ದೇಶದ ನಾಲ್ಕನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಕೆನರಾ ಬ್ಯಾಂಕ್ ಸುಮಾರು 100 ಕೋಟಿ ರೂಪಾಯಿ ಮತ್ತು ಅದಕ್ಕಿಂತ ಅಧಿಕ ಸಾಲವನ್ನು ಪಡೆದು ಅದನ್ನು ಮರುಪಾವತಿ ಮಾಡದವರಿಗೆ ಸಾಲ ಮನ್ನಾ ಮಾಡುವುದನ್ನು ಮುಂದುವರಿಸಿದೆ. ಕಳೆದ 11 ವರ್ಷದಲ್ಲಿ 1.29 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ. ಆದರೆ ಹೆಸರನ್ನು ಬಹಿರಂಗ ಮಾಡಲು ಮಾತ್ರ ಬ್ಯಾಂಕ್ ನಿರಾಕರಿಸಿದೆ.
ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಈ ಸಾಲ ಮರುಪಾವತಿ ಮಾಡದವರ ಹೆಸರನ್ನು ಬಹಿರಂಗಪಡಿಸಲು ಬ್ಯಾಂಕ್ ನಿರಾಕರಿಸಿದ್ದು, ಮತ್ತೆ ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1)(ಜೆ) ಅನ್ನು ತಪ್ಪಾಗಿ ಬಳಕೆ ಮಾಡುತ್ತಿದೆ. ಈ ಹಿಂದೆಯೂ ಬ್ಯಾಂಕ್ ಸಾಲ ಮರುಪಾವತಿ ಮಾಡದೆ, ಸಾಲ ಮನ್ನಾಕ್ಕೆ ಒಳಪಟ್ಟವರ ಹೆಸರನ್ನು ಬಹಿರಂಗಪಡಿಸಿಲ್ಲ.
ಪುಣೆ ಮೂಲದ ಆರ್‌ಟಿಐ ಕಾರ್ಯಕರ್ತ ವಿವೇಕ್ ವೆಲಂಕರ್ ಆರ್‌ಟಿಐ ಅಡಿಯಲ್ಲಿ ಕೆನರಾ ಬ್ಯಾಂಕ್‌ನಲ್ಲಿ ಸಾಲ ಮರುಪಾವತಿ ಬಾಕಿ ವಿವರವನ್ನು ಕೇಳಿದ್ದಾರೆ. ಈ ವೇಳೆ ಕೆನರಾ ಬ್ಯಾಂಕ್ ಸುಮಾರು 11 ವರ್ಷಗಳ ಅವಧಿಯಲ್ಲಿ FY11-12 ರಿಂದ FY21-22 ರವರೆಗಿನ ಅವಧಿಯಲ್ಲಿ, ಒಟ್ಟು 1,29,088 ಕೋಟಿ ರೂಪಾಯಿಯನ್ನು ಮನ್ನಾ ಮಾಡಿದೆ ಎಂದು ತಿಳಿದು ಬಂದಿದೆ.
ಆರ್‌ಟಿಐ ಕಾರ್ಯಕರ್ತನ ಪ್ರಶ್ನೆಯೇನು?
ಪುಣೆ ಮೂಲದ ಆರ್‌ಟಿಐ ಕಾರ್ಯಕರ್ತ ವಿವೇಕ್ ವೆಲಂಕರ್ "2013-14 ರಿಂದ 2021-22 ರವರೆಗೆ ಪ್ರತಿ ಹಣಕಾಸು ವರ್ಷದಲ್ಲಿ ರೂಪಾಯಿ 100 ಕೋಟಿಗಿಂತ ಹೆಚ್ಚಿನ ಸಾಲವನ್ನು ಪಡೆದವರ ಸಾಲ ಮನ್ನಾದ ಒಟ್ಟು ಮೊತ್ತದ ವಿವರ" ಕೇಳಿದ್ದಾರೆ. ಈ ದೊಡ್ಡ ಡಿಪಾಲ್ಟರ್‌ಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ನಿರಾಕರಿಸಿರುವ ಕೆನರಾ ಬ್ಯಾಂಕ್ ಕ್ಷುಲ್ಲಕ ಕಾರಣವನ್ನು ನೀಡಿದೆ. ಈ ಬಗ್ಗೆ ಯಾವುದೇ ಮಾಹಿತಿಯನ್ನು ಹೊಂದಿಲ್ಲ ಎಂದು ಹೇಳಿದೆ. ಇನ್ನು ಕೆನರಾ ಬ್ಯಾಂಕ್‌ನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (ಸಿಪಿಐಒ) ಒಂದು ಕೋಟಿ ಮತ್ತು ಅದಕ್ಕಿಂತ ಕಡಿಮೆ ಮೊತ್ತದ ಸಾಲಗಾರರಿಂದ ವಸೂಲಿ ಮಾಡಿದ ಮೊತ್ತದ ಮಾಹಿತಿಯನ್ನು ನೀಡುವುದನ್ನು ನಿರಾಕರಿಸಿದ್ದು ಅದಕ್ಕೂ ಇದೇ ಕಾರಣ ಹೇಳಿದ್ದಾರೆ.
