ಪ್ರಸ್ತುತ ಜಾಗತಿಕವಾಗಿ ಎಐ ಅಥವಾ ಕೃತಕ ಬುದ್ಧಿಮತ್ತೆ (Artificial intelligence) ಅತೀ ಹೆಚ್ಚು ಬೇಡಿಕೆಯ ವಲಯವಾಗಿದೆ. 2022 ರಲ್ಲಿ ಪರಿಚಯಿಸಿದಾಗಿನಿಂದ, ಎಐ ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರಗತಿಗಳಾದ ಚಾಟ್‌ಜಿಪಿಟಿ ಮತ್ತು ಇತರವುಗಳು ಐಟಿ ವಲಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕಿದೆ. ಎಐ ಚಾಟ್‌ಬಾಟ್ ಮನುಷ್ಯನನ್ನು ಹೋಲುವ ರೀತಿಯ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಯಾವುದನ್ನಾದರೂ ನಿರ್ವಹಣೆ ಮಾಡುವ ಸಾಮರ್ಥ್ಯದ ಮೂಲಕ ವ್ಯಾಪಕ ಆಕರ್ಷಣೆಯನ್ನು ಹೊಂದಿದೆ.
ಪ್ರಬಂಧಗಳು ಮತ್ತು ಕವನಗಳನ್ನು ರಚಿಸುವುದರಿಂದ ಹಿಡಿದು ಸಂಗೀತವನ್ನು ರಚಿಸುವವರೆಗೆ ಜನರು ಎಐ ಚಾಟ್‌ಬಾಟ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಸ್ವಂತ ಬುದ್ಧಿಯನ್ನು ಬಳಸದೆ ಅದಕ್ಕೆ ಎಐಗೆ ಅವಲಂಭಿತರಾಗುತ್ತಿದ್ದಾರೆ ಎಂಬ ಆರೋಪವಿದೆ. ಆದರೂ ಎಐ ಪ್ರಸ್ತುತ ಅತೀ ಜನಪ್ರಿಯವಾಗಿದೆ. ಈಗ ಎಐ ಪರಿಣತರಿಗೂ ಬೇಡಿಕೆ ಅಧಿಕವಾಗಿದೆ, ಕೋಟ್ಯಾಂತರ ರೂಪಾಯಿ ವೇತನ ಆಫರ್‌ಗಳು ಕೂಡಾ ಇದೆ.

185,000 ಯುಎಸ್ ಡಾಲರ್ ವೇತನ ನೀಡಲು ಸಂಸ್ಥೆಗಳು ಸಜ್ಜು
ಎಐ ಚಾಟ್‌ಬಾಟ್ ಚಾಟ್‌ಜಿಪಿಟಿಯನ್ನು ಬಳಸಿಕೊಳ್ಳುವಲ್ಲಿ ನುರಿತ ಜನರಿಗೆ ಉದ್ಯೋಗಗಳಿಗೆ ಹೆಚ್ಚಿನ ಬೇಡಿಕೆ ಪ್ರಸ್ತುತ ಸೃಷ್ಟಿಯಾಗಿದೆ. ಇದು ಟೆಕ್ ಉದ್ಯಮದಲ್ಲಿ ಹಂತಹಂತವಾಗಿ ಹೆಚ್ಚು ಅಗತ್ಯವಾದ ಉದ್ಯಮವಾಗಿ ಬದಲಾವಣೆಯಾಗುತ್ತಿದೆ. ಬ್ಯುಸಿನೆಸ್ ಇನ್‌ಸೈಡರ್ ವರದಿಯ ಪ್ರಕಾರ, ಲಿಂಕ್ಡ್‌ಇನ್‌ನಲ್ಲಿನ ಸಂಸ್ಥೆಗಳು ವಾರ್ಷಿಕವಾಗಿ 185,000 ಯುಎಸ್ ಡಾಲರ್ ಸುಮಾರು 1.5 ಕೋಟಿ ರೂಪಾಯಿವರೆಗೆ) ಚಾಟ್‌ಜಿಪಿಟಿಯಲ್ಲಿ ಪ್ರಾವೀಣ್ಯತೆ ಹೊಂದಿರುವ ವ್ಯಕ್ತಿಗಳಿಗೆ ಪಾವತಿಸಲು ಸಿದ್ಧವಾಗಿವೆ.
