ಮೇ ತಿಂಗಳಿನಲ್ಲಿ ಹಲವಾರು ಬ್ಯಾಂಕುಗಳು ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಕೆಲವು ಬ್ಯಾಂಕ್‌ಗಳು ಬಡ್ಡಿದರ ಏರಿಸಿದರೆ, ಕೆಲವು ಬ್ಯಾಂಕ್‌ಗಳು ದರವನ್ನು ಇಳಿಕೆ ಮಾಡಿದೆ. ಇತ್ತೀಚೆಗೆ ಬ್ಯಾಂಕ್ ಆಫ್ ಇಂಡಿಯಾ (ಬಿಒಐ) ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಏರಿಕೆ ಮಾಡಿದೆ.
ಹೌದು, ಬ್ಯಾಂಕ್ ಆಫ್ ಇಂಡಿಯಾ ಎಫ್‌ಡಿ ಬಡ್ಡಿದರವನ್ನು ಏರಿಕೆ ಮಾಡಿದ ಬಳಿಕ ಈಗ ಬ್ಯಾಂಕ್‌ನಲ್ಲಿ ಎಫ್‌ಡಿಗೆ ಗರಿಷ್ಠ ಬಡ್ಡಿದರವನ್ನು ನೀಡಲಾಗುತ್ತದೆ. ಬ್ಯಾಂಕ್ ಆಫ್ ಇಂಡಿಯಾ ಪ್ರಸ್ತುತ ಸಾಮಾನ್ಯ ನಾಗರಿಕರಿಗೆ 1 ವರ್ಷದ ಅವಧಿಯ ಎಫ್‌ಡಿ ಮೇಲೆ ಶೇಕಡ 7ರಷ್ಟು ಬಡ್ಡಿದರವನ್ನು ನೀಡುತ್ತದೆ.

ಇನ್ನು ಹಿರಿಯ ನಾಗರಿಕರಿಗೆ ಶೇಕಡ 7.50ರಷ್ಟು ಬಡ್ಡಿದರ ನೀಡುತ್ತದೆ. ನೂತನ ಬಡ್ಡಿದರವು 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲೆ ಅನ್ವಯವಾಗುತ್ತದೆ. ಹಾಗಾದರೆ ಬ್ಯಾಂಕ್‌ನ ನೂತನ ಬಡ್ಡಿದರವನ್ನು ತಿಳಿಯೋಣ ಮುಂದೆ ಓದಿ...
ಬ್ಯಾಂಕ್ ಆಫ್ ಇಂಡಿಯಾದ ನೂತನ ಬಡ್ಡಿದರ
7ರಿಂದ 45 ದಿನಗಳು: ಶೇಕಡ 3.00 ಬಡ್ಡಿದರ
46ರಿಂದ 179 ದಿನಗಳು: ಶೇಕಡ 4.50 ಬಡ್ಡಿದರ
180ರಿಂದ 269 ದಿನಗಳು: ಶೇಕಡ 5.00 ಬಡ್ಡಿದರ
270ರಿಂದ 1 ವರ್ಷ: ಶೇಕಡ 5.50 ಬಡ್ಡಿದರ
1 ವರ್ಷ: ಶೇಕಡ 7.00 ಬಡ್ಡಿದರ
1 ವರ್ಷಕ್ಕಿಂತ ಅಧಿಕ 2 ವರ್ಷಕ್ಕಿಂತ ಕಡಿಮೆ ಅವಧಿ: ಶೇಕಡ 6.00 ಬಡ್ಡಿದರ
2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿ: ಶೇಕಡ 6.75 ಬಡ್ಡಿದರ
3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಅವಧಿ: ಶೇಕಡ 6.50 ಬಡ್ಡಿದರ
5 ವರ್ಷದಿಂದ 10 ವರ್ಷ: ಶೇಕಡ 6.00 ಬಡ್ಡಿದರ
ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿದರ
ಸಾಮಾನ್ಯವಾಗಿ ಬಹುತೇಕ ಎಲ್ಲ ಬ್ಯಾಂಕುಗಳು ಫಿಕ್ಸಿಡ್ ಡೆಪಾಸಿಟ್ ಮೇಲೆ ಹಿರಿಯ ನಾಗರಿಕರಿಗೆ ಅಧಿಕ ಬಡ್ಡಿದರವನ್ನು ನೀಡುತ್ತದೆ. ಅದರಂತೆಯೇ ಬ್ಯಾಂಕ್ ಆಫ್ ಇಂಡಿಯಾವು ಕೂಡಾ ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿದರವನ್ನು ನೀಡುತ್ತದೆ.
