ಬ್ಯಾಂಕ್ ಆಫ್ ಬರೋಡಾ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಏರಿಸಿದೆ. ಹಿರಿಯ ನಾಗರಿಕರು ಮತ್ತು ಇತರೆ ಹೂಡಿಕೆದಾರರು ಬ್ಯಾಂಕ್ ಆಫ್ ಬರೋಡಾದ ವಿವಿಧ ಅವಧಿಯ ಮೇಲೆ ಹೆಚ್ಚುವರಿ 25 ಮೂಲಾಂಕ ಬಡ್ಡಿದರವನ್ನು ಇನ್ನು ಮುಂದೆ ಪಡೆಯಲಿದ್ದಾರೆ. ಈ ಬಗ್ಗೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಮಾರ್ಚ್ 17ರಂದು ಮಾಹಿತಿ ನೀಡಿದ್ದು, ಎನ್‌ಆರ್‌ಒ, ಎನ್‌ಆರ್‌ಇ ಟರ್ಮ್ ಡೆಪಾಸಿಟ್ ಸೇರಿದಂತೆ ಡೊಮೆಸ್ಟಿಕ್ ರಿಟೇಲ್ ಟರ್ಮ್ ಡೆಪಾಸಿಟ್‌ಗಳ ಬಡ್ಡಿದರ 25 ಬಿಪಿಎಸ್ ಹೆಚ್ಚಿಸುವ ಘೋಷನೆ ಮಾಡಿದೆ.
2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲೆ ಮಾರ್ಚ್ 17ರಿಂದ ನೂತನ ದರ ಅನ್ವಯವಾಗಲಿದೆ. ಬಿಒಬಿ ಬರೋಡಾ ಟ್ಯಾಕ್ಸ್ ಸೇವಿಂಗ್ಸ್ ಟರ್ಮ್ ಡೆಪಾಸಿಟ್ ಸೇರಿದಂತೆ ನಾನ್ ಕಾಲೇಬಲ್ ರಿಟೇಲ್ ಟರ್ಮ್ ಡೆಪಾಸಿಟ್ ಯೋಜನೆಯಾದ ಬರೋಡಾ ಅಡ್ವಾಂಟೇಜ್ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಕೂಡಾ ಹೆಚ್ಚಳಗೊಳಿಸಿದೆ. ಬ್ಯಾಂಕ್ ಆಫ್ ಬರೋಡಾ ಈ ಹಿಂದೆ ರಿಟೇಲ್ ಟರ್ಮ್ ಡೆಪಾಸಿಟ್ ಬಡ್ಡಿದರವನ್ನು 65 ಬಿಪಿಎಸ್ ಹೆಚ್ಚಳ ಮಾಡಿದೆ, ಅದಕ್ಕೂ ಮುನ್ನ ನವೆಂಬರ್ 2022ರಲ್ಲಿ 100 ಮೂಲಾಂಕ ಏರಿಕೆ ಮಾಡಿದೆ.

ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಬ್ಯಾಂಕ್ ಆಫ್ ಬರೋಡಾ, ಪ್ರಸ್ತುತ ನಮ್ಮ ಗ್ರಾಹಕರಾಗಿರುವವರು ಮತ್ತು ಹೊಸದಾಗಿ ಗ್ರಾಹಕರಾಗುವವರು ದೇಶದಾದ್ಯಂತ ಬ್ಯಾಂಕ್‌ನ ಯಾವುದೇ ಬ್ರ್ಯಾಂಚ್‌ನಲ್ಲಿ ಎಫ್‌ಡಿ ಖಾತೆಯನ್ನು ತೆರೆಯಬಹುದಾಗಿದೆ. ಗ್ರಾಹಕರು ಆನ್‌ಲೈನ್ ಮೂಲಕವೂ ಎಫ್‌ಡಿ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ಮೊಬೈಲ್ ಆಪ್/ ನೆಟ್ ಬ್ಯಾಂಕಿಂಗ್ ಮೂಲಕ ಇದು ಸಾಧ್ಯವಾಗಲಿದೆ.
