ಸೆಪ್ಟೆಂಬರ್ ತಿಂಗಳು ಮುಗಿಯಲು ಇನ್ನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಇದಾದ ಬಳಿಕ ಈ ವರ್ಷದ ಹತ್ತನೇ ತಿಂಗಳು ಅಕ್ಟೋಬರ್ ಪ್ರಾರಂಭವಾಗುತ್ತದೆ. ಅಕ್ಟೋಬರ್ ತಿಂಗಳಲ್ಲಿ ಯಾವೆಲ್ಲ ದಿನಗಳು ಬ್ಯಾಂಕುಗಳು ಬಂದ್ ಆಗಿರುತ್ತದೆ ಎಂಬುವುದನ್ನು ನೀವು ಮೊದಲೇ ತಿಳಿದಿರಬೇಕಾಗುತ್ತದೆ. ಇಲ್ಲವಾದರೆ ಬ್ಯಾಂಕ್‌ನ ಕಾರ್ಯದಲ್ಲಿ ತೊಂದರೆ ಉಂಟಾಗಲಿದೆ.
ನಾವು ಬ್ಯಾಂಕಿಂಗ್ ಸೇವೆಗಳನ್ನು ಆನ್‌ಲೈನ್ ಅಥವಾ ಡಿಜಿಟಲ್ ಮಾಧ್ಯಮದ ಮೂಲಕ ಮಾಡಬಹುದಾಗಿದೆ. ಆದರೂ ಕೂಡಾ ಹಲವಾರು ವಹಿವಾಟುಗಳಿಗಾಗಿ ನಾವು ಬ್ಯಾಂಕ್‌ಗೆ ಹೋಗಬೇಕಾಗುತ್ತದೆ. ನೀವು ಅಕ್ಟೋಬರ್‌ನಲ್ಲಿ ಯಾವ ಬ್ಯಾಂಕಿನ ಸೇವೆಗಳನ್ನು ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಮೊದಲೇ ಪರಿಶೀಲಿಸಿ, ಯಾವೆಲ್ಲ ದಿನ ಬ್ಯಾಂಕ್ ಬಂದ್ ಆಗಿರದು, ಆ ದಿನ ಬ್ಯಾಂಕ್ ಸೇವೆ ಪಡೆಯಿರಿ. ಅಕ್ಟೋಬರ್ ಬ್ಯಾಂಕ್ ರಜಾ ಪಟ್ಟಿ ಇಲ್ಲಿದೆ ಮುಂದೆ ಓದಿ...

ಅಕ್ಟೋಬರ್ ಹಬ್ಬದ ಪಟ್ಟಿ
ಅಕ್ಟೋಬರ್‌ನಲ್ಲಿ ಅನೇಕ ಹಬ್ಬಗಳು ಇದೆ. ಈ ಕಾರಣದಿಂದಾಗಿ ಬ್ಯಾಂಕ್ ರಜಾದಿನಗಳ ಪಟ್ಟಿಯೂ ದೊಡ್ಡದಾಗಿದೆ. ದೇಶದ ಸೆಂಟ್ರಲ್ ಬ್ಯಾಂಕ್ ಅಂದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಅಕ್ಟೋಬರ್ ತಿಂಗಳ ಬ್ಯಾಂಕ್ ರಜೆ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ತಿಂಗಳು ಸುಮಾರು 16 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಇದರಲ್ಲಿ ಭಾನುವಾರದ ರಜೆಗಳಿವೆ. ನೀವು ಸಹ ಬ್ಯಾಂಕ್‌ಗೆ ಹೋಗಿ ಕೆಲವು ಕೆಲಸಗಳನ್ನು ಮಾಡಬೇಕು ಎಂದು ಬಯಸಿದರೆ, ನೀವು ಬ್ಯಾಂಕ್ ರಜೆ ಪಟ್ಟಿಯನ್ನು ಒಮ್ಮೆ ಪರಿಶೀಲನೆ ಮಾಡಬೇಕು.
ಅಕ್ಟೋಬರ್ ತಿಂಗಳ ಬ್ಯಾಂಕ್ ರಜೆ
ಅಕ್ಟೋಬರ್ 1: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಅಕ್ಟೋಬರ್ 2: ಮಹಾತ್ಮ ಗಾಂಧಿ ಜಯಂತಿ, ದೇಶದಾದ್ಯಂತ ಬ್ಯಾಂಕ್ ಬಂದ್
ಅಕ್ಟೋಬರ್ 8: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಅಕ್ಟೋಬರ್ 14: ಮಹಾಲಯ, ಕೋಲ್ಕತ್ತಾದಲ್ಲಿ ಬ್ಯಾಂಕ್ ಬಂದ್ ಆಗಿರುತ್ತದೆ. ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ಬಂದ್.
