2023ರ ಎರಡು ತಿಂಗಳು ಈಗಾಗಲೇ ಕೊನೆಯಾಗುತ್ತಿದೆ. ನಾವು ಮೂರನೇ ತಿಂಗಳಿಗೆ ಕಾಲಿಡಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಹೊಸ ತಿಂಗಳ ಸ್ವಾಗತಕ್ಕೆ ನಾವು ಸಿದ್ಧವಾಗುತ್ತಿದ್ದೇವೆ. ಆದರೆ ಮುಂದಿನ ತಿಂಗಳಲ್ಲಿ ಎಷ್ಟು ದಿನಗಳು ಬ್ಯಾಂಕ್ ರಜೆ ಇರಲಿದೆ, ಯಾವೆಲ್ಲ ದಿನಗಳು ಬ್ಯಾಂಕ್ ರಜೆ ಇರಲಿದೆ ಎಂಬುವುದು ತಿಳಿಯುವುದು ಮುಖ್ಯವಲ್ಲವೇ?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಾರ್ಚ್ 2023ರ ಬ್ಯಾಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ ಮಾರ್ಚ್ ತಿಂಗಳಿನಲ್ಲಿಒಟ್ಟಾಗಿ 12 ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ. ಇದು ಭಾನುವಾರ ಹಾಗೂ ವಾರದ ರಜೆಗಳು ಸೇರಿದ ರಜೆಗಳಾಗಿದೆ. ನಾವು ಯಾವುದೇ ಬ್ಯಾಂಕ್‌ನ ವಹಿವಾಟನ್ನು ನಡೆಸಲು ಬ್ಯಾಂಕ್‌ಗೆ ತೆರಳಿದಾಗ ಯಾವುದೇ ತೊಂದರೆ ಉಂಟಾಗಬಾರದು, ನಿಮ್ಮ ಸಮಯ ವ್ಯರ್ಥವಾಗಬಾರದು ಎಂದಾದರೆ, ನೀವು ಯಾವೆಲ್ಲ ದಿನ ಬ್ಯಾಂಕ್ ಬಂದ್ ಎಂಬುವುದನ್ನು ತಿಳಿದಿರಬೇಕಾಗುತ್ತದೆ.
ಸಾಮಾನ್ಯವಾಗಿ ಮೊದಲನೇ ಮತ್ತು ಮೂರನೇ ಶನಿವಾರ ಕಾರ್ಯನಿರ್ವಹಣೆ ಮಾಡುತ್ತದೆ. ಆದರೆ ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕುಗಳು ಬಂದ್ ಆಗಿರುತ್ತದೆ. ಅದನ್ನು ಹೊರತುಪಡಿಸಿ ಪ್ರತಿ ಭಾನುವಾರ ಬ್ಯಾಂಕ್ ಬಂದ್ ಆಗಿರಲಿದೆ. ಅದನ್ನು ಹೊರತುಪಡಿಸಿ ಸರ್ಕಾರಿ ರಜೆಗಳ ಸಂದರ್ಭದಲ್ಲಿ ಬ್ಯಾಂಕ್‌ಗಳು ಬಂದ್ ಆಗಿರಲಿದೆ. ಆದರೆ ಎಲ್ಲ ರಾಜ್ಯಗಳಲ್ಲಿ ಬ್ಯಾಂಕ್ ಬಂದ್ ಆಗಿರಲಾರದು, ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...
