ಫಿಕ್ಸಿಡ್ ಡೆಪಾಸಿಟ್‌ಗಳು ನಿಮ್ಮ ಡೆಪಾಸಿಟ್‌ಗಳ ಮೇಲೆ ತೆರಿಗೆ ಪ್ರಯೋಜನವನ್ನು ನೀಡುವ ಹೂಡಿಕೆ ಆಯ್ಕೆಯಾಗಿದೆ. ಅಧಿಕ ಮೊತ್ತದ ಸಹೂಡಿಕೆ ಎಂದಾಗ ಎಂದಿಗೂ ಎಫ್‌ಡಿ ಮೊದಲ ಸ್ಥಾನದಲ್ಲಿರುತ್ತದೆ. ಈ ನಡುವೆ ಐದು ಪ್ರಮುಖ ಬ್ಯಾಂಕ್‌ಗಳು ಸೆಪ್ಟೆಂಬರ್‌ನಲ್ಲಿ ತಮ್ಮ ಫಿಕ್ಸಿಡ್ ಡೆಪಾಸಿಟ್‌ಗಳ ಬಡ್ಡಿದರಗಳನ್ನು ಪರಿಷ್ಕರಣೆ ಮಾಡಿದೆ.
ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದಾಗ ಹಲವಾರು ಬ್ಯಾಂಕುಗಳು ಎಫ್‌ಡಿ ದರವನ್ನು ಕೂಡಾ ಹೆಚ್ಚಳ ಮಾಡಿದೆ. ಆದರೆ ಈಗ ರೆಪೋ ದರವನ್ನು ಎರಡು ಬಾರಿ ಸ್ಥಿರವಾಗಿರಿಸಿದೆ. ಇದಾದ ಬಳಿಕ ಕಳೆದ ತಿಂಗಳು, ಈ ತಿಂಗಳು ಹಲವಾರು ಬ್ಯಾಂಕ್‌ಗಳು ಎಫ್‌ಡಿ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

1. ಐಡಿಬಿಐ ಬ್ಯಾಂಕ್ ಎಫ್‌ಡಿ ಬಡ್ಡಿದರ
ಐಡಿಬಿಐ ಬ್ಯಾಂಕ್ ನೀಡುವ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ ಸಾಮಾನ್ಯ ನಾಗರಿಕರಿಗೆ 7 ದಿನಗಳಿಂದ 10 ವರ್ಷಗಳ ಅವಧಿಗೆ ಶೇಕಡ 3ರಿಂದ ಶೇಕಡ 6.80 ವರೆಗೆ ಬಡ್ಡಿದರವನ್ನು ನೀಡುತ್ತದೆ. ಹಿರಿಯ ನಾಗರಿಕರಿಗೆ ಶೇಕಡ 3.50 ರಿಂದ ಶೇಕಡ 7.30 ವರೆಗೆ ಎಫ್‌ಡಿ ಬಡ್ಡಿದರವನ್ನು ನೀಡುತ್ತದೆ.
ಸೆಪ್ಟೆಂಬರ್ 15, 2023 ರಿಂದ ಬ್ಯಾಂಕ್ ತನ್ನ ಎಫ್‌ಡಿ ಬಡ್ಡಿ ದರಗಳಲ್ಲಿ ಪರಿಷ್ಕರಣೆ ಮಾಡಿದೆ. ಸಾಮಾನ್ಯ ನಾಗರಿಕರು 1 ವರ್ಷದಿಂದ 2 ವರ್ಷಗಳ ಅವಧಿಗೆ ಎಫ್‌ಡಿಗಳಿಗೆ ಗರಿಷ್ಠ 6.8 ಬಡ್ಡಿದರ, ಹಿರಿಯ ನಾಗರಿಕರು ಅದೇ ಅವಧಿಗೆ ಶೇಕಡ 7.3 ಬಡ್ಡಿದರ ನೀಡಲಾಗುತ್ತದೆ.
