For Quick Alerts
ALLOW NOTIFICATIONS  
For Daily Alerts

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಮುನ್ನ ಈ ಅಂಶಗಳು ಗಮನದಲ್ಲಿರಲಿ...

|

ಲಾಕ್ ಡೌನ್ ನಿರ್ಬಂಧವನ್ನು ಹಂತಹಂತವಾಗಿ ತೆರವು ಮಾಡುತ್ತಾ ಬರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾಹನೋದ್ಯಮವು ಮಾರಾಟ ಹೆಚ್ಚಳದ ನಿರೀಕ್ಷೆಯಲ್ಲಿದೆ. ಹಲವಾರು ಮಂದಿ ಖರೀದಿದಾರರು ಬಳಸಿದ ಕಾರನ್ನು ಖರೀದೀಸಲು ಮುಂದಾಗುತ್ತಿದ್ದಾರೆ. ಎಲ್ಲಿಯ ತನಕ ಕೊರೊನಾ ಬಿಕ್ಕಟ್ಟಿನ ಆತಂಕ ಇರುತ್ತದೋ ಆ ಅವಧಿಯ ತನಕ ಬಳಸುವುದಕ್ಕಾದರೂ ಸ್ವಂತ ವಾಹನ ಬೇಕು ಎಂಬ ಉಮೇದಿನಲ್ಲಿ ಇದ್ದಾರೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಸಸ್ತಾ ಬಡ್ಡಿ ದರ: ಯಾವ ಬ್ಯಾಂಕ್, ಏನು ಆಫರ್?

ಬಳಸಿದ ಕಾರನ್ನು ಖರೀದಿಸಲು ಮತ್ತೊಂದು ಕಾರಣ ಸೀಮಿತ ಬಜೆಟ್. ಖರೀದಿ ಮಾಡಬೇಕು ಎಂಬ ಉದ್ದೇಶ ಇದ್ದರೂ ಆರ್ಥಿಕ ಅನಿಶ್ಚಿತತೆ ಕಾಡುತ್ತಿದೆ. ಜತೆಗೆ ಸೀಮಿತವಾದ ಬಜೆಟ್. ಆದ್ದರಿಂದಲೇ ಬಹುತೇಕರು ಹೊಸದರ ಬದಲಿಗೆ ಬಳಸಿದ ಕಾರನ್ನು ಖರೀದಿಸಲು ಮುಂದಾಗುತ್ತಿದ್ದಾರೆ ಎನ್ನುತ್ತಾರೆ ಇದೇ ಕ್ಷೇತ್ರದಲ್ಲಿ ಇರುವವರು.

3ರಿಂದ 7% ತನಕ ಹೆಚ್ಚು ಬಡ್ಡಿ
 

3ರಿಂದ 7% ತನಕ ಹೆಚ್ಚು ಬಡ್ಡಿ

ಇದೇ ಮೊದಲ ಬಾರಿಗೆ ಕಾರು ಖರೀದಿ ಮಾಡಬೇಕು ಎಂದಿರುವವರು, ಈಗಾಗಲೇ ಕಾರಿದ್ದರೂ ತಮ್ಮ ಕುಟುಂಬ ಸದಸ್ಯರ ಸಲುವಾಗಿ ಮತ್ತೊಂದನ್ನು ಕೊಳ್ಳಬೇಕು ಅಂತಿರುವವರ ಆದ್ಯತೆ ಕೂಡ ಬಳಕೆ ಮಾಡಿದ ಕಾರುಗಳೇ ಆಗಿರುತ್ತಿವೆ. ಆದರೆ ಬಳಸಿದ ಕಾರಿಗೆ ಹಣಕಾಸು ಸಾಲ ವ್ಯವಸ್ಥೆ ವಿಚಾರದಲ್ಲಿ ಕೆಲ ಗೊಂದಲಗಳಿವೆ. ಏಕೆಂದರೆ ಹೊಸದಕ್ಕಿಂತ ಬಳಸಿದ ಕಾರು ಖರೀದಿಗೆ 3ರಿಂದ 7% ತನಕ ಹೆಚ್ಚು ಬಡ್ಡಿ ವಿಧಿಸಲಾಗುತ್ತದೆ. ಪ್ರತಿ ಸಂಸ್ಥೆಯೂ ಬೇರೆ ಬೇರೆ ಮಾನದಂಡವನ್ನು ಪರಿಗಣಿಸಲಾಗುತ್ತದೆ. ಏಕೆಂದರೆ, ಬಳಸಿದ ಕಾರಿಗೆ ಸಾಲ ಒದಗಿಸುವುದರಲ್ಲಿ ಅಪಾಯದ ಪ್ರಮಾಣ ಹೆಚ್ಚು. ಒಂದು ಕಡೆ, ಹಣಕಾಸು ಒದಗಿಸುವ ಸಂಸ್ಥೆಯು ಇಂಥ ಪ್ರೊಫೈಲ್ ನಲ್ಲಿ ಅಪಾಯ ತುಸು ಹೆಚ್ಚು ಎಂದು ಪರಿಗಣಿಸುತ್ತವೆ. ಇನ್ನೊಂದು ಕಡೆ ಆ ವಾಹನದ ಇತಿಹಾಸ ಕೂಡ ಸಾಲ ನೀಡುವ ದರದ ಅಂಶಗಳಲ್ಲಿ ಒಂದಾಗಿರುತ್ತದೆ.

