್ತವೆ. ಒಟ್ಟು 11 ದಿನಗಳ ಕಾಲ ಬ್ಯಾಂಕ್‌ಗಳು ರಜೆಯಲ್ಲಿರುತ್ತವೆ. ತಮ್ಮ ಬ್ಯಾಂಕ್‌ಗೆ ಹೋಗಿ ಯಾವುದೇ ಹಣಕಾಸು ಕಾರ್ಯ ಮಾಡುವುದಾದರೂ ಕೂಡಾ ಗ್ರಾಹಕರು ವಿಶೇಷ ಸಂದರ್ಭಗಳು, ಹಬ್ಬಗಳು ಮತ್ತು ಜನ್ಮ ವಾರ್ಷಿಕೋತ್ಸವಗಳ, ಉಳಿದ ರಜೆಗಳ ಬಗ್ಗೆ ತಿಳಿದಿರಬೇಕಾಗುತ್ತದೆ.

ಹಬ್ಬ ಹರಿದಿನಗಳ ಹೊರತಾಗಿಯೂ ಭಾನುವಾರಗಳು ಮತ್ತು ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಕೂಡಾ ಬ್ಯಾಂಕ್‌ಗಳು ಬಂದ್ ಆಗಿರಲಿದೆ. ಇದಲ್ಲದೆ, ಆರ್‌ಬಿಐಯ ಬ್ಯಾಂಕ್ ರಜಾದಿನಗಳ ಪಟ್ಟಿಯು ಪ್ರಾದೇಶಿಕ ಆಧಾರದ ಮೇಲೆ ರಜಾದಿನಗಳನ್ನು ನಿರ್ಧರಿಸುತ್ತದೆ. ರಜಾದಿನಗಳ ಪಟ್ಟಿಯು ಒಂದು ರಾಜ್ಯದಿಂದ ಇನ್ನೊಂದಕ್ಕೆ ಬದಲಾಗುತ್ತದೆ ಎಂಬುವುದು ಗಮನಾರ್ಹ.
ಫೆಬ್ರವರಿ ಬ್ಯಾಂಕ್ ರಜಾ ದಿನಗಳ ಪಟ್ಟಿ
* ಫೆಬ್ರವರಿ 4, 2024: ಭಾನುವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲಿದೆ.
* ಫೆಬ್ರವರಿ 10, 2024: ಎರಡನೇ ಶನಿವಾರದ ಕಾರಣ ದೇಶದಾದ್ಯಂತ ಎಲ್ಲಾ ಬ್ಯಾಂಕ್‌ಗಳು ಮುಚ್ಚಲಿದೆ. ಗ್ಯಾಂಗ್‌ಟಾಕ್‌ನಲ್ಲಿ ಆಚರಿಸಲಾಗುವ ಹಬ್ಬವಾದ ಲೋಸರ್, ತಿಂಗಳ ಅದೇ ದಿನದಂದು ಬರುತ್ತದೆ.
* ಫೆಬ್ರವರಿ 11, 2024: ಭಾನುವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲಿದೆ.
* ಫೆಬ್ರವರಿ 14, 2024: ಉತ್ತರ ಭಾರತದಲ್ಲಿ ಸಾಮಾನ್ಯವಾಗಿ ಸರಸ್ವತಿ ಪೂಜೆ ಎಂದು ಕರೆಯಲ್ಪಡುವ ಬಸಂತ್ ಪಂಚಮಿಯ ಕಾರಣ ತ್ರಿಪುರಾ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದ ಎಲ್ಲಾ ಬ್ಯಾಂಕುಗಳು ಈ ದಿನಾಂಕದಂದು ಬಂದ್ ಆಗಿರುತ್ತದೆ.
* ಫೆಬ್ರವರಿ 15, 2024: ಲುಯಿ-ನ್ಗೈ-ನಿ ಕಾರಣದಿಂದಾಗಿ ಮಣಿಪುರದ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
* ಫೆಬ್ರವರಿ 18, 2024: ಭಾನುವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲಿದೆ.
* ಫೆಬ್ರವರಿ 19, 2024: ಛತ್ರಪತಿ ಶಿವಾಜಿ ಜಯಂತಿಯ ಕಾರಣ ಮಹಾರಾಷ್ಟ್ರದಲ್ಲಿ ಬ್ಯಾಂಕ್ ರಜೆ.
* ಫೆಬ್ರವರಿ 20, 2024: ಮಿಜೋರಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ತಮ್ಮ ರಾಜ್ಯ ದಿನಾಚರಣೆಯ ಕಾರಣ ಬ್ಯಾಂಕ್ ರಜೆ.
* ಫೆಬ್ರವರಿ 24, 2024: 4ನೇ ಶನಿವಾರದ ಕಾರಣ ರಾಷ್ಟ್ರದಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
* ಫೆಬ್ರವರಿ 25, 2024: ಭಾನುವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲಿದೆ.
* ಫೆಬ್ರವರಿ 26, 2024: ನ್ಯೋಕಮ್ ಕಾರಣ ಅರುಣಾಚಲ ಪ್ರದೇಶದಲ್ಲಿ ಬ್ಯಾಂಕ್‌ಗಳಿಗೆ ರಜೆ.
ಕರ್ನಾಟಕದಲ್ಲಿ ಯಾವೆಲ್ಲ ದಿನ ಬ್ಯಾಂಕ್ ಬಂದ್
* ಫೆಬ್ರವರಿ 4, 2024: ಭಾನುವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲಿದೆ.
* ಫೆಬ್ರವರಿ 10, 2024: ಎರಡನೇ ಶನಿವಾರದ ಕಾರಣ ದೇಶದಾದ್ಯಂತ ಎಲ್ಲಾ ಬ್ಯಾಂಕ್‌ಗಳು ಮುಚ್ಚಲಿದೆ.
* ಫೆಬ್ರವರಿ 11, 2024: ಭಾನುವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲಿದೆ.
* ಫೆಬ್ರವರಿ 18, 2024: ಭಾನುವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲಿದೆ.
* ಫೆಬ್ರವರಿ 24, 2024: 4ನೇ ಶನಿವಾರದ ಕಾರಣ ರಾಷ್ಟ್ರದಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
* ಫೆಬ್ರವರಿ 25, 2024: ಭಾನುವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲಿದೆ.


Click it and Unblock the Notifications