2. ಡಿಸಿಬಿ ಬ್ಯಾಂಕ್ ಎಫ್‌ಡಿ
ಆರ್‌ಬಿಐನ ಎಂಪಿಸಿ ಸಭೆಗೂ ಮುನ್ನವೇ ಎಫ್‌ಡಿ ಬಡ್ಡಿದರವನ್ನು ಡಿಸಿಬಿ ಬ್ಯಾಂಕ್ ಪರಿಷ್ಕರಣೆ ಮಾಡಿದೆ. ಬ್ಯಾಂಕ್ ತನ್ನ ರೆಸಿಡೆಂಟ್, ಎನ್‌ಆರ್‌ಇ ಮತ್ತು ಎನ್‌ಆರ್‌ಒ ಉಳಿತಾಯ ಬ್ಯಾಂಕ್ ಖಾತೆ ಬಡ್ಡಿ ದರವನ್ನು ಪರಿಷ್ಕರಿಸಿದೆ. ಗ್ರಾಹಕರು ಈಗ 10 ಲಕ್ಷ ರೂಪಾಯಿಯಿಂದ 2 ಕೋಟಿ ರೂಪಾಯಿಗಿಂತ ಕಡಿಮೆ ಇರುವ ಮೊತ್ತದ ಮೇಲೆ ಗರಿಷ್ಠವಾಗಿ ಶೇಕಡ 8.00 ರಷ್ಟು ಬಡ್ಡಿದರವನ್ನು ನೀಡುತ್ತದೆ.
25 ತಿಂಗಳಿಂದ 26 ತಿಂಗಳ ಅವಧಿಯ ಎಫ್‌ಡಿಗಳಿಗೆ ಶೇಕಡ 7.90 ಬಡ್ಡಿ ದರವನ್ನು ಪಡೆಯಬಹುದು. ಹಿರಿಯ ನಾಗರಿಕರು 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲೆ ಶೇಕಡ 8.50 ರಷ್ಟು ಬಡ್ಡಿದರವನ್ನು ನೀಡುತ್ತದೆ. ಇನ್ನು ಹಿರಿಯ ನಾಗರಿಕರಿಗೆ ಹೆಚ್ಚುವರಿ 50 ಬಿಪಿಎಸ್ ಬಡ್ಡಿದರ ನೀಡಲಾಗುತ್ತದೆ.
3. ಆಕ್ಸಿಸ್ ಬ್ಯಾಂಕ್ ಎಫ್‌ಡಿ
ಆಕ್ಸಿಸ್ ಬ್ಯಾಂಕ್ 2 ಕೋಟಿ ರೂಪಾಯಿಗಿಂತ ಕಡಿಮೆ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಸುಮಾರು 50 ಬೇಸಿಸ್ ಪಾಯಿಂಟ್‌ಗಳಷ್ಟು ಇಳಿಸಿದೆ. ಆಕ್ಸಿಸ್ ಬ್ಯಾಂಕ್‌ನ ಹೊಸ ಫಿಕ್ಸಿಡ್ ಡೆಪಾಸಿಟ್‌ಗಳ ಬಡ್ಡಿದರಗಳು ಅಧಿಕೃತ ವೆಬ್‌ಸೈಟ್‌ನ ಪ್ರಕಾರ ಸೆಪ್ಟೆಂಬರ್ 15, 2023 ರಿಂದ ಜಾರಿಗೆ ಬಂದಿವೆ. ಬಡ್ಡಿದರಗಳ ಪರಿಷ್ಕರಣೆಯ ನಂತರ, ಆಕ್ಸಿಸ್ ಬ್ಯಾಂಕ್ 7 ದಿನಗಳಿಂದ 10 ವರ್ಷಗಳಲ್ಲಿ ಮೆಚ್ಯೂರಿಟಿ ಆಗುವ ಡೆಪಾಸಿಟ್‌ಗಳ ಮೇಲೆ ಶೇಕಡ 3 ರಿಂದ ಶೇಕಡ 7.10 ವರೆಗಿನ ಬಡ್ಡಿದರಗಳನ್ನು ನೀಡುತ್ತದೆ.
