ಪ್ರತಿ ವರ್ಷ ನವೆಂಬರ್ ತಿಂಗಳ ಅಂತ್ಯದ ವೇಳೆಗೆ, ದೊಡ್ಡ ಬ್ರ್ಯಾಂಡ್‌ಗಳು ಕ್ರಿಸ್‌ಮಸ್ ಹಬ್ಬದ ಭಾಗವಾಗಿ ಗ್ರಾಹಕರಿಗೆ ಕೆಲವು ಉತ್ತಮ ರಿಯಾಯಿತಿಗಳನ್ನು ನೀಡುತ್ತದೆ. ಈ ವಿಚಾರದಲ್ಲಿ ಪರಸ್ಪರ ಸ್ಪರ್ಧೆ ಕೂಡಾ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ, ಬ್ಲ್ಯಾಕ್ ಫ್ರೈಡೇ ಸೇಲ್ಸ್ ಮತ್ತು ಆಫರ್‌ಗಳು ಭಾರತದಲ್ಲಿ ಅಧಿಕವಾಗಿದೆ.
ನಿರಂತರ ಹಬ್ಬದ ಸೀಸನ್‌ಗೆ ಒಂದಲ್ಲ ಒಂದು ಆಫರ್ ನೀಡಲಾಗುತ್ತಿದೆ. ಈಗ ಜಾಗತಿಕ ಮತ್ತು ದೇಶೀಯ ಬ್ರ್ಯಾಂಡ್‌ಗಳು ಆನ್‌ಲೈನ್‌ನಲ್ಲಿ ಮತ್ತು ರಿಟೇಲ್ ಮಾರಾಟವನ್ನು ವರ್ಷಾಂತ್ಯದ ಮೊದಲು ಹೆಚ್ಚಿಸಲು ಮುಂದಾಗಿದೆ. ಇದಕ್ಕಾಗಿ ಗ್ರಾಹಕರಿಗೆ ಉತ್ತಮ ಡೀಲ್, ಆಫರ್ ನೀಡುತ್ತಿದೆ. ಬೆಸ್ಟ್ ಡೀಲ್‌ಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಅಮೆಜಾನ್‌ನಲ್ಲಿ ಉತ್ತಮ ಡೀಲ್
ಅತಿದೊಡ್ಡ ಅಂತರಾಷ್ಟ್ರೀಯ ರಿಟೇಲ್ ಕಂಪನಿ ಅಮೆಜಾನ್ ಈ ವರ್ಷದ ಬ್ಲ್ಯಾಕ್ ಫ್ರೈಡೇ ಸೇಲ್ಸ್ ಸಮಯದಲ್ಲಿ ಅಮೆಜಾನ್ ಪ್ರೈಮ್ ಸದಸ್ಯರಿಗೆ ಪ್ರತ್ಯೇಕವಾಗಿ ಆಫರ್ ನೀಡಿದೆ. ಕೆಲವು ಉತ್ಪನ್ನಗಳಿಗೆ ಫ್ರೀ ಡೆಲಿವರಿ, ಅದು ಕೂಡಾ ಅದೇ ದಿನ, ನಿಗದಿತ ಶಿಪ್ಪಿಂಗ್ ದಿನಾಂಕ ಮೊದಲಾದವುಗಳನ್ನು ಆರಂಭಿಸಿದೆ.
ಕ್ರೋಮಾದಲ್ಲಿ ಏನಿದೆ ಆಫರ್?
ಭಾರತದಲ್ಲಿನ ಮೂರನೇ ಅತಿದೊಡ್ಡ ಎಲೆಕ್ಟ್ರಾನಿಕ್ ಉಪಕರಣಗಳ ರಿಟೇಲ್ ವ್ಯಾಪಾರಿಯಾದ ಕ್ರೋಮಾವು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್ ಟಿವಿಗಳು, ಎಸಿಗಳು, ಕ್ಯಾಮೆರಾಗಳು, ವಾಟರ್ ಹೀಟರ್‌ಗಳು, ವಾಷಿಂಗ್ ಮೆಷಿನ್‌ಗಳು, ವ್ಯಾಕ್ಯೂಮ್ ಕ್ಲೀನರ್‌ಗಳು ಮತ್ತು ಡಿಶ್‌ವಾಶರ್‌ಗಳಂತಹ ಉತ್ಪನ್ನಗಳ ಮೇಲೆ ನವೆಂಬರ್ 24 ರಿಂದ ನವೆಂಬರ್ 26 ರವರೆಗೆ ರಿಯಾಯಿತಿ ನೀಡುತ್ತಿದೆ. ಆನ್‌ಲೈನ್ ಅಥವಾ ಶಾಪ್‌ಗಳಲ್ಲಿ ಆಫರ್‌ನ ಪ್ರಯೋಜನ ಪಡೆಯಬಹುದು.
