ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಕೋಟಕ್ ಮಹೀಂದ್ರಾ ಬ್ಯಾಂಕ್ ಡೆಬಿಟ್ ಕಾರ್ಡ್‌ನ ವಾರ್ಷಿಕ ಶುಲ್ಕವನ್ನು ಏರಿಕೆ ಮಾಡಿದೆ. ಈ ನೂತನ ಡೆಬಿಟ್ ಕಾರ್ಡ್ ವಾರ್ಷಿಕ ಶುಲ್ಕವು ಮೇ 22, 2023ರಿಂದ ಜಾರಿಗೆ ಬರಲಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಡೆಬಿಟ್ ಕಾರ್ಡ್‌ನ ವಾರ್ಷಿಕ ಶುಲ್ಕವನ್ನು 60 ರೂಪಾಯಿ ಏರಿಕೆ ಮಾಡಿದೆ.
ಕೋಟಕ್ ಮಹೀಂದ್ರಾ ಬ್ಯಾಂಕ್ ನೀಡಿರುವ ಡೇಟಾ ಪ್ರಕಾರ, ಪ್ರಸ್ತುತ ಡೆಬಿಟ್ ಕಾರ್ಡ್ ವಾರ್ಷಿಕ ಶುಲ್ಕವು 199 ರೂಪಾಯಿ ಪ್ಲಸ್ ಜಿಎಸ್‌ಟಿಯಾಗಿದೆ. ಈ ನೂತನ ದರವು ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಎಲ್ಲ ಖಾತೆಗಳ ಡೆಬಿಟ್ ಕಾರ್ಡ್‌ಗೆ ಅನ್ವಯವಾಗುತ್ತದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಈ ಶುಲ್ಕ ಏರಿಕೆಯ ಬಗ್ಗೆ ಇಮೇಲ್ ಅನ್ನು ಮಾಡಿದೆ. ಮೇ 22ರಿಂದ ಈ ನೂತನ ಶುಲ್ಕ ಜಾರಿಗೆ ಬರಲಿದೆ ಎಂದು ತಿಳಿಸಿದೆ.

"ಮೇ 22, 2023ರಿಂದ ಜಾರಿಗೆ ಬರುವಂತೆ ಕೋಟಕ್ ಮಹೀಂದ್ರಾ ಬ್ಯಾಂಕ್ ವಾರ್ಷಿಕ ಡೆಬಿಟ್ ಕಾರ್ಡ್ ಶುಲ್ಕವನ್ನು ಪರಿಷ್ಕರಣೆ ಮಾಡಲಾಗಿದೆ. ವಾರ್ಷಿಕ ಡೆಬಿಟ್ ಕಾರ್ಡ್ ಶುಲ್ಕವನ್ನು 199 ರೂಪಾಯಿ+ ಜಿಎಸ್‌ಟಿಯಿಂದ 259 ರೂಪಾಯಿ + ಜಿಎಸ್‌ಟಿಗೆ ಹೆಚ್ಚಳ ಮಾಡಲಾಗಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಬೇರೆ ಬೇರೆ ರೀತಿಯ ಉಳಿತಾಯ ಖಾತೆಯನ್ನು ಹೊಂದಿದೆ. ಇವೆಲ್ಲವುದಕ್ಕೂ ಈ ದರ ಅನ್ವಯವಾಗಲಿದೆ.
ಜೂನ್ ತಿಂಗಳಿನಿಂದ ಅನ್ವಯವಾಗುವ ಬ್ಯಾಂಕ್ ಶುಲ್ಕಗಳು
ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸಲು ವಿಫಲವಾದರೆ ಶುಲ್ಕ: ಕೋಟಾಕ್ ಮಹೀಂದ್ರಾ ಬ್ಯಾಂಕ್ ಯಾವುದೇ ಖಾತೆಯಲ್ಲಿ 500, 600 ರೂಪಾಯಿಗಿಂತ ಕಡಿಮೆ ಮೊತ್ತವಿದ್ದರೆ ಶೇಕಡ 6ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ಸಾಮಾನ್ಯ ಖಾತೆಗಳಿಗೆ ಶುಲ್ಕ ಅನ್ವಯವಾಗುತ್ತದೆ. ಆದರೆ ಏಕರೂಪದ ಸೇವೆಗಳು, ಸಾರ್ವಜನಿಕ ಸೇವೆಗಳು ಮತ್ತು ವಿಶ್ವವಿದ್ಯಾಲಯದ ಖಾತೆಗಳಿಗೆ, ವೇತನದಾರರ ಸ್ಯಾಲರಿ ಖಾತೆಗೆ ಯಾವುದೇ ಕನಿಷ್ಠ ಮಿತಿಯಿಲ್ಲ. ಆದ್ದರಿಂದಾಗಿ ಶುಲ್ಕ ವಿಧಿಸಲಾಗುವುದಿಲ್ಲ.
