Aadhaar-PAN Linking: ಆಧಾರ್ ಪ್ಯಾನ್ ಲಿಂಕಿಂಗ್ ಗಡುವು ಅಂತ್ಯ, ಪ್ಯಾನ್ ನಿಷ್ಕ್ರೀಯವಾದರೆ ಏನು ಮಾಡುವುದು?

ಭಾರತದಲ್ಲಿ ಅತೀ ಪ್ರಮುಖವಾದ ದಾಖಲೆಗಳ ಪೈಕಿ ಹೆಚ್ಚಾಗಿ ಬಳಕೆ ಮಾಡಲಾಗುವ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಪ್ಯಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆಯು ಹಲವಾರು ಬಾರಿ ಅವಕಾಶವನ್ನು ನೀಡಿದೆ. ಗಡುವನ್ನು ವಿಸ್ತರಣೆ ಮಾಡುತ್ತಾ ಬಂದಿದೆ. ಆದರೆ ಈಗ ಗಡುವು ಕೊನೆಯಾಗಿದೆ. ಈ ನಡುವೆ ಪ್ಯಾನ್ ನಿಷ್ಕ್ರೀಯವಾದರೆ ನಾವೇನು ಮಾಡುವುದು?

ಹೌದು, ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ಕೊನೆಯ ದಿನಾಂಕವು ಜೂನ್ 30, 2023 ಆಗಿತ್ತು. ಈವರೆಗೂ ಆಧಾರ್ ಕಾರ್ಡ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಿಲ್ಲದಿದ್ದರೆ ನೀವು ಅಧಿಕ ದಂಡವನ್ನು ಪಾವತಿ ಮಾಡಬೇಕಾಗುತ್ತದೆ ಮತ್ತು ಪ್ಯಾನ್ ನಿಷ್ಕ್ರೀಯವಾಗಿ ಹಣಕಾಸು ವಹವಾಟಿಗೆ ತೊಂದರೆ ಉಂಟಾಗಲಿದೆ. ಈ ಹಿಂದೆ ಹಲವಾರು ಬಾರಿ ಗಡುವು ವಿಸ್ತರಣೆ ಮಾಡಲಾಗಿದೆ. ಆದರೆ ಈ ಬಾರಿ ಮಾತ್ರ ಗಡುವು ವಿಸ್ತರಣೆ ಮಾಡಲಾಗಿಲ್ಲ.

 ಆಧಾರ್ ಪ್ಯಾನ್ ಲಿಂಕಿಂಗ್: ಪ್ಯಾನ್ ನಿಷ್ಕ್ರೀಯವಾದರೆ ಏನು ಮಾಡುವುದು?

ಪ್ಯಾನ್ ಕಾರ್ಡ್ ನಿಷ್ಕ್ರೀಯವಾದರೆ ಏನು ಮಾಡುವುದು?

ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗದಿದ್ದರೆ, ಜುಲೈ 1, 2023ರಿಂದ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ. ಅಂದರೆ ಯಾವುದೇ ಹಣಕಾಸು ಕಾರ್ಯಗಳಿಗೂ ನೀವು ಪ್ಯಾನ್ ಕಾರ್ಡ್ ಅನ್ನು ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಆಧಾರ್ ಲಿಂಕ್ ಮಾಡದ ಕಾರಣದಿಂದಾಗಿ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾದರೆ ನೀವು ಏನು ಮಾಡಬೇಕಾಗುತ್ತದೆ ಎಂಬ ಬಗ್ಗೆ ಈಗಾಗಲೇ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ (ಸಿಬಿಡಿಟಿ) ಸ್ಪಷ್ಟಣೆಯನ್ನು ನೀಡಿದೆ.

ನಿಷ್ಕ್ರೀಯವಾದ ಪ್ಯಾನ್ ಕಾರ್ಡ್ ಅನ್ನು ಹೇಗೆ ಮತ್ತೆ ಆಕ್ಟಿವೇಟ್ ಮಾಡುವುದು ಎಂದು ಮಾರ್ಚ್ 28, 2023ರಂದು ಸಿಬಿಡಿಟಿ ಸುತ್ತೋಲೆಯ ಮೂಲಕ ಮಾಹಿತಿಯನ್ನು ನೀಡಿದೆ. ನಿಮ್ಮ ಪ್ಯಾನ್ ನಿಷ್ಕ್ರಿಯಗೊಂಡರೆ ನೀವು ಯಾವೆಲ್ಲ ಕಾರ್ಯಗಳಿಗೆ ಪ್ಯಾನ್ ಕಾರ್ಡ್ ಅಗತ್ಯವಾಗಿರುತ್ತದೆಯೋ ಆ ಕಾರ್ಯವನ್ನು ಮಾಡಲು ಸಾಧ್ಯವಾಗುವುದಿಲ್ಲ. ಹಾಗೆಯೇ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ಫೈಲ್ ಮಾಡಲು ಕೂಡಾ ಸಾಧ್ಯವಾಗುವುದಿಲ್ಲ.

