ಪ್ರಸ್ತುತ ಯುಪಿಐ ಪಾವತಿ ವ್ಯವಸ್ಥೆಯನ್ನು ಬಳಕೆ ಮಾಡದವರು ಯಾರಿದ್ದಾರೆ ಹೇಳಿ?. ಎಲ್ಲಿ ಹೋದರೂ ಯುಪಿಐ ಪಾವತಿಯನ್ನು ಮಾಡಲಾಗುತ್ತದೆ. ಇದು ಅತೀ ಸರಳವಾದ ಪಾವತಿ ವಿಧಾನವಾದ ಕಾರಣ ಇದನ್ನೇ ಜನರು ಅಧಿಕವಾಗಿ ಬಳಕೆ ಮಾಡುತ್ತಾರೆ.
ಆದರೆ ಜನರು ಬಳಕೆ ಮಾಡುವುದನ್ನು ಅಧಿಕ ಮಾಡುತ್ತಿದ್ದಂತೆ ಇದರ ಮೂಲಕವೇ ನಡೆಸಲಾಗುವ ವಂಚನೆ, ಸೈಬರ್ ಕ್ರೈಮ್ ಪ್ರಕರಣಗಳು ಅಧಿಕವಾಗುತ್ತಿದೆ. ಈ ನಡುವೆ ನಾವು ಯಾರಿಗೂ ತಿಳಿಯಲು ಸಾಧ್ಯವಾಗದ ಪಾಸ್‌ವರ್ಡ್, ಪಿನ್‌ಗಳನ್ನು ಹಾಕಿಕೊಳ್ಳುವುದು ಅನಿವಾರ್ಯವಾಗಿದೆ. ಯುಪಿಐ ಪಾವತಿ ಮಾಡುವ ಸಂದರ್ಭದಲ್ಲಿ ನೀವು ನೆನಪಿಡಬೇಕಾದ ವಿಚಾರಗಳು ಇಲ್ಲಿದೆ ಮುಂದೆ ಓದಿ...

ಭದ್ರತಾ ಕ್ರಮಗಳನ್ನು ಕೈಗೊಳ್ಳಿ
ಯುಪಿಐ ಪಾವತಿ ಮಾಡುವಾಗ ನಾವು ಖಚಿತಪಡಿಸಿಕೊಳ್ಳುವುದು ಅತೀ ಮುಖ್ಯವಾಗಿದೆ. ನೀವು ನಂಬಿಕಾರ್ಹ ಮೂಲದಿಂದ ಸುರಕ್ಷಿತ ಮತ್ತು ವಿಶ್ವಾಸಾರ್ಹ ಯುಪಿಐ ಅಪ್ಲಿಕೇಷನ್ ಅನ್ನು ಬಳಸಿಕೊಳ್ಳಿ. ಬಲವಾದ ಪಾಸ್‌ವರ್ಡ್‌ಗಳು ಅಥವಾ ಪಿನ್‌ಗಳನ್ನು ಹಾಕಿಕೊಳ್ಳಿ. ಅದನ್ನು ಯಾರೊಂದಿಗೆ ಹಂಚಿಕೊಳ್ಳಬೇಡಿ.
ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿಕೊಳ್ಳಿ
ನೀವು ಯಾವುದೇ ಆಪ್ ಅನ್ನು ಬಳಸುವುದಾದರೂ ಸಮಯಕ್ಕೆ ಸರಿಯಾಗಿ ಅದನ್ನು ಅಪ್‌ಡೇಟ್ ಮಾಡಿಕೊಳ್ಳವುದು ಮುಖ್ಯ. ನೀವು ಅಪ್‌ಡೇಟ್ ಮಾಡಿಕೊಳ್ಳದಿದ್ದರೆ ಹ್ಯಾಕರ್‌ಗಳ ಕಣ್ಣಿಗೆ ನೀವು ಬಲಿಯಾಗಬಹುದು. ಭದ್ರತೆಗಾಗಿ ಯುಪಿಐ ಅಪ್ಲಿಕೇಷನ್ ಮತ್ತು ಆಪರೇಟಿಂಗ್ ಸಿಸ್ಟಮ್ ಅನ್ನು ಸಮಯಕ್ಕೆ ಸರಿಯಾಗಿ ಅಪ್‌ಡೇಟ್ ಮಾಡುವುದು ಮುಖ್ಯವಾಗಿದೆ.
