For Quick Alerts
ALLOW NOTIFICATIONS  
For Daily Alerts

ಉದ್ಯೋಗ ಬದಲಾವಣೆಗೆ ಮುಂದಾಗಿದ್ದೀರಾ?, ಮೊದಲು ಇದನ್ನು ಓದಿ

|

ನಮ್ಮ ವೃತ್ತಿಜೀವನದ ಆರಂಭದಲ್ಲಿ, ನಾವೆಲ್ಲರೂ ಜೀವನದಲ್ಲಿ ಕೆಲವು ಅಡೆತಡೆಗಳನ್ನು ಅನುಭವಿಸುತ್ತೇವೆ. ವೃತ್ತಿಯ ಬದಲಾವಣೆಯನ್ನು ಕೂಡಾ ನಾವು ಬಯಸಬಹುದು. ಹೀಗೆ ವೃತ್ತಿ ಬದಲಾವಣೆ ಮಾಡುವ ಸಂದರ್ಭದಲ್ಲಿ ಕೆಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಆ ಬಗ್ಗೆ ಇಲ್ಲಿ ವಿವರಿಸಿದ್ದೇವೆ.

 

ನಾವು ಕೆಲಸ ಮಾಡುವ ಸ್ಥಳದಲ್ಲಿ ಏನಾದರೂ ತೊಂದರೆ ಇದ್ದರೆ ನಾವು ಆ ಕೆಲಸದಿಂದ ಹೊರಬರಲು ಕಾಯುತ್ತಿರುತ್ತೇವೆ. ವಿವಿಧ ಸ್ಥಳಗಳಲ್ಲಿ ಕೆಲಸ ಮಾಡುವಾಗ, ನಾವು ಕ್ರಮೇಣವಾಗಿ ಕೆಲವನ್ನು ಇಷ್ಟಪಡುತ್ತೇವೆ ಅಥವಾ ಇಷ್ಟಪಡದೆ ಕೂಡಾ ಇರಬಹುದು. ಇಷ್ಟವಾಗದಿದ್ದರೆ ಹಾಗಾಗಿ ಬೇರೆ ಕೆಲಸದ ಹುಡುಕಾಟದಲ್ಲಿ ನಾವು ತೊಡಗಬೇಕಾಗುತ್ತದೆ.

ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಉದ್ಯೋಗಿಗಳ ವೇತನ ಹೆಚ್ಚಳ ಅಂತಿಮಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಉದ್ಯೋಗಿಗಳ ವೇತನ ಹೆಚ್ಚಳ ಅಂತಿಮ

ನಾವು ಹೀಗೆ ಕೆಲಸವನ್ನು ಬದಲಾವಣೆ ಮಾಡುವ ಸಂದರ್ಭದಲ್ಲಿ ಕೆಲವೊಂದು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಹಾಗೆಯೇ ಕೆಲವೊಂದು ಅಂಶಗಳನ್ನು ನಾವು ಎಂದಿಗೂ ನಿರ್ಲಕ್ಷಿಸಲೇ ಬಾರದು. ಆ ಅಂಶಗಳು ಯಾವುದು ಎಂದು ತಿಳಿಯಲು ಮುಂದೆ ಓದಿ...

 ಕೆಲಸದ ವಾತಾವರಣ

ಕೆಲಸದ ವಾತಾವರಣ

ನೀವು ಇಷ್ಟಪಡುವ ಕೆಲಸವು ಕೂಡಾ ಸ್ವಲ್ಪಸಮಯದ ಬಳಿಕ ನಿಮಗೆ ಬೇಸರ ಎನಿಸಬಹುದು. ಆದರೆ ಅದಕ್ಕೆ ಪ್ರಮುಖ ಕಾರಣ ಕೆಲಸದ ವಾತಾವರಣವಾಗಿರುತ್ತದೆ. ಆದ್ದರಿಂದಾಗಿ ಒಂದು ಕೆಲಸಕ್ಕೆ ಸೇರುವ ಮುನ್ನವೇ ಆ ಕೆಲಸದ ವಾತಾವರಣ ಹೇಗಿದೆ ಎಂಬುವುದನ್ನು ತಿಳಿಯಿರಿ. ಆಗ ಮಾತ್ರ ನಮಗೆ ಕೆಲಸ ಸುಲಭ, ಸರಳವಾಗುತ್ತದೆ.