1,30,812.01 ಕೋಟಿ ರೂಪಾಯಿ ಸಾಲ ಬಾಕಿ
ಆರ್‌ಟಿಐ ಕಾಯ್ದೆಯ ಪ್ರಕಾರ ಸಿಪಿಐಒ ಈ ರೀತಿ ಕಾರಣವನ್ನು ನೀಡುವಂತಿಲ್ಲ. ಸೆಕ್ಷನ್ 8 ರ 10 ಉಪ-ವಿಭಾಗಗಳ ಅಡಿಯಲ್ಲಿ ಉಲ್ಲೇಖ ಮಾಡಲಾಗಿರುವ ನಿರ್ದಿಷ್ಟ ಕಾರಣಗಳನ್ನು ಮಾತ್ರ ನೀಡಬೇಕಾಗುತ್ತದೆ. ಖಾಸಗಿ ಹಕ್ಕನ್ನು ರಕ್ಷಿಸಲು ಸೆಕ್ಷನ್ 9 ರ ಅಡಿಯಲ್ಲಿ, ವಾಣಿಜ್ಯ ಮತ್ತು ವ್ಯಾಪಾರ ಸಂಬಂಧಿತ ವಿಚಾರ ಮೂರನೇ ವ್ಯಕ್ತಿಯಿಂದ ರಕ್ಷಿಸಲು ಸೆಕ್ಷನ್ 11 ಅನ್ನು ಬಳಕೆ ಮಾಡಲಾಗುತ್ತದೆ. ಭದ್ರತೆ ಮತ್ತು ಗುಪ್ತ ವಿಚಾರಕ್ಕೆ ಸಂಬಂಧಿಸಿ ಸೆಕ್ಷನ್ 24 ಬಳಕೆ ಮಾಡಲಾಗುತ್ತದೆ. ಇನ್ನು ವೇಲಂಕರ್ ಕೇಳಿದ ಆರ್‌ಟಿಐ ಪ್ರಶ್ನೆಗೆ ಸಿಪಿಐಒ FY11-12 ರಿಂದ FY21-22 ರವರೆಗಿನ ಮಾಹಿತಿಯನ್ನು ನೀಡಿದ್ದಾರೆ. ಇದರಿಂದಾಗಿ ಕಳೆದ 11 ವರ್ಷಗಳಿಂದ ಕೆನರಾ ಬ್ಯಾಂಕ್‌ಗೆ 1,30,812.01 ಕೋಟಿ ರೂಪಾಯಿ ಬಾಕಿ ಸಾಲಗಾರರು ಉಳಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಾಮಾನ್ಯ ಜನರ ಹೆಸರು ಬಹಿರಂಗ, ಇವರದ್ದು ಯಾಕಿಲ್ಲ?
"ಸಾಮಾನ್ಯ ಜನರು ಸಾಲ ಮರುಪಾವತಿ ಮಾಡುವುದು ಬಾಕಿಯಾಗಿದ್ದರೆ ಬ್ಯಾಂಕ್‌ಗಳು ಪತ್ರಿಕೆಗಳಲ್ಲಿ ಜಾಹೀರಾತುಗಳ ಮೂಲಕ ಸಾಲ ಪಡೆದವರ ಹೆಸರು, ವಿಳಾಸ, ವಿವರ ಎಲ್ಲವನ್ನು ಪ್ರಕಟ ಮಾಡುತ್ತದೆ. ಆದರೆ ದೊಡ್ಡ ಮೊತ್ತವನ್ನು ಸಾಲ ಪಡೆದು ಅದನ್ನು ಮರುಪಾವತಿ ಮಾಡದವರ ಹೆಸರನ್ನು ಮಾತ್ರ ಬಹಿರಂಗಪಡಿಸುವುದಿಲ್ಲ. ಇವರ ವಿಚಾರಕ್ಕೆ ಬಂದಾಗ ಗೌಪ್ಯತೆಯ ಪ್ರಶ್ನೆ ಬರುತ್ತದೆ. ಆದರೆ ಸಾಮಾನ್ಯ ಸಾಲಗಾರರ ಹೆಸರನ್ನು ಪ್ರಕಟ ಮಾಡುವಾಗ ಮಾತ್ರ ಯಾಕೆ ಗೌಪ್ಯತೆಯ ವಿಚಾರ ಬರುವುದಿಲ್ಲ," ಎಂದು ಆರ್‌ಟಿಐ ಕಾರ್ಯಕರ್ತ ವಿವೇಕ್ ವೆಲಂಕರ್ ಹೇಳಿದ್ದಾರೆ.
ಬ್ಯಾಂಕ್ ನೀಡಿದ ಕಾರಣವೇನು?
ಕೆನರಾ ಬ್ಯಾಂಕಿನ ಸಿಪಿಐಒ ತನ್ನ ಉತ್ತರದಲ್ಲಿ, "ಮಾಹಿತಿಯು ಸಾಲಗಾರರ ವೈಯಕ್ತಿಕ ಮಾಹಿತಿಯಾಗಿದೆ. ಅದರ ಬಹಿರಂಗಪಡಿಸುವಿಕೆಯು ಸಂಬಂಧಪಟ್ಟವರ ಗೌಪ್ಯತೆಗೆ ಅನಗತ್ಯವಾಗಿ ಆಕ್ರಮಣವನ್ನು ಉಂಟುಮಾಡುತ್ತದೆ. ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1)(j) ಅಡಿಯಲ್ಲಿ ಈ ಮಾಹಿತಿ ಬಹಿರಂಗಪಡಿಸುವುದರಿಂದ ವಿನಾಯಿತಿ ನೀಡಲಾಗಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications