ಕ್ರೆಡಿಟ್ ಕಾರ್ಡ್ ಬಳಸುವವರು ಈ 5 ದುಬಾರಿ ತಪ್ಪುಗಳನ್ನು ಮಾಡಬೇಡಿ

ಕ್ರೆಡಿಟ್ ಕಾರ್ಡ್ ಅಂದರೆ ಅಬ್ಬಾ ಎಂಥದ್ದೋ ಸಂಭ್ರಮ. ಕಷ್ಟ ಕಾಲಕ್ಕೆ ಅಥವಾ ಅಗತ್ಯಕ್ಕೆ ಕ್ರೆಡಿಟ್ ಕಾರ್ಡ್ ಇದ್ದಲ್ಲಿ ಎಂಥ ಸಮಸ್ಯೆಗಳನ್ನಾದರೂ ಬಗೆಹರಿಸಿಕೊಳ್ಳಬಹುದು ಎಂಬುದು ಹಲವರ ನಂಬಿಕೆ. ಆದರೆ ಅದೇ ಕ್ರೆಡಿಟ್ ಕಾರ್ಡ್ ವಿಪರೀತ ಬಳಸಿ, ಆರ್ಥಿಕ ಸಮಸ್ಯೆಗಳಿಗೆ ಸಿಲುಕಿಕೊಂಡವರು ಹಲವರು ಕಂಡುಬರುತ್ತಾರೆ. ಅಯ್ಯೋ, ವಿಪರೀತ ಬಡ್ಡಿ ಕಟ್ಟಿದೆವು ಅಂತ ಅಲವತ್ತುಕೊಳ್ಳುತ್ತಾರೆ.

ನೀವು ಯಾವ ಕಾರಣಕ್ಕೂ ಕ್ರೆಡಿಟ್ ಕಾರ್ಡ್ ತಂಟೆಗೆ ಹೋಗಬೇಡಿ ಎಂದು ಎಚ್ಚರಿಸುತ್ತಾರೆ. ಹೌದಾ, ಕ್ರೆಡಿಟ್ ಕಾರ್ಡ್ ಅಷ್ಟೊಂದು ಸಮಸ್ಯೆ ತರುತ್ತದೆಯೇ? ಬಡ್ಡಿ ಮೇಲೆ ಬಡ್ಡಿ ಬೆಳೆದು, ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತವೆಯೇ ಎಂಬ ಪ್ರಶ್ನೆ ಕಾಡುತ್ತಿರುವವರಿಗಾಗಿಯೇ ಈ ಲೇಖನ.

ಕ್ರೆಡಿಟ್ ಕಾರ್ಡ್ ಬಳಕೆದಾರರು ಮಾಡುವ ಸಾಮಾನ್ಯ ಹಾಗೂ ದುಬಾರಿ ಐದು ತಪ್ಪುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇವುಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಏನು ಆ ತಪ್ಪುಗಳು ಎಂಬುದನ್ನು ತಿಳಿಯಲು ಮುಂದೆ ಓದಿ.

ನಗದು ವಿಥ್ ಡ್ರಾ ಮಾಡಿದರೆ ಬಡ್ಡಿ

ನಗದು ವಿಥ್ ಡ್ರಾ ಮಾಡಿದರೆ ಬಡ್ಡಿ

ಕ್ರೆಡಿಟ್ ಕಾರ್ಡ್ ಬಳಸಿ ಪಾಯಿಂಟ್ ಆಫ್ ಸೇಲ್ ನಲ್ಲಿ ಅಥವಾ ಆನ್ ಲೈನ್ ನಲ್ಲಿ ಯಾವುದಾದರೂ ವಸ್ತುಗಳನ್ನು ಖರೀದಿ ಮಾಡಿದರೆ 51 ದಿನಗಳ ಅವಧಿಗೆ ಸಾಲ ಇಲ್ಲದಂತೆ ಹಣ ಕಟ್ಟುವುದಕ್ಕೆ ಅವಕಾಶ ದೊರೆಯುತ್ತದೆ. ಆದರೆ ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂನಿಂದ ನಗದು ವಿಥ್ ಡ್ರಾ ಮಾಡಿದರೆ ಇದು ಅನ್ವಯಿಸಲ್ಲ. ಯಾವ ದಿನ ನಗದನ್ನು ಎಟಿಎಂನಿಂದ ವಿಥ್ ಡ್ರಾ ಮಾಡಲಾಗುತ್ತದೋ ಆ ದಿನದಿಂದಲೇ ಬಡ್ಡಿ ಸೇರಲು ಆರಂಭವಾಗುತ್ತದೆ.

