ಪ್ರಪಂಚ ಸುತ್ತೋ ಕ್ರೇಜ್ ಇದ್ರೆ, ಕಿಸೆಯಲ್ಲೊಂದು ಟ್ರಾವೆಲ್ ಕಾರ್ಡ್ ಇರ್ಲಿ

ಪ್ರವಾಸ ಕೈಗೊಳ್ಳುವ ಕ್ರೇಜ್ ಯಾರಿಗಿರಲ್ಲ ಹೇಳಿ. ಆದರೆ ವಿದೇಶಿ ಪ್ರಯಾಣಕ್ಕೂ ಮುನ್ನ ಒಂದಿಷ್ಟು ಯೋಜನೆ, ಆರ್ಥಿಕ ಸ್ಥಿತಿ ಗತಿ ಬಗ್ಗೆ ಯೋಚನೆ ಮಾಡುವುದು ಒಳ್ಳೆಯದು. ಪ್ರವಾಸಕ್ಕೂ ಮುನ್ನ ಕಿಸೆಯಲ್ಲಿ ಎಷ್ಟು ದುಡ್ಡು ಇಟ್ಟುಕೊಂಡಿರಬೇಕು ಎಂಬುದು ಮೊದಲಿಗೆ ಹೊಳೆಯುವ ಆಲೋಚನೆ. ಟಿಕೆಟ್ ಬುಕ್ಕಿಂಗ್, ಕೂಪನ್, ಕ್ಯಾಶ್ ಬ್ಯಾಕ್, ರಿಯಾಯಿತಿ ಎಲ್ಲವೂ ಗಣನೆಗೆ ಬರಲಿದೆ. ಈ ಮೂಲಕ ಎಷ್ಟು ಸಾಧ್ಯವೂ ಅಷ್ಟು ಪ್ರವಾಸದ ಖರ್ಚು ವೆಚ್ಚಕ್ಕೆ ಕಡಿವಾಣ ಹಾಕಬಹುದು.

ಸಂಸ್ಥೆಗಳ ವಿಷಯಕ್ಕೆ ಬಂದರೆ, ಪ್ರವಾಸ ವೆಚ್ಚ ಎಂಬುದು ಯಾವುದೇ ಕಂಪನಿಗೆ ಎರಡನೇ ಅತಿದೊಡ್ಡ ವಹಿವಾಟು ವೆಚ್ಚ ಎನಿಸಿದ್ದು, ನಿಯಂತ್ರಣ ಕಷ್ಟಸಾಧ್ಯ. ಮಾರುಕಟ್ಟೆ ವಿಶ್ಲೇಷಕರ ಪ್ರಕಾರ 2022 ವೇಳೆಗೆ ಕಾರ್ಪೊರೇಟ್ ಗಳ ಪ್ರವಾಸ ವೆಚ್ಚವೇ 1.7 ಟ್ರಿಲಿಯನ್ ಡಾಲರ್ ಗೂ ಅಧಿಕವಾಗಲಿದೆ ಎಂದು ಅಂದಾಜಿಸಲಾಗಿದೆ.

ನಿರಂತರವಾಗಿ ಪ್ರವಾಸ ಕೈಗೊಳ್ಳುವವರ ಪ್ರವಾಸ ವೆಚ್ಚದ ಮೇಲಿನ ಕಡಿವಾಣ, ಹೊರೆ ತಗ್ಗಿಸಲು ಟ್ರಾವೆಲ್ ಕ್ರೆಡಿಟ್ ಕಾರ್ಡ್ ಬಳಸಬಹುದಾಗಿದೆ.

