ಮುಂದಿನ ವಾರದಲ್ಲೇ ದೀಪಾವಳಿ ಆರಂಭವಾಗಲಿದೆ. ಈಗಾಗಲೇ ದೀಪಾವಳಿ ಆಚರಣೆಗೆ ತಯಾರಿಯನ್ನು ಜನರು ನಡೆಸುತ್ತಿದ್ದಾರೆ. ಧನತ್ರಯೋದಶಿ ದಿನದಂದು ಬಂಗಾರ, ಬೆಳ್ಳಿ ಖರೀದಿ ಮಾಡುವ ಯೋಜನೆಯನ್ನು ಕೂಡಾ ಹಲವಾರು ಮಂದಿ ಈಗಾಗಲೇ ಹಾಕಿಕೊಂಡಿದ್ದಾರೆ. ಆದರೆ ಈ ನಡುವೆ ನಿಮಗೆ ಯಾವುದೇ ಬ್ಯಾಂಕ್ ಸಂಬಂಧಿತ ವಹಿವಾಟು ನಡೆಸಬೇಕಾಗಿದ್ದರೆ ಇನ್ನು ಆರು ದಿನ ಕಾಯಬೇಕಾಗುತ್ತದೆ.
ಹೌದು ಧನತ್ರಯೋದಶಿ, ದೀಪಾವಳಿ ಹಬ್ಬ ಬಂದಿರುವಾಗ ಬ್ಯಾಂಕ್‌ಗಳು ನಾಳೆಯಿಂದ ಅಂದರೆ ಅಕ್ಟೋಬರ್ 22ರಿಂದ ಆರು ದಿನಗಳ ಕಾಲ ಬಂದ್ ಆಗಿರಲಿದೆ. ಇದರಲ್ಲಿ ಎರಡನೇ ಶನಿವಾರ ಹಾಗೂ ಭಾನುವಾರದ ವಾರದ ರಜೆ ಕೂಡಾ ಸೇರಿದೆ. ಧನತ್ರಯೋದಶಿ ಹಾಗೂ ಎರಡನೇ ಶನಿವಾರದ ಕಾರಣದಿಂದಾಗಿ ಶನಿವಾರ (ಅಕ್ಟೋಬರ್ 22) ದೇಶದಾದ್ಯಂತ ಎಲ್ಲ ಬ್ಯಾಂಕುಗಳು ಬಂದ್ ಆಗಿರುತ್ತದೆ.
ಇನ್ನು ಅಕ್ಟೋಬರ್ 23 ಭಾನುವಾರ ವಾರದ ರಜೆಯಾದ ಕಾರಣದಿಂದಾಗಿ ಎಲ್ಲ ಬ್ಯಾಂಕುಗಳು ಬಂದ್ ಆಗಿರುತ್ತದೆ. ಹೀಗೆಯೇ ಆರು ದಿನಗಳ ಕಾಲ ಬ್ಯಾಂಕ್ ಬಂದ್ ಆಗಿರಲಿದೆ. ಆದರೆ ಈ ರಜೆಗಳು ಎಲ್ಲ ರಾಜ್ಯಗಳಿಗೆ ಅನ್ವಯಿಸದು. ಕರ್ನಾಟಕದಲ್ಲಿ ಯಾವೆಲ್ಲ ದಿನ ಬ್ಯಾಂಕ್ ಬಂದ್ ಆಗಿರುತ್ತದೆ ಎಂದು ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ...
