ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಬಡ್ಡಿದರವನ್ನು ಮತ್ತೆ ಪರಿಷ್ಕರಣೆ ಮಾಡಿದೆ. ಈ ನೂತನ ಬಡ್ಡಿದರವು ಮೇ 12ರಂದು ಜಾರಿಗೆ ಬರಲಿದೆ. ಈ ಹಿಂದೆ ಮಾರ್ಚ್ ತಿಂಗಳಿನಲ್ಲಿ ಬ್ಯಾಂಕ್ ಆಫ್ ಬರೋಡಾ ತನ್ನ ಎಫ್‌ಡಿ ಬಡ್ಡಿದರವನ್ನು ಏರಿಸಿದೆ. ಬ್ಯಾಂಕ್ ಆಫ್ ಬರೋಡಾ ನಿಗದಿತ ಅವಧಿಯ ಎಫ್‌ಡಿ ಮೇಲಿನ ಬಡ್ಡಿದರವನ್ನು 30 ಮೂಲಾಂಕ ಹೆಚ್ಚಿಸಿದೆ.
ಈ ಬಡ್ಡಿದರ ಪರಿಷ್ಕರಣೆಯ ಬಳಿಕ ಬ್ಯಾಂಕ್ ಆಫ್ ಬರೋಡಾದ ಗ್ರಾಹಕರು 2 ಕೋಟಿ ರೂಪಾಯಿಗಿಂತ ಕಡಿಮೆ ಮೌಲ್ಯದ ಫಿಕ್ಸಿಡ್ ಡೆಪಾಸಿಟ್ ಮೇಲೆ ಶೇಕಡ 7.25ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ. ಇನ್ನು ಇತರೆ ಬ್ಯಾಂಕುಗಳಂತೆ ಬ್ಯಾಂಕ್ ಆಫ್ ಬರೋಡಾ ಹಿರಿಯ ನಾಗರಿಕರಿಗೆ ಫಿಕ್ಸಿಡ್ ಡೆಪಾಸಿಟ್ ಮೇಲೆ ಹೆಚ್ಚುವರಿಯಾಗಿ 50 ಮೂಲಾಂಕ ಬಡ್ಡಿದರ ನೀಡುತ್ತದೆ.

ಬ್ಯಾಂಕ್ ಆಫ್ ಬರೋಡಾ ಬಡ್ಡಿದರ ಪರಿಷ್ಕರಣೆ
ಬ್ಯಾಂಕ್ ಆಫ್ ಬರೋಡಾ 7ರಿಂದ 45 ದಿನಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 3ರಷ್ಟು ಬಡ್ಡಿದರವನ್ನು ನೀಡುತ್ತದೆ. 46 ದಿನದಿಂದ 180 ದಿನಗಳ ಅವಧಿಯ ಎಫ್‌ಡಿ ಮೇಲೆ ಗ್ರಾಹಕರಿಗೆ ಶೇಕಡ 4.5ರಷ್ಟು ಬಡ್ಡಿದರವನ್ನು ನೀಡುತ್ತದೆ. 181 ದಿನದಿಂದ 210 ದಿನಗಳ ಅವಧಿಯ ಎಫ್‌ಡಿ ಮೇಲೆ ಬ್ಯಾಂಕ್ ಆಫ್ ಬರೋಡಾ ಶೇಕಡ 5.25ರಷ್ಟು ಬಡ್ಡಿದರವನ್ನು ನೀಡುತ್ತದೆ.
ಇನ್ನು 211 ದಿನಗಳಿಂದ 1 ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿಗೆ ಬ್ಯಾಂಕ್ ಆಫ್ ಬರೋಡಾ ಶೇಕಡ 5.75ರಷ್ಟು ಬಡ್ಡಿದರವನ್ನು ನೀಡುತ್ತದೆ. ಇನ್ನು 1 ವರ್ಷದಿಂದ 2 ವರ್ಷದ ಅವಧಿಯ ಎಫ್‌ಡಿ ಮೇಲೆ ಬ್ಯಾಂಕ್ ಶೇಕಡ 6.75ರಷ್ಟು ಬಡ್ಡಿದರ ನೀಡುತ್ತದೆ.
