ಭಾರತೀಯ ರಿಸರ್ವ್ ಬ್ಯಾಂಕ್ (RBI) ನವೆಂಬರ್‌ನ ಬ್ಯಾಂಕ್ ರಜಾ ದಿನಗಳ ಕ್ಯಾಲೆಂಡರ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆರ್‌ಬಿಐನ ಈ ಪಟ್ಟಿ ಪ್ರಕಾರ, ನವೆಂಬರ್ 2022ರಲ್ಲಿ ಒಟ್ಟು 10 ದಿನಗಳವರೆಗೆ ಬ್ಯಾಂಕುಗಳು ಬಂದ್ ಆಗಲಿದೆ. ಕಳೆದ ತಿಂಗಳು ನವರಾತ್ರಿ ಹಿನ್ನೆಲೆ ಹಲವಾರು ದಿನಗಳ ಕಾಲ ಬ್ಯಾಂಕ್ ರಜೆ ಇತ್ತು. ಆದರೆ ನವೆಂಬರ್‌ನಲ್ಲಿ ಕಳೆದ ತಿಂಗಳಿನಷ್ಟು ರಜೆಗಳು ಇಲ್ಲ. ಆದರೆ ನೀವು ಬ್ಯಾಂಕ್‌ನ ಯಾವುದೇ ಕಾರ್ಯ ಮಾಡುವುದಕ್ಕೂ ಮುನ್ನ ಯಾವೆಲ್ಲಾ ದಿನ ರಜೆ ಇರಲಿದೆ ಎಂದು ತಿಳಿಯುವುದು ಉತ್ತಮ.
ಸಾಮಾನ್ಯವಾಗಿ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್ ರಾಷ್ಟ್ರೀಯ ರಜಾದಿನ, ಹಬ್ಬಕ್ಕಾಗಿ ರಜೆ ಇದ್ದಾಗ ಹಾಗೂ ಭಾನುವಾರ ಬಂದ್ ಆಗಿರುತ್ತದೆ. ಹಾಗೆಯೇ ದೇಶದಾದ್ಯಂತ ಪ್ರತಿ ತಿಂಗಳು ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ ರಜೆ ಇರಲಿದೆ. ಇನ್ನು ಈ ರಜಾದಿನಗಳ ಮಾತ್ರವಲ್ಲದೇ ಕೆಲವು ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಆಚರಣೆ ಮಾಡುವ ಸ್ಥಳೀಯ ಹಬ್ಬದ ಸಂದರ್ಭದಲ್ಲೂ ಬ್ಯಾಂಕ್‌ಗಳು ಬಂದ್ ಆಗಲಿದೆ. ಈ ಸಂದರ್ಭದಲ್ಲಿ ಬ್ಯಾಂಕ್‌ಗಳ ಸ್ಥಳೀಯ ಬ್ರಾಂಚ್‌ಗಳು ಮಾತ್ರ ಬಂದ್ ಆಗಿರುತ್ತದೆ.
ನೀವು ಬ್ಯಾಂಕ್‌ಗೆ ಹೋದ ಬಳಿಕ ಬ್ಯಾಂಕ್ ರಜೆ ಎಂದು ತಿಳಿದು ಹಿಂದೆ ಬರುವುದನ್ನು ತಪ್ಪಿಸಲು ಮುಂದಿನ ತಿಂಗಳಿನಲ್ಲಿ ಬ್ಯಾಂಕ್‌ಗಳು ಎಷ್ಟು ದಿನ ಬಂದ್ ಆಗಿರಲಿದೆ ಎಂದು ಈಗಲೇ ತಿಳಿಯುವುದು ಉತ್ತಮ. ಯಾಕೆಂದರೆ ನವೆಂಬರ್‌ನ ಮೊದಲ ದಿನವೇ ಬ್ಯಾಂಕ್ ರಜೆ ಇರಲಿದೆ. ಆದರೆ ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳು ಬಂದ್ ಆಗಲಾರದು. ಈ ಪೈಕಿ ಕೆಲವು ರಜೆಗಳು ಕೆಲವು ರಾಜ್ಯಗಳಲ್ಲಿ ಮಾತ್ರ ಇರಲಿದೆ. ಯಾವೆಲ್ಲಾ ದಿನಗಳು ಬ್ಯಾಂಕ್ ರಜೆ ಇದೆ, ಕರ್ನಾಟಕದಲ್ಲಿ ಬ್ಯಾಂಕ್ ರಜೆ ಎಷ್ಟು ದಿನ ಇರಲಿದೆ ಎಂದು ಈ ಕೆಳಗೆ ಪಟ್ಟಿಯಲ್ಲಿ ನೀಡಲಾಗಿದೆ. ಮುಂದೆ ಓದಿ.....
ರಜಾದಿನಗಳ ಮೂರು ವರ್ಗೀಕರಣ
ಆರ್‌ಬಿಐ ನಿಯಮದ ಪ್ರಕಾರ ರಜಾದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ. ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಮೂರು ರಜಾ ವರ್ಗೀಕರಣವಾಗಿದೆ.
