PPF ನಿಯಮಗಳಲ್ಲಿ ಬದಲಾವಣೆ ತಂದ ಸರ್ಕಾರ: ಹೊಸ ನಿಯಮ ಏನು ಗೊತ್ತಾ?

ಕೇಂದ್ರ ಸರ್ಕಾರ ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್) ನಿಯಮಗಳಲ್ಲಿ ಬದಲಾವಣೆ ತಂದಿದೆ. ಸಾರ್ವಜನಿಕ ಭವಿಷ್ಯ ನಿಧಿ 2019ರ ನಿಯಮಗಳು ಈಗಿರುವ ನಿಯಮಗಳನ್ನು ಬದಲಿಸಲಿವೆ. ಈ ಮೂಲಕ ಹಲವು ವರ್ಷಗಳಿಂದ ಇದ್ದ ನಿಯಮಗಳು ಈಗಿನಿಂದಲೇ ಜಾರಿಗೆ ಬರುವಂತೆ ಬದಲಾವಣೆ ಆಗಿವೆ.

ಸರ್ಕಾರಿ ಯೋಜನೆಯಾದ ಪಿಪಿಎಫ್‌ನಲ್ಲಿ ಹಣ ಹೂಡಲು ಜನರು ಹೆಚ್ಚು ಆಸಕ್ತಿ ತೋರುತ್ತಾರೆ. ಅದರಲ್ಲೂ 1.50 ಲಕ್ಷ ರುಪಾಯಿವರೆಗೂ ತೆರಿಗೆ ಉಳಿಸಲು ಇದು ಅತ್ಯುತ್ತಮ ಆಯ್ಕೆಯಾಗಿದೆ. ಹಾಗಿದ್ದರೆ ಈಗಿರುವ ಪಿಪಿಎಫ್ ನಿಯಮಗಳಲ್ಲಿ ಏನೆಲ್ಲಾ ಬದಲಾವಣೆ ಬಂದಿದೆ ಎಂಬುದರ ವಿವರ ಈ ಕೆಳಗಿದೆ ಓದಿ

ಎಷ್ಟು ಖಾತೆಯನ್ನು ತೆರೆಯಬಹುದು?

ಎಷ್ಟು ಖಾತೆಯನ್ನು ತೆರೆಯಬಹುದು?

ಸದ್ಯ ಒಬ್ಬ ವ್ಯಕ್ತಿಯು ಫಾರ್ಮ್ -1ರಲ್ಲಿ ಅರ್ಜಿ ಸಲ್ಲಿಸಿ ಒಂದು ಪಿಪಿಎಫ್ ಅಕೌಂಟ್ ತೆರೆಯಬಹುದು. ಇದರ ಜೊತೆಗೆ ಒಬ್ಬ ವ್ಯಕ್ತಿಯು ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲೂ ಪಿಪಿಎಫ್ ಅಕೌಂಟ್ ತೆರೆಯಲು ಅವಕಾಶ ನೀಡಲಿದೆ. ಮತ್ತು ಯಾವುದೇ ಪೋಷಕರಿಂದ ಬುದ್ದಿಮಾಂದ್ಯ ಮಗುವಿನ ಹೆಸರಿನಲ್ಲೂ ಖಾತೆಯನ್ನು ತೆರಯುವ ಅವಕಾಶ ಸಿಗಲಿದೆ.

ಪಿಪಿಎಫ್ ಠೇವಣಿ ಮಿತಿ

ಪಿಪಿಎಫ್ ಠೇವಣಿ ಮಿತಿ

ಯಾವುದೇ ವ್ಯಕ್ತಿಯು ಹಣಕಾಸು ವರ್ಷದಲ್ಲಿ 500 ರುಪಾಯಿಗಿಂತ ಕಡಿಮೆಯಿಲ್ಲದೆ ಮತ್ತು 1.5 ಲಕ್ಷ ರುಪಾಯಿಗೆ ಹೆಚ್ಚಿಲ್ಲದೆ ಠೇವಣಿಯನ್ನು ಹೂಡಬಹುದು. ಗರಿಷ್ಠ ಠೇವಣಿ ಮಿತಿಯು ಚಂದಾದಾರನ ಸ್ವಂತ ಖಾತೆ ಮತ್ತು ಅಪ್ರಾಪ್ತ ವಯಸ್ಸಿನ ಮಗುವಿನ ಹೆಸರಿನಲ್ಲಿ ತೆರೆಯಲಾದ ಖಾತೆಯಲ್ಲಿ ಮಾಡಿದ ಠೇವಣಿಗಳನ್ನು ಒಳಗೊಂಡಿರುತ್ತದೆ. ಅಂದರೆ 2 ಖಾತೆಯಲ್ಲಿನ ಒಟ್ಟಾರೆ ಹಣ 1.5 ಲಕ್ಷ ರುಪಾಯಿ ಮೀರುವಂತಿಲ್ಲ.