ಇನ್ನು ಬ್ಯಾಂಕ್‌ನ 395 ದಿನಗಳ ವಿಶೇಷ ಬರೋಡಾ ತಿರಂಗ ಪ್ಲಸ್ ಡೆಪಾಸಿಟ್ ಯೋಜನೆಗೆ ಬ್ಯಾಂಕ್ ಶೇಕಡ 7.25ರಷ್ಟು ಬಡ್ಡಿದರವನ್ನು ನೀಡುತ್ತದೆ. 2 ವರ್ಷದಿಂದ 3 ವರ್ಷದ ಒಳಗಿನ ಎಫ್‌ಡಿ ಮೇಲೆ ಗ್ರಾಹಕರು ಹೂಡಿಕೆ ಮಾಡಿದರೆ ಶೇಕಡ 7.05ರಷ್ಟು ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ. 3 ವರ್ಷದಿಂದ 10 ವರ್ಷಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 6.5ರಷ್ಟು ಬಡ್ಡಿದರವನ್ನು ಬ್ಯಾಂಕ್ ಆಫ್ ಬರೋಡಾ ನೀಡುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ): ಎಸ್‌ಬಿಐ ಗ್ರಾಹಕರಿಗೆ ಶೇಕಡ 3ರಿಂದ ಶೇಕಡ 7.1ರಷ್ಟು ಬಡ್ಡಿದರವನ್ನು ನೀಡುತ್ತದೆ. ಭಾರತದ ಅತೀ ದೊಡ್ಡ ಬ್ಯಾಂಕ್ ಆದ ಎಸ್‌ಬಿಐ ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ 0.5ರಷ್ಟು ಬಡ್ಡಿದರ ನೀಡುತ್ತದೆ. 1 ವರ್ಷದಿಂದ 2 ವರ್ಷಕ್ಕೂ ಕಡಿಮೆ ಅವಧಿಯ ಎಫ್‌ಡಿ ಮೇಲೆ ಬ್ಯಾಂಕ್ ಶೇಕಡ 6.8ರಷ್ಟು ಬಡ್ಡಿದರ ನೀಡುತ್ತದೆ. 3 ವರ್ಷದಿಂದ 10 ವರ್ಷಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 6.5ರಷ್ಟು ಬಡ್ಡಿದರ ನೀಡುತ್ತದೆ.
ಐಸಿಐಸಿಐ ಬ್ಯಾಂಕ್ ಎಫ್‌ಡಿ ಬಡ್ಡಿದರ : ಐಸಿಐಸಿಐ ಬ್ಯಾಂಕ್ ಶೇಕಡ 3ರಿಂದ ಶೇಕಡ 7.1ರಷ್ಟು ಬಡ್ಡಿದರವನ್ನು ಎಫ್‌ಡಿ ಮೇಲೆ ನೀಡುತ್ತದೆ. ಹೂಡಿಕೆ ಮಾಡಿದ 7 ದಿನದ ಒಳಗಾಗಿ ಎಫ್‌ಡಿ ಹೂಡಿಕೆದಾರರು ಸಂಪೂರ್ಣ ಎಫ್‌ಡಿ ಮೊತ್ತವನ್ನು ವಿತ್‌ಡ್ರಾ ಮಾಡಿದರೆ ಬಡ್ಡಿದರವನ್ನು ಪಾವತಿ ಮಾಡಲಾಗುವುದಿಲ್ಲ ಎಂದು ಐಸಿಐಸಿಐ ಬ್ಯಾಂಕ್ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಬಡ್ಡಿದರ: ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲೆ ಶೇಕಡ 3ರಿಂದ ಶೇಕಡ 7.1ರಷ್ಟು ಬಡ್ಡಿದರವನ್ನು ನೀಡುತ್ತದೆ. ಇನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ 50 ಮೂಲಾಂಕ ನೀಡಲಾಗುತ್ತದೆ. ಆದರೆ ಈ ಹೆಚ್ಚುವರಿ ಬಡ್ಡಿದರವು ನಾನ್- ರೆಸಿಡೆಂಟ್ ಇಂಡಿಯನ್‌ಗಳಿಗೆ (ಎನ್‌ಆರ್‌ಐ) ಅನ್ವಯವಾಗುವುದಿಲ್ಲ.


Click it and Unblock the Notifications