ಬ್ಯಾಂಕ್ ರಜಾದಿನಗಳ ಪಟ್ಟಿ
ಅಕ್ಟೋಬರ್ 22: ನಾಲ್ಕನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ಬಂದ್
ಅಕ್ಟೋಬರ್ 23: ಭಾನುವಾರ (ವಾರದ ರಜೆ), ದೇಶದಾದ್ಯಂತ ಬ್ಯಾಂಕ್ ಬಂದ್
ಅಕ್ಟೋಬರ್ 24: ಕಾಳಿ ಪೂಜೆ/ ದೀಪಾವಳಿ/ ಲಕ್ಷ್ಮೀ ಪೂಜೆ/ ನರಕ ಚತುರ್ದಶಿ, (ಹೈದಾರಾಬಾದ್, ಇಂಫಾಲ್, ಗಾಂಗ್ಟಾಕ್ ಹೊರತುಪಡಿಸಿ ದೇಶದಾದ್ಯಂತ ಬ್ಯಾಂಕ್ ಬಂದ್)
ಅಕ್ಟೋಬರ್ 25: ಲಕ್ಷ್ಮೀ ಪೂಜೆ/ ದೀಪಾವಳಿ/ ಗೋ ಪೂಜೆ, ಹೈದಾರಾಬಾದ್, ಇಂಫಾಲ್, ಗಾಂಗ್ಟಾಕ್, ಜೈಪುರದಲ್ಲಿ ಬ್ಯಾಂಕ್ ಬಂದ್ ಆಗಿರುತ್ತದೆ.
ಅಕ್ಟೋಬರ್ 26: ಗೋ ಪೂಜೆ/ ವಿಕ್ರಮ ಸಂವಂತ ಹೊಸ ವರ್ಷ ದಿನ/ ಬಾಯ್ ಬಿಜ್/ ಬಾಯ್ ದುಜ್/ ದೀಪಾವಳಿ (ಬಲಿ ಪಾಡ್ಯಮಿ)/ ಲಕ್ಷ್ಮೀ ಪೂಜೆ, ಅಹಮದಾಬಾದ್, ಬೆಂಗಳೂರು, ಡೆಹ್ರಾಡೂನ್, ಗಾಂಗ್ಟಾಕ್, ಜಮ್ಮು, ಕಾನ್ಪುರ, ಮುಂಬೈ, ಲಕ್ನೋ, ಶಿಮ್ಲಾ, ಶ್ರೀನಗರದಲ್ಲಿ ಬ್ಯಾಂಕ್ ಬಂದ್
ಅಕ್ಟೋಬರ್ 27: ಬಾಯ್‌ದೂಜ್/ ಚಿತ್ರಗುಪ್ತ ಜಯಂತಿ/ ಲಕ್ಮೀ ಪೂಜೆ/ ದೀಪಾವಳಿ, ಇಂಫಾಲ್, ಗಾಂಗ್ಟಾಕ್, ಕಾನ್ಪುರ, ಲಕ್ನೋದಲ್ಲಿ ಬ್ಯಾಂಕ್ ಬಂದ್ ಆಗಿರಲಿದೆ.
ಕರ್ನಾಟಕದಲ್ಲಿ ಯಾವೆಲ್ಲ ದಿನ ಬ್ಯಾಂಕ್ ಬಂದ್
ಅಕ್ಟೋಬರ್ 22: ನಾಲ್ಕನೇ ಶನಿವಾರ
ಅಕ್ಟೋಬರ್ 23: ಭಾನುವಾರ (ವಾರದ ರಜೆ)
ಅಕ್ಟೋಬರ್ 24: ದೀಪಾವಳಿ
ಅಕ್ಟೋಬರ್ 26: ದೀಪಾವಳಿ
ಇದನ್ನು ಹೊರತುಪಡಿಸಿ ಈ ತಿಂಗಳಲ್ಲಿ ಕೊನೆಯ ಭಾನುವಾರವಾದ ಅಕ್ಟೋಬರ್ 30ರಂದು ಕೂಡಾ ಕರ್ನಾಟಕದಲ್ಲಿ ಬ್ಯಾಂಕ್ ಬಂದ್ ಆಗಿರುತ್ತದೆ.
ರಜಾದಿನಗಳ ಮೂರು ವರ್ಗೀಕರಣ
ಆರ್‌ಬಿಐ ನಿಯಮದ ಪ್ರಕಾರ ರಜಾ ದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ. ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಮೂರು ರಜಾ ವರ್ಗೀಕರಣವಾಗಿದೆ.


Click it and Unblock the Notifications