1. ಅಮೆಕ್ಸ್ ಟ್ರಾವೆಲ್ ಪ್ಲಾಟಿನಂ ಕ್ರೆಡಿಟ್ ಕಾರ್ಡ್

1. ಅಮೆಕ್ಸ್ ಟ್ರಾವೆಲ್ ಪ್ಲಾಟಿನಂ ಕ್ರೆಡಿಟ್ ಕಾರ್ಡ್

ಅಮೆರಿಕನ್ ಎಕ್ಸ್ ಪ್ರೆಸ್ ಹೊರ ತಂದ ಅಮೆಕ್ಸ್ ಟ್ರಾವೆಲ್ಸ್ ಪ್ಲಾಟಿನಂ ಕ್ರೆಡಿಟ್ ಕಾರ್ಡ್ ಭರಪೂರ ಆಫರ್ ನೊಂದಿಗೆ ಸಿಗುತ್ತದೆ. ಟ್ರಾವೆಲ್ ವೋಚರ್ಸ್, ಏರ್ ಪೋರ್ಟ್ ಲಾಂಚ್ ಸೌಲಭ್ಯ, ಬೋನಸ್ ಮೆಂಬರ್ ಶಿಪ್ ಅಂಕಗಳು.. ಇತ್ಯಾದಿ ಆಫರ್ ಗಳಿವೆ.

ಸೇರ್ಪಡೆ ಶುಲ್ಕ: 3,500 ರು + ಹೆಚ್ಚುವರಿ ಜಿಎಸ್ಟಿ.
ವಾರ್ಷಿಕ ಶುಲ್ಕ(ಎರಡನೇ ವರ್ಷದ ನಂತರ): 5,000 ರು ಹೆಚ್ಚುವರಿ ಜಿಎಸ್ಟಿ.
ಬಡ್ಡಿದರ: 40.2% ವಾರ್ಷಿಕ

ಅಮೆಕ್ಸ್ ಟ್ರಾವೆಲ್ ಕಾರ್ಡ್ ಸೌಲಭ್ಯ, ಆಫರ್ಸ್
* ಸ್ವಾಗತ ಉಡುಗೊರೆ ರೂಪದಲ್ಲಿ 5,000 ಮೈಲಿಗಲ್ಲು ಬೋನಸ್ ಮೆಂಬರ್ ಶಿಪ್ ಗಳಿಸಬಹುದು.
* ರಿವಾರ್ಡ್ ಅಂಕಗಳನ್ನು 4000 ರು ತನಕ ಟ್ರಾವೆಲ್ ವೋಚರ್ಸ್ ಗಾಗಿ ರೀಡೀಮ್ಡ್ ಮಾಡಿಕೊಳ್ಳಬಹುದು.
* ಪ್ರತಿ ಬಾರಿ ಕಾರ್ಡ್ ಬಳಸಿ 50 ರು ನಷ್ಟು ಇಂಧನ ಬಿಲ್, ವಿಮೆ, ನಗದು ವಹಿವಾಟು, ಇನ್ನಿತರ ಸೌಲಭ್ಯಕ್ಕೆ ಬಳಸಿದರೆ 1 ಮೆಂಬರ್ ಶಿಪ್ ರಿವಾರ್ಡ್ ಅಂಕ ಸಿಗಲಿದೆ. (1 ಮೆಂಬರ್ ಶಿಪ್ ರಿವಾರ್ಡ್ ಪಾಯಿಂಟ್= ಕಾರ್ಡ್ ಬಳಸಿ 50 ರು ಖರ್ಚು ಮಾಡಿದರೆ)
* ವರ್ಷದಲ್ಲಿ 1,90,000 ರು ವ್ಯಯಿಸಿದರೆ, ಕಾರ್ಡ್ ದಾರರಿಗೆ 7,700 ರು ಟ್ರಾವೆಲ್ ವೋಚರ್ ಸಿಗಲಿದೆ.
* ಅಮೆಕ್ಸ್ ಕಾರ್ಡ್ ಲಿಸ್ಟ್ ಆಗಿರುವ ಭಾರತದ ರೆಸ್ಟೋರೆಂಟ್ ನಲ್ಲಿ ಕಾರ್ಡ್ ಬಳಸಿದರೆ ಪ್ರತಿ ಬಾರಿ 20% ರಿಯಾಯಿತಿ ಸಿಗಲಿದೆ.

