For Quick Alerts
ALLOW NOTIFICATIONS  
For Daily Alerts

ತಿಂಗಳಿಗೆ 2,000 ರುಪಾಯಿಯೊಳಗೆ ಹೂಡಿಕೆ ಮಾಡಲು 5 ಬೆಸ್ಟ್ ಗೋಲ್ಡ್ ಸ್ಕೀಮ್

|

ಕಳೆದ ಕೆಲವು ತಿಂಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ ಆಗುತ್ತಲೇ ಇದೆ. ಕಳೆದ ಒಂದು ವರ್ಷದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿದ್ದವರಿಗೆ ಇಪ್ಪತ್ತಾರು ಪರ್ಸೆಂಟ್ ರಿಟರ್ನ್ಸ್ ದಕ್ಕಿದೆ. ಚಿನ್ನವನ್ನು ಹೂಡಿಕೆಯ ಒಂದು ಆಯ್ಕೆಯಾಗಿ ಪರಿಗಣಿಸುವ ಸಮಯ ಇದು. ಜ್ಯುವೆಲ್ಲರ್ಸ್ ಗಳು ನೀಡುವ ಕೆಲವು ಚಿನ್ನದ ಯೋಜನೆಗಳನ್ನು ಗಣನೆಗೆ ತೆಗೆದುಕೊಂಡು, ಹೂಡಿಕೆ ಮಾಡಬಹುದು.

ಪ್ರತಿಷ್ಠಿತವಾದ ಮತ್ತು ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಂಡಿರುವ ಐದು ಅತ್ಯುತ್ತಮ ಚಿನ್ನದ ಸ್ಕೀಮ್ ಗಳನ್ನು ನೀಡಲಾಗುತ್ತಿದೆ. ಹೂಡಿಕೆ ಮಾಡಲು ಬಯಸುವವರು ಇವುಗಳ ಮೌಲ್ಯಮಾಪನ ಮಾಡಿ ಹಾಗೂ ಯಾವುದು ಸೂಕ್ತ ಆಗಬಹುದು ಎಂಬ ಬಗ್ಗೆ ನಿರ್ಧರಿಸಿ. ಇನ್ನೇಕೆ ತಡ, ಇಲ್ಲಿ ನೀಡಿರುವ ಐದು ಗೋಲ್ಡ್ ಸ್ಕೀಮ್ ಗಳ ಕಡೆ ನೋಡೋಣ.

ತನಿಷ್ಕ್ ನ ಗೋಲ್ಡನ್ ಹಾರ್ವೆಸ್ಟ್

ತನಿಷ್ಕ್ ನ ಗೋಲ್ಡನ್ ಹಾರ್ವೆಸ್ಟ್

ಪ್ರತಿ ತಿಂಗಳು ಎರಡು ಸಾವಿರ ರುಪಾಯಿಯಂತೆ ಹತ್ತು ತಿಂಗಳ ಕಾಲ ತನಿಷ್ಕ್ ಅವರ ಗೋಲ್ಡನ್ ಹಾರ್ವೆಸ್ಟ್ ಯೋಜನೆಯಲ್ಲಿ ಹಣ ಹೂಡಬಹುದು. ಇದು ಹತ್ತು ತಿಂಗಳ ಯೋಜನೆ. ಹೂಡಿಕೆ ಮೌಲ್ಯದ ಮೇಲೆ ತನಿಷ್ಕ್ ನಿಂದ ಶೇಕಡಾ ಎಪ್ಪತ್ತೈದರಷ್ಟು ರಿಯಾಯಿತಿ ನೀಡಲಾಗುತ್ತದೆ. ಉದಾಹರಣೆಗೆ ನೀವು ಎರಡು ಸಾವಿರ ರುಪಾಯಿ ತಿಂಗಳ ಕಂತು ಕಟ್ಟುತ್ತಿದ್ದರೆ ಕೊನೆಯ ಕಂತಿನಲ್ಲಿ ಸಾವಿರದೈನೂರು ರುಪಾಯಿ ರಿಯಾಯಿತಿ ದೊರೆಯುತ್ತದೆ. ಹತ್ತು ತಿಂಗಳ ಕಾಲ ಉಳಿತಾಯ ಮಾಡಿದ ಹಣದಲ್ಲಿ ಚಿನ್ನದ ಆಭರಣ ಖರೀದಿಸಬಹುದು. ನಾನೂರಾ ಇಪ್ಪತ್ತೊಂದು ದಿನದ ನಂತರ ಖಾತೆ ಕ್ಲೋಸ್ ಮಾಡಲೇಬೇಕು.

