ಎಂದಿಗೂ ಕೂಡಾ ಹಣಕಾಸು ಸಂಸ್ಥೆಗಳು ಅಥವಾ ಬ್ಯಾಂಕ್‌ಗಳು ಜನರ ಜೀವನದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ನಾವು ಹಣವನ್ನು ವಿತ್‌ಡ್ರಾ ಮಾಡಲು ಎಟಿಎಂಗಳಿಗೆ ಹೋಗಬಹುದಾದರೂ ಕೂಡಾ ನಾವು ಕೆಲವು ಕಾರ್ಯಗಳಿಗೆ ಬ್ಯಾಂಕ್‌ಗೆ ಹೋಗುವುದು ಅತೀ ಮುಖ್ಯವಾಗುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕಳೆದ ತಿಂಗಳು 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದೆ. ಆದರಿಂದಾಗಿ ನಿಮಗೆ ಬ್ಯಾಂಕ್‌ಗೆ ಹೋಗುವ ಅಗತ್ಯ ಉಂಟಾಗಬಹುದು.
ನೀವು 2000 ರೂಪಾಯಿ ನೋಟನ್ನು ಬದಲಾವಣೆ ಮಾಡಲು ಬ್ಯಾಂಕ್‌ಗೆ ಹೋಗುವುದಕ್ಕೂ ಮುನ್ನವೇ, ಅಥವಾ ಬೇರೆ ಕಾರ್ಯಗಳಿಗೆ ಬ್ಯಾಂಕ್‌ಗೆ ಹೋಗುವ ಮುನ್ನವೇ ಯಾವೆಲ್ಲ ದಿನಗಳು ಬ್ಯಾಂಕ್ ಬಂದ್ ಆಗಿರುತ್ತದೆ ಎಂದು ತಿಳಿಯುವುದು ಮುಖ್ಯವಾಗುತ್ತದೆ. ನೀವು ಬ್ಯಾಂಕ್‌ಗೆ ಹೋದ ಬಳಿಕ ಬಂದ್ ಆಗಿರುವುದು ತಿಳಿದರೆ ನಿಮ್ಮ ಸಮಯ ವ್ಯರ್ಥವಾಗಲಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜುಲೈ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿ ಪ್ರಕಾರವಾಗಿ ಭಾರತದಲ್ಲಿ ಜುಲೈ ತಿಂಗಳಿನಲ್ಲಿ ಒಟ್ಟಾಗಿ 15 ದಿನಗಳು ಬ್ಯಾಂಕ್ ರಜೆ ಇರಲಿದೆ. ಪ್ರಮುಖವಾಗಿ ಜುಲೈ ತಿಂಗಳಿನಲ್ಲಿ ಭಾನು ಜಯಂತಿ, ಕೆರ್ ಪೂಜಾ, ಆಶೋರಾ, ಮೊಹಾರಂ ಮೊದಲಾದ ಹಬ್ಬಗಳ ದಿನ ಬ್ಯಾಂಕ್ ಬಂದ್ ಆಗಿರುತ್ತದೆ. ಹಾಗಿರುವಾಗ ಜುಲೈ ತಿಂಗಳು ಯಾವೆಲ್ಲ ದಿನ ಬ್ಯಾಂಕ್ ಬಂದ್ ಇರಲಿದೆ ತಿಳಿಯಿರಿ, ಮುಂದೆ ಓದಿ....
ಜುಲೈ ತಿಂಗಳ ಬ್ಯಾಂಕ್ ರಜಾ ಪಟ್ಟಿ
* ಜುಲೈ 4, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಜುಲೈ 5, 2023: ಬುಧವಾರ, ಗುರು ಹರಗೋಬಿಂದ್ ಜಿ ಜನ್ಮದಿನ, ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಬಂದ್
* ಜುಲೈ 6, 2023: ಗುರುವಾರ, ಎಂಎಚ್‌ಐಪಿ ದಿನ, ಮಿಜೋರಾಂನಲ್ಲಿ ಬ್ಯಾಂಕ್‌ಗಳು ಬಂದ್ ಆಗಿರುತ್ತದೆ.
* ಜುಲೈ 8, 2023: ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
* ಜುಲೈ 9, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಜುಲೈ 11, 2023: ಮಂಗಳವಾರ, ಕೇರ್ ಪೂಜಾ, ತ್ರಿಪುರಾದಲ್ಲಿ ಬ್ಯಾಂಕ್ ಬಂದ್
* ಜುಲೈ 13, 2023: ಗುರುವಾರ, ಭಾನು ಜಯಂತಿ, ಸಿಕ್ಕಿಂನಲ್ಲಿ ಬ್ಯಾಂಕ್ ಬಂದ್ ಆಗಿರುತ್ತದೆ.
* ಜುಲೈ 16, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಜುಲೈ 17, 2023: ಸೋಮವಾರ, ಯು ಟಿರೋಟ್ ಸಿಂಗ್ ಡೇ, ಮೇಘಾಲಯದಲ್ಲಿ ಬ್ಯಾಂಕ್ ಬಂದ್ ಆಗಿರುತ್ತದೆ.
* ಜುಲೈ 21, 2023: ಶುಕ್ರವಾರ, ದ್ರುಕ್ಪಾ ತ್ಶೆ-ಜಿ ದಿನ, ಸಿಕ್ಕಿಂನಲ್ಲಿ ಬ್ಯಾಂಕ್ ಬಂದ್ ಆಗಿರುತ್ತದೆ.
* ಜುಲೈ 22, 2023: ನಾಲ್ಕನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ಬಂದ್
* ಜುಲೈ 23, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಜುಲೈ 28, 2023: ಶುಕ್ರವಾರ, ಅಶುರಾ ದಿನ ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್ ರಜೆ ಇರುತ್ತದೆ.
* ಜುಲೈ 29, 2023: ಶನಿವಾರ, ಮೊಹರಂ (ತಾಜಿಯ), ತ್ರಿಪುರಾ, ಮಿಜೋರಾಂ, ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ನವದೆಹಲಿ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶದಲ್ಲಿ ಬ್ಯಾಂಕ್‌ಗಳು ಬಂದ್ ಆಗಿರುತ್ತದೆ.
* ಜುಲೈ 30, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಕರ್ನಾಟಕದಲ್ಲಿ ಎಷ್ಟು ದಿನ ಬ್ಯಾಂಕ್ ಬಂದ್
* ಜುಲೈ 4, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಜುಲೈ 8, 2023: ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
* ಜುಲೈ 9, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಜುಲೈ 16, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಜುಲೈ 22, 2023: ನಾಲ್ಕನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ಬಂದ್
* ಜುಲೈ 23, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಜುಲೈ 29, 2023: ಶನಿವಾರ, ಮೊಹರಂ (ತಾಜಿಯ) ಬ್ಯಾಂಕ್ ಬಂದ್
* ಜುಲೈ 30, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ


Click it and Unblock the Notifications