ಹೊಸ ಹಣಕಾಸು ವರ್ಷವು ಅರ್ಧ ಮುಗಿದಿದೆ. ಇನ್ನು ಮೇ ತಿಂಗಳು ಬರಲಿದೆ. ಮೇನಲ್ಲಿ ಖಾಸಗೀ ಬ್ಯಾಂಕುಗಳು ಹಾಗೂ ಸಾರ್ವಜನಿಕ ಬ್ಯಾಂಕ್‌ಗಳು ಹಲವಾರು ದಿನಗಳ ಕಾಲ ಬಂದ್ ಆಗಿರಲಿದೆ. ಬರೋಬ್ಬರಿ 10ಕ್ಕೂ ಅಧಿಕ ದಿನ ಬ್ಯಾಂಕ್ ರಜೆ ಇರಲಿದೆ. ಈ ನಿಟ್ಟಿನಲ್ಲಿ ನೀವು ಬ್ಯಾಂಕ್‌ಗೆ ಹೋಗುವ ಮುನ್ನ ರಜೆಯ ಪಟ್ಟಿಯನ್ನು ನೋಡಿಕೊಳ್ಳಿ.
ಆರ್‌ಬಿಐ ನಿಯಮದ ಪ್ರಕಾರ ರಜಾದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ. ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಮೂರು ರಜಾ ವರ್ಗೀಕರಣವಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ರಜಾದಿನಗಳ ಪಟ್ಟಿಯ ಪ್ರಕಾರ, ಬ್ಯಾಂಕಿಂಗ್ ರಜಾದಿನಗಳು ದೇಶಾದ್ಯಂತ ಏಕಕಾಲದಲ್ಲಿ ನಡೆಯುವುದಿಲ್ಲ. ಅನೇಕ ರಜಾದಿನಗಳು ವಿವಿಧ ರಾಜ್ಯಗಳಲ್ಲಿ ಅಥವಾ ಆ ರಾಜ್ಯಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಆಚರಿಸಲಾಗುವ ಹಬ್ಬಗಳ ಮೇಲೆ ಆಧಾರಿತವಾಗಿರುತ್ತದೆ. ಈ ಎಲ್ಲಾ ರಜಾದಿನಗಳು ಎಲ್ಲಾ ರಾಜ್ಯಗಳಲ್ಲಿ ಅನ್ವಯಿಸುವುದಿಲ್ಲ.

ತಿಂಗಳ ಆರಂಭದಲ್ಲಿ ನಾಲ್ಕು ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ. ಈ ಪೈಕಿ ಕೆಲವು ರಜೆಗಳು ಕೆಲವು ರಾಜ್ಯ್ಳಿಗೆ ಮಾತ್ರ ಸೀಮಿತವಾಗಿದೆ. ಮೇ ಒಂದರಂದು ಮೇ ಡೇ ಹಿನ್ನೆಲೆ ರಾಷ್ಟ್ರದಾದ್ಯಂತ ಬ್ಯಾಂಕುಗಳು ರಜೆ ಇರಲಿದೆ. ಆ ದಿನವೇ ಮಹಾರಾಷ್ಟ್ರ ದಿನಾಚರಣೆ ಇರಲಿದೆ. ಮೇ 3ರಂದು ಈದುಲ್ ಫಿತ್ರ್, ಬಸವ ಜಯಂತಿ ಹಿನ್ನೆಲೆ ರಾಜ್ಯದಲ್ಲಿ ಬ್ಯಾಂಕು ರಜೆ ಇರಲಿದೆ.
ಮೇನಲ್ಲಿ ಇರುವ 10ಕ್ಕೂ ಅಧಿಕ ದಿನಗಳ ಬ್ಯಾಂಕ್ ರಜೆಗಳಲ್ಲಿ ರಾಷ್ಟ್ರೀಯ ರಜಾದಿನಗಳ ಹೊರತಾಗಿ, ಕೆಲವು ರಾಜ್ಯ-ವಾರು ರಜಾದಿನಗಳು ಎಲ್ಲಾ ಭಾನುವಾರಗಳ ರಜೆ, ಎರಡನೇ ನಾಲ್ಕನೇ ಶನಿವಾರ ಇದರಲ್ಲಿ ಸೇರ್ಪಡೆ ಆಗಿದೆ. ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಹಾಗೂ ಸಹಕಾರಿ ಬ್ಯಾಂಕ್ ಸೇರಿದಂತೆ ಪ್ರಾದೇಶಿಕ ಬ್ಯಾಂಕುಗಳು ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾ ದಿನವಿರಲಿದೆ. ಯಾವೆಲ್ಲಾ ದಿನಗಳು ಬ್ಯಾಂಕ್ ರಜೆ ಇದೆ ಎಂದು ಈ ಕೆಳಗೆ ಪಟ್ಟಿಯಲ್ಲಿ ನೀಡಲಾಗಿದೆ. ಮುಂದೆ ಓದಿ....