ಅಕ್ಟೋಬರ್ 15: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಅಕ್ಟೋಬರ್ 18: ಕಟಿ ಬಿಹು, ಗುವಾಹಟಿಯಲ್ಲಿ ಬ್ಯಾಂಕ್ ರಜೆ ಇರಲಿದೆ.
ಅಕ್ಟೋಬರ್ 21: ದುರ್ಗಾ ಪೂಜೆ (ಸಪ್ತಮಿ), ಅಗರ್ತಲಾ, ಗುವಾಹಟಿ, ಇಂಫಾಲ್, ಕೋಲ್ಕತ್ತಾದಲ್ಲಿ ಬ್ಯಾಂಕ್ ಬಂದ್.
ಅಕ್ಟೋಬರ್ 22: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಅಕ್ಟೋಬರ್ 23: ದುರ್ಗಾ ಪೂಜೆ (ನವಮಿ) ದಿನ ಅಗರ್ತಲಾ, ಬೆಂಗಳೂರು, ಭುವನೇಶ್ವರ್, ಚೆನ್ನೈ, ಗುವಾಹಟಿ, ಹೈದರಾಬಾದ್, ಕಾನ್ಪುರ, ಕೊಚ್ಚಿ, ಕೊಹಿಮಾ, ಕೋಲ್ಕತ್ತಾ, ಲಕ್ನೋ, ಪಾಟ್ನಾ, ರಾಂಚಿ, ಶಿಲ್ಲಾಂಗ್, ತಿರುವನಂತಪುರಂದಲ್ಲಿ ಬ್ಯಾಂಕ್ ರಜೆ ಇರಲಿದೆ.
ಅಕ್ಟೋಬರ್ 24: ದುರ್ಗಾ ಪೂಜೆ (ದಶಮಿ), ದೇಶದಾದ್ಯಂತ ಬ್ಯಾಂಕ್ ಬಂದ್
ಅಕ್ಟೋಬರ್ 25: ದುರ್ಗಾ ಪೂಜೆ, ಗ್ಯಾಂಗ್ಟಾಕ್‌ನಲ್ಲಿ ಬ್ಯಾಂಕ್ ಬಂದ್
ಅಕ್ಟೋಬರ್ 26: ದುರ್ಗಾ ಪೂಜೆ, ಗ್ಯಾಂಗ್ಟಾಕ್, ಜಮ್ಮು, ಶ್ರೀನಗರದಲ್ಲಿ ಬ್ಯಾಂಕ್ ರಜೆ
ಅಕ್ಟೋಬರ್ 27: ದುರ್ಗಾ ಪೂಜೆ ಗ್ಯಾಂಗ್ಟಾಕ್‌ನಲ್ಲಿ ಬ್ಯಾಂಕ್ ಬಂದ್
ಅಕ್ಟೋಬರ್ 28: ಲಕ್ಷ್ಮಿ ಪೂಜೆ ದಿನ ಕೋಲ್ಕತ್ತಾದಲ್ಲಿ ಬ್ಯಾಂಕ್ ರಜೆ, ನಾಲ್ಕನೇ ಶನಿವಾರ ಬ್ಯಾಂಕ್ ಬಂದ್ ಆಗಿರುತ್ತದೆ.
ಅಕ್ಟೋಬರ್ 29: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಅಕ್ಟೋಬರ್ 31: ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ, ಅಹಮದಾಬಾದ್‌ನಲ್ಲಿ ಬ್ಯಾಂಕ್ ಬಂದ್
ಕರ್ನಾಟಕದಲ್ಲಿ ಬ್ಯಾಂಕ್ ರಜೆ
ಅಕ್ಟೋಬರ್ 1: ಭಾನುವಾರ, ವಾರದ ರಜೆ
ಅಕ್ಟೋಬರ್ 2: ಮಹಾತ್ಮ ಗಾಂಧಿ ಜಯಂತಿ
ಅಕ್ಟೋಬರ್ 8: ಭಾನುವಾರ, ವಾರದ ರಜೆ
ಅಕ್ಟೋಬರ್ 14: ಎರಡನೇ ಶನಿವಾರ
ಅಕ್ಟೋಬರ್ 15: ಭಾನುವಾರ, ವಾರದ ರಜೆ
ಅಕ್ಟೋಬರ್ 22: ಭಾನುವಾರ, ವಾರದ ರಜೆ
ಅಕ್ಟೋಬರ್ 23: ಮಹಾ ನವಮಿ
ಅಕ್ಟೋಬರ್ 24: ವಿಜಯ ದಶಮಿ
ಅಕ್ಟೋಬರ್ 28: ನಾಲ್ಕನೇ ಶನಿವಾರ
ಅಕ್ಟೋಬರ್ 29: ಭಾನುವಾರ, ವಾರದ ರಜೆ


Click it and Unblock the Notifications