ವಹಿವಾಟಿನ ವೈಫಲ್ಯಕ್ಕೆ ಶುಲ್ಕ: ಹಣಕಾಸಿನೇತರ ಕಾರಣಗಳಿಗಾಗಿ ನೀಡಲಾದ ಚೆಕ್‌ಗಳಿಗೆ ಪ್ರತಿ ಬಾರಿ 50 ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತದೆ. ಠೇವಣಿ ಮಾಡಿದ ಮತ್ತು ರಿಟರ್ನ್ ಆದ ಚೆಕ್‌ಗಳನ್ನು ಒಳಗೊಂಡಿರುವ ವಹಿವಾಟುಗಳಿಗೆ ಶುಲ್ಕಗಳು 200 ರೂಪಾಯಿ ಆಗಿದೆ.
ಡೆಬಿಟ್ ಕಾರ್ಡ್‌ಗೆ ಸಂಬಂಧಿಸಿದ ಇತರೆ ಶುಲ್ಕಗಳು
* ಕಳೆದುಹೋದ ಅಥವಾ ಕಳುವಾದ ಡೆಬಿಟ್ ಕಾರ್ಡ್ ಅನ್ನು ಬದಲಾವಣೆ ಮಾಡಲು ನಾವು 200 ರೂಪಾಯಿ ಪಾವತಿಸಬೇಕಾಗುತ್ತದೆ.
* ಸಾಕಷ್ಟು ಹಣವಿಲ್ಲದ ಕಾರಣ ನಿರಾಕರಿಸಲಾದ ದೇಶೀಯ ಎಟಿಎಂ ವಹಿವಾಟುಗಳಿಗೆ ಪ್ರತಿ ವಹಿವಾಟಿಗೆ 250 ರೂಪಾಯಿ ಪಾವತಿ ಮಾಡಲಾಗುತ್ತದೆ.
* ತಿಂಗಳಿಗೆ ಒಂದು ಕಾರ್ಡ್‌ಲೆಸ್ ನಗದು ಹಿಂಪಡೆಯುವಿಕೆ (ಐಎಂಟಿ) ಯಾವುದೇ ಶುಲ್ಕಗಳಿಲ್ಲ, ಯಾವುದೇ ಹೆಚ್ಚುವರಿ ವಿತ್‌ಡ್ರಾಗಳಿಗೆ 10 ರೂಪಾಯಿ ಕಡಿತ ಮಾಡಲಾಗುತ್ತದೆ.
ಕೋಟಕ್ ಮಹೀಂದ್ರಾ ಬ್ಯಾಂಕ್ ನೂತನ ಬಡ್ಡಿದರ
ಕೋಟಕ್ ಮಹೀಂದ್ರಾ ಬ್ಯಾಂಕ್ ನೂತನ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಏಪ್ರಿಲ್ 10, 2023ರಿಂದ ಜಾರಿಗೆ ಬರುವಂತೆ ಕೋಟಕ್ ಮಹೀಂದ್ರಾ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿದೆ ಎಂದು ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
7 ದಿನದಿಂದ 10 ದಿನಗಳ ಅವಧಿಯ ಫಿಕ್ಸಿಡ್ ಡೆಪಾಸಿಟ್ ಮೇಲೆ ಕೋಟಕ್ ಮಹಿಂದ್ರಾ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ ಶೇಕಡ 2.75ರಿಂದ ಶೇಕಡ 7.20ರಷ್ಟು ಬಡ್ಡಿದರವನ್ನು ನೀಡುತ್ತದೆ. ಇನ್ನು ಹಿರಿಯ ನಾಗರಿಕರಿಗೆ ಶೇಕಡ 3.25ರಿಂದ ಶೇಕಡ 7.70ರಷ್ಟು ಬಡ್ಡಿದರವನ್ನು ನೀಡುತ್ತದೆ.
ಇನ್ನು 390 ದಿನದಿಂದ 2 ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಮೆಚ್ಯೂರಿಟಿ ಹೊಂದುವ (12 ತಿಂಗಳು 25 ದಿನ) ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಫಿಕ್ಸಿಡ್ ಡೆಪಾಸಿಟ್ ಮೇಲೆ ಶೇಕಡ 7.20ರಷ್ಟು ಬಡ್ಡಿದರ ನೀಡುತ್ತದೆ. ಸಾಮಾನ್ಯ ನಾಗರಿಕರಿಗೆ ಶೇಕಡ 7.20ರಷ್ಟು ಬಡ್ಡಿದರ ನೀಡಲಾಗುತ್ತದೆ.
ಇನ್ನು ಹಿರಿಯ ನಾಗರಿಕರಿಗೆ ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಗರಿಷ್ಠ ಶೇಕಡ 7.70ರಷ್ಟು ಬಡ್ಡಿದರವಿದೆ. ಇನ್ನು ಫಿಕ್ಸಿಡ್ ಡೆಪಾಸಿಟ್ ಅನ್ನು ಅಕಾಲಿಕವಾಗಿ ವಿತ್‌ಡ್ರಾ ಮಾಡುವ ಸೌಲಭ್ಯವನ್ನು ಹೊಂದಿದೆ. ಹಾಗೆಯೇ ಕೊನೆಯ ದಿನಾಂಕಕ್ಕೂ ಮುನ್ನ ಎಫ್‌ಡಿ ಅನ್ನು ಮುಚ್ಚುವ ಅವಕಾಶವಿದೆ.


Click it and Unblock the Notifications