ನವದೆಹಲಿ, ಏಪ್ರಿಲ್ 1: ನಿಮ್ಮ ಉಳಿತಾಯದ ದುಡ್ಡು , ಒಡವೆ , ಆಸ್ತಿ ಪತ್ರ ಈ ಸಂಪತ್ತುಗಳನ್ನ ಎಷ್ಟು ಜೋಪಾನ ಮಾಡಿದ್ರು ಸಾಲೋದಿಲ್ಲ. ಯಾಕಂದ್ರೆ ಇಡೀ ಜೀವಮಾನವೆಲ್ಲಾ ಉಳಿಸಿದ ಗಳಿಸಿಕೊಂಡ ಈ ಸಂಪತ್ತುಗಳು ನಮ್ಮ ಪಾಲಿಗೆ ಅತ್ಯಮೂಲ್ಯವಾಗಿರುತ್ತದೆ ಮತ್ತು ನಮಗೆ ಯಾವುದೇ ಕಷ್ಟ ಅಂತ ಬಂದ್ರೆ, ನಮ್ಮ ಕೈ ಹಿಡಿಯೋದು ಇದೇ ಸಂಪತ್ತು, ಹಾಗಾಗಿ ನಾವು ಇದನ್ನ ಕಣ್ಣಲ್ಲಿ ಕಣ್ಣಿಟ್ಟು ಕಾಯೋದು.
ಕೆಲವರು ಈ ಎಲ್ಲಾ ಸಂಪತ್ತುಗಳನ್ನ ಮನೆಯಲ್ಲಿ ಇಟ್ಟುಕೊಳ್ಳೊದಕ್ಕೂ ಹಿಂದೆ ಮುಂದೆ ನೋಡ್ತಾರೆ. ಕಾರಣ ಕಳ್ಳ-ಕಾಕರ ಹಾವಳಿಯಿಂದ ಈ ಸಂಪತ್ತು ಕಂಡವರ ಪಾಲಾಗಿಬಿಟ್ರೆ ಅನ್ನೋ ಭಯ. ಹೀಗಾಗಿ ಹಿರಿಯ ನಾಗರೀಕರು ಅಥವಾ ಒಬ್ಬಂಟಿಯಾಗಿ ಜೀವನ ಮಾಡುವವರು ತಮ್ಮ ಸಂಪತ್ತನ್ನು ತಮ್ಮ ಬಳಿಯೇ ಇಟ್ಟುಕೊಳ್ಳೋದಿಲ್ಲ. ಬದಲಿಗೆ ಅದನ್ನ ಸೇಫ್ ಜಾಗಗಳಲ್ಲಿ ಇಡಲು ಭಯಸುತ್ತಾರೆ.

ಅಂಥವರ ಉತ್ತಮ ಆಯ್ಕೆ ಅಂದ್ರೆ ಬ್ಯಾಂಕ್ ನ ಸೇಫ್ಟಿ ಲಾಕರ್‌ಗಳು . ಹೌದು, ನಮ್ಮ ಹಣಕಾಸಿನ ವ್ಯವಹಾರಗಳಿರಲಿ ಅಥವಾ ಹಣ ಠೇವಣಿ ಇಡೋದಾಗಿರಬಹುದು ಎಲ್ಲದಕ್ಕೂ ಬ್ಯಾಂಕ್ ವ್ಯವಹಾರವೇ ಉತ್ತಮ ಮತ್ತು ಸುರಕ್ಷಿತ. ಹಾಗೇ ಅಪಾರ ಪ್ರಮಾಣದ ಹಣ ಅಥವಾ ಒಡವೆ, ಆಸ್ತಿ ಪತ್ರಗಳನ್ನ ಮನೆಯಲ್ಲಿ ಇಡೋದು ಸೇಫ್ ಅಲ್ಲ ಎಂದು ಭಾವಿಸುವವರು ಈ ಬ್ಯಾಂಕ್ ನ ಸೇಫ್ಟಿ ಲಾಕರ್ ಗಳ ಮೊರೆಹಗ್ತಾರೆ.