 ಸುರಕ್ಷಿತ ಭಾವನೆ

ಸುರಕ್ಷಿತ ಭಾವನೆ

ನೀವು ತಂಡದೊಂದಿಗೆ ಕಂಪನಿಯಲ್ಲಿ ಕೆಲಸ ಮಾಡುವಾಗ, ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಸುರಕ್ಷಿತವಾಗಿರುವುದು ಬಹಳ ಮುಖ್ಯ. ಆದರೆ ಯಾರದೇ ಮೇಲೆ ನೀವು ಅವಲಂಭಿಸಿರುವುದು ನಿಮ್ಮ ವೃತ್ತಿಪರ ಬೆಳವಣಿಗೆಗೆ ಅಡ್ಡಿಯಾಗುವುದಲ್ಲದೆ, ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಆದ್ದರಿಂದಾಗಿ ನೀವು ಆರಾಮದಾಯಕ ಮತ್ತು ಸ್ವಾಗತಾರ್ಹವೆಂದು ಭಾವಿಸುವ ಸ್ಥಳದಲ್ಲಿ ಕೆಲಸ ಮಾಡುವುದು ಉತ್ತಮವಾಗಿದೆ.

 ಯೋಗ್ಯ ವೇತನ ಮತ್ತು ಪ್ರಯೋಜನ
 

ಯೋಗ್ಯ ವೇತನ ಮತ್ತು ಪ್ರಯೋಜನ

ಕೆಲಸ ಮಾಡುವಾಗ, ಸಂಬಳವು ಕೆಲಸಕ್ಕೆ ಸಮನಾಗಿದ್ದರೆ ನಮಗೆ ಕೆಲಸ ಮಾಡಲು ತೃಪ್ತಿಯಾಗುತ್ತದೆ. ಸಂಬಳ ನಿಮ್ಮ ಕೆಲಸಕ್ಕೆ ತಕ್ಕುದಾಗಿದ್ದರೆ, ನೀವು ಯಾವಾಗಲೂ ನಿಮಗೆ ಉತ್ತಮ ಆರೋಗ್ಯ ಇರಲಿ, ಇರದೆ ಇರಲಿ ಕೆಲಸವನ್ನು ನಿಷ್ಠೆಯಿಂದ ಮಾಡಬಲ್ಲಿರಿ. ಇದರ ಹೊರತಾಗಿ ಉತ್ತಮ ವೈದ್ಯಕೀಯ ವಿಮೆ ಕೂಡ ಅಗತ್ಯವಾಗಿದೆ, ಇದು ಕಂಪನಿಯು ನಿಮ್ಮ ಯೋಗಕ್ಷೇಮದ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುತ್ತದೆ ಎಂದು ತೋರಿಸುತ್ತದೆ. ಆದ್ದರಿಂದಾಗಿ ಯೋಗ್ಯ ವೇತನ ಮತ್ತು ಪ್ರಯೋಜನ ಇದೆಯೇ ಎಂದು ನೋಡಿ.

 ಫ್ಲೆಕ್ಸಿಬಲಿಟಿ, ಉದ್ಯೋಗ ಭವಿಷ್ಯ

ಫ್ಲೆಕ್ಸಿಬಲಿಟಿ, ಉದ್ಯೋಗ ಭವಿಷ್ಯ

ಪ್ರತಿಯೊಬ್ಬರೂ ಪ್ರತಿದಿನ ಕಚೇರಿಗೆ ಪ್ರಯಾಣಿಸಲು ಇಷ್ಟಪಡುವುದಿಲ್ಲ. ಹಾಗೆಯೇ ಮನೆಯಿಂದ ಕೆಲಸ ಮಾಡಲು ಇಷ್ಟಪಡುವುದಿಲ್ಲ. ಆದ್ದರಿಂದಾಗಿ ನಿಮಗೆ ಹೊಂದಿಕೊಳ್ಳುವ ಕೆಲಸದ ರೀತಿ ಇರುವ ಕೆಲಸವನ್ನು ನೀವು ಹುಡುಕಿದರೆ ನಿಮಗೆ ಸುಲಭವಾಗಲಿದೆ. ಹಾಗೆಯೇ ಆ ಕೆಲಸಕ್ಕೆ ಸೇರಿದ ಬಳಿಕ ನಿಮ್ಮ ಭವಿಷ್ಯವೇನು ಎಂಬುವುದನ್ನು ಕೂಡಾ ನೀವು ಪರಿಶೀಲಿಸಿ.

English summary

Basic essentials to consider before switching jobs in kannada

Basic essentials to consider before switching jobs in kannada.
Story first published: Thursday, May 12, 2022, 20:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X