ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಹಲವಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಶೈಕ್ಷಣಿಕ ಸಾಲ ಅಥವಾ ಎಜ್ಯುಕೇಷನಲ್ ಲೋನ್ ಮೊರೆ ಹೋಗುತ್ತಾರೆ. ಆದರೆ, ಈ ರೀತಿ ಸಾಲ ಪಡೆದು ಉನ್ನತ ಶಿಕ್ಷಣ ಮಾಡಬೇಕಾದರೆ ವಿದ್ಯಾರ್ಥಿಗಳು ತಮ್ಮ ಬೋಧನಾ ಶುಲ್ಕ, ಜೀವನದ ದೈನಂದಿನ ಖರ್ಚು-ವೆಚ್ಚ ಹಾಗೂ ಅದಕ್ಕೆ ಪೂರಕವಾಗುವ ಇತರೆ ವೆಚ್ಚಗಳನ್ನು ನಿಭಾಯಿಸುವುದಕ್ಕೆ ಆರ್ಥಿಕವಾದ ಸವಾಲು ಎದುರಿಸುತ್ತಿರುತ್ತಾರೆ.
ಭಾರತದಂಥಹ ದೇಶದಲ್ಲಿ ಶೈಕ್ಷಣಿಕ ವೆಚ್ಚಗಳು ಏರಿಕೆಯಾಗುತ್ತಿರಬೇಕಾದರೆ, ಶೈಕ್ಷಣಿಕವಾಗಿ ಪಡೆಯುವ ಸಾಲವು ವಿದ್ಯಾರ್ಥಿಗಳಿಗೆ ತಮ್ಮ ಕನಸನ್ನು ನಸುಗೊಳಿಸುವುದಕ್ಕೆ ಆರ್ಥಿಕವಾಗಿ ಬಹುಮುಖ್ಯ ಸಂಪನ್ಮೂಲವಾಗಿರುತ್ತದೆ. ಹೀಗಿರುವಾಗ, ಶೈಕ್ಷಣಿಕ ಸಾಲವನ್ನು ಪಡೆಯಬೇಕಾದರೆ, ವಿದ್ಯಾರ್ಥಿಗಳು ಈಗಾಗಲೇ ಪಾವತಿಸಿರುವ ಶುಲ್ಕಗಳನ್ನು ಕವರ್ ಮಾಡಬಹುದೇ ಎನ್ನುವ ಸಾಮಾನ್ಯ ಪ್ರಶ್ನೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂಥಹ ಸಂಶಯಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನು ಇಲ್ಲಿ ಪರಿಶೀಲಿಸೋಣ.

ಶೈಕ್ಷಣಿಕ ಸಾಲದ ಬಗ್ಗೆ ತಿಳಿದುಕೊಳ್ಳುವುದು
ಶೈಕ್ಷಣಿಕ ಸಾಲವು ಒಂದು ಆರ್ಥಿಕ ವ್ಯವಸ್ಥೆಯಾಗಿದ್ದು, ಉನ್ನತ ಶಿಕ್ಷಣ ಪಡೆಯಲು ಬಯಸುವವರು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರೆ ಅಂಥವರಿಗೆ ಹಣಕಾಸಿನ ಬೆಂಬಲವನ್ನು ಒದಗಿಸುತ್ತದೆ. ಈ ಸಾಲವು ಸಾಮಾನ್ಯವಾಗಿ ಬೋಧನಾ ಶುಲ್ಕ, ಟ್ಯೂಷನ್ ಶುಲ್ಕ, ವಸತಿ ಖರ್ಚುಗಳು, ಶೈಕ್ಷಣಿಕ ಪರಿಕರಗಳ ಖರ್ಚು ಹಾಗೂ ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿದ್ದರೆ ಪ್ರಯಾಣದ ವೆಚ್ಚವನ್ನು ಕೂಡ ಭರಿಸುತ್ತದೆ.
ಶೈಕ್ಷಣಿಕ ಸಾಲವನ್ನು ಬ್ಯಾಂಕ್‌ಗಳು ಹಾಗೂ ಬ್ಯಾಂಕಿಂಗ್ ಹೊರತಾದ ಹಣಕಾಸು ಕಂಪನಿಗಳು(ಎನ್‌ಬಿಎಫ್‌ಸಿ) ಸೇರಿದಂತೆ ಹಲವಾರು ಹಣಕಾಸು ಸಂಸ್ಥೆಗಳು ಒದಗಿಸುತ್ತಿವೆ. ಇದಕ್ಕೆ ಬೇರೆ ಬೇರೆ ರೀತಿಯ ಷರತ್ತುಗಳು ಹಾಗೂ ಬಡ್ಡಿ ದರಗಳನ್ನು ನಿಗದಿಪಡಿಸಲಾಗಿದೆ.
ಶುಲ್ಕವನ್ನು ಈಗಾಗಲೇ ಪಾವತಿಸಿದ್ದರೆ ಅದನ್ನು ಕವರ್ ಮಾಡುವುದು ಹೇಗೆ?
ಭಾರತದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ನೀಡುವ ಹಣಕಾಸು ಸಾಲ ಸೌಲಭ್ಯಗಳನ್ನು ಆಯಾ ಪ್ರದೇಶ ಹಾಗೂ ಅಲ್ಲಿನ ನೀತಿ-ನಿಯಮಗಳಿಗೆ ಹೊಂದಿಕೊಂಡಂತೆ ಬ್ಯಾಂಕ್‌ಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳು ಪರಿಚಯಿಸಿರುತ್ತವೆ. ಆದರೆ ಶೈಕ್ಷಣಿಕ ಸಾಲವು ಪ್ರಮುಖವಾಗಿ ವಿದ್ಯಾರ್ಥಿಗಳ ಭವಿಷ್ಯದ ಖರ್ಚುಗಳು, ಈಗಾಗಲೇ ಪಾವತಿಸಿರುವ ಶುಲ್ಕವನ್ನು ಮರುಪಾವತಿ, ಅದರಲ್ಲಿಯೂ ಮೊದಲ ಸೆಮಿಸ್ಟರ್ ಮೊತ್ತವನ್ನು ಕವರ್ ಮಾಡುತ್ತದೆ.
ಶೈಕ್ಷಣಿಕ ಸಾಲವನ್ನು ಪಡೆಯಬಯಸುವವರು ಸಾಲದ ಪರಿಣತಿ ಹೊಂದಿರುವವರು, ಸಾಲಕ್ಕೆ ಸಂಬಂದಿಸಿದ ನಿಯಮಾವಳಿಗಳು ಅಥವಾ ಈಗಾಗಲೇ ಪಾವತಿಸಿರುವ ಶುಲ್ಕ ಕವರ್ ಆಗುತ್ತದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಮುಂಚಿತವಾಗಿಯೇ ತಿಳಿದುಕೊಂಡಿರುವುದು ಉತ್ತಮ. ಇನ್ನು ಈ ರೀತಿಯ ಸಾಲಗಳಿಗೆ ಸಂಬಂಧಿಸಿರುವ ನಿಬಂಧನೆಗಳು ಕೂಡ ಕಾಲಕಾಲಕ್ಕೆ ಬದಲಾವಣೆ ಕೂಡ ಆಗುತ್ತಿರುತ್ತದೆ.
ಶೈಕ್ಷಣಿಕ ಸಾಲಕ್ಕೆ ಸಂಬಂಧಿಸಿದಂತೆ ಹಣಕಾಸು ಸಂಸ್ಥೆಗಳು ಜಾರಿಗಳಿಸಿರುವ ಪ್ರಸಕ್ತ ಬದಲಾವಣೆಗಳ ಬಗ್ಗೆ ತಿಳಿದುಕೊಂಡಿರುವುದು ಬಹಳ ಮುಖ್ಯ. ಶೈಕ್ಷಣಿಕ ಸಾಲವು ಭಾರತೀಯ ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಆರ್ಥಿಕ ಸಂಪನ್ಮೂಲವಾಗಿದ್ದು, ಶೈಕ್ಷಣಿಕವಾಗಿ ಅವರು ಕಂಡಿರುವ ಕನಸನ್ನು ಈಡೇರಿಸುವುದಕ್ಕೆ ನೆರವಾಗುತ್ತದೆ. ಆ ಮೂಲಕ ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸುತ್ತದೆ.
ಗಮನಿಸಬೇಕಾದ ಪ್ರಮುಖ ಅಂಶಗಳು
ಶೈಕ್ಷಣಿಕ ಸಾಲಕ್ಕೆ ಮಂಜೂರಾತಿ ದೊರೆಯುವುದಕ್ಕಿಂತ ಮೊದಲೇ ವಿದ್ಯಾರ್ಥಿಗಳು ಪ್ರವೇಶವನ್ನು ಪಡೆದುಕೊಂಡಿರಬೇಕು. ಅಂದರೆ, ವಿದ್ಯಾರ್ಥಿಗಳು ತಮ್ಮ ಶುಲ್ಕವನ್ನು ಪಾವತಿಸುವ ಮೊದಲು ಸಾಲಗಳಿಗೆ ಅರ್ಜಿ ಸಲ್ಲಿಸಬೇಕು. ಬೋಧನಾ ಶುಲ್ಕ ಹಾಗೂ ಇತರೆ ವೆಚ್ಚಗಳನ್ನು ಭರಿಸುವುದಕ್ಕೆ ಶೈಕ್ಷಣಿಕ ಸಾಲವನ್ನು ನೇರವಾಗಿ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುತ್ತದೆ.
ಸಾಮಾನ್ಯವಾಗಿ ಶೈಕ್ಷಣಿಕ ಸಾಲಗಳು ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣಕ್ಕೆ ಪೂರವಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಆದರೆ, ಈಗಾಗಲೇ ಪಾವತಿಸಿದ ಶುಲ್ಕವನ್ನು ಕವರ್ ಮಾಡುವುದು ಸೇರಿದಂತೆ ಇದರಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಕೆಲವೊಂದು ವಿನಾಯಿತಿಗಳಿರುತ್ತವೆ ಎನ್ನುವುದು ಗಮನಾರ್ಹ.


Click it and Unblock the Notifications