ಭಾರತದಲ್ಲಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಬೆಳವಣಿಗೆಯನ್ನು ಕಂಡಿದೆ. ಜನರು ಹೆಚ್ಚಾಗಿ ಹೊಸ ಮನೆಯನ್ನು ಖರೀದಿ ಮಾಡುತ್ತಿದ್ದಾರೆ, ಹಾಗೆಯೆ ಹೊಸ ಮನೆಯ ನೋಂದಣಿ ಕೂಡಾ ಅಧಿಕವಾಗುತ್ತಿದೆ. ಈ ನಡುವೆ ಯಾವ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ಲಭ್ಯವಿದೆ ಎಂದು ತಿಳಿದರೆ ಗೃಹ ಸಾಲ ನಿಮಗೆ ಅಧಿಕ ಹೊರೆ ಆಗಲಾರದು.
ಹಲವಾರು ಮಂದಿ ತಮ್ಮ ಹೊಸ ಮನೆಗಾಗಿ ಸಾಮಾನ್ಯವಾಗಿ ಗೃಹ ಸಾಲವನ್ನು ಪಡೆದುಕೊಳ್ಳುತ್ತಾರೆ. ಸಾಲ ಪಡೆಯುವವರ ವಿವರ, ಲಿಂಗ ಮತ್ತು ಸಾಲದ ಮೊತ್ತವನ್ನು ಆಧರಿಸಿ ಗೃಹ ಸಾಲದ ಬಡ್ಡಿ ದರವು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾವಣೆ ಆಗಲಿದೆ. ಇನ್ನು ಈಗಾಗಲೇ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದೆ. ಇದರಿಂದಾಗಿ ಬಹುತೇಕ ಎಲ್ಲಾ ಬ್ಯಾಂಕ್‌ಗಳು ರೆಪೋ ಆಧಾರಿತ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ಆರ್‌ಬಿಐ ಮತ್ತೆ ರೆಪೋ ದರವನ್ನು ಹೆಚ್ಚಳ ಮಾಡುವ ಸುಳಿವನ್ನು ನೀಡಿದೆ.
ಆದರೆ ನೀವು ಗೃಹ ಸಾಲವನ್ನು ಪಡೆಯುವುದಕ್ಕೂ ಮುನ್ನ ಯಾವ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿದರವಿದೆ ಎಂದು ತಿಳಿದುಕೊಳ್ಳಿ. ಪ್ರಮುಖ ಬ್ಯಾಂಕ್‌ಗಳಾದ ಎಚ್‌ಡಿಎಫ್‌ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಗೃಹ ಸಾಲದ ಮೇಲೆ ಎಷ್ಟು ಬಡ್ಡಿದರವಿದೆ. ಯಾವುದು ಕಡಿಮೆ ಬಡ್ಡಿದರ ಎಂದು ನಿಮಗೆ ಇಲ್ಲಿವ ವಿವರಿಸಲಾಗಿದೆ ಮುಂದೆ ಓದಿ..
