For Quick Alerts
ALLOW NOTIFICATIONS  
For Daily Alerts

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ DA ಹೆಚ್ಚಳಕ್ಕೆ ಓಕೆ ಎಂದ ಮೋದಿ ಸರ್ಕಾರ

|

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಎಲ್ಲಾ ಕೇಂದ್ರ ಉದ್ಯೋಗಿಗಳಿಗೆ 4 ಪರ್ಸೆಂಟ್ ಡಿಎ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಕೇಂದ್ರ ಉದ್ಯೋಗಿಗಳಿಗೆ ಸಂಬಳ ಏರಿಕೆ ಘೋಷನೆಯಾಗದಿದ್ರೂ ಡಿಎ ಹೆಚ್ಚಳಗೊಂಡಿದೆ. ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

ದೇಶದಲ್ಲಿನ ಹಣದುಬ್ಬರ ಏರಿಕೆ ಆಧಾರದ ಮೇಲೆ ಹೆಚ್ಚಳ

ದೇಶದಲ್ಲಿನ ಹಣದುಬ್ಬರ ಏರಿಕೆ ಆಧಾರದ ಮೇಲೆ ಹೆಚ್ಚಳ

ಹಣದುಬ್ಬರದ ಪರಿಣಾಮವನ್ನು ತಡೆದುಕೊಳ್ಳುವ ಸಲುವಾಗಿ ವೇತನದ ಜತೆಗೆ ಪಾವತಿ ಮಾಡುವಂಥ ಒಂದು ಭಾಗ ತುಟ್ಟಿ ಭತ್ಯೆ. ಈ ಏರಿಕೆಯ ಅನುಕೂಲವನ್ನು 48.41 ಲಕ್ಷದಷ್ಟಿರುವ ಕೇಂದ್ರ ಸರಕಾರಿ ನೌಕರರು ಹಾಗೂ 62.03 ಲಕ್ಷದಷ್ಟಿರುವ ಪಿಂಚಣಿದಾರರು ಪಡೆಯಲಿದ್ದಾರೆ.

ಚಿಲ್ಲರೆ ಹಣದುಬ್ಬರವು ಈ ವರ್ಷದ ಜನವರಿಯಲ್ಲಿ 7.59 ಪರ್ಸೆಂಟ್ ಮತ್ತು 2019 ರ ಫೆಬ್ರವರಿಯಲ್ಲಿ 2.57 ರಷ್ಟಿತ್ತು. ಆದರೆ ಈ ವರ್ಷ ಫೆಬ್ರವರಿಯಲ್ಲಿ ಇದರ ಪ್ರಮಾಣವು ಸ್ವಲ್ಪ ತಗ್ಗಿದೆ.

 

ಕನಿಷ್ಟ ವೇತನ ಹೆಚ್ಚಳಕ್ಕೆ ಮನವಿ

ಕನಿಷ್ಟ ವೇತನ ಹೆಚ್ಚಳಕ್ಕೆ ಮನವಿ

ಕೇಂದ್ರದ ಕಾರ್ಮಿಕ ಸಚಿವಾಲಯದ ಆಂತರಿಕ ಸಮಿತಿಯು ಜನವರಿಯಲ್ಲಿ ಬಿಡುಗಡೆ ಮಾಡಿದ ವರದಿಯಂತೆ, ಜುಲೈ 2018ರ ಪ್ರಕಾರ ಕನಿಷ್ಠ ವೇತನ 375 ರೂ., ಕನಿಷ್ಠ ಮಾಸಿಕ ವೇತನ 9,750 ರೂ ಹಾಗೂ ನಗರ ಮೂಲದ ಕಾರ್ಮಿಕರಿಗೆ 1,430 ರೂ. ವಸತಿ ಭತ್ಯೆಯನ್ನು ನೀಡಬೇಕೆಂದು ಸೂಚಿಸಲಾಗಿದೆ. ಕನಿಷ್ಟ ವೇತನವನ್ನು 18,000 ದಿಂದ 26,000 ರೂಪಾಯಿಗೆ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ.

ಹೆಚ್ಚಿದ ನೌಕರರ ಬೇಡಿಕೆ

ಹೆಚ್ಚಿದ ನೌಕರರ ಬೇಡಿಕೆ

ಸರ್ಕಾರಿ ನೌಕರರ ಬೇಡಿಕೆಗಳು ಇನ್ನು ಕಡಿಮೆಯಾಗಿಲ್ಲ. ಪ್ರಮುಖ ಬೇಡಿಕೆಗಳು ಈಡೇರಿಲ್ಲ. ಬೇಡಿಕೆಗೆ ಅನುಸಾರವಾಗಿ ಮೂಲ ವೇತನವನ್ನು ಏರಿಕೆ ಮಾಡುವುದು ಹಾಗೂ ಫಿಟ್ಮೆಂಟ್ ಫಾರ್ಮುಲಾ ಅವರನ್ನು ಮೂಲವೇತನದ ಮೂರು ಪಟ್ಟು ಏರಿಕೆ ಮಾಡುವಂತೆ ಬೇಡಿಕೆ ಇದ್ದೇ ಇದೆ. ಕನಿಷ್ಟ ವೇತನವನ್ನು 18,000 ದಿಂದ 26,000 ರೂಪಾಯಿಗೆ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಪ್ರತಿಭಟನೆ ಕೂಡಾ ನಡೆಸಿದ್ದರು

ತುಟ್ಟಿಭತ್ಯೆ ಹೆಚ್ಚಳದ ಇತಿಹಾಸ

ತುಟ್ಟಿಭತ್ಯೆ ಹೆಚ್ಚಳದ ಇತಿಹಾಸ

2014ರಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಶೇಕಡಾ 14ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಸರ್ಕಾರಿ ನೌಕರರು ಇದಕ್ಕೆ ತೃಪ್ತಿ ವ್ಯಕ್ತಪಡಿಸಿರಲಿಲ್ಲ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ಮಾಡಬೇಕೆಂಬ ಬೇಡಿಕೆಯಿಟ್ಟಿದ್ದರು. ತುಟ್ಟಿಭತ್ಯೆ ಹೆಚ್ಚಳವು ಜನವರಿ 01, 2018ರಿಂದ ಜಾರಿಗೆ ಬರಬೇಕಿದ್ದು, 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 61 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ಲಾಭ ತರಲಿದೆ. ಇದರ ಜತೆಗೆ ಈಗ ನಿವೃತ್ತಿ ವಯಸ್ಸು 62ಕ್ಕೇರಿಸಿದರೆ 1.1 ಕೋಟಿ ಮಂದಿಗೆ ಲಾಭವಾಗಲಿದೆ. ಈಗ ತುಟ್ಟಿ ದರ (ಡಿಆರ್) ಈಗ ಶೇ 16ರಷ್ಟಾಗಿದೆ.

English summary

Cabinet Approves 4 Percent In DA For Central Govt Employees

The cabinet committee on economic affaires has approved a 4 percent hike in DA for central govt employees
Story first published: Friday, March 13, 2020, 17:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X