ಬಾಸ್‌ ಅಂದ್ರೆ ಇವರಪ್ಪ: 'ಡಿಸ್ನಿ ವರ್ಲ್ಡ್‌ಗೆ ಹೋಗಲು', 10 ಸಾವಿರ ಉದ್ಯೋಗಿಗಳಿಗೆ ಹಣ ಪಾವತಿ!

ಉದ್ಯೋಗಿಗಳು ಪ್ರವಾಸಕ್ಕಾಗಿ ರಜೆ ಕೇಳಿದಾಗ ಎಲ್ಲ ಕೆಲಸ ಮುಗಿಸಿ ರಜೆ ತೆಗೆದುಕೊಳ್ಳಿ ಎಂದು ಹೇಳುವ ಬಾಸ್‌ಗಳ ನಡುವೆ ಇಲ್ಲೊಂದು ಸಂಸ್ಥೆಯ ಬಾಸ್ ತನ್ನ ಉದ್ಯೋಗಿಗಳಿಗೆ ಹಾಗೂ ಅವರ ಕುಟುಂಬಕ್ಕೆ ಡಿಸ್ನಿ ವರ್ಲ್ಡ್‌ಗೆ ಭೇಟಿ ನೀಡಲು ಪಾವತಿಯನ್ನು ಮಾಡಿದ್ದಾರೆ! ಆಶ್ಚರ್ಯ ಎನಿಸುತ್ತೆ ಅಲ್ಲವೇ?

ಸಿಟಾಡೆಲ್ ಸಿಇಒ ಕೆನ್ ಗ್ರಿಫಿನ್ ತನ್ನ ಸಂಸ್ಥೆ ಸಿಟಾಡೆಲ್ ಸೆಕ್ಯೂರಿಟೀಸ್‌ ಆರಂಭವಾಗಿ 20 ವರ್ಷವಾದ ಕಾರಣ ಹಾಗೂ ತನ್ನ ಫಂಡಿಂಗ್ ಸಂಸ್ಥೆಗೆ 32 ವರ್ಷಗಳಾದ ಕಾರಣದಿಂದಾಗಿ ತನ್ನ ಉದ್ಯೋಗಿಗಳಿಗೆ ಮೂರು ದಿನಗಳ ಪಾರ್ಟಿಯನ್ನು ನೀಡಿದ್ದಾರೆ. ಈ ಮೂಲಕ ಬೆಸ್ಟ್ ಬಾಸ್ ಎಂದೆನಿಸಿಕೊಂಡಿದ್ದಾರೆ.

ತನ್ನ ಸಂಸ್ಥೆಯ ಅಭಿವೃದ್ಧಿಗೆ ಕಾರಣವಾದ ಉದ್ಯೋಗಿಗಳಿಗೆ ಸಂಸ್ಥೆಯ ಅಭಿವೃದ್ಧಿಯ ಫಲವನ್ನು ನೀಡಬೇಕು ಎಂಬ ನಿಟ್ಟಿನಲ್ಲಿ ಉದ್ಯೋಗಿಗಳು ಹಾಗೂ ಅವರ ಕುಟುಂಬಸ್ಥರು ಉಚಿತವಾಗಿ ಡಿಸ್ನಿ ವರ್ಲ್ಡ್‌ಗೆ ಹೋಗುವ ಹಾಗೂ ಕೋಲ್ಡ್ ಪ್ಲೇನಲ್ಲಿ ಮನರಂಜನೆ ಆಟಗಳನ್ನು ಉಚಿತವಾಗಿ ಆಡುವ ಅವಕಾಶವನ್ನು ನೀಡಿದೆ. ಅಷ್ಟಕ್ಕೂ ಉಚಿತವೆಂದರೆ ಉದ್ಯೋಗಿಗಳಿಗಷ್ಟೇ ಉಚಿತ, ಸಂಸ್ಥೆಯು ಅದಕ್ಕಾಗಿ ಪಾವತಿ ಮಾಡುತ್ತದೆ.

