ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಇಂದು (ಏಪ್ರಿಲ್ 14) ದೇಶದಾದ್ಯಂತ ಆಚರಣೆ ಮಾಡಲಾಗುತ್ತಿದೆ. ಆದ್ದರಿಂದಾಗಿ ದೇಶದಾದ್ಯಂತ ಬ್ಯಾಂಕ್ ಬಂದ್ ಆಗಿರಲಿದೆ. ಇನ್ನು ಇಂದೇ ಕೆಲವು ರಾಜ್ಯಗಳಲ್ಲಿ ಅಂಬೇಡ್ಕರ್ ಜಯಂತಿ ಹೊರತಾಗಿ ಬೇರೆ ಕಾರಣದಿಂದಾಗಿ ಬ್ಯಾಂಕ್ ಬಂದ್ ಆಗಿರಲಿದೆ. ಬೈಸಾಕಿ, ವೈಸಾಖಿ, ತಮಿಳು ಹೊಸ ವರ್ಷ ದಿನ, ಚೆರೌಬಾ, ಬಿಜು ಹಬ್ಬ, ಬೊಹಾಂಗ್ ಬಿಹು ಕೂಡಾ ಇದೇ ಆಚರಣೆ ಮಾಡಲಾಗುತ್ತದೆ.
ಈ ಮೇಲೆ ತಿಳಿಸಿದ ಹಬ್ಬ, ಆಚರಣೆಗಳ ಕಾರಣದಿಂದಲೂ ಬ್ಯಾಂಕ್‌ಗಳು ಇಂದು ಬಂದ್ ಆಗಿರಲಿದೆ ಎಂದು ಆರ್‌ಬಿಐನ ವೆಬ್‌ಸೈಟ್ ಮಾಹಿತಿ ನೀಡಿದೆ. ಇಡೀ ದೇಶದಲ್ಲಿ ಶಿಲಾಂಗ್‌ನಲ್ಲಿ ಮಾತ್ರ ಬ್ಯಾಂಕ್ ಬಂದ್ ಇರುವುದಿಲ್ಲ. ಇನ್ನು ಇಂದು ಬ್ಯಾಂಕ್‌ಗಳು ಬಂದ್ ಆಗಿದ್ದರೂ ಕೂಡಾ ಇತರೆ ಆನ್‌ಲೈನ್ ಕಾರ್ಯಗಳು ಎಂದಿನಂತೆ ಕಾರ್ಯನಿರ್ವಹಣೆ ಮಾಡಲಿದೆ. ಹಾಗೆಯೇ ಎಟಿಎಂ ಕೂಡಾ ತೆರೆದಿರಲಿದೆ. ಆದ್ದರಿಂದ ಬ್ಯಾಂಕ್ ಬ್ರ್ಯಾಂಚ್‌ನಲ್ಲಿ ಮಾಡುವ ಕಾರ್ಯ ಹೊರತುಪಡಿಸಿ ಇತರೆ ಕಾರ್ಯಗಳನ್ನು ಎಂದಿನಂತೆ ಮಾಡಬಹುದಾಗಿದೆ.

ಏಪ್ರಿಲ್ 14ರಂದು ಯಾವೆಲ್ಲ ನಗರಗಳಲ್ಲಿ ಬ್ಯಾಂಕ್ ಬಂದ್
ಅಗರ್ತಾಲಾ, ಅಹಮದಾಬಾದ್, ಬೆಲ್ಪೂರ್, ಬೆಂಗಳೂರು, ಭುವನೇಶ್ವರ, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಗಾಂಗ್ಟಾಕ್, ಆಂಧ್ರಪ್ರದೇಶ, ಹೈದಾರಾಬಾದ್, ಇಂಫಾಲ್, ಜೈಪುರ, ಜಮ್ಮು, ಕಾನ್ಪುರ, ಕೊಚ್ಚಿ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ಪಣಜಿ, ಪಾಟ್ನಾ, ರಾಂಚಿ, ಶ್ರೀನಗರ, ತಿರುವನಂತಪುರದಲ್ಲಿ ಬ್ಯಾಂಕ್‌ಗಳು ಏಪ್ರಿಲ್ 14ರಂದು (ಇಂದು) ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಕಾರಣ ಬಂದ್ ಆಗಿರುತ್ತದೆ.
