ಯಾರು ಫಿಕ್ಸಿಡ್ ಡೆಪಾಸಿಟ್‌ಗಳಲ್ಲಿ ಹೂಡಿಕೆ ಮಾಡಲು ಆದ್ಯತೆ ನೀಡುತ್ತಾರೋ ಅವರಿಗೆ ಹಲವಾರು ಬ್ಯಾಂಕ್‌ಗಳಲ್ಲಿ ಹೂಡಿಕೆ ಆಯ್ಕೆಗಳು ಲಭ್ಯವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಸಣ್ಣ ಹಣಕಾಸು ಬ್ಯಾಂಕ್‌ಗಳು, ಸಣ್ಣ ಮತ್ತು ಹೊಸ ಖಾಸಗಿ ಬ್ಯಾಂಕ್‌ಗಳು ನಿಮಗೆ ಶೇಕಡ 8.6 ರಷ್ಟು ಬಡ್ಡಿದರ ನೀಡುತ್ತದೆ ಎಂದರೆ ನೀವು ನಂಬುತ್ತೀರಾ?.
ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್‌ಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮೊದಲಾದವುಗಳು ಫಿಕ್ಸಿಡ್ ಡೆಪಾಸಿಟ್ ಮೇಲೆ ನೀಡುವ ಬಡ್ಡಿದರವು ಇತರೆ ಕೆಲವು ಸಣ್ಣ ಉಳಿತಾಯ ಬ್ಯಾಂಕುಗಳಿಗಿಂತ ಕಡಿಮೆಯಾಗಿದೆ. ಬ್ಯಾಂಕ್‌ಬಜಾರ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಟಾಪ್ 10 ಬ್ಯಾಂಕ್‌ಗಳ ಸರಾಸರಿ ಬಡ್ಡಿ ದರವು ಮೂರು ವರ್ಷಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 7.6 ಆಗಿದೆ.

ಫಿಕ್ಸಿಡ್ ಡೆಪಾಸಿಟ್ ಖಚಿತವಾದ ಆದಾಯವನ್ನು ನೀಡುವ ಹೂಡಿಕೆ ಆಯ್ಕೆಯಾಗಿದೆ. ತುರ್ತು ಕಾರ್ಪಸ್ ಅನ್ನು ನಾವು ಸಂಗ್ರಹ ಮಾಡುವಾಗ ನಮಗೆ ಎಫ್‌ಡಿ ಅತೀ ಮುಖ್ಯವಾಗುತ್ತದೆ. ಮೂರು ವರ್ಷಗಳ ಅವಧಿಯ ಎಫ್‌ಡಿ ಮೇಲೆ ಉತ್ತಮ ಬಡ್ಡಿದರಗಳನ್ನು ನೀಡುವ ಟಾಪ್ 10 ಬ್ಯಾಂಕ್‌ಗಳು ಇಲ್ಲಿವೆ, ಮುಂದೆ ಓದಿ...
ಎಫ್‌ಡಿ ಮೇಲೆ ಉತ್ತಮ ರಿಟರ್ನ್ ನೀಡುವ ಬ್ಯಾಂಕ್‌ಗಳಿವು
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮೂರು ವರ್ಷಗಳ ಎಫ್‌ಡಿಗಳ ಮೇಲೆ ಶೇಕಡ 8.6 ರಷ್ಟು ಬಡ್ಡಿದರವನ್ನು ನೀಡುತ್ತದೆ. ಸಣ್ಣ ಹಣಕಾಸು ಬ್ಯಾಂಕುಗಳ ಪೈಕಿ ಇದು ಅತ್ಯುತ್ತಮ ಬಡ್ಡಿ ನೀಡುವ ಬ್ಯಾಂಕ್ ಆಗಿದೆ. ಹೂಡಿಕೆ ಮಾಡಿದ 1 ಲಕ್ಷ ರೂಪಾಯಿ ಮೊತ್ತವು ಮೂರು ವರ್ಷಗಳ ಅವಧಿಯಲ್ಲಿ 1.29 ಲಕ್ಷ ರೂಪಾಯಿಗೆ ಬೆಳೆಯುತ್ತದೆ.
ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮೂರು ವರ್ಷಗಳ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ ಶೇಕಡ 8.5 ರಷ್ಟು ಬಡ್ಡಿದರವನ್ನು ನೀಡುತ್ತದೆ. ಹೂಡಿಕೆ ಮಾಡಿದ 1 ಲಕ್ಷ ರೂಪಾಯಿ ಮೊತ್ತವು ಮೂರು ವರ್ಷಗಳಲ್ಲಿ 1.29 ಲಕ್ಷ ರೂಪಾಯಿಗೆ ಏರಿಕೆಯಾಗುತ್ತದೆ.
ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮೂರು ವರ್ಷಗಳ ಎಫ್‌ಡಿಗಳ ಮೇಲೆ ಶೇಕಡ 8 ರಷ್ಟು ಬಡ್ಡಿಯನ್ನು ನೀಡುತ್ತದೆ. ಹೂಡಿಕೆ ಮಾಡಿದ 1 ಲಕ್ಷ ರೂಪಾಯಿ ಮೊತ್ತವು ಮೂರು ವರ್ಷಗಳಲ್ಲಿ 1.27 ಲಕ್ಷ ರೂಪಾಯಿಗೆ ಬೆಳವಣಿಗೆ ಕಾಣುತ್ತದೆ.
ವಿದೇಶಿ ಬ್ಯಾಂಕುಗಳಲ್ಲಿ, ಡಾಯ್ಚ ಬ್ಯಾಂಕ್ ಅತ್ಯುತ್ತಮ ಬಡ್ಡಿದರಗಳನ್ನು ನೀಡುತ್ತದೆ. ಮೂರು ವರ್ಷಗಳ ಅವಧಿಯ ಎಫ್‌ಡಿಗಳ ಮೇಲೆ ಡಾಯ್ಚ ಬ್ಯಾಂಕ್ ಶೇಕಡ 7.75 ರಷ್ಟು ಬಡ್ಡಿದರವನ್ನು ನೀಡುತ್ತದೆ. ಈ ಬ್ಯಾಂಕ್‌ಗಳ ಎಫ್‌ಡಿಯಲ್ಲಿ ಹೂಡಿಕೆ ಮಾಡಿದ 1 ಲಕ್ಷ ರೂಪಾಯಿ ಮೊತ್ತವು ಮೂರು ವರ್ಷಗಳಲ್ಲಿ 1.26 ಲಕ್ಷ ರೂಪಾಯಿಗೆ ಬೆಳವಣಿಗೆಯಾಗುತ್ತದೆ.
ಡಿಸಿಬಿ ಬ್ಯಾಂಕ್ ಮೂರು ವರ್ಷಗಳ ಅವಧಿಯ ಫಿಕ್ಸಿಡ್ ಡೆಪಾಸಿಟ್ ಮೇಲೆ ಶೇಕಡ 7.60 ರಷ್ಟು ಬಡ್ಡಿ ದರವನ್ನು ನೀಡುತ್ತದೆ. ಖಾಸಗಿ ಬ್ಯಾಂಕುಗಳಲ್ಲಿ, ಇದು ಅಧಿಕ ಬಡ್ಡಿದರವನ್ನು ನೀಡುವ ಬ್ಯಾಂಕ್ ಆಗಿದೆ. 1 ಲಕ್ಷ ರೂಪಾಯಿ ಹೂಡಿಕೆಯು ಮೂರು ವರ್ಷಗಳ ಅವಧಿಯಲ್ಲಿ 1.25 ಲಕ್ಷ ರೂಪಾಯಿಗೆ ಏರಿಕೆಯಾಗುತ್ತದೆ.
ಬಂಧನ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ಮೂರು ವರ್ಷಗಳ ಅವಧಿಯ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ ಶೇಕಡ 7.25 ರಷ್ಟು ಬಡ್ಡಿದರವನ್ನು ನೀಡುತ್ತದೆ. 1 ಲಕ್ಷ ರೂಪಾಯಿ ಹೂಡಿಕೆ ಮೂರು ವರ್ಷಗಳಲ್ಲಿ 1.24 ಲಕ್ಷ ರೂಪಾಯಿಗೆ ಬೆಳವಣಿಗೆ ಕಾಣುತ್ತದೆ.
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮೂರು ವರ್ಷಗಳ ಎಫ್‌ಡಿಗಳ ಮೆಲೆ ಶೇಕಡ 7.20 ರಷ್ಟು ಬಡ್ಡಿದರವನ್ನು ನೀಡುತ್ತದೆ. ಹೂಡಿಕೆ ಮಾಡಿದ 1 ಲಕ್ಷ ರೂಪಾಯಿ ಮೊತ್ತವು ಮೂರು ವರ್ಷಗಳಲ್ಲಿ 1.24 ಲಕ್ಷ ರೂಪಾಯಿಗೆ ಏರಿಕೆಯಾಗುತ್ತದೆ.
ಸಣ್ಣ ಖಾಸಗಿ ಬ್ಯಾಂಕ್‌ಗಳು ಮತ್ತು ಸಣ್ಣ ಹಣಕಾಸು ಬ್ಯಾಂಕ್‌ಗಳು ಹೊಸ ಡೆಪಾಸಿಟ್‌ಗಳ ಮೇಲೆ ಹೆಚ್ಚಿನ ಬಡ್ಡಿದರವನ್ನು ನೀಡುತ್ತದೆ. ಕೇಂದ್ರ ಬ್ಯಾಂಕ್‌ನ ಅಂಗಸಂಸ್ಥೆಯಾದ ಡೆಪಾಸಿಟ್ ಇನ್ಶುರೆನ್ಸ್ ಆಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್ 5 ಲಕ್ಷ ರೂಪಾಯಿವರೆಗೆ ಎಫ್‌ಡಿ ಮೇಲೆ ಉತ್ತಮ ಬಡ್ಡಿದರ ನೀಡುತ್ತದೆ.


Click it and Unblock the Notifications