Book Auto: ಬೆಂಗಳೂರಿಗರೇ, ಹೊಸ ವರ್ಷದಲ್ಲಿ ವಾಟ್ಸಾಪ್‌ನಲ್ಲೇ ಆಟೋ ಬುಕ್ ಮಾಡಿ!

ಬೆಂಗಳೂರಿನಲ್ಲಿ ಆಟೋಗಳಿಗೆ ಬರವೇನಿಲ್ಲ ಬಿಡಿ. ಆದರೆ ನಮ್ಮ ಸಮಯಕ್ಕೆ ಸರಿಯಾಗಿ, ನಿಖರವಾದ ದರಕ್ಕೆ ನಮ್ಮ ಬಳಿಯೇ ಆಟೋ ಬರಬೇಕಾದರೆ ನಾವು ಹಲವಾರು ಆಪ್‌ಗಳನ್ನು ಬಳಸಬೇಕಾಗುತ್ತದೆ. ಆ ಆಪ್‌ಗಳ ಮೂಲಕವೇ ಆಟೋ ಬುಕ್ ಮಾಡಬೇಕಾಗುತ್ತದೆ. ಆದರೆ ಮೆಟ್ರೋ ನಿಲ್ದಾಣದಲ್ಲಿದ್ದು ಕೂಡಾ ನಾವು ಆಟೋ ಬುಕ್ ಮಾಡುವ ಅವಕಾಶವಿದೆ.

ಹೌದು, ನಾವು ಮೆಟ್ರೋ ನಿಲ್ದಾಣದಿಂದ ಹೊರಬಂದು ಆಟೋದಲ್ಲಿ ಪ್ರಯಾಣಿಸುವುದು ಒಂದು ತಲೆಬಿಸಿ ಕೀಡಾ ಹೌದು. ಕೆಲವೊಮ್ಮೆ ಆಟೋ ಇಲ್ಲದಿದ್ದರೆ, ಕೆಲವೊಮ್ಮೆ ಆಟೋ ಚಾಲಕರು ನಿಗದಿತ ದರಕ್ಕಿಂತ ಅಧಿಕ ಹಣವನ್ನು ಕೇಳುತ್ತಾರೆ. ಆದರೆ ಮೆಟ್ರೋ ಮಿತ್ರಾ ಆಪ್‌ ಬಳಸಿದರೆ ಆ ಸಮಸ್ಯೆಯಿಲ್ಲ. ನೀವು ವಾಟ್ಸಾಪ್‌ನಲ್ಲಿ ಆಟೋ ಬುಕ್ ಮಾಡಿಕೊಳ್ಳಬಹುದಾಗಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.....

 ಬೆಂಗಳೂರಿಗರೇ, ಹೊಸ ವರ್ಷದಲ್ಲಿ ವಾಟ್ಸಾಪ್‌ನಲ್ಲೇ ಆಟೋ ಬುಕ್ ಮಾಡಿ!

ವಾಟ್ಸಾಪ್‌ನಲ್ಲೇ ಆಟೋ ಬುಕ್ ಮಾಡಿಕೊಳ್ಳಿ

ಬೆಂಗಳೂರು ಮೂಲದ ಆಟೋ ರಿಕ್ಷಾ ಸೇವೆ ನೀಡುವ ಮೆಟ್ರೋ ಮಿತ್ರಾ ಈಗ ವಾಟ್ಸಾಪ್ ಚಾಟ್‌ಬಾಟ್ ಫೀಚರ್ ಅನ್ನು ಆರಂಭ ಮಾಡಿದೆ. ನೀವು 2024ರಲ್ಲಿ ಅಂದರೆ ಹೊಸ ವರ್ಷದಿಂದ ಮೆಟ್ರೋ ಮಿತ್ರಾ ವಾಟ್ಸಾಪ್ ಚಾಟ್‌ಬಾಟ್ ಮೂಲಕವೇ ಮೆಟ್ರೋಗೆ ಅಥವಾ ಮೆಟ್ರೋದಿಂದ ಆಟೋವನ್ನು ಬರೀ ಮೂರು ಕ್ಲಿಕ್‌ಗಳಲ್ಲಿ ಬುಕ್ ಮಾಡಿಕೊಳ್ಳಬಹುದಾಗಿದೆ.

ಎಲ್ಲ ಮೆಟ್ರೋ ಸ್ಟೇಷನ್‌ಗಳಿಗೆ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೆಟ್ರೋ ಮಿತ್ರಾ ಚಾಟ್‌ಬಾಟ್ ಫೀಚರ್ ಪ್ರಯಾಣಿಕರಿಗೆ ಇತರೆ ಪ್ರದೇಶಗಳಿಗೂ ಆಟೋ ಬುಕ್ ಮಾಡಿಕೊಳ್ಳಲು ಅವಕಾಶವನ್ನು ನೀಡುತ್ತದೆ. ಹಾಗೆಯೇ ಇದು ಆಟೋ ಚಾಲಕರಿಗೆ ತನ್ನ ಪ್ರಯಾಣಿಕರನ್ನು ಹುಡುಕಲು ಕೂಡಾ ಸಹಾಯ ಮಾಡುತ್ತದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಟೋ ರಿಕ್ಷಾ ಚಾಲಕರ ಸಂಘ (ಎಆರ್‌ಡಿಯು) ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ, "ಆಟೋ ಮಿತ್ರಾದ ವಾಟ್ಸಾಪ್ ಚಾಟ್‌ಬಾಟ್ ಫೀಚರ್ ಪ್ರಯಾಣಿಕರಿಗೆ ಸಹಾಯ ಮಾಡುವುದು ಮಾತ್ರವಲ್ಲ ಚಾಲಕರಿಗೂ ಕೂಡಾ ಸಹಾಯವಾಗಲಿದೆ," ಎಂದು ತಿಳಿಸಿದ್ದಾರೆ