ಹೊಸ ಕಾರಿಗಾದರೆ ಉತ್ಪಾದಕರ ವಾರಂಟಿ

ಹೊಸ ಕಾರಿಗಾದರೆ ಉತ್ಪಾದಕರ ವಾರಂಟಿ

ಹೊಸ ಕಾರಿಗಾದರೆ ಉತ್ಪಾದಕರು ವಾರಂಟಿ ನೀಡುತ್ತಾರೆ. ಆದರೆ ಬಳಸಿದ ಕಾರಿಗೆ ದೊರೆಯುವುದಿಲ್ಲ. ಬಳಕೆಯಾದ ಕಾರಿನ ಸ್ಥಿತಿ ಏನು ಎಂದು ಸ್ಪಷ್ಟತೆ ಇರುವುದಿಲ್ಲ. ಅಪಘಾತಗಳು ಆಗಿರಬಹುದು. ಕಾರಿನ ಬಿಡಿ ಭಾಗಗಳು, ಎಂಜಿನ್ ಸ್ಥಿತಿ ಏನು ಎಂಬುದು ಸಹ ತಿಳಿದಿರುವುದಿಲ್ಲ. ಆದ್ದರಿಂದಲೇ ಸಾಲ ಒದಗಿಸುವ ಸಂಸ್ಥೆಗಳು ಬಳಸಿದ ಕಾರುಗಳನ್ನು ಅಪಾಯ ಎಂದು ಪರಿಗಣಿಸುತ್ತವೆ. ಇದರ ಜತೆಗೆ ಕಾರು ಖರೀದಿ ಮಾಡಿ ಎಷ್ಟು ವರ್ಷ ಆಯಿತು ಎಂಬುದು ಸಹ ಮುಖ್ಯ ಅಂಶವಾಗುತ್ತದೆ. ಒಂದು ಕಾರಿನ ಜೀವಿತಾವಧಿ ಹದಿನೈದು ವರ್ಷಗಳು ಇರುತ್ತದೆ. ಕಾರು ಎಂಟರಿಂದ ಹತ್ತು ವರ್ಷ ಹಳೆಯದಾದಲ್ಲಿ ಹಲವು ಬ್ಯಾಂಕ್ ನಲ್ಲಿ ಸಾಲ ನೀಡುವುದಿಲ್ಲ. ಒಂದು ವೇಳೆ ಐದು ವರ್ಷದ ಹಳೆಯ ಕಾರನ್ನು ಖರೀದಿ ಮಾಡಿದರೆ ಸಾಲದ ಅವಧಿ ಮೂರರಿಂದ ಐದು ವರ್ಷಕ್ಕಿಂತ ಹೆಚ್ಚು ದೊರೆಯುವುದಿಲ್ಲ. ಇದರ ಜತೆಗೆ ಮೂರಕ್ಕಿಂತ ಹೆಚ್ಚು ಕೈ ಬದಲಾದರೆ ಹಲವು ಬ್ಯಾಂಕ್ ಗಳು ಹಣಕಾಸು ಸಾಲ ನೀಡುವುದಿಲ್ಲ.