3 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ ಸಾಮಾನ್ಯ ನಾಗರಿಕರಿಗೆ ನೀಡುವ ಬಡ್ಡಿದರಕ್ಕಿಂತ ಹೆಚ್ಚುವರಿಯಾಗಿ ಶೇಕಡ 0.50ರಷ್ಟು ಬಡ್ಡಿದರವನ್ನು ಬ್ಯಾಂಕ್ ಆಫ್ ಇಂಡಿಯಾ ಹಿರಿಯ ನಾಗರಿಕರಿಗೆ ನೀಡುತ್ತದೆ. 3 ವರ್ಷಕ್ಕಿಂತ ಅಧಿಕ ಅವಧಿಯ ಎಫ್‌ಡಿ ಮೇಲೆ ಸಾಮಾನ್ಯ ನಾಗರಿಕರಿಗೆ ನೀಡುವ ಬಡ್ಡಿದರಕ್ಕಿಂತ ಹೆಚ್ಚುವರಿಯಾಗಿ ಶೇಕಡ 0.75ರಷ್ಟು ಬಡ್ಡಿದರವನ್ನು ಬ್ಯಾಂಕ್ ಆಫ್ ಇಂಡಿಯಾ ಹಿರಿಯ ನಾಗರಿಕರಿಗೆ ನೀಡುತ್ತದೆ.
ಎಫ್‌ಡಿ ಬಡ್ಡಿದರದ ಮೇಲೆ ತೆರಿಗೆ
ಎಫ್‌ಡಿಯಿಂದ ಗಳಿಸಿದ ಬಡ್ಡಿಯು ಸಂಪೂರ್ಣವಾಗಿ ತೆರಿಗೆಗೆ ಒಳಪಡುತ್ತದೆ. ಒಂದು ವರ್ಷದಲ್ಲಿ ನೀವು ಎಫ್‌ಡಿಯಲ್ಲಿ ಗಳಿಸುವ ಯಾವುದೇ ಬಡ್ಡಿಯನ್ನು ನಿಮ್ಮ ವಾರ್ಷಿಕ ಆದಾಯಕ್ಕೆ ಸೇರ್ಪಡೆ ಮಾಡಲಾಗುತ್ತದೆ. ಒಟ್ಟು ಆದಾಯದ ಆಧಾರದ ಮೇಲೆ, ನಿಮ್ಮ ತೆರಿಗೆ ಸ್ಲ್ಯಾಬ್ ಅನ್ನು ನಿರ್ಧಾರ ಮಾಡಲಾಗುತ್ತದೆ.
ಫಿಕ್ಸಿಡ್ ಡೆಪಾಸಿಟ್ ಮೇಲೆ ಗಳಿಸಿದ ಬಡ್ಡಿ ಆದಾಯವನ್ನು "ಇತರ ಮೂಲಗಳಿಂದ ಪಡೆದ ಆದಾಯ" ಎಂದು ಪರಿಗಣನೆ ಮಾಡಲಾಗುತ್ತದೆ. ಹಾಗೆಯೇ ಮೂಲ ಅಥವಾ ಟಿಡಿಎಸ್‌ನಲ್ಲಿ ಕಡಿತಗೊಳಿಸಿದ ತೆರಿಗೆ ಅಡಿಯಲ್ಲಿ ವಿಧಿಸಲಾಗುತ್ತದೆ. ನಿಮ್ಮ ಬ್ಯಾಂಕ್ ನಿಮ್ಮ ಬಡ್ಡಿ ಆದಾಯವನ್ನು ನಿಮ್ಮ ಖಾತೆಗೆ ಜಮಾ ಮಾಡಿದಾಗ ಟಿಡಿಎಸ್ ಅನ್ನು ಕಡಿತಗೊಳಿಸಲಾಗುತ್ತದೆ.


Click it and Unblock the Notifications