ಮೀಟರ್ ಹಾಗೂ ಹೆಚ್ಚುವರಿಯಾಗಿ ಪ್ರತಿ ರೈಡ್‌ಗೆ 10 ರೂಪಾಯಿ ದರವನ್ನು ವಿಧಿಸಲಾಗುತ್ತದೆ. ಮೆಟ್ರೋ ಟಿಕೆಟ್‌ಗಳನ್ನು ವಾಟ್ಸಾಪ್‌ ಚಾಟ್‌ಬಾಟ್‌ ಮೂಲಕ ಹೇಗೆ ನಾವು ಬುಕ್ ಮಾಡಿಕೊಳ್ಳಬಹುದು ಅದೇ ರೀತಿಯಾಗಿ ವಾಟ್ಸಾಪ್ ಮೂಲಕವೇ ಆಟೋ ಬುಕ್ ಮಾಡಿಕೊಳ್ಳಬಹುದಾಗಿದೆ.

ಆದರೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಸಹಭಾಗಿತ್ವದಲ್ಲಿ ತೊಂದರೆ ಉಂಟಾಗುತ್ತಿರುವ ಕಾರಣದಿಂದಾಗಿ ಅಗ್ನಿಭು ಟೆಕ್ನಾಲಜೀಸ್ ಈಗ ತನ್ನದೇ ಆದ ಮೆಟ್ರೋ ಮಿತ್ರಾ ವಾಟ್ಸಾಪ್‌ ಚಾಟ್‌ಬಾಟ್ ಅನ್ನು ಆರಂಭಿಸಲು ಮುಂದಾಗಿದ್ದಾರೆ.

"ಚಾಟ್‌ಬಾಟ್ ಫೀಚರ್ ತಯಾರಿ ಮಾಡಲಾಗುತ್ತಿದೆ. ಶೀಘ್ರದಲ್ಲೇ ಪ್ರಾಯೋಗಿಕವಾಗಿ ಆರಂಭ ಮಾಡಲಾಗುತ್ತದೆ. ನಾವು ಹೊಸ ವರ್ಷದಲ್ಲಿ ನಾವು ಈ ಫೀಚರ್ ಅನ್ನು ಆರಂಭ ಮಾಡುತ್ತೇವೆ. ಪ್ರಯಾಣಿಕರು ಬರೀ ಮೂರು ಕ್ಲಿಕ್‌ನಲ್ಲಿ ಆಟೋ ಬುಕ್ ಮಾಡಿಕೊಳ್ಳಬಹುದಾಗಿದೆ. ಆರಂಭವಾದಾಗ ನಾವು ವಾಟ್ಸಾಪ್ ನಂಬರ್ ಅನ್ನು ನೀಡುತ್ತೇವೆ," ಎಂದು ರುದ್ರಮೂರ್ತಿ ಹೇಳಿದರು.

ಈ ವಾಟ್ಸಾಪ್ ಫೀಚರ್‌ನಲ್ಲಿ ನಮ್ಮ ಸಮೀಪದಲ್ಲಿರುವ ಮೆಟ್ರೋ ಸ್ಟೇಷನ್ ಯಾವುದೆಂದು ತಿಳಿಯಲು ಕೂಡಾ ಸಾಧ್ಯವಾಗುತ್ತದೆ. ಒಮ್ಮೆ ಬಳಕೆದಾರರು ಮೆಟ್ರೋ ಸ್ಟೇಷನ್ ಅನ್ನು ಆರಂಭ ಮಾಡಿದರೆ, ಸಮೀಪವಿರುವ ಮೆಟ್ರೋ ಮಿತ್ರಾ ಚಾಲಕರು ಗ್ರಾಹಕರ ಸ್ಥಳಕ್ಕೆ ಆಗಮಿಸಲಿದ್ದಾರೆ.

ಈಗಾಗಲೇ ಸುಮಾರು ಒಂದು ಸಾವಿರ ಮಂದಿ ಮೆಟ್ರೋ ಮಿತ್ರಾವನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 300 ಆಟೋ ಚಾಲಕರು ಮೆಟ್ರೋ ಮಿತ್ರಾದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.

ಏನಿದು ಮೆಟ್ರೋ ಮಿತ್ರ ಆ್ಯಪ್?

ಬೆಂಗಳೂರಿನ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ (ಎಆರ್‌ಡಿಯು), ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಸಹಯೋಗದೊಂದಿಗೆ ವಿಶೇಷವಾಗಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಆಟೋ ರೈಡ್ ಬುಕ್ ಮಾಡಲು ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ.

ಅಪ್ಲಿಕೇಶನ್, ಇತರ ಸೇವೆಗಳಿಗಿಂತ ಭಿನ್ನವಾಗಿ, ಮೆಟ್ರೋ ಬಳಕೆದಾರರನ್ನು ಪ್ರತ್ಯೇಕವಾಗಿ ಸೇವೆ ನೀಡಲು ಆರಂಭಿಸಲಾಗಿದೆ. ಎಲ್ಲಾ ಬೆಂಗಳೂರಿನ ಮೆಟ್ರೋ ನಿಲ್ದಾಣಗಳಿಗೆ ಮತ್ತು ಮೆಟ್ರೋ ನಿಲ್ದಾಣಗಳಿಂದ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+