ಭಾರತ ಸಂಚಾರ ನಿಗಮ ಲಿಮಿಟೆಡ್ (BSNL) ಇತ್ತೀಚೆಗೆ ತನ್ನ ವಾರ್ಷಿಕ ಪ್ರಿಪೇಯ್ಡ್ ರೀಚಾರ್ಜ್‌ನಲ್ಲಿ ಆಫರ್ ವ್ಯಾಲಿಡಿಟಿಯನ್ನು ವಿಸ್ತರಣೆ ಮಾಡಿದೆ. ಈ ಹಿಂದೆ ಡೇಟಾ, ಕರೆಗಳು ಮತ್ತು ಎಸ್‌ಎಂಎಸ್ ಸೇರಿದಂತೆ ಒಂದು ವರ್ಷ ಅಥವಾ 365 ದಿನಗಳ ಸೇವೆಯನ್ನು ಈಗ ಎರಡು ತಿಂಗಳು ಅಂದರೆ 60 ದಿನಗಳ ಹೆಚ್ಚುವರಿ ಕಾಲ ವಿಸ್ತರಣೆ ಮಾಡಿದೆ.
ಟೆಲಿಕಾಂ ಸೇವಾ ಪೂರೈಕೆದಾರರು ನಿಯಮಿತವಾಗಿ ಬಳಕೆದಾರರಿಗೆ ನಿರ್ದಿಷ್ಟ ರೀಚಾರ್ಜ್‌ಗಳಲ್ಲಿ ಹೆಚ್ಚುವರಿ ದಿನಗಳನ್ನು ಪಡೆಯುವ ಆಫರ್ ಅನ್ನು ನೀಡಿದೆ. ಈ ಕೊಡುಗೆಯು ಜೂನ್ ಅಂತ್ಯದವರೆಗೆ ಇರಲಿದೆ. ಜೂನ್ ಅಂತ್ಯದವರೆಗೆ ನೀವು ರೀಚಾರ್ಜ್ ಮಾಡಿದರೆ ನಿಗದಿತ ಸಮಯಕ್ಕಿಂತ ಅಧಿಕ ಸಮಯ ವ್ಯಾಲಿಡಿಟಿ ಪಡೆಯಬಹುದು. ಇನ್ನು ಇತ್ತೀಚೆಗೆ ಪ್ರಿಪೇಯ್ಡ್ ರೀಚಾರ್ಜ್ ಆಯ್ಕೆಯನ್ನು ಪಡೆದ ಗ್ರಾಹಕರು ಸಹ ಈ ಆಫರ್ ಪ್ರಯೋಜನ ಪಡೆದುಕೊಳ್ಳಬಹುದು.
ಬಿಎಸ್‌ಎನ್‌ಎಲ್ ವೆಬ್‌ಸೈಟ್ ಪ್ರಕಾರ, ರೂ. 2,399 ರೀಚಾರ್ಜ್ ಪ್ಲಾನ್, ಈ ಹಿಂದೆ 365 ದಿನಗಳ ವ್ಯಾಲಿಡಿಟಿಯನ್ನು ನೀಡಿತ್ತು. ಆದರೆ ಈಗ ಬಳಕೆದಾರರು ಡೇಟಾ, ಸಂದೇಶ ಮತ್ತು ಕರೆ ಸೇರಿ ರೂ. 2,399 ರೀಚಾರ್ಜ್ ಪ್ಲಾನ್‌ನಲ್ಲಿ 425 ದಿನದ ವ್ಯಾಲಿಡಿಟಿ ಪಡೆಯಬಹುದು. ಏಪ್ರಿಲ್ 1 ಮತ್ತು ಜೂನ್ 29 ರ ನಡುವೆ ವಾರ್ಷಿಕ ಯೋಜನೆಯೊಂದಿಗೆ ರೀಚಾರ್ಜ್ ಮಾಡಿದ ಗ್ರಾಹಕರು ಈ ಆಫರ್ ಪಡೆಯಬಹುದು.

ರೀಚಾರ್ಜ್‌ನಲ್ಲಿ ಏನೆಲ್ಲಾ ಪ್ರಯೋಜನ ಇದೆ?
ರೀಚಾರ್ಜ್ ಯೋಜನೆಯ ಭಾಗವಾಗಿ, ಗ್ರಾಹಕರು ಮುಂಬೈ ಮತ್ತು ದೆಹಲಿಯಲ್ಲಿ ಎಂಟಿಎನ್‌ಎಲ್ ನೆಟ್‌ವರ್ಕ್ ಸೇರಿದಂತೆ ಮನೆ, ಸ್ಥಳೀಯ ಸೇವಾ ಪ್ರದೇಶ ಮತ್ತು ರಾಷ್ಟ್ರೀಯ ರೋಮಿಂಗ್‌ನಲ್ಲಿ ಅನಿಯಮಿತ ಸ್ಥಳೀಯ ಮತ್ತು ಎಸ್‌ಡಿಟಿ ಕರೆಯನ್ನು ಮಾಡಬಹುದು. ಈ ರೀಚಾರ್ಜ್‌ನಲ್ಲಿ ದಿನಕ್ಕೆ ಎರಡು ಜಿಬಿ ಡೇಟಾ ಲಭ್ಯವಿರಲಿದೆ. ಎರಡು ಜಿಬಿ ಮುಗಿದ ಬಳಿಕ ಡೇಟಾ ವೇಗ ಅದರ ನಂತರ ವೇಗವು 40Kbps ಗೆ ಇಳಿಯುತ್ತದೆ. ಬಳಕೆದಾರರು ದಿನಕ್ಕೆ 100 ಎಸ್‌ಎಂಎಸ್ ಮಾಡಬಹುದಾಗಿದೆ. ಹಾಗೆಯೇ ಹೆಚ್ಚುವರಿ 60 ದಿನಗಳ ವ್ಯಾಲಿಡಿಟಿ ಪಡೆಯಬಹುದಾಗಿದೆ.
ಕರೆ ಮತ್ತು ಡೇಟಾ ಪ್ರಯೋಜನಗಳ ಜೊತೆಗೆ, ರೂ. 2,399 ಬಿಎಸ್‌ಎನ್‌ಎಲ್ ರೀಚಾರ್ಜ್‌ನಲ್ಲಿ 30 ದಿನಗಳವರೆಗೆ ಅನಿಯಮಿತ ವೈಯಕ್ತಿಕ ರಿಂಗ್ ಬ್ಯಾಕ್ ಟೋನ್‌ಅನ್ನು ಬದಲಾವಣೆ ಮಾಡಿಕೊಳ್ಳುವ ಆಯ್ಕೆ ಇದೆ. ಜೊತೆಗೆ 30 ದಿನಗಳವರೆಗೆ Eros Now ಸಬ್‌ಸ್ಕ್ರೀಪ್ಶನ್ ಇದೆ.
ಬಿಎಸ್‌ಎನ್‌ಎಲ್ ಇನ್ನೂ ದೇಶದಲ್ಲಿ ತನ್ನ 4G ನೆಟ್ವರ್ಕ್ ಅನ್ನು ಹೊರತರುತ್ತಿದೆ. ಈ ಪ್ರಕ್ರಿಯೆಯು 2022 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಆಗ ಟೆಲ್ಕೊ ಬಳಕೆದಾರರ ಅನುಭವವನ್ನು 4G ಗೆ ಅಪ್‌ಗ್ರೇಡ್ ಮಾಡುತ್ತದೆ. ಈ ನಡುವೆ ಈ ವರ್ಷದ ಆಗಸ್ಟ್-ಸೆಪ್ಟೆಂಬರ್ ವೇಳೆಗೆ ದೇಶದಲ್ಲಿ ಇತರ ಟೆಲಿಕಾಂ ಪೂರೈಕೆದಾರರು 5G ಸೇವೆ ಆರಂಭಕ್ಕೆ ಮುಂದಾಗುವ ಸಾಧ್ಯತೆ ಇದೆ.


Click it and Unblock the Notifications