"ಒಂದು ಸಾವಿರ ರೂಪಾಯಿ ಶುಲ್ಕವನ್ನು ಪಾವತಿಸಿದ ನಂತರ ನಿಗದಿತ ಪ್ರಾಧಿಕಾರಕ್ಕೆ ಆಧಾರ್ ಕಾರ್ಡ್ ಮಾಹಿತಿಯನ್ನು ಸಲ್ಲಿಸಿದ ಬಳಿಕ ನೀವು ಪ್ಯಾನ್ ಕಾರ್ಡ್ ಅನ್ನು 30 ದಿನಗಳಲ್ಲಿ ಮತ್ತೆ ಸಕ್ರಿಯಗೊಳಿಸಬಹುದಾಗಿದೆ," ಎಂದು ಈ ಹಿಂದೆ ಮಾರ್ಚ್‌ನಲ್ಲಿ ಹೊರಡಿಸಿದ ಸುತ್ತೋಲೆಯಲ್ಲಿ ಆದಾಯ ತೆರಿಗೆ ಇಲಾಖೆಯು ತಿಳಿಸಿದೆ.

ಪ್ಯಾನ್ ಮತ್ತೆ ಸಕ್ರಿಯವಾಗಬೇಕಾದರೆ ನೀವು ಒಂದು ಸಾವಿರ ರೂಪಾಯಿ ದಂಡವನ್ನು ಪಾವತಿಸುವುದು ಕಡ್ಡಾಯವಾಗಿದೆ. ಅದಾದ 30 ದಿನಗಳವರೆಗೆ ಪ್ಯಾನ್ ಕಾರ್ಯನಿರ್ವಹಿಸುವುದಿಲ್ಲ. ಇನ್ನೊಂದೆಡೆ ನೀವು ನಿಷ್ಕ್ರೀಯವಾದ ಪ್ಯಾನ್ ಕಾರ್ಡ್ ಅನ್ನು ಬಳಸಿಕೊಂಡು ಯಾವುದೇ ಹಣಕಾಸು ವಹಿವಾಟನ್ನು ನಡೆಸಿದರೂ ನೀವು 10 ಸಾವಿರ ರೂಪಾಯಿ ದಂಡವನ್ನು ಪಾವತಿ ಮಾಡಬೇಕಾಗುತ್ತದೆ ಎಂದು ಈ ಹಿಂದೆ ವರದಿಯಾಗಿದೆ.

ಆಧಾರ್- ಪ್ಯಾನ್ ಲಿಂಕ್‌ಗೆ ದಂಡ ಪಾವತಿಸುವುದು ಹೇಗೆ?

ಹಂತ 1: ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ.
ಹಂತ 2: ನಿಮ್ಮ ಖಾತೆಗೆ ಲಾಗಿನ್ ಆಗಬೇಕಾಗುತ್ತದೆ.
ಹಂತ 3: Link PAN with Aadhaar ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 4: ಎಲ್ಲ ಅಗತ್ಯ ಮಾಹಿತಿಗಳನ್ನು ನಮೂದಿಸಿ
ಹಂತ 5: ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇ-ಪೇ ತೆರಿಗೆಯನ್ನು ಬಳಸಿ.
ಹಂತ 6: PAN/TAN ವಿಭಾಗದಲ್ಲಿ ಪ್ಯಾನ್ ನಂಬರ್ ನಮೂದಿಸಿದ ಬಳಿಕ ಮೊಬೈಲ್ ಸಂಖ್ಯೆಯನ್ನು ನಮೂದಿಸಿ
ಹಂತ 7: PAN/TANನಲ್ಲಿ ನಲ್ಲಿ ಎರಡನೇ ಬಾರಿಗೆ ಪ್ಯಾನ್ ಕಾರ್ಡ ನಮೂದಿಸಿ Confirm ಕ್ಲಿಕ್ ಮಾಡಿ
ಹಂತ 8: ಅದಾದ ಬಳಿಕ Continue ಬಟನ್ ಕ್ಲಿಕ್ ಮಾಡಿ
ಹಂತ 9: 2023-24 ವರ್ಷವನ್ನು ಆಯ್ಕೆ ಮಾಡಿ, ಇತರ ರಸೀದಿಗಳನ್ನು (500) ಆಯ್ಕೆ ಮಾಡಿ Proceed ಅನ್ನು ಕ್ಲಿಕ್ ಮಾಡಿ
ಹಂತ 10: Others ಆಯ್ಕೆಯು ಈಗಾಗಲೇ ತುಂಬಿದ ಮೊತ್ತವನ್ನು ಹೊಂದಿರುತ್ತದೆ. Continue ಬಟನ್ ಕ್ಲಿಕ್ ಮಾಡುವ ಮೂಲಕ ಪಾವತಿ ಮಾಡಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+