ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಇತ್ತೀಚೆಗೆ ಇಪಿಎಫ್ ಖಾತೆಯ ವಿವರಗಳನ್ನು ಹೇಗೆ ಅಪ್‌ಡೇಟ್ ಮಾಡುವುದು ಎಂಬುವುದರ ಬಗ್ಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮಾರ್ಗಸೂಚಿಗಳಲ್ಲಿ, ಇಪಿಎಫ್‌ಒ ಹೆಸರು ಮತ್ತು ಜನ್ಮ ದಿನಾಂಕದಂತಹ ಇಪಿಎಫ್ ಸದಸ್ಯರ ವಿವರಗಳನ್ನು ಸರಿಪಡಿಸಲು ಹೊಸ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಹಂಚಿಕೊಂಡಿದೆ.
ನೂತನ ಮಾರ್ಗಸೂಚಿ ಪ್ರಕಾರ, ಇಪಿಎಫ್ ಸದಸ್ಯರ ವಿವರಗಳನ್ನು ಸುಲಭವಾಗಿ ನವೀಕರಿಸಬಹುದು. ಇದರಿಂದಾಗಿ ಕ್ಲೈಮ್ ಮಾಡುವ ಆಗುವ ತೊಂದರೆಗಳನ್ನು ನಿರಾಕರಣೆಗಳನ್ನು ಕಡಿಮೆ ಮಾಡಬಹುದಾಗಿದೆ. ಹೆಚ್ಚಿನ ವಂಚನೆ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಹೊಸ ಪ್ರಕ್ರಿಯೆಯ ಸಹಾಯದಿಂದ ಇದನ್ನು ತಪ್ಪಿಸಬಹುದು.

ಹೊಸ ಮಾರ್ಗಸೂಚಿಗಳು ಈಗ ಇಪಿಎಫ್ ಸದಸ್ಯರಿಗೆ 11 ಪ್ಯಾರಾಮೀಟರ್‌ಗಳನ್ನು ಅಪ್‌ಡೇಟ್ ಮಾಡಲು ಅವಕಾಶ ನೀಡುತ್ತದೆ. ನೀವು 1. ಹೆಸರು 2. ಲಿಂಗ 3. ಹುಟ್ಟಿದ ದಿನಾಂಕ 4. ತಂದೆಯ ಹೆಸರು 5. ಸಂಬಂಧ 6. ವೈವಾಹಿಕ ಸ್ಥಿತಿ 7. ಸೇರುವ ದಿನಾಂಕ 8. ತೊರೆಯಲು ಕಾರಣ 9. ತೊರೆದ ದಿನಾಂಕ 10. ರಾಷ್ಟ್ರೀಯತೆ 11. ಆಧಾರ್ ಸಂಖ್ಯೆಯನ್ನು ಪರಿಷ್ಕರಣೆ ಮಾಡಲು ಅವಕಾಶ ನೀಡುತ್ತದೆ.
ಇಪಿಎಫ್ ಖಾತೆಗೆ ಯಾವ ಬದಲಾವಣೆಗಳನ್ನು ಮಾಡಬಹುದು?
11 ಅಪ್‌ಡೇಟ್‌ಗಳನ್ನು ಸಣ್ಣ ಮತ್ತು ಪ್ರಮುಖ ಬದಲಾವಣೆಗಳಾಗಿ ವರ್ಗೀಕರಿಸಲಾಗಿದೆ. ಆದರೂ ಇಪಿಎಫ್ ಖಾತೆದಾರರ ಪ್ರೊಫೈಲ್‌ನಲ್ಲಿ ಸಣ್ಣ ಅಥವಾ ಪ್ರಮುಖ ಬದಲಾವಣೆಯಾಗಿದ್ದರೂ ಸಾಕ್ಷಿಯ ಅಗತ್ಯವಿದೆ. ಇಪಿಎಫ್ ಖಾತೆಯಲ್ಲಿನ ಸಣ್ಣ ಬದಲಾವಣೆಗಳಿಗೆ, ನಿಗದಿತ ಪಟ್ಟಿಯಿಂದ ಕನಿಷ್ಠ ಎರಡು ದಾಖಲೆಗಳನ್ನು ಸಲ್ಲಿಸಬೇಕು. ಪ್ರಮುಖ ಬದಲಾವಣೆಗಳು ಇದ್ದರೆ, ಮೂರು ದಾಖಲೆಗಳು ಬೇಕಾಗುತ್ತದೆ.
ಇಪಿಎಫ್ ಖಾತೆಯಲ್ಲಿನ ಬದಲಾವಣೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಇತ್ತೀಚಿನ ಸುತ್ತೋಲೆಯಲ್ಲಿ ಇಪಿಎಫ್‌ಒ ಸದಸ್ಯ ಸೇವಾ ಪೋರ್ಟಲ್ ಮೂಲಕ ಪ್ರೊಫೈಲ್ ವಿವರಗಳನ್ನು ಸರಿಪಡಿಸಲು ಅರ್ಜಿಯನ್ನು ಸಲ್ಲಿಸಲು ಇಪಿಎಫ್ ಖಾತೆದಾರರಿಗೆ ಹೇಳಿದೆ. ಇಪಿಎಫ್ ಸದಸ್ಯರು ತಮ್ಮ ಖಾತೆಗೆ ಮಾಡಿದ ಬದಲಾವಣೆಗಳನ್ನು ಉದ್ಯೋಗದಾತರು ಮೌಲ್ಯೀಕರಿಸಬೇಕಾಗುತ್ತದೆ.
ಬದಲಾವಣೆಗಳಿಗಾಗಿ ಅರ್ಜಿ ಸಲ್ಲಿಸಲು ಮಾರ್ಗದರ್ಶಿ ಪರಿಶೀಲಿಸಿ
ಹಂತ 1: ಮೊದಲು ನೀವು ಸದಸ್ಯ ಸೇವಾ ಪೋರ್ಟಲ್‌ಗೆ ಭೇಟಿ ನೀಡಬೇಕು. ನಿಮ್ಮ ಯುನಿವರ್ಸಲ್ ಖಾತೆ ಸಂಖ್ಯೆ (UAN) ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಬೇಕು.
ಹಂತ 2: ನಂತರ 'ಜಾಯಿಂಟ್ ಡಿಕ್ಲರೇಶನ್ (ಜೆಡಿ)' ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಯುಐಡಿಎಐ ಸಂಪರ್ಕಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ.
ಹಂತ 3: ಇದರ ನಂತರ, ನೀವು ಒಟಿಪಿ ಅನ್ನು ನಮೂದಿಸಬೇಕು. ಜಂಟಿ ಘೋಷಣೆಯ ನಮೂನೆಯು ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.
ಹಂತ 4: ನಂತರ, ನಿಗದಿತ ಪಟ್ಟಿಯಲ್ಲಿ ಉಲ್ಲೇಖಿಸಿದಂತೆ ನೀವು ಅಗತ್ಯವಾದ ವಿವರಗಳನ್ನು ದಾಖಲೆಗಳೊಂದಿಗೆ ಸಲ್ಲಿಸಬೇಕು.


Click it and Unblock the Notifications