ಅಜಿಯೋ ಆಫರ್‌ಗಳಿದು
ಅಜಿಯೋ ಈ ರೇಸ್‌ನಲ್ಲಿ ಹಿಂದೆ ಉಳಿದಿಲ್ಲ. ರಿಯಾಯಿತಿ ದರದಲ್ಲಿ ವಸ್ತುಗಳು, ಪುರುಷರ ಮತ್ತು ಮಹಿಳೆಯರ ಉಡುಪುಗಳು, ಕನ್ನಡಕಗಳು ಮತ್ತು ಪಾದರಕ್ಷೆಗಳನ್ನು ನೀಡುತ್ತಿದೆ. ಅದು ಕೂಡಾ ಜಾಗತಿಕ ಬ್ರಾಂಡ್‌ಗಳಾದ ಮೈಕೆಲ್ ಕಾರ್ಸ್, ಕೋಚ್, ಸ್ಟೆಲ್ಲಾ ಮೆಕ್‌ಕಾರ್ಟ್ನಿ, ಕೇಟ್ ಸ್ಪೇಡ್ ಮೊದಲಾದವುಗಳಿಗೆ ಶೇಕಡ 50 ರಷ್ಟು ರಿಯಾಯಿತಿ ನೀಡುತ್ತದೆ. ಈ ಸೇಲ್ಸ್ ನವೆಂಬರ್ 24ರಿಂದ ನವೆಂಬರ್ 27ರವರೆಗೆ ಇರಲಿದೆ. ಕೆಲವು ಉತ್ಪನ್ನಗಳ ಮೇಲೆ ಶೇಕಡ 50 ಕ್ಕಿಂತ ಅಧಿಕ ರಿಯಾಯಿತಿ ಇದೆ.
ಫ್ಲಿಫ್‌ಕಾರ್ಟ್ ಉತ್ತಮ ಡೀಲ್
ಅಕ್ಟೋಬರ್ 2023 ರಂತೆ ಅತಿ ಹೆಚ್ಚು ಆನ್‌ಲೈನ್ ಮಾರಾಟಗಳನ್ನು ಮಾಡಿದ ಪ್ಲಾಟ್‌ಫಾರ್ಮ್ ವಿಭಾಗದಲ್ಲಿ ಫ್ಲಿಪ್‌ಕಾರ್ಟ್ ಎರಡನೇ ಸ್ಥಾನದಲ್ಲಿದೆ. ಈ ಭಾರತೀಯ ಆನ್‌ಲೈನ್ ರಿಟೇಲ್ ವ್ಯಾಪಾರಿ ನವೆಂಬರ್ 24 ರಿಂದ ನವೆಂಬರ್ 30 ರವರೆಗೆ ಇಡೀ ವಾರ ಬ್ಲ್ಯಾಕ್ ಫ್ರೈಡೇ ಸೇಲ್ಸ್ ಹೊಂದಿದೆ. ಉತ್ತಮ ರಿಯಾಯಿತಿಯೂ ಲಭ್ಯವಿದೆ.
ಅರ್ಬನಿಕ್: ಏನಿದೆ ಆಫರ್?
ಬ್ರಿಟಿಷ್ ಪ್ರೀಮಿಯಂ ಫ್ಯಾಶನ್ ಬ್ರ್ಯಾಂಡ್ ಪತ್ರಿಕಾ ಪ್ರಕಟಣೆಯಲ್ಲಿ ಭಾರತದಲ್ಲಿ ನವೆಂಬರ್ 16 ರಿಂದ ನವೆಂಬರ್ 30 ರವರೆಗೆ ಬಹುನಿರೀಕ್ಷಿತ ಬ್ಲ್ಯಾಕ್ ಫ್ರೈಡೇ ಸೇಲ್ಸ್ ಮಾಡುವುದಾಗಿ ತಿಳಿಸಿದೆ. ಇತ್ತೀಚಿನ ಟ್ರೆಂಡಿ ವಿನ್ಯಾಸಗಳು ಮತ್ತು ಶೈಲಿಗಳಲ್ಲಿ ಎಲ್ಲಾ ವರ್ಗಗಳಿಗೆ ಶೇಕಡ 50 ರವರೆಗೆ ರಿಯಾಯಿತಿಯಿದೆ ಎಂದು ಘೋಷಣೆ ಕೂಡಾ ಮಾಡಿದೆ.


Click it and Unblock the Notifications