ಲಲಿತಾ ಜ್ಯುವೆಲ್ಲರಿ ಹನ್ನೊಂದು ತಿಂಗಳ

ಲಲಿತಾ ಜ್ಯುವೆಲ್ಲರಿ ಹನ್ನೊಂದು ತಿಂಗಳ "ಆಭರಣ ಖರೀದಿ ಯೋಜನೆ"

ಲಲಿತಾ ಜ್ಯುವೆಲ್ಲರಿಯಿಂದ ಹನ್ನೊಂದು ತಿಂಗಳ "ಆಭರಣ ಖರೀದಿ ಯೋಜನೆ" ಇದೆ. ಇದರಲ್ಲಿ ಸಾವಿರ, ಸಾವಿರದೈನೂರು, ಎರಡು ಸಾವಿರ ಅಥವಾ ಎರಡು ಸಾವಿರದ ಐನೂರು ರುಪಾಯಿ ಕಟ್ಟಬಹುದು. ಈ ಯೋಜನೆಯಲ್ಲಿ ಒಂದು ಕಂತು ಕಟ್ಟುವ ಅಗತ್ಯ ಇಲ್ಲ. ನೀವು ಹಣ ಕಟ್ಟುವ ದಿನದಂದು ಚಿನ್ನ ಏನು ಬೆಲೆ ಇರುತ್ತದೋ ಲೆಕ್ಕ ಹಾಕಿ, ನಿಮ್ಮ ಹಣದ ಮೌಲ್ಯಕ್ಕೆ ತಕ್ಕಷ್ಟು ಚಿನ್ನ ತೆಗೆದಿಡಲಾಗುತ್ತದೆ. ಮಧ್ಯಮ ಮತ್ತು ಅಲ್ಪಾವಧಿ ಹೂಡಿಕೆಗೆ ಇದು ಅತ್ಯುತ್ತಮ ಆಯ್ಕೆ ಆಗುತ್ತದೆ.

ಭಿಮಾ ಗೋಲ್ಡ್ ಟ್ರೀ

ಭಿಮಾ ಗೋಲ್ಡ್ ಟ್ರೀ

ಇದು ಮತ್ತೊಂದು ಚಿನ್ನದ ಉಳಿತಾಯ ಯೋಜನೆ ಸ್ಕೀಂ. ಈ ಯೋಜನೆಯಲ್ಲಿ ಹೂಡಿಕೆದಾರರು ಐನೂರು ರುಪಾಯಿಯನ್ನು ಹದಿನೆಂಟು ತಿಂಗಳು ಕಟ್ಟುತ್ತಾರೆ. ಆ ಮೊತ್ತ ಒಂಬತ್ತು ಸಾವಿರ ಆಗುತ್ತದೆ. ಅದಕ್ಕೆ ಸಂಸ್ಥೆಯು ಒಂದು ಸಾವಿರ ರುಪಾಯಿ ಸೇರಿಸುತ್ತದೆ. ಒಟ್ಟು ಮೊತ್ತ ಹತ್ತು ಸಾವಿರ ಆಗುತ್ತದೆ. ಹೂಡಿಕೆದಾರರಿಗೆ ಒಂದು ಸಾವಿರ ರುಪಾಯಿ ಲಾಭ ಆಗುತ್ತದೆ. ಹನ್ನೊಂದು ತಿಂಗಳ ಯೋಜನೆಯೂ ಇದ್ದು, ಅದಕ್ಕೆ ಹೂಡಿಕೆದಾರರ ಇಚ್ಛೆಗೆ ತಕ್ಕಂತೆ ಸಣ್ಣ ಮೊತ್ತವನ್ನು ಕಟ್ಟಬಹುದು. ನಗದು, ಚೆಕ್ ಅಥವಾ ಡೆಬಿಟ್- ಕ್ರೆಡಿಟ್ ಕಾರ್ಡ್ ಮೂಲಕ ಕೂಡ ಪಾವತಿ ಮಾಡಬಹುದು.