ಎಚ್‌ಡಿಎಫ್‌ಸಿ ಬ್ಯಾಂಕ್
ಜನರಿಗೆ ಸಾಲ ನೀಡುವ ಭಾರತದ ಅತಿದೊಡ್ಡ ಬ್ಯಾಂಕುಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಒಂದಾಗಿದೆ. ಈ ಬ್ಯಾಂಕ್ 7.15-8.05 ಬಡ್ಡಿ ದರದಲ್ಲಿ ಗೃಹ ಸಾಲಗಳನ್ನು ನೀಡುತ್ತದೆ. ಆದರೆ ಸಿಬಿಲ್ ಸ್ಕೋರ್, ಸಾಲ ಪಡೆಯುವ ವ್ಯಕ್ತಿಯ ಲಿಂಗ, ಸಾಲದ ಮೊತ್ತದಂತಹ ಹಲವು ಅಂಶಗಳನ್ನು ಆಧರಿಸಿ ಗೃಹ ಸಾಲದ ಬಡ್ಡಿದರವನ್ನು ನಿರ್ಧಾರವಾಗುತ್ತದೆ. ಸಾಲ ಪಡೆಯುವವರು ಅತ್ಯುತ್ತಮ ಸಿಬಿಲ್ ಸ್ಕೋರ್ ಅನ್ನು ಹೊಂದಿದ್ದರೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ಲಭ್ಯವಾಗಲಿದೆ. ಒಂದು ವೇಳೆ ಕಡಿಮೆ ಬಡ್ಡಿದರವಿದ್ದರೆ ಅಧಿಕ ಬಡ್ಡಿದರದಲ್ಲಿ ಗೃಹ ಸಾಲ ಲಭ್ಯವಾಗಲಿದೆ. ಇನ್ನು ಎಚ್‌ಡಿಎಫ್‌ಸಿಯಲ್ಲಿ ಬಡ್ಡಿದರವನ್ನು ಕಾಲವನ್ನು ಆಧರಿಸಿ ಬದಲಾವಣೆ ಹೊಂದುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಭಾರತದ ಅತೀ ದೊಡ್ಡ ಬ್ಯಾಂಕುಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) 7-7.6 ಶೇಕಡ ಬಡ್ಡಿದರದಲ್ಲಿ ಗೃಹ ಸಾಲವನ್ನು ನೀಡುತ್ತದೆ. ಇನ್ನು ಈಗಾಗಲೇ ನಿರ್ಮಾಣ ಮಾಡಲಾಗಿರುವ ಮನೆಯ ಮೇಲೆ ಎಸ್‌ಬಿಐ ಬೇರೆಯೇ ಬಡ್ಡಿದರವನ್ನು ಹೊಂದಿದೆ. ಇದು ಕೂಡಾ ಸಾಲ ಪಡೆಯುವವರ ಪ್ರೋಫೈಲ್ ಮೇಲೆ ಆಧಾರಿತವಾಗಿರುತ್ತದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು ಪ್ರಸ್ತುತ ಗೃಹ ಸಾಲದ ಮೇಲೆ ಶೇಕಡಾ 6.9-8.6 ರ ವ್ಯಾಪ್ತಿಯಲ್ಲಿ ಬಡ್ಡಿದರವನ್ನು ನೀಡುತ್ತಿದೆ. ಈ ಬಡ್ಡಿದರವು ಸಂಬಳ ಪಡೆಯುವವರು ಹಾಗೂ ಸಂಬಳ ಪಡೆಯದವರಿಗೆ ಬೇರೆ ಬೇರೆ ರೀತಿಯಾಗಿರುತ್ತದೆ. ಯಾವುದೇ ಬ್ಯಾಂಕ್‌ನಲ್ಲಿ ಸಿಬಿಲ್ ಸ್ಕೋರ್ ಅನ್ನು ನೋಡುತ್ತಾರೆ ಎಂಬುವುದು ನಾವು ನೆನಪಿನಲ್ಲಿ ಇಡಬೇಕಾದ ಅಂಶವಾಗಿದೆ.
ಕೋಟಕ್ ಮಹೀಂದ್ರಾ ಬ್ಯಾಂಕ್
ಈ ಮೂರು ಬ್ಯಾಂಕ್‌ಗಳನ್ನು ಹೊರತುಪಡಿಸಿ ಖಾಸಗಿ ಬ್ಯಾಂಕ್ ಆದ ಕೋಟಕ್ ಮಹೀಂದ್ರಾ ಬ್ಯಾಂಕ್ ಶೇಕಡ 6.55-7.6 ಬಡ್ಡಿದರದಲ್ಲಿ ಗೃಹ ಸಾಲವನ್ನು ನೀಡುತ್ತದೆ. ಆದರೆ ಈ ಬ್ಯಾಂಕ್ ಗೃಹ ಸಾಲದ ಮೇಲೆ ಜಿಎಸ್‌ಟಿ ಹಾಗೂ ಪ್ರೋಸೆಸಿಂಗ್ ಫೀಸ್ ಅನ್ನು ಹಾಕುತ್ತದೆ. ಇದು ಶೇಕಡ 0.5ರಂತೆ ಇರುತ್ತದೆ.


Click it and Unblock the Notifications