 ಡಿಸ್ನಿ ವರ್ಲ್ಡ್‌ಗೆ ಹೋಗಲು 10,000 ಉದ್ಯೋಗಿಗಳಿಗೆ ಹಣ ನೀಡಿದ ಬಾಸ್!

ಊಟ, ತಿಂಡಿ, ಹೋಟೆಲ್‌: ಎಲ್ಲವೂ ಸಿಇಒ ಲೆಕ್ಕದಲ್ಲಿ!

ನ್ಯೂಯಾರ್ಕ್‌, ಹಾಸ್ಟಾನ್, ಪ್ಯಾರಿಸ್ ಮೊದಲಾದ ನಗರಗಳಲ್ಲಿ ತನ್ನ ಉದ್ಯೋಗಿಗಳ ಬಿಲ್ ಅನ್ನು ಸಿಟಾಡೆಲ್ ಸಿಇಒ ಕೆನ್ ಗ್ರಿಫಿನ್ ಪಾವತಿ ಮಾಡಿದ್ದಾರೆ. ಹೋಟೆಲ್‌ಗಳು, ಪಾರ್ಕಿಂಗ್ ಟಿಕೆಟ್, ಊಟಕ್ಕೂ ಸಿಇಒನೇ ಪಾವತಿ ಮಾಡಿದ್ದಾರೆ ಎಂದು ಸಿಟಾಡೆಲ್ ವಕ್ತಾರ ಝಿಯಾ ಅಹ್ಮದ್ ಮಾಹಿತಿ ನೀಡಿದ್ದಾರೆ.

"ನಾವು ಬಹಳ ಉತ್ತಮವಾದ ಟೀಮ್ ಅನ್ನು ಕಟ್ಟಿದ್ದೇವೆ. ಇದು ನಮ್ಮ ಸಂಸ್ಥೆಯ ಇತಿಹಾಸದಲ್ಲೇ ಮೊದಲು ಮಾತ್ರವಲ್ಲ, ಹಣಕಾಸು ವಲಯದ ಇತಿಹಾಸದಲ್ಲೇ ಇದು ಮೊದಲಾಗಿದೆ. ನಾವು ಉತ್ತಮವಾದ ಭವಿಷ್ಯವನ್ನು ಹೊಂದಿದ್ದೇವೆ. ಮುಂದಿನ ಹೊಸ ಘಟ್ಟವನ್ನು ನಮ್ಮ ಉದ್ಯೋಗಿಗಳು ತಲುಪಲಿದ್ದಾರೆ," ಎಂದು ಸಿಟಾಡೆಲ್ ಸಿಇಒ ಕೆನ್ ಗ್ರಿಫಿನ್ ತಿಳಿಸಿದ್ದಾರೆ.

ಗಿಫಿನ್ ಫಂಡ್‌ನಲ್ಲಿ ಸುಮಾರು 60 ಬಿಲಿಯನ್ ಡಾಲರ್ ಸಂಪತ್ತು ಇದೆ. ಸಿಟಾಡೆಲ್ ಗ್ಲೋಬಲ್ ಫಿಕ್ಸಿಡ್ ಇನ್‌ಕಮ್ ಫಂಡ್ ಶೇಕಡ 28.1ರಷ್ಟು ಏರಿಕೆಯನ್ನು ಕಂಡಿದೆ. ಸಿಟಾಡೆಲ್ ಟ್ರೇಡಿಂಗ್ ಶೇಕಡ 22.4ರಷ್ಟು ಏರಿಕೆಯನ್ನು ದಾಖಲಿಸಿದೆ. ಸಿಟಾಡೆಲ್ ಈಕ್ವಿಟಿ ಫಂಡ್ ಶೇಕಡ 17.8ರಷ್ಟು ಏರಿಕೆ ದಾಖಲಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+