ನವೆಂಬರ್‌ನಲ್ಲಿ ಈ ದಿನಗಳು ಬ್ಯಾಂಕ್ ರಜೆ
ನವೆಂಬರ್ 1: ಕನ್ನಡ ರಾಜ್ಯೋತ್ಸವ, ಬೆಂಗಳೂರು, ಇಂಫಾಲ್‌ನಲ್ಲಿ ಬ್ಯಾಂಕ್ ರಜೆ
ನವೆಂಬರ್ 6: ಭಾನುವಾರ, ವಾರದ ರಜೆ, ದೇಶಾದಾದ್ಯಂತ ಬ್ಯಾಂಕ್ ಬಂದ್
ನವೆಂಬರ್ 8: ಗುರು ನಾನಕ್ ಜಯಂತಿ/ ಕಾರ್ತಿಕ ಪೂರ್ಣಿಮ/ ರಹಾಸ್ ಪೂರ್ಣಿಮ, ಬ್ಯಾಂಕ್ ಐಜ್ವಾಲ್, ಬೆಲಪುರ, ಬೋಪಾಲ್, ಭುವನೇಶ್ವರ, ಚಂಡೀಗಢ, ಡೆಹ್ರಾಡೂನ್, ಹೈದಾರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವೆದೆಹಲಿ, ರಾಯ್ಪುರ, ರಾಂಚಿ, ಶಿಮ್ಲಾ, ಶ್ರೀನಗರದಲ್ಲಿ ಬ್ಯಾಂಕ್ ಬಂದ್
ನವೆಂಬರ್ 11: ಕನಕದಾಸ ಜಯಂತಿ, ವಾಂಗಾಲ ಹಬ್ಬ, ಬ್ಯಾಂಕ್ ಬೆಂಗಳೂರು, ಇಂಫಾಲ್, ಶಿಲ್ಲಾಂಗ್‌ನಲ್ಲಿ ಬಂದ್
ನವೆಂಬರ್ 12: ಎರಡನೇ ಶನಿವಾರ, ದೇಶಾದಾದ್ಯಂತ ಬ್ಯಾಂಕ್ ಬಂದ್
ನವೆಂಬರ್ 13: ಭಾನುವಾರ, ವಾರದ ರಜೆ, ದೇಶಾದಾದ್ಯಂತ ಬ್ಯಾಂಕ್ ಬಂದ್
ನವೆಂಬರ್ 20: ಭಾನುವಾರ, ವಾರದ ರಜೆ, ದೇಶಾದಾದ್ಯಂತ ಬ್ಯಾಂಕ್ ಬಂದ್
ನವೆಂಬರ್ 23: ಸೆಂಗ್ ಕುಂಟ್ಸ್‌ನೆಮ್, ಶಿಲಾಂಗ್‌ನಲ್ಲಿ ಎಲ್ಲ ಬ್ಯಾಂಕ್‌ಗಳು ಬಂದ್ ಆಗಿರುತ್ತದೆ
ನವೆಂಬರ್ 26: ನಾಲ್ಕನೇ ಶನಿವಾರ, ದೇಶಾದಾದ್ಯಂತ ಬ್ಯಾಂಕ್ ಬಂದ್
ನವೆಂಬರ್ 27: ಭಾನುವಾರ, ವಾರದ ರಜೆ, ದೇಶಾದಾದ್ಯಂತ ಬ್ಯಾಂಕ್ ಬಂದ್
ಕರ್ನಾಟಕದಲ್ಲಿ ಎಷ್ಟು ದಿನ ಬ್ಯಾಂಕ್ ಬಂದ್
ನವೆಂಬರ್ 1: ಮಂಗಳವಾರ, ಕನ್ನಡ ರಾಜ್ಯೋತ್ಸವ
ನವೆಂಬರ್ 6: ಭಾನುವಾರ, ವಾರದ ರಜೆ, ದೇಶಾದಾದ್ಯಂತ ಬ್ಯಾಂಕ್ ಬಂದ್
ನವೆಂಬರ್ 11: ಶುಕ್ರವಾರ, ಕನಕದಾಸ ಜಯಂತಿ
ನವೆಂಬರ್ 12: ಎರಡನೇ ಶನಿವಾರ, ದೇಶಾದಾದ್ಯಂತ ಬ್ಯಾಂಕ್ ಬಂದ್
ನವೆಂಬರ್ 13: ಭಾನುವಾರ, ವಾರದ ರಜೆ, ದೇಶಾದಾದ್ಯಂತ ಬ್ಯಾಂಕ್ ಬಂದ್
ನವೆಂಬರ್ 20: ಭಾನುವಾರ, ವಾರದ ರಜೆ, ದೇಶಾದಾದ್ಯಂತ ಬ್ಯಾಂಕ್ ಬಂದ್
ನವೆಂಬರ್ 26: ನಾಲ್ಕನೇ ಶನಿವಾರ, ದೇಶಾದಾದ್ಯಂತ ಬ್ಯಾಂಕ್ ಬಂದ್
ನವೆಂಬರ್ 27: ಭಾನುವಾರ, ವಾರದ ರಜೆ, ದೇಶಾದಾದ್ಯಂತ ಬ್ಯಾಂಕ್ ಬಂದ್


Click it and Unblock the Notifications