ಬ್ಯಾಂಕ್‌ಗಳು ನಡೆಸುವ ಹರಾಜು ಪ್ರಕ್ರಿಯೆಗಾಗಿಯೇ ಕಾದು ಕುಳಿತಿರುವ ಹಲವಾರು ಮಂದಿ ಇದ್ದಾರೆ. ಈ ಹರಾಜು ಪ್ರಕ್ರಿಯೆಯಲ್ಲಿ ಅತೀ ಕಡಿಮೆ ದರಕ್ಕೆ ಅಥವಾ ರಿಯಾಯಿತಿ ದರದಲ್ಲಿ ಆಸ್ತಿ ಲಭ್ಯವಾಗುತ್ತದೆ ಎಂಬುವುದೇ ಅದಕ್ಕೆ ಕಾರಣವಾಗಿದೆ. ಪ್ರಸ್ತುತ ಭಾರತದಲ್ಲಿನ ಸಾರ್ವಜನಿಕ ವಲಯದ ಬ್ಯಾಂಕುಗಳು ಇ-ಹರಾಜು ಆಪ್ ಅನ್ನು ಆರಂಭ ಮಾಡಲು ಸಜ್ಜಾಗಿದೆ. ಈ ಆಪ್ ಮೂಲಕ ನಾವು ಆಸ್ತಿ ಹರಾಜು ನಡೆಸಬಹುದಾಗಿದೆ.
ಇ-ಹರಾಜು ಆಪ್‌ನಲ್ಲಿ ಸುಮಾರು 5 ಲಕ್ಷ ಮನೆಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ನೀವು ಈ ಆಪ್‌ನಲ್ಲಿ ಆಸ್ತಿ ಇರುವ ಸ್ಥಳ, ಆರಂಭಿಕ ಹರಾಜು ಮೊತ್ತದ ವಿವರ, ಆಸ್ತಿಯ ಬಗ್ಗೆ ಸಂಪೂರ್ಣ ಮಾಹಿತಿಯು ಇರಲಿದೆ. ನೀವು ಆಸ್ತಿ ವಿವರವನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿದ ಬಳಿಕವೇ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಬಹುದಾಗಿದೆ. ಆಸ್ತಿ ವಂಚನೆಯು ಇದರಿಂದಾಗಿ ಕಡಿಮೆಯಾಗಬಹುದು ಎಂದು ನಂಬಲಾಗಿದೆ.

ಈ ಆಪ್‌ನಲ್ಲಿ ಹರಾಜಿಗೆ ಇರುವ ಗರಿಷ್ಠ 5 ಲಕ್ಷ ಮನೆಗಳ ಮಾಹಿತಿ ಲಭ್ಯವಾಗಲಿದೆ. ಗೃಹ ಸಾಲ ಅಥವಾ ಮನೆಯನ್ನು ಅಡಮಾನ ಇಟ್ಟು ಸಾಲ ಪಡೆದು ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗದವರಿಂದ ವಶಕ್ಕೆ ಪಡೆದಿರುವ ಮನೆಗಳು ಇದಾಗಿರುತ್ತದೆ. ಇ-ಹರಾಜು ಆಪ್ ಮೂಲಕ ಬ್ಯಾಂಕ್‌ಗಳು ನೀಡಿರುವ ಸಾಲವನ್ನು ಹಿಂಪಡೆಯುವ ಪ್ರಯತ್ನವನ್ನು ಮಾಡುತ್ತದೆ.
ಸಾಮಾನ್ಯವಾಗಿ ಯಾವುದೇ ಆಸ್ತಿಯ ಮೇಲೆ ಸಾಲ ಪಡೆದು ಸಾಲವನ್ನು ಮರುಪಾವತಿ ಮಾಡದಿದ್ದರೆ ಅದನ್ನು ಹಿಂಪಡೆಯುವ ನಿಟ್ಟಿನಲ್ಲಿ ಆಸ್ತಿಯನ್ನು ಜಪ್ತಿ ಮಾಡಿ ಹರಾಜು ನಡೆಸುತ್ತದೆ. ಹೆಚ್ಚಾಗಿ ಚಿನ್ನವನ್ನು ಕೂಡಾ ಹರಾಜು ನಡೆಸಲಾಗುತ್ತದೆ. ಅತೀ ಕಡಿಮೆ, ರಿಯಾಯಿತಿ ದರದಲ್ಲಿ ಬ್ಯಾಂಕ್ ಹರಾಜಿನ ವೇಳೆ ಚಿನ್ನವನ್ನು ಪಡೆಯುವ ಅವಕಾಶ ಇರುತ್ತದೆ.