 

2. ಸಿಟಿ ಬ್ಯಾಂಕ್ ಪ್ರೀಮಿಯರ್ ಮೈಲ್ಸ್ ಕ್ರೆಡಿಟ್ ಕಾರ್ಡ್

2. ಸಿಟಿ ಬ್ಯಾಂಕ್ ಪ್ರೀಮಿಯರ್ ಮೈಲ್ಸ್ ಕ್ರೆಡಿಟ್ ಕಾರ್ಡ್

ಸಿಟಿ ಬ್ಯಾಂಕ್ ಹೊರ ತಂದಿರುವ ಪ್ರೀಮಿಯರ್ ಮೈಲ್ಸ್ ಕ್ರೆಡಿಟ್ ಕಾರ್ಡ್ ಕೂಡಾ ಅತ್ಯಂತ ಉಪಯುಕ್ತ, ಜನಪ್ರಿಯ ಟ್ರಾವೆಲ್ ಕ್ರೆಡಿಟ್ ಕಾರ್ಡ್ ಎನಿಸಿದೆ.

ಸೇರ್ಪಡೆ ಶುಲ್ಕ: ಯಾವುದೇ ಶುಲ್ಕವಿಲ್ಲ.
ವಾರ್ಷಿಕ ವೆಚ್ಚ: 3000 ರು
ಬಡ್ಡಿದರ: 3.10% ಪ್ರತಿ ತಿಂಗಳು

ಸಿಟಿ ಬ್ಯಾಂಕ್ ಟ್ರಾವೆಲ್ ಕಾರ್ಡ್ ಆಫರ್ಸ್
* ಕಾರ್ಡ್ ಪಡೆದ 60 ದಿನಗಳಲ್ಲಿ 1,000 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಖರ್ಚು ಮಾಡಿದರೆ 10,000 ಮೈಲ್ಸ್ ಅಂಕಗಳು ಸಿಗಲಿದೆ.
* ಸಿಟಿ ಪ್ರಿಯಾರಿಟಿ ಕ್ಲೈಂಟ್ ಗಳಿಗೆ ಮೊದಲ ವರ್ಷದ ವಾರ್ಷಿಕ ಶುಲ್ಕ ವಿಧಿಸುವುದಿಲ್ಲ. ಸಿಟಿ ಗೋಲ್ಡ್ ಕ್ಲೈಂಟ್ ಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.
* ಕ್ರೆಡಿಟ್ ಕಾರ್ಡ್ ನವೀಕರಿಸಿದಾಗ 3000ಮೈಲ್ಸ್ ಪಾಯಿಂಟ್ ಸಿಗಲಿದೆ.
* ಕಾರ್ಡ್ ದಾರರು ಗಳಿಸಿದ miles points ಬಳಕೆಗೆ ಕಾಲಮಿತಿ ಇರುವುದಿಲ್ಲ.
* ನಿಮ್ಮ ಅಗತ್ಯಕ್ಕೆ ತಕ್ಕಂತೆ ಮೈಲ್ಸ್ ಅಂಕಗಳನ್ನು ರೀಡೀಮ್ಡ್ ಮಾಡಿಕೊಂಡು ಬಳಸಬಹುದು.
* ಜಾಗತಿಕವಾಗಿ ಯಾವುದೇ ಏರ್ ಲೈನ್ ಆಧಾರಿತ ವ್ಯವಹಾರಗಳಲ್ಲಿ ಕಾರ್ಡ್ ಬಳಸಿ 100 ರು ಖರ್ಚು ಮಾಡಿದರೆ 10 ಮೈಲ್ಸ್ ಅಂಕ ಸಿಗಲಿದೆ.

 

3. ಜೆಟ್ ಪ್ರಿಮಿಲೇಜ್ ಎಚ್ ಡಿ ಎಫ್ಸಿ ಡೈನರ್ಸ್ ಕ್ಲಬ್ ಕಾರ್ಡ್

3. ಜೆಟ್ ಪ್ರಿಮಿಲೇಜ್ ಎಚ್ ಡಿ ಎಫ್ಸಿ ಡೈನರ್ಸ್ ಕ್ಲಬ್ ಕಾರ್ಡ್

ಎಚ್ ಡಿ ಎಫ್ ಸಿ ಕಾರ್ಡ್ ನೀಡುವ ಟ್ರಾವೆಲ್ ಕ್ರೆಡಿಟ್ ಕಾರ್ಡ್ ಇದಾಗಿದ್ದು, ಅತಿ ಕಡಿಮೆ ಬಡ್ಡಿದರ ಹೊಂದಿದ್ದು, ಎಥಿಹಾಡ್ ಏರ್ ವೇಸ್ ಜೊತೆ ಒಪ್ಪಂದ ಹೊಂದಿರುವ ಈ ಕಾರ್ಡ್ ಟಿಕೆಟ್ ಬುಕ್ಕಿಂಗ್ ನಲ್ಲಿ ವಿನಾಯತಿ ದೊರಕಿಸಿಕೊಡಲಿದೆ.

ಸೇರ್ಪಡೆ ಶುಲ್ಕ: 10000(ಉಳಿತಾಯ ಖಾತೆ ಅಥವಾ ಕರೆಂಟ್ ಖಾತೆ ಆರಂಭಿಸಿದರೆ ಶುಲ್ಕ ರದ್ದಾಗಲಿದೆ)
ವಾರ್ಷಿಕ ಶುಲ್ಕ: 5,000 ರು (ಕಾರ್ಡ್ ಪಡೆದ ದಿನದಿಂದ 12 ತಿಂಗಳಲ್ಲಿ 8 ಲಕ್ಷ ರು ಖರ್ಚು ಮಾಡಿದರೆ ವಾರ್ಷಿಕ ಶುಲ್ಕ ರದ್ದಾಗಲಿದೆ)
ಬಡ್ಡಿದರ: 1.99 % ಪ್ರತಿ ತಿಂಗಳು.

ಜೆಟ್ ಪ್ರಿವಿಲೇಜ್ ಎಚ್ ಡಿ ಎಫ್ ಸಿ ಡೈನರ್ಸ್ ಕ್ಲಬ್ ಕಾರ್ಡ್ ಉಪಯೋಗ, ಆಫರ್ಸ್
* ಭಾರತ ಹಾಗೂ ವಿದೇಶಗಳಲ್ಲಿ ಗಾಲ್ಫ್ ಕೋರ್ಸ್ ಗಳಲ್ಲಿ ಗೋಲ್ಡ್ ಗೇಮ್ಸ್ ಆಡುವ ಅನಿಯಮಿತ ಅವಕಾಶ.
* ರಿಟೈಲ್ ಮಳಿಗೆಗಳಲ್ಲಿ ಕಾರ್ಡ್ ಬಳಸಿ 1,50,000 ರು ಗೂ ಅಧಿಕ ಖರ್ಚು ಮಾಡಿದಾಗ ಪ್ರತಿ ವ್ಯವಹಾರಕ್ಕೂ 1 ಜೆಟ್ ಪ್ರಿವಿಲೇಜ್ ಟಯರ್ ಪಾಯಿಂಟ್ ಸಿಗಲಿದೆ.
* 400 ರಿಂದ 5, 000 ರು ತನಕ ಇಂಧನ ಬಿಲ್ ಪಾವತಿಗೆ ಕಾರ್ಡ್ ಬಳಸಿದರೆ ಇಂಧನ ಸರ್ಚ್ ಚಾರ್ಜ್ ಕಡಿತಗೊಳ್ಳಲಿದೆ. 250 ರು ತನಕ ರೀಫಂಡ್ ಸಿಗಲಿದೆ.
* ಆಯ್ದ ರೆಸ್ಟೋರೆಂಟ್ ಗಳಲ್ಲಿ ಕಾರ್ಡ್ ದಾರರಿಗೆ ಶೇ 15ರಷ್ಟು ರಿಯಾಯಿತಿ ಸಿಗಲಿದೆ.