4. ಕೋಟಕ್ ಮಹೀಂದ್ರಾ ಬ್ಯಾಂಕ್ ಎಫ್‌ಡಿ
ಪ್ರಮುಖ ಬ್ಯಾಂಕ್ ಆದ ಕೋಟಕ್ ಮಹೀಂದ್ರಾ ಬ್ಯಾಂಕ್ 2 ಕೋಟಿ ರೂಪಾಯಿಗಿಂತ ಕಡಿಮೆ ಡೆಪಾಸಿಟ್‌ಗಳ ಬಡ್ಡಿದರ ಪರಿಷ್ಕರಣೆ ಮಾಡಿದೆ. ಹೊಸ ದರಗಳು ಈಗಾಗಲೇ ಸೆಪ್ಟೆಂಬರ್ 13, 2023 ರಿಂದ ಜಾರಿಗೆ ಬಂದಿವೆ. ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 2 ಕೋಟಿ ರೂಪಾಯಿಯ ಡೆಪಾಸಿಟ್ ಮೇಲೆ ಸಾಮಾನ್ಯ ನಾಗರಿಕರಿಗೆ ಶೇಕಡ 2.75 ರಿಂದ ಶೇಕಡ 7.25 ಬಡ್ಡಿದರ ನೀಡುತ್ತದೆ. ಹಿರಿಯ ನಾಗರಿಕರಿಗೆ ಶೇಕಡ 3.25 ರಿಂದ ಶೇಕಡ 7.75 ವರೆಗೆ ಬಡ್ಡಿದರ ನೀಡುತ್ತದೆ. ಸೆಪ್ಟೆಂಬರ್ 13 ರಂದು ಬ್ಯಾಂಕ್ ತನ್ನ ಬಡ್ಡಿದರಗಳನ್ನು 23 ತಿಂಗಳ ಅವಧಿಗೆ 25 ಬಿಪಿಎಸ್ ಬಡ್ಡಿದರ ಹೆಚ್ಚಿಸಿದೆ. ಸಾಮಾನ್ಯ ನಾಗರಿಕರು ಗರಿಷ್ಠ ಶೇಕಡ 7.25 ಬಡ್ಡಿದರ, ಹಿರಿಯ ನಾಗರಿಕರು ಗರಿಷ್ಠ ಶೇಕಡ 7.75 ರಷ್ಟು ಬಡ್ಡಿದರ ಪಡೆಯಬಹುದು.
5. ಯೆಸ್ ಬ್ಯಾಂಕ್ ಎಫ್‌ಡಿ
ಯೆಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಎಫ್‌ಡಿ ಬಡ್ಡಿದರವನ್ನು ಪರಿಷ್ಕರಿಸಿದೆ. 2 ಕೋಟಿ ರೂಪಾಯಿಗಿಂತ ಕಡಿಮೆ ಡೆಪಾಸಿಟ್ ಮೇಲೆ ಯೆಸ್ ಬ್ಯಾಂಕ್ ಬಡ್ಡಿದರವನ್ನು ಪರಿಷ್ಕರಿಸಿದೆ. ಸೆಪ್ಟೆಂಬರ್ 4, 2023 ರಂದು ತನ್ನ ಎಫ್‌ಡಿ ಬಡ್ಡಿದರವನ್ನು ಪರಿಷ್ಕರಿಸಿದೆ. ಪರಿಷ್ಕರಣೆಯ ನಂತರ, ಯೆಸ್ ಬ್ಯಾಂಕ್ ಗ್ರಾಹಕರಿಗೆ ಶೇಕಡ 3.25 ರಿಂದ ಶೇಕಡ 7.75 ರವರೆಗಿನ ಬಡ್ಡಿದರಗಳನ್ನು ನೀಡುತ್ತದೆ. ಅಧಿಕೃತ ವೆಬ್‌ಸೈಟ್ ಪ್ರಕಾರ, ಹಿರಿಯ ನಾಗರಿಕರು 18 ರಿಂದ 24 ತಿಂಗಳಿಗಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ ಶೇಕಡ 3.75 ರಿಂದ ಶೇಕಡ 8.25 ರಷ್ಟು ಬಡ್ಡಿದರವನ್ನು ನೀಡುತ್ತದೆ.


Click it and Unblock the Notifications