ಮುಂದಿನ 5 ವರ್ಷಗಳಲ್ಲಿ 1 ಲಕ್ಷ ಹರಾಜು ಸೇರಿದಂತೆ 6 ಲಕ್ಷ ವಹಿವಾಟು ನಡೆಯಬಹುದು, ಹಿರಿಯ ಬ್ಯಾಂಕ್ ಅಧಿಕಾರಿಗಳು ಅಂದಾಜು ವ್ಯಕ್ತಪಡಿಸಿದ್ದಾರೆ. ನಾವು ಇ-ಹರಾಜು ಆಪ್ ಅಥವಾ ವೆಬ್ ಪೋರ್ಟಲ್‌ಗೆ ಲಾಗಿನ್ ಆಗುವ ಮೂಲಕ ಬಳಕೆದಾರರು ಆಸ್ತಿಯ ವಿವರ, ದಾಖಲೆ, ಮಾಹಿತಿಯನ್ನು ತಿಳಿಯಬಹುದಾಗಿದೆ. ಆಪ್ ಆರಂಭವಾದ ಬಳಿಕ ಹರಾಜಿಗೆ ಇರುವ ಮನೆಯ ವಿವರವನ್ನು ಸ್ಮಾರ್ಟ್‌ಫೋನ್‌ನಲ್ಲಿಯೇ ತಿಳಿಯಬಹುದಾಗಿದೆ.
ಈ ಕ್ರಮವನ್ನು ಆಸ್ತಿ ವಂಚನೆಯನ್ನು ಕಡಿಮೆ ಮಾಡಲು ಸಹಾಯಕವಾಗಲಿದೆ. ಹಾಗೆಯೇ ವಹಿವಾಟು ಪ್ರಕ್ರಿಯೆಯನ್ನು ವೇಗಗೊಳಿಸುವ ಮೂಲಕ ಖರೀದಿದಾರರು ಮತ್ತು ಮಾರಾಟಗಾರರಿಗೆ ರಿಯಲ್ ಎಸ್ಟೇಟ್ ವಹಿವಾಟಿನ ದಕ್ಷತೆಯನ್ನು ಸುಧಾರಿಸುತ್ತದೆ. ಪ್ರಕ್ರಿಯೆಯ ಪಾರದರ್ಶಕತೆಯನ್ನು ಹೆಚ್ಚಿಸಲು ಅಪ್ಲಿಕೇಶನ್ ಸಹಾಯಕವಾಗಿದೆ. ಮಾರಾಟಕ್ಕೆ ಇರುವ ಆಸ್ತಿಗಳ ವಿವರಗಳನ್ನು ಸರಳವಾಗಿ ಪಡೆಯಬಹುದು.
ಬ್ಯಾಂಕ್ ಹರಾಜಿನಲ್ಲಿ ಖರೀದಿ ಮಾಡಿದರೆ ಏನು ಪ್ರಯೋಜನ?
ಆಸ್ತಿ ದರ ಕಡಿಮೆಯಾಗಿರುತ್ತದೆ. ಬ್ಯಾಂಕ್ ಹರಾಜಿನಲ್ಲಿ ಆಸ್ತಿಯನ್ನು ಖರೀದಿ ಮಾಡುವುದರಿಂದ ಹಲವಾರು ಪ್ರಯೋಜನಗಳು ನಮಗಿದೆ. ಬ್ಯಾಂಕ್ ಹರಾಜಿನಲ್ಲಿ ಆಸ್ತಿ ಖರೀದಿ ಮಾಡುವುದರಿಂದ ನಮಗೆ ಅತೀ ಕಡಿಮೆ ದರದಲ್ಲಿ ಆಸ್ತಿಯು ಲಭ್ಯವಾಗಲಿದೆ. ಇನ್ನು ಬ್ಯಾಂಕುಗಳು ಸಾಮಾನ್ಯವಾಗಿ ಯಾವುದೇ ಆಸ್ತಿ ಮೇಲೆ ಸಾಲವನ್ನು ನೀಡುವಾಗ ಆಸ್ತಿಯ ಸಂಪೂರ್ಣ ಪರಿಶೀಲನೆ ನಡೆಸಿರುತ್ತದೆ. ಆದ್ದರಿಂದಾಗಿ ಆ ಆಸ್ತಿಯನ್ನು ಹರಾಜಿನಲ್ಲಿ ಖರೀದಿ ಮಾಡುವಾಗ ಹೆಚ್ಚಿನ ಆತಂಕ ಇರುವುದಿಲ್ಲ.
ಈ ಆಸ್ತಿಯು ರೆಡಿ ಟು ಮೂವ್ ಇನ್ ಆಗಿದೆ. ಭಾರತದಲ್ಲಿ ಬ್ಯಾಂಕ್ ಹರಾಜು ಎಂದಿಗೂ ಸುರಕ್ಷಿತವಾಗಿದೆ. ಆಸ್ತಿಗಳು ಸುರಕ್ಷಿತವಾಗಿದೆ. ಖರೀದಿದಾರರು ಒಪ್ಪಂದವನ್ನು ಕೊನೆ ಮಾಡಿಕೊಂಡ ಬಳಿಕ ನೇರವಾಗಿ ಮನೆಗೆ ಹೋಗಬಹುದಾಗಿದೆ. ಹಾಗೆಯೇ ಯಾವುದೇ ಕಾನೂನು ಸಮಸ್ಯೆ ಉಂಟಾಗುವುದಿಲ್ಲ.


Click it and Unblock the Notifications