ವಿವರ ಪರಿಶೀಲಿಸುವುದು ಅತೀ ಮುಖ್ಯ
ಯಾವುದೇ ಯುಪಿಐ ವಹಿವಾಟನ್ನು ನೀವು ಮಾಡುವ ಸಂದರ್ಭದಲ್ಲಿ ನೀವು ಎಲ್ಲ ಮಾಹಿತಿ ಸರಿಯಾಗಿದೆಯೇ ಎಂದು ನೋಡುವುದು, ಖಚಿತಪಡಿಸಿಕೊಳ್ಳುವುದು ಅತೀ ಮುಖ್ಯವಾಗಿದೆ. ತಪ್ಪಾದ ಯುಪಿಐ ಐಡಿಯನ್ನು ಹಾಕಿದರೆ ನೀವು ಬೇರೆ ಖಾತೆಗೆ ಹಣ ವರ್ಗಾವಣೆ ಮಾಡಿದಂತಾಗುತ್ತದೆ.
ವಂಚನೆಗಳ ಬಗ್ಗೆ ಎಚ್ಚರವಾಗಿರಿ
ಯುಪಿಐ ಸಂಬಂಧಿತ ವಂಚನೆ, ಸ್ಕ್ಯಾಮ್ ಮತ್ತು ಫಿಶೀಂಗ್ ಬಗ್ಗೆ ಎಂದಿಗೂ ನೀವು ಎಚ್ಚರವಾಗಿರಬೇಕಾಗುತ್ತದೆ. ಯಾವುದೇ ವಹಿವಾಟಿನಲ್ಲಿಯೂ ಅನುಮಾನ ಕಂಡು ಬಂದರೆ ಶೀಘ್ರವೇ ರಿಪೋರ್ಟ್ ಮಾಡಿಕೊಳ್ಳಿ.
ವಹಿವಾಟಿನ ಮಿತಿ ಮತ್ತು ಶುಲ್ಕ
ನಿಮ್ಮ ಬ್ಯಾಂಕ್ ಅಥವಾ ಯುಪಿಐ ಸೇವಾ ಪೂರೈಕೆದಾರರು ಹೊಂದಿಸಿರುವ ವಹಿವಾಟಿನ ಮಿತಿಗಳನ್ನು ಅರ್ಥಮಾಡಿಕೊಳ್ಳಿ. ವಹಿವಾಟು ಮಿತಿ ಮತ್ತು ಹೆಚ್ಚುವರಿ ವಹಿವಾಟಿಗೆ ಯಾವ ಆಪ್‌ನಲ್ಲಿ ಎಷ್ಟು ಶುಲ್ಕ ಇದೆ ಎಂದು ನೋಡಿಕೊಂಡು ವಹಿವಾಟು ನಡೆಸಿ.
ವಹಿವಾಟಿನ ದಾಖಲೆ ಇರಲಿ, ಸ್ಟೇಟ್‌ಮೆಂಟ್ ಚೆಕ್ ಮಾಡಿ
ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ನಿಯಮಿತವಾಗಿ ಪರಿಶೀಲಿಸುವುದು ಅತೀ ಮುಖ್ಯವಾಗುತ್ತದೆ. ಇದು ಹಣಕಾಸಿನ ವ್ಯತ್ಯಾಸದ ಬಗ್ಗೆ ನೀವು ತಿಳಿಯಲು ಸಾಧ್ಯವಾಗುತ್ತದೆ. ಅನಧಿಕೃತ ವಹಿವಾಟುಗಳು ಆದಾಗ ಅದರಿಂದ ನಿಮ್ಮ ಹಣವನ್ನು ನೀವು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ.
ವಹಿವಾಟುಗಳನ್ನು ರಿಪೋರ್ಟ್ ಮಾಡಿ
ಯಾವುದೇ ಅನಧಿಕೃತ ವಹಿವಾಟುಗಳು ಅಥವಾ ಅನುಮಾನಾಸ್ಪದ ಚಟುವಟಿಕೆಗಳು ಕಂಡರೆ ತಕ್ಷಣವೇ ನಿಮ್ಮ ಬ್ಯಾಂಕ್ ಅಥವಾ ಯುಪಿಐ ಸೇವಾ ಪೂರೈಕೆದಾರರಿಗೆ ವರದಿ ಮಾಡಿ.


Click it and Unblock the Notifications