ಚಾಟ್‌ಜಿಪಿಟಿಗೆ ಅಧಿಕ ವೇತನ ನೀಡಲಿರುವ ಸಂಸ್ಥೆಗಳು
ಯುಎಸ್ ಆಧಾರಿತ ಎಚ್‌ಆರ್ ಸಂಸ್ಥೆ ಸ್ಕ್ರ್ಯಾಚ್ ಸೀನಿಯರ್ ಮಿಷನ್ ಲೆರ್ನಿಂಗ್ ಇಂಜಿನಿಯರ್ ಹುದ್ದೆಗಾಗಿ ಉದ್ಯೋಗಿಯನ್ನು ಹುಡುಕುತ್ತಿದ್ದಾರೆ. ಈ ಹುದ್ದೆಗೆ "ಚಾಟ್‌ಜಿಪಿಟಿ, ಮಿಡ್‌ಜರ್ನಿ ಸೇರಿದಂತೆ ಆಧುನಿಕ ಕೃತಕ ಬುದ್ಧಿಮತ್ತೆಯ ಪರಿಕರಗಳು ಮತ್ತು ಪ್ಲಾಟ್‌ಫಾರ್ಮ್‌ಗಳ ಬಗ್ಗೆ ಮಾಹಿತಿ" ಇರುವುದು ಈ ಹುದ್ದೆಗೆ ಬೇಕಾದ ಅಗತ್ಯ ಕೌಶಲ್ಯಗಳು ಆಗಿದೆ. ಇನ್ನು ಈ ಹುದ್ದೆಗೆ ವಾರ್ಷಿಕವಾಗಿ 125,000 ಯುಎಸ್ ಡಾಲರ್‌ನಿಂದ 185,000 ಯುಎಸ್ ಡಾಲರ್‌ವರೆಗೆ ವೇತನ ನೀಡಲು ಸಜ್ಜಾಗಿದೆ.
ಇನ್ನೊಂದೆಡೆ Interface.ai ಎಐ ಟೂಲ್ ಉದ್ಯೋಗಿಗಳ ಹುಡುಕಾಟದಲ್ಲಿದೆ. ರಿಮೋಟ್ ಮೆಷಿನ್ ಇಂಜಿನಿಯರ್ ಹುದ್ದೆಗಾಗಿ ಅಭ್ಯರ್ಥಿಯನ್ನು ಹುಡುಕಾಡುತ್ತಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಮೆಷಿನ್ ಹಾಗೂ ಚಾಟ್‌ಜಿಪಿಟಿ ಬಗ್ಗೆ ಮಾಹಿತಿಯನ್ನು, ಪರಿಣತಿಯನ್ನು ಹೊಂದಿರುವುದು ಮುಖ್ಯವಾಗಿದೆ. ಈ ಕ್ಷೇತ್ರದಲ್ಲಿ ಪ್ರಾವೀಣ್ಯತೆ ಹೊಂದಿರುವ ವ್ಯಕ್ತಿಗಳಿಗೆ ವಾರ್ಷಿಕವಾಗಿ 170,000 ಯುಎಸ್ ಡಾಲರ್‌ನಷ್ಟು ವೇತನವನ್ನು ನೀಡಲಾಗುತ್ತದೆ.
ಚಾಟ್‌ಜಿಪಿಟಿ: ಎಐ ಉದ್ಯೋಗ ನಷ್ಟ ಅಥವಾ ಉದ್ಯೋಗ ಸೃಷ್ಟಿಯೇ?