ಬಾಕಿಯನ್ನು ಮುಂದೆ ಕಟ್ಟಿದರಾಯಿತು ಅಂದುಕೊಳ್ಳಬೇಡಿ

ಬಾಕಿಯನ್ನು ಮುಂದೆ ಕಟ್ಟಿದರಾಯಿತು ಅಂದುಕೊಳ್ಳಬೇಡಿ

ಕ್ರೆಡಿಟ್ ಕಾರ್ಡ್ ಬಾಕಿಯನ್ನು ಪೂರ್ತಿ ಪಾವತಿಸದಿದ್ದರೆ ಅಥವಾ ನಿಗದಿತ ದಿನದೊಳಗೆ ಕಟ್ಟದಿದ್ದರೆ ಸಾಲ ಹೆಚ್ಚಿಸಿಕೊಳ್ಳುತ್ತಿದ್ದೀರಿ ಎಂದರ್ಥ. ಹೀಗೆ ಮಾಡುವುದರಿಂದ ಹೆಚ್ಚಿನ ಬಡ್ಡಿ ಅಥವಾ ಶುಲ್ಕವನ್ನು ತೆರಬೇಕಾಗುತ್ತದೆ. ಸಾಮಾನ್ಯವಾಗಿ ಇದು ತಿಂಗಳಿಗೆ 3.5 ಪರ್ಸೆಂಟ್ ನಿಂದ ಆರಂಭವಾಗಿ, ವರ್ಷಕ್ಕೆ 36ರಿಂದ 42 ಪರ್ಸೆಂಟ್ ತನಕ ಆಗುತ್ತದೆ. ಒಂದು ವೇಳೆ ಕ್ರೆಡಿಟ್ ಕಾರ್ಡ್ ಬಿಲ್ ನಲ್ಲಿ ಸ್ವಲ್ಪ ಭಾಗ ಕಟ್ಟಿರುತ್ತೀರಿ ಎಂದಾದಲ್ಲಿ, ಬಾಕಿ ಮೊತ್ತವನ್ನು ಬೇಗ ಕಟ್ಟಿಬಿಡಿ. ಮುಂದಿನ ಬಾರಿ ಬಿಲ್ ಬರಲಿ ಎಂದು ಕಾಯುವುದಕ್ಕೆ ಹೋಗಬೇಡಿ. ಇದರಿಂದ ಬಡ್ಡಿ ದರ ಕಡಿಮೆ ಆಗುತ್ತದೆ.

ಬಿಲ್ ಪಾವತಿ ದಿನಾಂಕವನ್ನು ತಪ್ಪಿಸಬೇಡಿ

ಬಿಲ್ ಪಾವತಿ ದಿನಾಂಕವನ್ನು ತಪ್ಪಿಸಬೇಡಿ

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಬೇಕಾದ ದಿನವನ್ನು ನೆನಪಿಟ್ಟುಕೊಂಡಿರಿ. ಒಂಡೂ ವೇಳೆ ಬಿಲ್ ಪಾವತಿ ದಿನಾಂಕದಂದು ಪಾವತಿಸದಿದ್ದಲ್ಲಿ 900 ರುಪಾಯಿ ತನಕ ಹಣ ತೆರಬೇಕಾಗುತ್ತದೆ. ಅದು ಕೂಡ ಎಷ್ಟು ಬಾಕಿ ಉಳಿಸಿಕೊಂಡಿರುತ್ತೀರಾ ಎಂಬುದರ ಮೇಲೆ ಅವಲಂಬನೆ ಆಗಿರುತ್ತದೆ. ಕ್ರೆಡಿಟ್ ಕಾರ್ಡ್ ಬಳಸುವವರು ಹಾಗೂ ಎಷ್ಟು ಮೊತ್ತ ಬಾಕಿ ಇದೆ ಎಂಬುದರ ಆಧಾರದಲ್ಲಿ ಇದು ಬದಲಾಗುತ್ತದೆ. ಆದ್ದರಿಂದ ಆಟೋ ಡೆಬಿಟ್ ಆಯ್ಕೆಯನ್ನು ಮಾಡಿಕೊಳ್ಳಬಹುದು. ಅಂದರೆ ಖಾತೆಯಿಂದ ಹಣ ತಾನಾಗಿಯೇ ಡೆಬಿಟ್ ಆಗುವ ವ್ಯವಸ್ಥೆ ಅದು ಅಥವಾ ನೆನಪಿಟ್ಟುಕೊಂಡು, ಸಮಯಕ್ಕೆ ಸರಿಯಾಗಿ ಪಾವತಿಸುವುದಕ್ಕೆ ಏನು ಮಾಡಬಹುದೋ ಆ ಎಲ್ಲವನ್ನೂ ಮಾಡಬೇಕು.