ಮಾರ್ಚ್ ತಿಂಗಳ ಬ್ಯಾಂಕ್ ರಜಾಪಟ್ಟಿ
ಮಾರ್ಚ್ 3: ಶುಕ್ರವಾರ, ಚಂಪ್‌ಚಾರ್ ಕುಟ್, ಮಣಿಪುರ
ಮಾರ್ಚ್ 5: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಮಾರ್ಚ್ 7: ಮಂಗಳವಾರ, ಹೋಲಿ (ಎರಡನೇ ದಿನ), ದೇಶದ ಹಲವಾರು ರಾಜ್ಯಗಳಲ್ಲಿ ರಜೆ
ಮಾರ್ಚ್ 8: ಬುಧವಾರ, ಧುಲೇಟಿ/ ದೊಲ್‌ಜಾತ್ರಾ/ ಹೋಲಿ/ ಯೌಸನ್ಗ್ 2ನೇ ದಿನ, ದೇಶದ ಹಲವಾರು ರಾಜ್ಯಗಳಲ್ಲಿ ರಜೆ
ಮಾರ್ಚ್ 9: ಗುರುವಾರ, ಹೋಲಿ, ಬಿಹಾರ
ಮಾರ್ಚ್ 11: ಶನಿವಾರ, ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
ಮಾರ್ಚ್ 12: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಮಾರ್ಚ್ 19: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಮಾರ್ಚ್ 22: ಬುಧವಾರ, ಗುಡಿ ಪಡ್ವ/ಯುಗಾದಿ ಹಬ್ಬ/ ಬಿಹಾರ ದಿವಾಸ್/ ತೆಲುಗು ಹೊಸ ವರ್ಷ/ ಮೊದಲ ನವ್‌ರಥ, ದೇಶದ ಹಲವಾರು ರಾಜ್ಯಗಳಲ್ಲಿ ರಜೆ
ಮಾರ್ಚ್ 25: ಶನಿವಾರ, ತಿಂಗಳ ನಾಲ್ಕನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
ಮಾರ್ಚ್ 26: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಮಾರ್ಚ್ 30: ಗುರುವಾರ, ಶ್ರೀ ರಾಮ ನವಮಿ, ದೇಶದ ಹಲವಾರು ರಾಜ್ಯಗಳಲ್ಲಿ ರಜೆ
ಕರ್ನಾಟಕದಲ್ಲಿ ಎಷ್ಟು ದಿನ ಬ್ಯಾಂಕ್ ಬಂದ್
ಮಾರ್ಚ್ 5: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಮಾರ್ಚ್ 11: ಶನಿವಾರ, ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
ಮಾರ್ಚ್ 12: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಮಾರ್ಚ್ 19: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಮಾರ್ಚ್ 22: ಬುಧವಾರ, ಯುಗಾದಿ ಹಬ್ಬ
ಮಾರ್ಚ್ 25: ಶನಿವಾರ, ತಿಂಗಳ ನಾಲ್ಕನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
ಮಾರ್ಚ್ 26: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ರಜಾದಿನಗಳ ಮೂರು ವರ್ಗೀಕರಣ
ಸಾಮಾನ್ಯವಾಗಿ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್ ರಾಷ್ಟ್ರೀಯ ರಜಾದಿನ, ಹಬ್ಬಕ್ಕಾಗಿ ರಜೆ ಇದ್ದಾಗ ಹಾಗೂ ಭಾನುವಾರ ಬಂದ್ ಆಗಿರುತ್ತದೆ. ಹಾಗೆಯೇ ದೇಶದಾದ್ಯಂತ ಪ್ರತಿ ತಿಂಗಳು ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ ರಜೆ ಇರಲಿದೆ. ಇನ್ನು ಈ ರಜಾದಿನಗಳ ಮಾತ್ರವಲ್ಲದೇ ಕೆಲವು ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಆಚರಣೆ ಮಾಡುವ ಸ್ಥಳೀಯ ಹಬ್ಬದ ಸಂದರ್ಭದಲ್ಲೂ ಬ್ಯಾಂಕ್‌ಗಳು ಬಂದ್ ಆಗಲಿದೆ. ಈ ಸಂದರ್ಭದಲ್ಲಿ ಬ್ಯಾಂಕ್‌ಗಳ ಸ್ಥಳೀಯ , ಬ್ರಾಂಚ್‌ಗಳು ಮಾತ್ರ ಬಂದ್ ಆಗಿರುತ್ತದೆ. ಆರ್‌ಬಿಐ ನಿಯಮದ ಪ್ರಕಾರ ರಜಾದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ. ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಮೂರು ರಜಾ ವರ್ಗೀಕರಣವಾಗಿದೆ.


Click it and Unblock the Notifications