ಡಿಸೆಂಬರ್ ಕೊನೆಯಾದಂತೆ 2023 ವರ್ಷವು ಕೊನೆಯಾಗಲಿದೆ. ಅದಾದ ಬಳಿಕ ಹೊಸ ವರ್ಷ 2024 ಆರಂಭವಾಗಲಿದೆ. ಈ ನಡುವೆ ಜನವರಿ 2024 ರಲ್ಲಿ, ಭಾರತದಲ್ಲಿನ ಬ್ಯಾಂಕುಗಳು ಬರೋಬ್ಬರಿ 16 ದಿನ ಬಂದ್ ಆಗಿರುತ್ತದೆ. ತುರ್ತಾಗಿ ಬ್ಯಾಂಕ್‌ಗೆ ಹೋದವರು ಈ ರಜೆಗಳಿರುವ ದಿನವನ್ನು ನೋಡಿಕೊಳ್ಳುವುದು ಉತ್ತಮ.
ಈ ರಜೆಯ ದಿನಗಳಲ್ಲಿ ಬ್ಯಾಂಕ್ ಶಾಖೆಗಳನ್ನು ಮುಚ್ಚಲಾಗುತ್ತದೆ. ಆದರೆ ಮೊಬೈಲ್ ಬ್ಯಾಂಕಿಂಗ್, ಯುಪಿಐ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್‌ನಂತಹ ಡಿಜಿಟಲ್ ಸೇವೆಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಕಾರ್ಯನಿರ್ವಹಣೆ ಮಾಡಲಿದೆ.

ಸಾಮಾನ್ಯವಾಗಿ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್ ರಾಷ್ಟ್ರೀಯ ರಜಾದಿನ, ಹಬ್ಬಕ್ಕಾಗಿ ರಜೆ ಇದ್ದಾಗ ಹಾಗೂ ಭಾನುವಾರ ಬಂದ್ ಆಗಿರುತ್ತದೆ. ಹಾಗೆಯೇ ದೇಶದಾದ್ಯಂತ ಪ್ರತಿ ತಿಂಗಳು ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ ರಜೆ ಇರಲಿದೆ.
ಇನ್ನು ಈ ರಜಾದಿನಗಳ ಮಾತ್ರವಲ್ಲದೇ ಕೆಲವು ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಆಚರಣೆ ಮಾಡುವ ಸ್ಥಳೀಯ ಹಬ್ಬದ ಸಂದರ್ಭದಲ್ಲೂ ಬ್ಯಾಂಕ್‌ಗಳು ಬಂದ್ ಆಗಲಿದೆ. ಈ ಸಂದರ್ಭದಲ್ಲಿ ಬ್ಯಾಂಕ್‌ಗಳ ಸ್ಥಳೀಯ ಬ್ರಾಂಚ್‌ಗಳು ಮಾತ್ರ ಬಂದ್ ಆಗಿರುತ್ತದೆ. ಈ ರಜಾ ದಿನಗಳ ಪಟ್ಟಿ ಈ ಕೆಳಗಿದೆ ಮುಂದೆ ಓದಿ...
ಬ್ಯಾಂಕ್ ರಜಾದಿನಗಳು ಜನವರಿ 2024
* ಜನವರಿ 1 (ಸೋಮವಾರ) - ಹೊಸ ವರ್ಷದ ದಿನ
* ಜನವರಿ 7 (ಭಾನುವಾರ)
* ಜನವರಿ 11 (ಗುರುವಾರ)- ಮಿಷನರಿ ಡೇ (ಮಿಜೋರಾಂ)
* ಜನವರಿ 12 (ಶುಕ್ರವಾರ)- ಸ್ವಾಮಿ ವಿವೇಕಾನಂದ ಜಯಂತಿ (ಪಶ್ಚಿಮ ಬಂಗಾಳ)
* ಜನವರಿ 13 (ಶನಿವಾರ)- ಎರಡನೇ ಶನಿವಾರ
* ಜನವರಿ 14 (ಭಾನುವಾರ)
* ಜನವರಿ 15 (ಸೋಮವಾರ)- ಪೊಂಗಲ್/ತಿರುವಳ್ಳುವರ್ ದಿನ (ತಮಿಳುನಾಡು ಮತ್ತು ಆಂಧ್ರಪ್ರದೇಶ)
* ಜನವರಿ 16 (ಮಂಗಳವಾರ)- ತುಸು ಪೂಜೆ (ಪಶ್ಚಿಮ ಬಂಗಾಳ ಮತ್ತು ಅಸ್ಸಾಂ)
* ಜನವರಿ 17 (ಬುಧವಾರ)- ಗುರು ಗೋವಿಂದ್ ಸಿಂಗ್ ಜಯಂತಿ
* ಜನವರಿ 21 (ಭಾನುವಾರ)
* ಜನವರಿ 23 (ಮಂಗಳವಾರ)- ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ
* ಜನವರಿ 25 (ಗುರುವಾರ)- ರಾಜ್ಯ ದಿನ (ಹಿಮಾಚಲ ಪ್ರದೇಶ)
* ಜನವರಿ 26 (ಶುಕ್ರವಾರ)- ಗಣರಾಜ್ಯೋತ್ಸವ
* ಜನವರಿ 27 (ಶನಿವಾರ) - ನಾಲ್ಕನೇ ಶನಿವಾರ
* ಜನವರಿ 28 (ಭಾನುವಾರ)
* ಜನವರಿ 31 (ಬುಧವಾರ): ಮಿ-ಡ್ಯಾಮ್-ಮಿ-ಫೈ (ಅಸ್ಸಾಂ)
ಕರ್ನಾಟಕದಲ್ಲಿ ಯಾವೆಲ್ಲ ದಿನ ಬ್ಯಾಂಕ್ ಬಂದ್
* ಜನವರಿ 7 (ಭಾನುವಾರ)
* ಜನವರಿ 13 ಎರಡನೇ ಶನಿವಾರ
* ಜನವರಿ 14 (ಭಾನುವಾರ)
* ಜನವರಿ 21 (ಭಾನುವಾರ)
* ಜನವರಿ 26 (ಶುಕ್ರವಾರ)- ಗಣರಾಜ್ಯೋತ್ಸವ
* ಜನವರಿ 27 (ಶನಿವಾರ) - ನಾಲ್ಕನೇ ಶನಿವಾರ
* ಜನವರಿ 28 (ಭಾನುವಾರ)
ರಜಾದಿನಗಳ ಮೂರು ವರ್ಗೀಕರಣ
ಆರ್‌ಬಿಐ ನಿಯಮದ ಪ್ರಕಾರ ರಜಾದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ. ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಮೂರು ರಜಾ ವರ್ಗೀಕರಣವಾಗಿದೆ.


Click it and Unblock the Notifications