2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಬಡ್ಡಿದರ
* 3ರಿಂದ 5 ವರ್ಷದ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ, ಎನ್‌ಆರ್‌ಒ ಖಾತೆಗೆ ಶೇಕಡ 6.5 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 7.15 ಬಡ್ಡಿದರ
* 5ರಿಂದ 10 ವರ್ಷದ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ, ಎನ್‌ಆರ್‌ಒ ಖಾತೆಗೆ ಶೇಕಡ 6.5 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 7.50 ಬಡ್ಡಿದರ
* 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ 3 ವರ್ಷಕ್ಕಿಂತ ಮೇಲಿನ 5 ವರ್ಷದವರೆಗಿನ ಎನ್‌ಆರ್‌ಇ ಟರ್ಮ್ ಡೆಪಾಸಿಟ್‌ಗೆ ಬ್ಯಾಂಕ್ ಶೇಕಡ 6.5 ಬಡ್ಡಿದರ ನೀಡುತ್ತದೆ.
* 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ 5 ವರ್ಷಕ್ಕಿಂತ ಮೇಲಿನ 10 ವರ್ಷದವರೆಗಿನ ಎನ್‌ಆರ್‌ಇ ಟರ್ಮ್ ಡೆಪಾಸಿಟ್ (ಕಾಲೇಬಲ್) ಬಡ್ಡಿದರ ಶೇಕಡ 6.5 ಆಗಿದೆ.
ಬರೋಡಾ ಟ್ಯಾಕ್ಸ್ ಸೇವಿಂಗ್ಸ್ ಟರ್ಮ್ ಡೆಪಾಸಿಟ್: ಬ್ಯಾಂಕ್ ಸಾಮಾನ್ಯ ಹೂಡಿಕೆದಾರರಿಗೆ 5 ವರ್ಷದಿಂದ 10 ವರ್ಷದವರೆಗಿನ ಎಫ್‌ಡಿ ಮೇಲೆ ಶೇಕಡ 6.5ರಷ್ಟು ಬಡ್ಡಿದರ ನೀಡುತ್ತದೆ. ಭಾರತದಲ್ಲಿರುವ ಹಿರಿಯ ನಾಗರಿಕರಿಗೆ 5 ವರ್ಷದ ತೆರಿಗೆ ಉಳಿತಾಯ ಡೆಪಾಸಿಟ್ ಮೇಲೆ ಶೇಕಡ 7.15ರಷ್ಟು ಬಡ್ಡಿದರ ನೀಡಲಾಗುತ್ತದೆ. 5 ವರ್ಷದಿಂದ 10 ವರ್ಷದವರೆಗಿನ ತೆರಿಗೆ ಉಳಿತಾಯ ಎಫ್‌ಡಿ ಮೇಲೆ ಶೇಕಡ 7.5ರಷ್ಟು ಬಡ್ಡಿದರ ನೀಡಲಾಗುತ್ತದೆ.
ಬರೋಡಾ ಅಡ್ವಾಂಟೇಜ್ ಫಿಕ್ಸಿಡ್ ಡೆಪಾಸಿಟ್: ಬ್ಯಾಂಕ್ ಆಫ್ ಬರೋಡಾ ಈಗ 3ರಿಂದ 5 ವರ್ಷದ ಡೆಪಾಸಿಟ್ ಮೇಲೆ ಶೇಕಡ 6.75ರಷ್ಟು ಬಡ್ಡಿದರ ನೀಡುತ್ತದೆ. ಹಿರಿಯ ನಾಗರಿಕರಿಗೆ ಶೇಕಡ 7.4ರಷ್ಟು ಬಡ್ಡಿದರವನ್ನು ನೀಡುತ್ತದೆ. 5ರಿಂದ 10 ವರ್ಷದ ಡೆಪಾಸಿಟ್ ಮೇಲೆ ಶೇಕಡ 6.75ರಷ್ಟು ಬಡ್ಡಿದರ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಶೇಕಡ 7.75ರಷ್ಟು ಬಡ್ಡಿದರವಿದೆ. ಈ ಯೋಜನೆಯಡಿಯಲ್ಲಿ ಕನಿಷ್ಠ ಏಕಕಾಲೀಕ ಡೆಪಾಸಿಟ್ 15.01 ಲಕ್ಷ ರೂಪಾಯಿಯಾಗಿದೆ. ಗರಿಷ್ಠ 2 ಕೋಟಿ ರೂಪಾಯಿಯಾಗಿದೆ.


Click it and Unblock the Notifications