ನಿಯಮ ನವೀಕರಣ ಮಾಡಿದ RBI
ಬ್ಯಾಂಕ್ ನ ಸೇಫ್ಟಿ ಲಾಕರ್ನಲ್ಲಿ ನೀವು ನಿಮ್ಮ ಚಿನ್ನಾಭರಣ, ಆಸ್ತಿ ಪತ್ರಗಳು, ಇತರೆ ದಾಖಲಾತಿಗಳು ಏನು ಬೇಕಾದ್ರೂ ಇಡಲು ವ್ಯವಸ್ಥೆ ಕಲ್ಪಿಸಲಾಗಿರುತ್ತೆ. ಆದ್ರೆ ನೀವು ಇಡುವ ವಸ್ತುವಿಗೆ ಬ್ಯಾಂಕ್ ಸುರಕ್ಷತೆ ಕಲ್ಪಿಸುವುದರಿಂದ ನೀವೆ ಬ್ಯಾಂಕಿಗೆ ಇಂತಿಷ್ಟು ಹಣ ಕಟ್ಟಿ ಲಾಕರ್ ಪಡೆದುಕೊಳ್ಳಬೇಕಾಗುತ್ತೆ. ಹೀಗೆ ಪಡೆದುಕೊಂಡ ಲಾಕರ್ ನ ಕೀ ನಿಮ್ಮ ಬಳಿಯೇ ಇರುತ್ತೆ. ಒಂದುವೇಳೆ ನೀವು ಅದನ್ನು ಕಳೆದುಕೊಂಡರೆ ಬ್ಯಾಂಕ್ ಬಳಿ ಮತ್ತೊಂದು ಕೀ ಇರುತ್ತದೆ. ಆದ್ರೆ ಯಾವುದೇ ಕಾರಣಕ್ಕೂ ನಿಮ್ಮ ಅನುಮತಿಯಿಲ್ಲದೇ ಬ್ಯಾಂಕ್ ಕೂಡ ನಿಮ್ಮ ಲಾಕರ್ ನ ಓಪನ್ ಮಾಡೋದಿಲ್ಲ.
ಇಂಥ ಲಾಕರ್ ವ್ಯವಸ್ಥೆಗಳನ್ನ ಬಳಸಿಕೊಳ್ಳಬೇಕು ಅಂದ್ರೆ ಈ ಮೊದಲಿನಿಂದಲೂ ಕೆಲವು ನಿಯಮಗಳಿವೆ, ಇದೀಗ ಆ ನಿಯಮಗಳಲ್ಲಿ ಬದಲಾವಣೆಯಾಗಿದಗದು, ನೀವೇನಾದ್ರೂ ಬ್ಯಾಂಕ್ ಲಾಕರ್ ಹೊಂದಿದ್ರೆ ಅಥವಾ ಹೋಮದಬೇಕು ಎಂದಿದ್ರೆ ಈ ಮಾಹಿತಿಯನ್ನ ತಪ್ಪದೇ ತಿಳಿದುಕೊಳ್ಳಿ. RBI ಈಗಾಗಲೇ ಎಲ್ಲಾ ಬ್ಯಾಂಕುಗಳಿಗೂ ಡಿಸೆಂಬರ್ ಒಳಗಾಗಿ ಈ ನಿಯಮಗಳನ್ನ ನವೀಕರಿಸಲು ತಾಕಿತು ಮಾಡಿದೆ.
ಆ ಪ್ರಕಾರವಾಗಿ ನೀವು ಲಾಕರ್ ಹೊಂದಿದರೆ, ಅದಕ್ಕೆ ಒಬ್ಬರನ್ನು ನಾಮಿನಿ ಮಾಡೋದು ಇನ್ಮುಂದೆ ಖಡ್ಡಾಯವಾಗಿರುತ್ತದೆ. ಎರಡನೆಯದಾಗಿ ಲಾಕರ್ ಹೊಂದುವ ಸಂದರ್ಭದಲ್ಲಿ ಗ್ರಾಹಕರಿಂದ ಬ್ಯಾಂಕ್ಗಳು ಛಾಪಾ ಕಾಗದದ ಮೇಲೆ ಅಗ್ರಿಮೆಂಟ್ ಮಾಡಿಸಿಕೊಳ್ಳಬೇಕು. ಆದ್ರೆ ಅದರ ವೆ್ವನ್ನ ಗ್ರಾಹಕೆ ಮೇಲೆ ಹೇರುವಂತಿಲ್ಲ.
ಇನ್ನು ಒಂದು ವೇಳೆ ಲಾಕರ್ನಲ್ಲಿದ್ದ ವಸ್ತು ಹಾಳಾದರೆ , ಕಳ್ಳತನವಾದ್ರೆ ಅಥವಾ ಬ್ಯಾಂಕ್ ಸಿಬ್ಬಂದಿ ಗ್ರಾಹಕರಿಗೆ ವಂನೆ ಮಾಡಿದ್ರೆ , ಆ ಜವಾಬ್ದಾರಿಯನ್ನ ಬ್ಯಾಂಕ್ ಹೊರಬೇಕಾಗುತ್ತದೆ. ಜೊತೆಗೆ ನಿಮ್ಮ ಲಾಕರ್ ಓಪನ್ ಆದಾಗ ಪ್ರತಿ ಬಾರಿಯೂ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ ಮೆಸೇಜ್ ಬರುವ ರೀತಿ ಸರಕ್ಷತೆ ಒದಗಿಸಲಾಗುತ್ತದೆ. ಅಲ್ಲಿಗೆ ನವೀಕರಣಗೊಳ್ಳುತ್ತಿರುವ ಈ ಹೊಸ ನಿಯಮಗಳ ಮೂಲಕ ಬ್ಯಾಂಕ್ ಲಾಕರ್ ಗಳ ಸೇಫ್ಟಿಯನ್ನ ಇನ್ನಷ್ಟು ಹೆಚ್ಚಿಸಲು RBI ಮುಂದಾಗಿದೆ.


Click it and Unblock the Notifications