ಅವಧಿ ಕಡಿಮೆ ಆಗುತ್ತದೆ

ಅವಧಿ ಕಡಿಮೆ ಆಗುತ್ತದೆ

ಸಾಮಾನ್ಯವಾಗಿ ಎರಡು ಬಿಲ್ ಅವಧಿ ಮಧ್ಯೆ 45ರಿಂದ 51 ದಿನ ಪಾವತಿಗೆ ಎಂದು ಸಮಯ ದೊರೆಯುತ್ತದೆ. ಆದರೆ ಪೂರ್ತಿ ಬಿಲ್ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಪಾವತಿಸದಿದ್ದಲ್ಲಿ ಬಡ್ಡಿ ಬೀಳುವುದಷ್ಟೇ ಅಲ್ಲ. ಜತೆಗೆ ಯಾವುದೇ ಹೊಸ ಖರೀದಿ ಮೇಲೆ ದೊರೆಯುವ ಬಡ್ಡಿ ರಹಿತವಾದ ಅವಧಿ ಕೂಡ ಕಡಿಮೆ ಆಗುತ್ತದೆ. ಈ ಹಿಂದಿನ ಬಿಲ್ ಒಟ್ಟು ಮೊತ್ತ ಪಾವತಿಸದಿದ್ದರೆ ಈ ಅನುಕೂಲ ಕಳೆದುಕೊಳ್ಳಬೇಕಾಗುತ್ತದೆ.

ಪಾವತಿ ವಿನಾಯಿತಿ ಬಳಸಿಕೊಳ್ಳಬೇಕಾ?

ಪಾವತಿ ವಿನಾಯಿತಿ ಬಳಸಿಕೊಳ್ಳಬೇಕಾ?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆದೇಶದ ಪ್ರಕಾರ, ಆಗಸ್ಟ್ 2020ರ ತನಕ ಕ್ರೆಡಿಟ್ ಕಾರ್ಡ್ ಬಾಕಿಯನ್ನು ಪಾವತಿಸದಿರಲು, ಬಾಕಿಯನ್ನು ಮುಂದೂಡಲು ಅವಕಾಶ ಇದೆ. ಕೊರೊನಾ ಕಾರಣಕ್ಕೆ ಆರ್ಥಿಕ ಸಂಕಷ್ಟದಲ್ಲಿ ಇರುವವರಿಗೆ ಇದರಿಂದ ನೆರವಾಗಬಹುದು. ಆದರೆ ನೆನಪಿರಲಿ, ಈ ಆಯ್ಕೆಯನ್ನು ಮಾಡಿಕೊಳ್ಳುವುದು ದುಬಾರಿ ಆಗಲಿದೆ. ಆರ್ ಬಿಐ ನೀಡಿರುವ ಅವಕಾಶದಿಂದ ಬಾಕಿ ಪಾವತಿ ಮುಂದೂಡಬಹುದು ಅಷ್ಟೇ. ಆದರೆ ಈ ಅವಧಿ ಮುಗಿದ ಮೇಲೆ ಬಾಕಿ ಉಳಿಸಿಕೊಂಡ ಮೊತ್ತದ ಮೇಲೆ ಬಡ್ಡಿಯನ್ನೂ ಸೇರಿಸಿ ಕಟ್ಟಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+