ಸಾಲ ಪಡೆಯುವುದಕ್ಕೆ ಪರ್ಯಾಯ ಮಾರ್ಗಗಳೂ ಇವೆ
 

ಸಾಲ ಪಡೆಯುವುದಕ್ಕೆ ಪರ್ಯಾಯ ಮಾರ್ಗಗಳೂ ಇವೆ

ಬಳಸಿದ ಕಾರುಗಳಿಗೆ ಸಂಬಂಧಿಸಿದಂತೆ ಇತರ ಸಮಸ್ಯೆಗಳು ಸಹ ಇದೆ. ಸದ್ಯದ ಮಾಲೀಕರು ಕಾರಿನ ಮೇಲೆ ಸಾಲ ಬಾಕಿ ಉಳಿಸಿಕೊಂಡಿರಬಹುದು. ಇಂತಹ ಪ್ರಕರಣಗಳಲ್ಲಿ ಮಾರಾಟಗಾರರು ಮೊದಲಿಗೆ ಬಾಕಿ ಸಾಲವನ್ನು ಪಾವತಿಸಬೇಕಾಗುತ್ತದೆ. ಆ ನಂತರ ಸಾಲ ನೀಡಿದ ಸಂಸ್ಥೆಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯಬೇಕು. ನೋಂದಣಿ ಪ್ರಮಾಣಪತ್ರ (ಆರ್.ಸಿ. ಬುಕ್)ದಲ್ಲಿ ದಾಖಲಾದಂಥ ಅಡಮಾನ ಮಾಹಿತಿಯನ್ನು ತೆಗೆಸಬೇಕು. ಅಡಮಾನ ಇಲ್ಲದಂತೆ ಹೊಸ ಆರ್.ಸಿ. ಪಡೆಯಬೇಕು. ಇವೆಲ್ಲಕ್ಕೂ ಸಮಯ ತಗುಲುತ್ತದೆ. ಈ ಎಲ್ಲ ನಿಯಮಗಳನ್ನು ಖರೀದಿದಾರರೇ ಪೂರೈಸಬಹುದು. ಅಥವಾ ಏಜೆಂಟ್ ಗಳ ಮೂಲಕ ಮಾಡಬಹುದು. ಬಳಸಿದ ಕಾರಿನ ಸಾಲ ಪಡೆಯುವುದಕ್ಕೆ ಬದಲಿಯಾಗಿ ಬೇರೆ ಸಾಲಗಳ ಕಡೆಯೂ ನೋಡಬಹುದು. ಒಂದು ವೇಳೆ ಖರೀದಿದಾರರು ಈಗಾಗಲೇ ಹೋಮ್ ಲೋನ್ ತೆಗೆದುಕೊಂಡಿದ್ದರೆ ಅದರ ಟಾಪ್ ಅಪ್ ಮಾಡಬಹುದು. ಈ ರೀತಿಯ ಸಾಲ ಅಗ್ಗವಾಗುತ್ತದೆ ಮತ್ತು ಬಳಸಿದ ಕಾರಿನ ಸಾಲಕ್ಕಿಂತ ಸಲೀಸಾಗಿ ದೊರೆಯುತ್ತದೆ.

ಸಾಲ ನೀಡುವ ಸಂಸ್ಥೆಗಳ ಜತೆಗೆ ಒಪ್ಪಂದ

ಸಾಲ ನೀಡುವ ಸಂಸ್ಥೆಗಳ ಜತೆಗೆ ಒಪ್ಪಂದ

ಸಾಮಾನ್ಯವಾಗಿ ಹಣಕಾಸು ಒದಗಿಸುವ ಸಂಸ್ಥೆಗಳು ಬಳಸಿದ ಕಾರಿನ ಮೌಲ್ಯದ ಶೇಕಡಾ 75ರಷ್ಟನ್ನು ಸಾಲ ನೀಡುತ್ತದೆ. ಒಂದು ವೇಳೆ ಟಾಪ್ ಅಪ್ ಲೋನ್ ಗೆ ಪ್ರಯತ್ನಿಸಿದಲ್ಲಿ ಸಂಪೂರ್ಣ ಮೊತ್ತವನ್ನು ಸಾಲವನ್ನಾಗಿ ಪಡೆಯಬಹುದು. ಇನ್ನು ವೈಯಕ್ತಿಕ ಸಾಲವನ್ನೂ ಗಣನೆಗೆ ತೆಗೆದುಕೊಳ್ಳಬಹುದು. ಏಕೆಂದರೆ ಬಳಸಿದ ಕಾರಿನ ಸಾಲಕ್ಕೆ ವಿಧಿಸುವ ಬಡ್ಡಿ ದರಕ್ಕಿಂತ ಇದು 1.5% ಕಡಿಮೆ ಆಗುತ್ತದೆ. ಅಂದಹಾಗೆ ಬಳಸಿದ ಕಾರುಗಳನ್ನು ಮಾರಾಟ ಮಾಡುವ ಸಂಸ್ಥೆಗಳು ಹಣಕಾಸು ಸಾಲ ನೀಡುವ ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಂಡಿರುತ್ತವೆ. ಅವುಗಳು ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುತ್ತದೆ. ಉದಾಹರಣೆಗೆ ಸ್ಪಿನ್ನಿ. ಅದು ವರ್ಷಕ್ಕೆ 12.5% ದರದಲ್ಲಿ ಸಾಲ ನೀಡುತ್ತವೆ.

English summary

Before Purchasing Used Cars These Points To Consider

During corona pandemic demand for used car increased. Here is the points to consider before purchasing used cars.
Company Search
COVID-19