ಸಾಮಾನ್ಯವಾಗಿ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್ ರಾಷ್ಟ್ರೀಯ ರಜಾದಿನ, ಹಬ್ಬಕ್ಕಾಗಿ ರಜೆ ಇದ್ದಾಗ ಹಾಗೂ ಭಾನುವಾರ ಬಂದ್ ಆಗಿರುತ್ತದೆ. ಹಾಗೆಯೇ ದೇಶದಾದ್ಯಂತ ಪ್ರತಿ ತಿಂಗಳು ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ ರಜೆ ಇರಲಿದೆ. ಇನ್ನು ಈ ರಜಾದಿನಗಳ ಮಾತ್ರವಲ್ಲದೇ ಕೆಲವು ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಆಚರಣೆ ಮಾಡುವ ಸ್ಥಳೀಯ ಹಬ್ಬದ ಸಂದರ್ಭದಲ್ಲೂ ಬ್ಯಾಂಕ್‌ಗಳು ಬಂದ್ ಆಗಲಿದೆ. ಈ ಸಂದರ್ಭದಲ್ಲಿ ಬ್ಯಾಂಕ್‌ಗಳ ಸ್ಥಳೀಯ , ಬ್ರಾಂಚ್‌ಗಳು ಮಾತ್ರ ಬಂದ್ ಆಗಿರುತ್ತದೆ.
ಎನ್‌ಎಸ್‌ಬಿ, ಬಿಎಸ್‌ಇಯಲ್ಲಿ ಇಂದು ವಹಿವಾಟಿಲ್ಲ
ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಕಾರಣದಿಂದಾಗಿ ಇಂದು ಸ್ಟಾಕ್ ಮಾರುಕಟ್ಟೆ ಕೂಡಾ ಬಂದ್ ಆಗಿರುತ್ತದೆ. ಭಾರತೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ಕಳೆದ ಎರಡು ವಾರದಲ್ಲಿ ಇದು ಮೂರನೇ ರಜೆಯಾಗಿದೆ. ಏಪ್ರಿಲ್ 4ರಂದು ಮಹಾವೀರ ಜಯಂತಿ ಕಾರಣ, ಏಪ್ರಿಲ್ 7ರಂದು ಗುಡ್ ಫ್ರೈಡೆ ದಿನ ಬ್ಯಾಂಕ್ ಬಂದ್ ಆಗಿದ್ದವು. ಇನ್ನುಳಿದಂತೆ ಈ ಕೆಳಗೆ ಉಲ್ಲೇಖಿಸಿದ ದಿನ ಬ್ಯಾಂಕ್ ಬಂದ್ ಆಗಿರಲಿದೆ.
ಏಪ್ರಿಲ್ 15, 2023: ಅಗರ್ತಾಲ, ಗುವಾಹಟಿ, ಕೊಚ್ಚಿ, ಕೋಲ್ಕತ್ತಾ, ಶಿಮ್ಲಾ, ತಿರುವನಂತಪುರದಲ್ಲಿ ವಿಷು (ಬಿಸು) ಹಬ್ಬ, ಬೊಹಾಂಗ್ ಬಿಹು, ಹಿಮಾಚಲ ದಿನ, ಬೆಂಗಾಳಿ ಹೊಸ ವರ್ಷದ ಪ್ರಯುಕ್ತ ಬ್ಯಾಂಕ್ ರಜೆ
ಏಪ್ರಿಲ್ 16, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
ಏಪ್ರಿಲ್ 18, 2023: ಶಾಬ್-ಇ-ಕ್ವಾದ್ರ್, ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್ ಬಂದ್ ಇರಲಿದೆ.
ಏಪ್ರಿಲ್ 21, 2023: ಈದ್-ಉಲ್-ಫಿತ್ರ್, ಅಗರ್ತಾಲ, ಜಮ್ಮು, ಕೊಚ್ಚಿ, ಶ್ರೀನಗರ, ತಿರುವನಂತಪುರಂನಲ್ಲಿ ಬ್ಯಾಂಕ್ ರಜೆ
ಏಪ್ರಿಲ್ 22, 2023: ಈದ್-ಉಲ್-ಫಿತ್ರ್ ಪ್ರಯುಕ್ತ ಹಲವಾರು ರಾಜ್ಯಗಳಲ್ಲಿ ಬ್ಯಾಂಕ್ ಬಂದ್, ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
ಏಪ್ರಿಲ್ 23, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
ಏಪ್ರಿಲ್ 30, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್


Click it and Unblock the Notifications