ಮೇ 2022 ರಲ್ಲಿ ಬ್ಯಾಂಕ್ ರಜಾದಿನಗಳು:
ಮೇ 1 (ಭಾನುವಾರ): ಮೇ ಡೇ-ದೇಶದೆಲ್ಲೆಡೆ/ಮಹಾರಾಷ್ಟ್ರ ದಿನಾಚರಣೆ-ಮಹಾರಾಷ್ಟ್ರ
ಮೇ 2 (ಸೋಮವಾರ): ಮಹರ್ಷಿ ಪರುಶರಾಮ್ ಜಯಂತಿ- ಹಲವಾರು ರಾಜ್ಯಗಳು
ಮೇ 3 (ಮಂಗಳವಾರ): ಈದುಲ್ ಫಿತ್ರ್, ಬಸವ ಜಯಂತಿ (ಕರ್ನಾಟಕ)
ಮೇ 4 (ಬುಧವಾರ): ಈದುಲ್ ಫಿತ್ರ್ -ತೆಲಂಗಾಣ
ಮೇ 9 (ಸೋಮವಾರ): ಗುರು ರವೀಂದ್ರನಾಥ್ ಜಯಂತಿ- ಪಶ್ಚಿಮ ಬಂಗಾಳ, ತ್ರಿಪುರಾ
ಮೇ 13 (ಗುರುವಾರ): ಈದುಲ್ ಫಿತ್ರ್ -ರಾಷ್ಟ್ರದೆಲ್ಲೆಡೆ
ಮೇ 16 (ಸೋಮವಾರ): ಬುದ್ಧ ಪೂರ್ಣಿಮಾ, ರಾಜ್ಯ ಸ್ಥಾಪನಾ ದಿನ(ಸಿಕ್ಕಿಂ ಇತರೆ ರಾಜ್ಯ)
ಮೇ 24 (ಮಂಗಳವಾರ): ಖಾಜಿ ನಜ್ರುಲ್ ಇಸ್ಲಾಂ- ಸಿಕ್ಕಿಂ
ಶನಿವಾರ ಮತ್ತು ಭಾನುವಾರದ ರಜಾದಿನಗಳ ಪಟ್ಟಿ:
ಮೇ 1 ಭಾನುವಾರ (ವಾರದ ರಜೆ)
ಮೇ 8 ಭಾನುವಾರ (ವಾರದ ರಜೆ)
ಮೇ 14 ಎರಡನೇ ಶನಿವಾರ ರಜೆ
ಮೇ 15 ಭಾನುವಾರ (ವಾರದ ರಜೆ)
ಮೇ 22 ಭಾನುವಾರ (ವಾರದ ರಜೆ)
ಮೇ 28 ನಾಲ್ಕನೇ ಶನಿವಾರ ರಜೆ
ಮೇ 29 ಭಾನುವಾರ (ವಾರದ ರಜೆ)


Click it and Unblock the Notifications