ಠೇವಣಿ ಹೂಡಿಕೆ ನಿಲ್ಲಿಸಲಾದ ಪಿಪಿಎಫ್ ಅಕೌಂಟ್

ಠೇವಣಿ ಹೂಡಿಕೆ ನಿಲ್ಲಿಸಲಾದ ಪಿಪಿಎಫ್ ಅಕೌಂಟ್

ಯಾವುದೇ ಪಿಪಿಎಫ್ ಅಕೌಂಟ್ ಹೊಂದಿರುವವರು ವರ್ಷದಲ್ಲಿ ಕನಿಷ್ಠ 500 ರುಪಾಯಿ ಠೇವಣಿ ಮಾಡಲೇಬೇಕು. ಆದರೆ ಮುಂದಿನ ವರ್ಷಗಳಲ್ಲಿ ಠೇವಣಿ ಮಾಡಲು ವಿಫಲವಾದರೆ ಅದನ್ನು ಸ್ಥಗಿತಗೊಂಡಿದೆ ಎಂದು ಪರಿಗಣಿಸಲಾಗುತ್ತದೆ.

ಪಿಪಿಎಫ್ ಅಕೌಂಟ್ ಪುನರುಜ್ಜೀವನ

ಪಿಪಿಎಫ್ ಅಕೌಂಟ್ ಪುನರುಜ್ಜೀವನ

ಪಿಪಿಎಫ್ ಅಕೌಂಟ್ ಮುಕ್ತಾಯಗೊಂಡ ಅವಧಿಯಲ್ಲಿ ಡೀಫಾಲ್ಟ್ (ಸ್ಥಗಿತಗೊಂಡಿರುವ) ಖಾತೆಯನ್ನು ಪುನರುಜ್ಜೀವನಗೊಳಿಸಬಹುದು. 50 ರುಪಾಯಿ ಜೊತೆಗೆ ಪ್ರತಿವರ್ಷದ ಕನಿಷ್ಠ ಠೇವಣಿ 500 ರುಪಾಯಿಗಳೊಂದಿಗೆ ಪಾವತಿಸಿ ಅಕೌಂಟ್ ಪುನರುಜ್ಜೀವನಗೊಳಿಸಬಹುದು.

ಯಾವುದೇ ಸ್ಥಗಿತಗೊಂಡ ಖಾತೆಯನ್ನು ಹೊಂದಿರುವವರು ಅದರ ಪೂರ್ಣ ಅವಧಿ ಮುಕ್ತಾಯದವರೆಗೂ ಯಾವುದೇ ಹೊಸ ಖಾತೆಯನ್ನು ತೆರೆಯುವಂತಿಲ್ಲ.

 

ಪಿಪಿಎಫ್ ಬಡ್ಡಿಯ ಲೆಕ್ಕಾಚಾರ

ಪಿಪಿಎಫ್ ಬಡ್ಡಿಯ ಲೆಕ್ಕಾಚಾರ

ಪ್ರತಿ ವರ್ಷದ ಕೊನೆಯಲ್ಲಿ ಖಾತೆಗೆ ಜಮಾ ಮಾಡಲಾಗಿರುವ ಹಣಕ್ಕೆ ಬಡ್ಡಿಯನ್ನು ನೀಡಲಾಗುವುದು. ಪ್ರಸ್ತುತ ಅನ್ವಯವಾಗಿರುವ ವಾರ್ಷಿಕ 7.9 ಪರ್ಸೆಂಟ್ ಬಡ್ಡಿ ದರವನ್ನು ವರ್ಷದ ಕೊನೆಯಲ್ಲಿ ಅಕೌಂಟ್‌ಗೆ ಹಾಕಲಾಕುವುದು

ಪಿಪಿಎಫ್ ಅಕೌಂಟ್ ಹಿಂತೆಗೆದುಕೊಳ್ಳುವುದು

ಪಿಪಿಎಫ್ ಅಕೌಂಟ್ ಹಿಂತೆಗೆದುಕೊಳ್ಳುವುದು

ಪಿಪಿಎಫ್ ಖಾತೆಯನ್ನು ಹೊಂದಿರುವವರು ಖಾತೆ ತೆರೆದು 5 ವರ್ಷಗಳ ಬಳಿಕ ಯಾವುದೇ ಸಂದರ್ಭದಲ್ಲೂ ಅಕೌಂಟ್ ಹಿಂತೆಗೆದುಕೊಳ್ಳಬಹುದು. ಫಾರ್ಮ್-2 ಅರ್ಜಿಯನ್ನು ಸಲ್ಲಿಸುವ ಮೂಲಕ ನಾಲ್ಕು ವರ್ಷ ಮುಗಿದ ಬಳಿಕವೇ 50 ಪರ್ಸೆಂಟ್‌ನಷ್ಟು ಹಣ ವಾಪಾಸ್ ಪಡೆಯಬಹುದು. ಸದ್ಯ 5 ವರ್ಷದ ಕಡಿಮೆ ಅವಧಿಯಲ್ಲಿ ಹಣ ಹಿಂತೆಗೆದುಕೊಳ್ಳುವುದು ಸಾಧ್ಯವಿಲ್ಲ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+