ಹಣಕಾಸು ವರ್ಷದ ಅಂತ್ಯದ ತಿಂಗಳಾದ ಮಾರ್ಚ್‌ನಲ್ಲಿ ಖಾಸಗೀ ಬ್ಯಾಂಕುಗಳು ಹಾಗೂ ಸಾರ್ವಜನಿಕ ಬ್ಯಾಂಕ್‌ಗಳು ಹಲವಾರು ದಿನಗಳ ಕಾಲ ಬಂದ್ ಆಗಿರಲಿದೆ. ಈ ನಿಟ್ಟಿನಲ್ಲಿ ನೀವು ಬ್ಯಾಂಕ್-ಸಂಬಂಧಿತ ಕಾರ್ಯಗಳನ್ನು ಮಾಡಲಿದ್ದರೆ ಮುಂದಿನ ತಿಂಗಳಲ್ಲಿ ಬ್ಯಾಂಕುಗಳು ಯಾವಾಗ ಮುಚ್ಚಿರುತ್ತದೆ ಎಂದು ತಿಳಿಯುವುದು ಬಹಳ ಮುಖ್ಯವಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪಟ್ಟಿಯ ಪ್ರಕಾರ, ಮುಂದಿನ ತಿಂಗಳು ಒಟ್ಟು 13 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಆದಾಗ್ಯೂ, ಈ ರಜಾದಿನಗಳು ಎಲ್ಲಾ ರಾಜ್ಯಗಳಲ್ಲಿ ಇರುವುದಿಲ್ಲ. ಕೆಲವೊಂದು ರಾಜ್ಯವಾರು ರಜೆಗಳು ಇದೆ. ಹಾಗಾದರೂ ನೀವು ಮುಂದಿನ ತಿಂಗಳು ಬ್ಯಾಂಕ್‌ಗೆ ಹೋಗುವ ಮುನ್ನ ಬ್ಯಾಂಕ್‌ನ ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಿದರೆ ಉತ್ತಮ.
ಅಗರ್ತಲಾ, ಐಜ್ವಾಲ್, ಚೆನ್ನೈ, ಗ್ಯಾಂಗ್ಟಾಕ್, ಗುವಾಹಟಿ, ಇಂಫಾಲ್, ಕೋಲ್ಕತ್ತಾ, ನವದೆಹಲಿ, ಪಣಜಿ, ಪಾಟ್ನಾ ಮತ್ತು ಶಿಲ್ಲಾಂಗ್ ಹೊರತುಪಡಿಸಿ ಹೆಚ್ಚಿನ ನಗರಗಳಲ್ಲಿ ಮಹಾಶಿವರಾತ್ರಿಯ ಕಾರಣ ಮಾರ್ಚ್ 1 ರಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಗ್ಯಾಂಗ್‌ಟಾಕ್‌ನಲ್ಲಿ ಮಾರ್ಚ್ 3 ರಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಚಾಪ್‌ಚಾರ್ ಕುಟ್‌ನ ಕಾರಣದಿಂದಾಗಿ ಐಜ್ವಾಲ್‌ನಲ್ಲಿನ ಬ್ಯಾಂಕುಗಳು ಮಾರ್ಚ್ 4 ರಂದು ಮುಚ್ಚಲ್ಪಡುತ್ತವೆ. ಮಾರ್ಚ್ 17 ರಂದು ಹೋಲಿ ಹಿನ್ನೆಲೆ ಡೆಹ್ರಾಡೂನ್, ಕಾನ್ಪುರ, ಲಕ್ನೋ ಮತ್ತು ರಾಂಚಿಯಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಅಂತೆಯೇ, ಹೋಳಿ/ಯೋಸಾಂಗ್ 2 ನೇ ದಿನವನ್ನು ಆಚರಿಸಲು ಮಾರ್ಚ್ 19 ರಂದು ಭುವನೇಶ್ವರ್, ಇಂಫಾಲ್ ಮತ್ತು ಪಾಟ್ನಾದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಇನ್ನುಳಿದಂತೆ ಬ್ಯಾಂಕ್ ಮುಷ್ಕರ ಹಿನ್ನೆಲೆ ಮಾರ್ಚ್ 28-29ರಂದು ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಕಾರ್ಮಿಕ ಸಂಘಟನೆಗಳು ಕಳೆದ ತಿಂಗಳು ಫೆಬ್ರವರಿ 23-24 ರ ರಾಷ್ಟ್ರವ್ಯಾಪಿ ಮುಷ್ಕರವನ್ನು ನಡೆಸಲು ಮುಂದಾಗಿತ್ತು. ಕೇಂದ್ರ ಸರ್ಕಾರದ 'ಕಾರ್ಮಿಕ ವಿರೋಧಿ' ನೀತಿಗಳನ್ನು ವಿರೋಧಿಸಿ ಹಾಗೂ ಬ್ಯಾಂಕುಗಳ ಖಾಸಗೀಕರಣವನ್ನು ವಿರೋಧ ಮಾಡಿ ಹಲವಾರು ಕೇಂದ್ರ ಕಾರ್ಮಿಕ ಸಂಘಟನೆಗಳು ಮಾರ್ಚ್ 28-29ರಂದು ಮುಷ್ಕರ ನಡೆಸಲಿದೆ. ಈ ಹಿನ್ನೆಲೆಯಿಂದಾಗಿ ಈ ಎರಡು ದಿನಗಳು ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗಬಹುದು. ಹಾಗಾದರೆ ಮಾರ್ಚ್ ತಿಂಗಳಲ್ಲಿ ಎಷ್ಟು ಬ್ಯಾಂಕ್ ರಜೆಗಳು ಇದೆ. ಯಾವೆಲ್ಲಾ ದಿನಗಳು ಬ್ಯಾಂ ರಜೆ ಇದೆ ಎಂದು ಈ ಕೆಳಗೆ ಪಟ್ಟಿಯಲ್ಲಿ ನೀಡಲಾಗಿದೆ. ಮುಂದೆ ಓದಿ....
ಮಾರ್ಚ್ ತಿಂಗಳ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ:
ಮಾರ್ಚ್ 01, 2022: ಮಹಾಶಿವರಾತ್ರಿ (ಗುಜರಾತ್‌ನಲ್ಲಿ ಬ್ಯಾಂಕ್ ಬಂದ್)
ಮಾರ್ಚ್ 03, 2022: ಲೋಸರ್ (ಸಿಕ್ಕಿಮ್‌ನಲ್ಲಿ ಬ್ಯಾಂಕ್ ಬಂದ್)
ಮಾರ್ಚ್ 04, 2022: ಚಾಪ್ಚಾರ್ ಕುಟ್ (ಮಿಜೋರಾಂನಲ್ಲಿ ಬ್ಯಾಂಕ್ ಬಂದ್)
ಮಾರ್ಚ್ 06, 2022: ಭಾನುವಾರ, ವಾರದ ರಜೆ
ಮಾರ್ಚ್ 12, 2022: ಎರಡನೇ ಶನಿವಾರ
ಮಾರ್ಚ್ 13, 2022: ಭಾನುವಾರ, ವಾರದ ರಜೆ
ಮಾರ್ಚ್ 17, 2022: ಹೋಳಿ (ಉತ್ತರಾಖಂಡ, ಉತ್ತರ ಪ್ರದೇಶ, ಜಾರ್ಖಂಡ್‌ನಲ್ಲಿ ಬ್ಯಾಂಕ್ ಬಂದ್)
ಮಾರ್ಚ್ 18, 2022: ಹೋಳಿ/ಹೋಳಿ 2ನೇ ದಿನ (ಕರ್ನಾಟಕ, ಒಡಿಸ್ಸಾ, ತಮಿಳುನಾಡು, ಮಣಿಪುರ, ತ್ರಿಪುರಾದಲ್ಲಿ ಬ್ಯಾಂಕ್ ಬಂದ್)
ಮಾರ್ಚ್ 19, 2022: ಹೋಳಿ/ಯೋಸಾಂಗ್ 2ನೇ ದಿನ (ಒಡಿಸ್ಸಾ, ಮಣಿಪುರ, ಬಿಹಾರದಲ್ಲಿ ಬ್ಯಾಂಕ್ ಬಂದ್)
ಮಾರ್ಚ್ 20, 2022: ಭಾನುವಾರ, ವಾರದ ರಜೆ
ಮಾರ್ಚ್ 22, 2022: ಬಿಹಾರ ದಿವಸ (ಬಿಹಾರದಲ್ಲಿ ಬ್ಯಾಂಕ್ ಬಂದ್)
ಮಾರ್ಚ್ 26, 2022: ನಾಲ್ಕನೇ ಶನಿವಾರ
ಮಾರ್ಚ್ 27, 2022: ಭಾನುವಾರ, ವಾರದ ರಜೆ


Click it and Unblock the Notifications