ಚಾಟ್‌ಜಿಪಿಟಿ ಜನಪ್ರಿಯತೆಗೊಳ್ಳುತ್ತಿದ್ದಂತೆ ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಆತಂಕವನ್ನು ಹೊಂದಿದ್ದಾರೆ. ಆದರೆ ಈ ನಡುವೆ ಹಲವಾರು ತಜ್ಞರುಗಳು ಎಐ ತಂತ್ರಜ್ಞಾನವು ಉದ್ಯೋಗ ಬೆಳವಣಿಗೆ ಕಾರಣವಾಗಲಿದೆ ಎಂಬ ನಂಬಿಕೆಯನ್ನು ಹೊಂದಿದ್ದಾರೆ. ಪ್ರಾಂಪ್ಟ್ ಎಂಜಿನಿಯರಿಂಗ್ ಈ ವೃತ್ತಿಗಳಲ್ಲಿ ಒಂದಾಗಿದೆ. ಪ್ರಾಂಪ್ಟ್ ಎಂಜಿನಿಯರಿಂಗ್ ಈಗ ಜನಪ್ರಿಯತೆಯನ್ನು ಹೊಂದಿದೆ.
ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಎಐ ಸಂಸ್ಥೆ ಆಂಥ್ರೊಪಿಕ್, ಈ ವರ್ಷದ ಮಾರ್ಚ್‌ನಲ್ಲಿ ಉದ್ಯೋಗ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರಾಂಪ್ಟ್ ಇಂಜಿನಿಯರ್ ಮತ್ತು ಲೈಬ್ರರಿಯನ್ ಹುದ್ದೆಯ ಬಗ್ಗೆ ಮಾಹಿತಿಯನ್ನು ನೀಡಿದೆ. ಹಾಗೆಯೇ ಈ ಹುದ್ದೆಗೆ ವಾರ್ಷಿಕವಾಗಿ 335,000 ಯುಎಸ್ ಡಾಲರ್ ವೇತನವನ್ನು ನೀಡಲಾಗುವುದು ಎಂದು ತಿಳಿಸಿದೆ. ನಾವು ಭಾರತೀಯ ರೂಪಾಯಿಯಲ್ಲಿ ನೋಡಿದಾಗ ವಾರ್ಷಿಕವಾಗಿ 2.7 ಕೋಟಿ ರೂಪಾಯಿ ವೇತನದ ಆಫರ್ ಇದಾಗಿದೆ.
ಏನಿದು ಚಾಟ್‌ಜಿಪಿಟಿ?
ಚಾಟ್‌ಜಿಪಿಟಿ ಒಂದು ಜನರೇಟಿವ್ ಎಐ ಆಗಿದೆ. ನಾವು ಯಾವುದೇ ಪ್ರಶ್ನೆಗಳನ್ನು ಕೇಳಿದರೂ ಅದನ್ನು ಇಂಟರ್‌ನಟ್‌ನಲ್ಲಿ ಹುಡುಕಿ ನಮಗೆ ಸರಿಯಾದ ಉತ್ತರವನ್ನುನ ನೀಡುವ ಒಂದು ಅಪ್ಲಿಕೇಷನ್ ಇದಾಗಿದೆ. ಸರಳವಾದ ಇಂಗ್ಲೀಷ್‌ನಲ್ಲಿ ಇದು ಉತ್ತರವನ್ನು ನೀಡುತ್ತದೆ. ಇದನ್ನು ಹುಟ್ಟುಹಾಕಿದ್ದು ವಿಶ್ವದ ಶ್ರೀಮಂತ ವ್ಯಕ್ತಿ, ಉದ್ಯಮಿ ಎಲಾನ್ ಮಸ್ಕ್. ಪ್ರಸ್ತುತ ಈ ಓಪನ್‌ಎಐ ಸಂಸ್ಥೆಯ ಮಾಲೀಕತ್ವದಲ್ಲಿ ಇದು ಇದ್ದು, ಅಧಿಕ ಪಾಲು ಮೈಕ್ರೋಸಾಫ್ಟ್‌ನದ್ದಾಗಿದೆ.


Click it and Unblock the Notifications