 

4.ಆಕ್ಸಿಸ್ ಇನ್ಸ್ಟಾ ಈಸಿ ಕ್ರೆಡಿಟ್ ಕಾರ್ಡ್

4.ಆಕ್ಸಿಸ್ ಇನ್ಸ್ಟಾ ಈಸಿ ಕ್ರೆಡಿಟ್ ಕಾರ್ಡ್

ಆಕ್ಸಿಸ್ ಬ್ಯಾಂಕಿನ ಟ್ರಾವೆಲ್ ಕ್ರೆಡಿಟ್ ಕಾರ್ಡ್ ಇದಾಗಿದ್ದು, ಕಾರ್ಡ್ ಹೊಂದಲು ನಿಶ್ಚಿತ ಠೇವಣಿ ಇರಿಸಬೇಕಾಗುತ್ತದೆ. ಆದರೆ, ಯಾವುದೇ ರೀತಿ ವಾರ್ಷಿಕ ಶುಲ್ಕವನ್ನು ವಿಧಿಸುವುದಿಲ್ಲ. ಅದು ಯಾವುದೇ ವಯೋಮಿತಿ, ಆದಾಯ ಮಿತಿ ಸ್ತರದವರಾದರೂ ಸರಿ ವಾರ್ಷಿಕ ಶುಲ್ಕವಿಲ್ಲ.

ಸೇರ್ಪಡೆ ಶುಲ್ಕ: ಇಲ್ಲ
ವಾರ್ಷಿಕ ಶುಲ್ಕ: ಇಲ್ಲ
ಬಡ್ಡಿದರ: 2.50% ಪ್ರತಿ ತಿಂಗಳು.

ಆಕ್ಸಿಸ್ ಬ್ಯಾಂಕ್ ಈಸಿ ಕ್ರೆಡಿಟ್ ಕಾರ್ಡ್
* ಕ್ರೆಡಿಟ್ ಮಿತಿಯಲ್ಲಿ ಕಾರ್ಡ್ ದಾರರು ತಮ್ಮ ಬೇಕಾದ ಆಯ್ಕೆ ಹೊಂದಬಹುದು. ಗರಿಷ್ಠ ಮಿತಿ ನಿಶ್ಚಿತ ಠೇವಣಿಯ ಪ್ರಧಾನ ಮೌಲ್ಯ 80% ತನಕ ಬಳಸಬಹುದು.
* ಕಾರ್ಡ್ ಪಡೆದ ಮೊದಲ ದಿನದಿಂದಲೇ ಕ್ರೆಡಿಟ್ ಲಿಮಿಟ್ ನ 100% ವಿಥ್ ಡ್ರಾ ಸಾಧ್ಯವಿದೆ.
* ಶಾಪಿಂಗ್ ಮಾಡುವಾಗ ಬಳಸಿದರೆ ಯಾವುದೇ ಶುಲ್ಕವಿಲ್ಲದೆ 50 ದಿನಗಳ ತನಕದ ಉಚಿತ ಕ್ರೆಡಿಟ್ ಸಿಗಲಿದೆ(ಆದರೆ, ಕ್ರೆಡಿಟ್ ಕಾರ್ಡ್ ನಲ್ಲಿ ಬಾಕಿ ಬಿಲ್ ಪಾವತಿ, ಪೇಮೆಂಟ್ ಬಾಕಿ ಉಳಿಸಿಕೊಂಡಿರಬಾರದು)

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+