ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸತತ ಆರು ಬಾರಿ ರೆಪೋ ದರವನ್ನು ಹೆಚ್ಚಿಸಿದೆ. ಪ್ರತಿ ಬಾರಿ ಆರ್‌ಬಿಐ ರೆಪೋ ದರ ಏರಿಸಿದಾಗಲೂ ಬ್ಯಾಂಕುಗಳು ಕೂಡಾ ಸಾಲದ ಬಡ್ಡಿದರ ಪ್ರಮುಖವಾಗಿ ಗೃಹ ಸಾಲದ ಬಡ್ಡಿದರವನ್ನು ಹೆಚ್ಚಿಸಿದೆ. ಎಫ್‌ಡಿ ಬಡ್ಡದಿರವನ್ನು ಕೂಡಾ ಏರಿಸಿದೆ. ಆದರೆ ಇದೊಂದು ಬ್ಯಾಂಕ್ ಸಾಲದ ಬಡ್ಡಿದರವನ್ನು ಇಳಿಸಿದೆ. ಮಾರ್ಚ್ 13ರಿಂದ ಜಾರಿಗೆ ಬರುವಂತೆ ಗೃಹ ಸಾಲದ ಬಡ್ಡಿದರವನ್ನು ಕುಗ್ಗಿಸಿದೆ.
ಗೃಹ ಸಾಲ ಮಾಡಿರುವವರು, ಗೃಹ ಸಾಲ ಮಾಡಿ ಮನೆ ಖರೀದಿ ಮಾಡಿರುವವರಿಗೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಸಿಹಿಸುದ್ದಿಯನ್ನು ನೀಡಿದೆ. ಬ್ಯಾಂಕ್ ಗೃಹ ಸಾಲದ ಬಡ್ಡಿದರವನ್ನು ಶೇಕಡ 8.4ಕ್ಕೆ ಇಳಿಸಿದ್ದು, ಇದು ಬ್ಯಾಂಕಿಂಗ್ ವಲಯದಲ್ಲೇ ಅತೀ ಕಡಿಮೆ ಬಡ್ಡಿದರದ ಗೃಹ ಸಾಲ ಆಯ್ಕೆಯಾಗಿದೆ. ಈ ಹೊಸ ಬಡ್ಡಿದರವು ಮಾರ್ಚ್ 13ರಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕ್ ಆಫ್ ಮಹಾರಾಷ್ಟ್ರ ಅಥವಾ ಬಿಒಎಂ ಹೇಳಿಕೆ ಮೂಲಕ ತಿಳಿಸಿದೆ.

ಈ ಹಿಂದಿನ ಬಡ್ಡಿದರ ಎಷ್ಟಿತ್ತು?
ಈ ಹಿಂದೆ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಗೃಹ ಸಾಲದ ಬಡ್ಡಿದರ ಶೇಕಡ 8.6 ಆಗಿತ್ತು. ಆದರೆ ಈಗ ಅದನ್ನು ಶೇಕಡ 8.4ಕ್ಕೆ ಇಳಿಸಲಾಗದೆ. ಇನ್ನುರಕ್ಷಣಾ ಸಿಬ್ಬಂದಿಗಳು, ವೇತನ ಪಡೆಯುವ ಮತ್ತು ಪಿಂಚಣಿ ಪಡೆಯುವ ಸಿಬ್ಬಂದಿಗಳಿಗೆ ವಿಶೇಷ ಬಡ್ಡಿದವನ್ನು ಬ್ಯಾಂಕ್ ಆಫ್ ಮಹಾರಾಷ್ಟ್ರ ಪರಿಚಯಿಸಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ ಈ ಹಬ್ಬದ ಆಫರ್ ಆಗಿ ಚಿನ್ನ, ಗೃಹ ಮತ್ತು ಕಾರಿನ ಸಾಲಕ್ಕೆ ಪ್ರಕ್ರಿಯಾ ಶುಲ್ಕವನ್ನು ಮನ್ನಾ ಮಾಡಿದೆ.
ಸಾಲದ ಬಡ್ಡಿದರ ಇಳಿಸಿದ್ದ ಬ್ಯಾಂಕ್ ಆಫ್ ಬರೋಡಾ
ಇತ್ತೀಚೆಗೆ ಬ್ಯಾಂಕ್ ಆಫ್ ಬರೋಡಾ ಕೂಡಾ ಸಾಲದ ಬಡ್ಡಿದರವನ್ನು ಇಳಿಕೆ ಮಾಡಿದೆ. ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲದ ಬಡ್ಡಿದರವು ಶೇಕಡ 40 ಮೂಲಾಂಕ ಬಡ್ಡಿದರವನ್ನು ಇಳಿಸಿದ್ದು, ಪ್ರಸ್ತುತ ಗೃಹ ಸಾಲದ ಬಡ್ಡಿದರ ಶೇಕಡ 8.5ಕ್ಕೆ ತಲುಪಿದೆ. ಅದಾದ ಬಳಿಕ ಬ್ಯಾಂಕ್ ಎಂಎಸ್‌ಎಂಇ ಸಾಲದ ಬಡ್ಡಿದರವನ್ನು ಕೂಡಾ ಇಳಿಸಿದೆ. ಶೇಕಡ 8.40ಕ್ಕೆ ಇಳಿಸಲಾಗಿದ್ದು, ಎರಡು ಕೂಡಾ ಮಾರ್ಚ್ 5, 2023ರಿಂದ ಜಾರಿಗೆ ಬರಲಿದೆ. ಇದು ನಿಯಮಿತ ಅವಧಿಯ ಆಫರ್ ಆಗಿದ್ದು, ಮಾರ್ಚ್ 31, 2023ಕ್ಕೆ ಕೊನೆಯಾಗಲಿದೆ.
ಇದು ಅತೀ ಕಡಿಮೆಯಾದ ಅಥವಾ ಸ್ಪರ್ಧಾತ್ಪಕವಾದ ಬಡ್ಡಿದರವಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿಕೊಂಡಿದೆ. ಇದಕ್ಕೂ ಹೆಚ್ಚಾಗಿ ಬಡ್ಡಿದರ ಇಳಿಸಿರುವ ಜೊತೆಗೆ ಬ್ಯಾಂಕ್ ಶೇಕಡ 100ರಷ್ಟು ಪ್ರಕ್ರಿಯಾ ಶುಲ್ಕವನ್ನು ಮನ್ನಾ ನಡೆಸಿದೆ. ಎಂಎಸ್‌ಎಂಇ ಸಾಲದಲ್ಲಿ ಶೇಕಡ 50ರಷ್ಟು ಪ್ರಕ್ರಿಯಾ ಶುಲ್ಕ ಮನ್ನಾ ಮಾಡಲಾಗುತ್ತದೆ. ಹೊಸದಾಗಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವುದಾದರೆ ಶೇಕಡ 8.5ರಷ್ಟು ಬಡ್ಡಿದರವಿದೆ. ಸಾಲದಾರರ ಕ್ರೆಡಿಟ್ ಸ್ಕೋರ್ ಆಧಾರದಲ್ಲಿ ಬಡ್ಡಿದರವಿರಲಿದೆ.


Click it and Unblock the Notifications