ಜಿಆರ್ ಟಿ ಗೋಲ್ಡನ್ ಇಲೆವೆನ್ ಫ್ಲೆಕ್ಸಿ ಪ್ಲಾನ್

ಜಿಆರ್ ಟಿ ಗೋಲ್ಡನ್ ಇಲೆವೆನ್ ಫ್ಲೆಕ್ಸಿ ಪ್ಲಾನ್

ಜಿಆರ್ ಟಿ ಪ್ಲಾನ್ ಕೂಡ ತಿಂಗಳು- ತಿಂಗಳು ಹಣ ಹೂಡಿಕೆ ಮಾಡುವಂಥದ್ದೇ. ತಿಂಗಳಿಗೆ ಕನಿಷ್ಠ ಐನೂರು ರುಪಾಯಿ ಕಟ್ಟಬೇಕು. ಅದರ ಮೇಲೆ ಕೂಡ ಹೆಚ್ಚಿನ ಪಾವತಿ ಮಾಡಬಹುದು. ಹೂಡಿಕೆದಾರರಿಗೆ ಪಾಸ್ ಬುಕ್ ನೀಡಲಾಗುತ್ತದೆ. ಗೋಲ್ಡನ್ ಹಾರ್ವೆಸ್ಟ್ ಸ್ಕೀಮ್ ಥರವೇ ಇದು ಕೂಡ ಹನ್ನೊಂದು ಇಎಂಐಗಳ ಸ್ಕೀಮ್. ನೀವು ಪೂರ್ತಿ ಹಣ ಪಾವತಿ ಮಾಡಿದ ಮೇಲೆ ವಜ್ರ, ಪ್ಲಾಟಿನಂ ಮತ್ತಿತರ ವಿಶೇಷ ವಸ್ತುಗಳನ್ನು ಹೊರತುಪಡಿಸಿದಂತೆ ಆಭರಣಗಳನ್ನು ವೇಸ್ಟೇಜ್ ಅಥವಾ ಹೆಚ್ಚಿನ ಶುಲ್ಕಗಳಿಲ್ಲದೆ ಆಭರಣ ಖರೀದಿ ಮಾಡಬಹುದು.

ಮಲಬಾರ್ ಸ್ಮಾರ್ಟ್ ಬೈ

ಮಲಬಾರ್ ಸ್ಮಾರ್ಟ್ ಬೈ

ಈ ಯೋಜನೆ ಅಡಿಯಲ್ಲಿ ಹೂಡಿಕೆದಾರರಿಗೆ ರಿಯಾಯಿತಿ ಕೂಡ ದೊರೆಯುತ್ತದೆ. ಮಳಿಗೆಯಲ್ಲಿ ಬೇಕಾದ ಡಿಸೈನ್ ನ ಆಭರಣ ದೊರೆಯದಿದ್ದಲ್ಲಿ ಆರ್ಡರ್ ಕೊಟ್ಟು ಮಾಡಿಸಬಹುದು. ಗ್ರಾಹಕರು ಮುಂಚಿತವಾಗಿಯೇ ಅಡ್ವಾನ್ದ್ ಕೊಟ್ಟು, ಯಾವ ಆಭರಣ ಎಂದು ಬುಕ್ ಮಾಡಬೇಕಾಗುತ್ತದೆ. ಆ ನಂತರ ಆಭರಣ ತಯಾರಿ ಆರಂಭವಾಗಿ, ಭರವಸೆ ನೀಡಿದ ದಿನಾಂಕದಂದು ಡೆಲಿವರಿ ನೀಡಲಾಗುತ್ತದೆ. 'ಸ್ಮಾರ್ಟ್ ಬೈ' ಆಯ್ಕೆ ಕೆಲವು ಆಯ್ದ ಉತ್ಪನ್ನಗಳಿಗೆ ಮಾತ್ರ ದೊರೆಯುತ್ತದೆ.

English summary

Best Gold Saving Schemes To Invest 2 Thousand Per Month

Here is the best gold saving scheme to invest with 2,000 rupees per month.
Story first published: Thursday, January 9, 2020, 19:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X