ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಾರ, ಜೂನ್ 2022 ರಲ್ಲಿ ರಜಾದಿನಗಳ ಕ್ಯಾಲೆಂಡರ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ ಜೂನ್ 2022 ರಲ್ಲಿ ಎಂಟು ದಿನಗಳವರೆಗೆ ಬ್ಯಾಂಕುಗಳು ಬಂದ್ ಆಗಲಿದೆ.
ಜೂನ್ ತಿಂಗಳಲ್ಲಿ, ದೇಶದಾದ್ಯಂತ ಜನರು ಮಹಾರಾಣಾ ಪ್ರತಾಪ್ ಜಯಂತಿ, ಗುರು ಜಯಂತಿ ಹರಗೋಬಿಂದ್ ಅವರ ಜನ್ಮದಿನವಾದ ರಾಜ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಎಲ್ಲಾ ರಾಜ್ಯಗಳು ಈ ಹಬ್ಬಗಳು ಮತ್ತು ವಿಶೇಷ ದಿನಗಳನ್ನು ಆಚರಣೆ ಮಾಡಲ್ಲ. ಆದ್ದರಿಂದ ಈ ರಜೆಗಳು ಎಲ್ಲಾ ರಾಜ್ಯಗಳಲ್ಲಿ ಇರಲಾರದು. ಆದರೂ ನೀವು ರಜೆ ಇದ್ದ ದಿನ ಕೂಡಾ ಬ್ಯಾಂಕ್‌ಗೆ ಹೋಗಿ ಸಮಯ ವ್ಯರ್ಥ ಮಾಡುವ ಮುನ್ನ ರಜೆಯನ್ನು ತಿಳಿದುಕೊಳ್ಳಿ. ಆದಾಗ್ಯೂ, ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ದೇಶಾದ್ಯಂತ ಲಭ್ಯವಿರುತ್ತವೆ.
ಭಾರತದಾದ್ಯಂತ ಹಬ್ಬಗಳ ಆಚರಣೆ ಮತ್ತು ವಿಶೇಷ ದಿನಗಳನ್ನು ಆಚರಿಸುವುದರ ಜೊತೆಗೆ ವಾರಾಂತ್ಯದಲ್ಲಿ, ಜೂನ್‌ನಲ್ಲಿ 30 ದಿನಗಳಲ್ಲಿ 8 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ರಜಾದಿನಗಳ ಕ್ಯಾಲೆಂಡರ್ ಪ್ರಕಾರ, ಜೂನ್‌ನಲ್ಲಿ ರಜಾದಿನಗಳ ಸಂಖ್ಯೆಯನ್ನು ಎರಡಕ್ಕೆ ನಿಗದಿಪಡಿಸಲಾಗಿದೆ. ಉಳಿದ ಆರು ದಿನಗಳು, ಎಲ್ಲಾ ಭಾನುವಾರಗಳು ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರ ಆಗಿದೆ.

ಆರ್‌ಬಿಐ ನಿಯಮದ ಪ್ರಕಾರ ರಜಾದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ. ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಮೂರು ರಜಾ ವರ್ಗೀಕರಣವಾಗಿದೆ. ಯಾವೆಲ್ಲಾ ದಿನಗಳು ಬ್ಯಾಂಕ್ ರಜೆ ಇದೆ ಎಂದು ಈ ಕೆಳಗೆ ಪಟ್ಟಿಯಲ್ಲಿ ನೀಡಲಾಗಿದೆ. ಮುಂದೆ ಓದಿ....
ರಜಾ ದಿನಗಳ ಪಟ್ಟಿ ಇಲ್ಲಿದೆ
ಜೂನ್ 2: ಮಹಾರಾಣಾ ಪ್ರತಾಪ್ ಜಯಂತಿ, ಶಿಮ್ಲಾ ಮತ್ತು ಹಿಮಾಚಲ ಪ್ರದೇಶದ ಇತರ ಪ್ರದೇಶಗಳಲ್ಲಿ ಬ್ಯಾಂಕ್‌ಗಳು ಬಂದ್ ಆಗಲಿದೆ
ಜೂನ್ 5: ತಿಂಗಳ ಮೊದಲ ಭಾನುವಾರ (ವಾರದ ರಜೆ)
ಜೂನ್ 11: ತಿಂಗಳ ಎರಡನೇ ಶನಿವಾರ
ಜೂನ್ 12: ತಿಂಗಳ ಎರಡನೇ ಭಾನುವಾರ (ವಾರದ ರಜೆ)
ಜೂನ್ 15: ಶ್ರೀನಗರ, ಜಮ್ಮು, ಭುವನೇಶ್ವರ್ ಮತ್ತು ಐಜ್ವಾಲ್‌ನಲ್ಲಿ ಗುರು ಹರಗೋಬಿಂದ್ ಅವರ ಜನ್ಮ ವಾರ್ಷಿಕೋತ್ಸವ, ಮಿಜೋರಾಂನಲ್ಲಿ ವೈಎಂಎ ದಿನದ ಆಚರಣೆ ಮತ್ತು ಒಡಿಶಾದಲ್ಲಿ ರಾಜ ಸಂಕ್ರಾಂತಿ ಆಚರಣೆಯ ಸಂದರ್ಭದಲ್ಲಿ ಬ್ಯಾಂಕುಗಳು ಬಂದ್
ಜೂನ್ 19: ತಿಂಗಳ ಮೂರನೇ ಭಾನುವಾರ (ವಾರದ ರಜೆ)
ಜೂನ್ 25: ತಿಂಗಳ ನಾಲ್ಕನೇ ಶನಿವಾರ (ವಾರದ ರಜೆ)
ಜೂನ್ 26: ತಿಂಗಳ ನಾಲ್ಕನೇ ಭಾನುವಾರ (ವಾರದ ರಜೆ)


Click it and Unblock the Notifications