ಹಣಕಾಸು ವರ್ಷ 2022-23ರಲ್ಲಿ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳ ಮೌಲ್ಯ ಹಾಗೂ ಪ್ರಮಾಣ ಎರಡೂ ಕೂಡಾ ಏರಿಕೆಯಾಗಿದೆ ಎಂದು ಆರ್‌ಬಿಐನ ವರದಿಯು ಹೇಳಿದೆ. 2022-23ರಲ್ಲಿ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳ ಮೌಲ್ಯವು ಶೇಕಡ 7.8ರಷ್ಟು ಏರಿಕೆಯಾಗಿದ್ದರೆ, ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳ ಪ್ರಮಾಣ ಶೇಕಡ 4.4ರಷ್ಟು ಏರಿಕೆಯಾಗಿದೆ.
ಈ ಹಿಂದಿನ ವರ್ಷದಲ್ಲಿ ಅಂದರೆ 2021-22ರ ಹಣಕಾಸು ವರ್ಷದಲ್ಲಿ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳ ಮೌಲ್ಯವು ಶೇಕಡ 9.9ರಷ್ಟು ಏರಿಕೆಯಾಗಿದ್ದರೆ, ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳ ಪ್ರಮಾಣ ಶೇಕಡ 5ರಷ್ಟು ಏರಿಕೆಯಾಗಿದೆ ಎಂದು ಆರ್‌ಬಿಐ ವಾರ್ಷಿಕ ವರದಿಯು ವಿವರಿಸಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಚಲಾವಣೆಯಲ್ಲಿರುವ ನೋಟುಗಳು ಎಷ್ಟಿದೆ?
ಮೌಲ್ಯದ ಲೆಕ್ಕಾಚಾರದಲ್ಲಿ ನಾವು ಹೇಳುವುದಾದರೆ 500 ರೂಪಾಯಿ ಮತ್ತು 2,000 ರೂಪಾಯಿ ಬ್ಯಾಂಕ್ ನೋಟುಗಳ ಪಾಲು ಮಾರ್ಚ್ 31, 2023 ರಂತೆ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳ ಒಟ್ಟು ಮೌಲ್ಯವು ಶೇಕಡ 87.9ರಷ್ಟಿದೆ. ಒಂದು ವರ್ಷದ ಹಿಂದೆ ಶೇಕಡ 87.1 ಆಗಿತ್ತು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2000 ರೂಪಾಯಿ ನೋಟಿನ ಬಗ್ಗೆ ಮೇ 19ರಂದು ದೇಶದಲ್ಲಿ ಚಲಾವಣೆಯಲ್ಲಿದ್ದ 2000 ರೂಪಾಯಿ ಮುಖಬೆಲೆಯ ನೋಟು ಚಲಾವಣೆ ಸ್ಥಗಿತಗೊಳಿಸಿ, ಅದನ್ನು ವಾಪಾಸ್ ಪಡೆಯುವುದಾಗಿ ತಿಳಿಸಿದೆ. ಮೇ 23ರಿಂದ ನೋಟು ಬದಲಾವಣೆ ಪ್ರಕ್ರಿಯೆ ಆರಂಭವಾಗಿದ್ದು ಸೆಪ್ಟೆಂಬರ್ 30ರವರೆಗೆ ಈ ಪ್ರಕ್ರಿಯೆ ನಡೆಯಲಿದೆ.
ಇನ್ನು ಪ್ರಮಾಣದ ಲೆಕ್ಕಾಚಾರದಲ್ಲಿ ನೋಡಿದಾಗ 500 ರೂಪಾಯಿ ಮುಖಬೆಲೆಯ ನೋಟುಗಳು ಶೇಕಡ 37.9 ರಷ್ಟು ಇದೆ. ಅಂದರೆ ಅತ್ಯಧಿಕ ಪಾಲು ಇದೆ. ಮಾರ್ಚ್ 31, 2023 ರಂತೆ ಚಲಾವಣೆಯಲ್ಲಿರುವ ಒಟ್ಟು ಬ್ಯಾಂಕ್ ನೋಟುಗಳಲ್ಲಿ ಶೇಕಡ 19.2ರಷ್ಟು 10 ರೂಪಾಯಿಯ ನೋಟುಗಳು ಆಗಿದೆ ಎಂದು ವರದಿಯು ಹೇಳಿದೆ.
2023 ರ ಮಾರ್ಚ್ ಅಂತ್ಯದ ವೇಳೆಗೆ 500 ರೂಪಾಯಿ ಮುಖಬೆಲೆಯ 5,16,338 ಲಕ್ಷ ನೋಟುಗಳು ಅಂದರೆ ಒಟ್ಟು 25,81,690 ಕೋಟಿ ರೂಪಾಯಿ ಮೌಲ್ಯದ ನೋಟುಗಳು ಚಲಾವಣೆಯಲ್ಲಿದೆ. ಮಾರ್ಚ್ 2022 ರ ಅಂತ್ಯದ ವೇಳೆಗೆ 500 ರೂಪಾಯಿ ಮುಖಬೆಲೆಯ 4,55,468 ಲಕ್ಷ ನೋಟುಗಳು ಅಂದರೆ 3,62,220 ಕೋಟಿ ರೂಪಾಯಿ ನೋಟುಗಳು ಚಲಾವಣೆಯಲ್ಲಿದೆ ಎಂದು ವರದಿ ಹೇಳಿದೆ.
ಇನ್ನು ಪ್ರಮಾಣದ ಲೆಕ್ಕಾಚಾರದಲ್ಲಿ ನಾವು ಹೇಳುವುದಾದರೆ, ಚಲಾವಣೆಯಲ್ಲಿರುವ 2000 ರೂಪಾಯಿಯ ನೋಟುಗಳ ಪ್ರಮಾಣವು ಮಾರ್ಚ್ 2023ರ ಅಂತ್ಯದಲ್ಲಿ ಶೇಕಡ 1.3ರಷ್ಟು ಇಳಿಕೆಯಾಗಿದೆ. ಒಂದು ವರ್ಷದ ಹಿಂದೆ ನಾವು ನೋಡಿದಾಗ ಶೇಕಡ 1.6ರಷ್ಟು ಇಳಿಕೆಯಾಗಿದೆ. ಇನ್ನು ಮೌಲ್ಯದ ಲೆಕ್ಕಾಚಾರದಲ್ಲಿ ನಾವು ನೋಡಿದಾಗ ಮಾರ್ಚ್ 2022ರ ಅಂತ್ಯದಲ್ಲಿ ಶೇಕಡ 13.8 ರಿಂದ ಶೇಕಡ 10.8 ಕ್ಕೆ ಇಳಿದಿದೆ.
ಪ್ರಸ್ತುತ, ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳು ರೂ 2, ರೂ 5, ರೂ 10, ರೂ 20, ರೂ 50, ರೂ 100, ರೂ 200, ರೂ 500 ಮತ್ತು ರೂ 2,000 ಮುಖಬೆಲೆಯ ನೋಟುಗಳು ಆಗಿದೆ. ಚಲಾವಣೆಯಲ್ಲಿರುವ ನಾಣ್ಯಗಳು 50 ಪೈಸೆ ಮತ್ತು ರೂ 1, ರೂ 2, ರೂ 5, ರೂ 10 ಮತ್ತು ರೂ 20 ಮುಖಬೆಲೆಯ ನಾಣ್ಯಗಳು ಆಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್‌ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್‌ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್‌ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್‌ಬಿಐ ನಿರ್ಧಾರದ ಅಸಲಿ ಸತ್ಯ

ಆರ್‌ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications