ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೇ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿ ಪ್ರಕಾರವಾಗಿ ಭಾರತದಲ್ಲಿ ಮೇ ತಿಂಗಳಿನಲ್ಲಿ ಒಟ್ಟಾಗಿ 12 ದಿನಗಳು ಬ್ಯಾಂಕ್ ರಜೆ ಇರಲಿದೆ. ಇದರಲ್ಲಿ ಹಲವಾರು ಹಬ್ಬಗಳು, ವಾರದ ರಜೆಗಳು ಸೇರಿದೆ. ಬುಧ ಪೂರ್ಣಿಮಾ, ರವೀಂದ್ರನಾಥ್ ಠಾಕೂರ್ ಹುಟ್ಟುಹಬ್ಬ, ಮೊದಲಾದ ಹಬ್ಬ, ಜನ್ಮದಿನಗಳ ಆಚರಣೆಗೆ ಬ್ಯಾಂಕ್ ರಜೆ ಇರಲಿದೆ.
ನೀವು ಮುಂದಿನ ತಿಂಗಳು ಬ್ಯಾಂಕ್‌ಗೆ ತೆರಳಿ ಯಾವುದೇ ಹಣಕಾಸು ವಹಿವಾಟು ನಡೆಸಬೇಕೆಂದು ಇದ್ದರೆ, ಈಗಲೇ ಯಾವೆಲ್ಲ ದಿನಗಳು ಬ್ಯಾಂಕ್ ಬಂದ್ ಆಗಿರಲಿದೆ ಎಂದು ತಿಳಿಯುವುದು ಉತ್ತಮ. ಇಲ್ಲವಾದರೆ ನೀವು ಬ್ಯಾಂಕ್‌ವರೆಗೂ ಹೋಗಿ ಹೋದ ಕಾರ್ಯ ಮುಗಿಸದೆ ಹಿಂತಿರುಗಿ ಬರಬೇಕಾಗುತ್ತದೆ. ಬ್ಯಾಂಕ್ ರಜಾ ಪಟ್ಟಿ ಈ ಕೆಳಗಿದೆ ಮುಂದೆ ಓದಿ...

ಕಳೆದ ತಿಂಗಳಿನಲ್ಲಿ ಬ್ಯಾಂಕ್‌ನಲ್ಲಿ ಹಲವಾರು ರಜಾ ದಿನಗಳು ಇತ್ತು. ಕರ್ನಾಟಕದಲ್ಲಿಯೂ ಬ್ಯಾಂಕ್ ಹಲವಾರು ದಿನಗಳ ಕಾಲ ಬಂದ್ ಆಗಿತ್ತು. ಆದರೆ ಮೇ ತಿಂಗಳಿನಲ್ಲಿ ಹೆಚ್ಚಿನ ಬ್ಯಾಂಕ್ ರಜೆಗಳು ಬೇರೆ ರಾಜ್ಯಗಳಲ್ಲಿ ಇರಲಿದೆ. ಕರ್ನಾಟಕದಲ್ಲಿ ಬಹುತೇಕ ಬ್ಯಾಂಕ್ ರಜೆ ಭಾನುವಾರ, ಎರಡನೇ- ನಾಲ್ಕನೇ ಶನಿವಾರ ಆಗಿರಲಿದೆ. ನೀವು ಸಿಕ್ಕಿಂ ನಿವಾಸಿಗಳಾಗಿದ್ದರೆ, ನಾಲ್ಕು ದಿನಗಳ ಕಾಲ ಬ್ಯಾಂಕ್ ರಜೆ ಲಭ್ಯವಿದೆ.
ಸಿಕ್ಕಿಂನಲ್ಲಿ ಮೇ 15ರಂದು ಒಂದು ದಿನ ನೀವಾಗಿ ರಜೆ ತೆಗೆದುಕೊಂಡರೆ ಮೇ 13ರಿಂದ ಮೇ 16ರವರೆಗೆ ಬ್ಯಾಂಕ್ ಬಂದ್ ಆಗಿರಲಿದೆ. ಮೇ 13ರಂದು ಎರಡನೇ ಶನಿವಾರ, ಮೇ 14ರಂದು ಭಾನುವಾರ ಮತ್ತು ಮೇ 16ರಂದು ಸಿಕ್ಕಿಂ ದಿನ ಇರಲಿದೆ. ಆದ್ದರಿಂದಾಗಿ ಈ ರಾಜ್ಯದಲ್ಲಿ ನಡುವೆ ಬರುವ ಒಂದು ದಿನ ರಜೆಯನ್ನು ತೆಗೆದುಕೊಂಡರೆ ಒಟ್ಟಾಗಿ ನಾಲ್ಕು ದಿನ ರಜೆ ಲಭ್ಯವಾಗಲಿದೆ.
ಮೇ ತಿಂಗಳ ಬ್ಯಾಂಕ್ ರಜಾ ಪಟ್ಟಿ
ಮೇ 1 (ಸೋಮವಾರ): ಮೇ ದಿನ, ಮಹಾರಾಷ್ಟ್ರ ದಿನ
ಮೇ 5 (ಶುಕ್ರವಾರ): ಬುಧ ಪೂರ್ಣಿಮಾ, ದೆಹಲಿ, ಹರಿಯಾಣ, ಮಹಾರಾಷ್ಟ್ರ, ಪಂಜಾಬ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಉತ್ತಾರಾಖಂಡ, ಅಸ್ಸಾಂ, ಬಿಹಾರ, ಗುಜರಾತ್, ಅರುಣಾಚಲ ಪ್ರದೇಶ, ಛತ್ತೀಸ್‌ಗಢ
ಮೇ 7: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಮೇ 9 (ಮಂಗಳವಾರ): ರವೀಂದ್ರನಾಥ್ ಟಾಗೋರ್ ಜನ್ಮದಿನ
ಮೇ 13: ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
ಮೇ 14: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
ಮೇ 16 (ಮಂಗಳವಾರ): ರಾಜ್ಯ ದಿನ - ಸಿಕ್ಕಿಂ
ಮೇ 21: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
ಮೇ 22 (ಸೋಮವಾರ): ಮಹಾರಾಣ ಪ್ರತಾಪ್ ಜಯಂತಿ - ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಪಂಜಾಬ್, ರಾಜಸ್ಥಾನ
ಮೇ 24 (ಬುಧವಾರ): ಕಾಜಿ ನಜ್ರುಲ್ ಇಸ್ಲಾಂ ಜಯಂತಿ - ತ್ರಿಪುರಾ
ಮೇ 27: ನಾಲ್ಕನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ಬಂದ್
ಮೇ 28: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
ಕರ್ನಾಟಕದಲ್ಲಿ ಎಷ್ಟು ದಿನ ಬ್ಯಾಂಕ್ ಬಂದ್
ಮೇ 1 (ಸೋಮವಾರ): ಮೇ ದಿನ
ಮೇ 7: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಮೇ 13: ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
ಮೇ 14: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
ಮೇ 21: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
ಮೇ 27: ನಾಲ್ಕನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ಬಂದ್
ಮೇ 28: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್


Click it and Unblock the Notifications