ದೀಪಾವಳಿಯು ಭಾರತದ ಅತಿದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಇದು ಆಚರಣೆ ಮತ್ತು ಸಂತೋಷದ ಸಮಯವಾಗಿದೆ. ಆದರೂ ಅನೇಕ ಜನರಿಗೆ ಇದು ಆರ್ಥಿಕ ಒತ್ತಡದ ಸಮಯವಾಗಿರುತ್ತದೆ. ಹಬ್ಬದ ಸೀಸನ್‌ನಲ್ಲಿ ಹೊಸ ಬಟ್ಟೆ, ಉಡುಗೊರೆಗಳು ಮತ್ತು ಸಿಹಿತಿಂಡಿಗಳನ್ನು ಖರೀದಿಸುವ ವೆಚ್ಚವು ನಿಮ್ಮ ಆರ್ಥಿಕ ಹೊರೆಗೆ ಸೇರುತ್ತದೆ.
ದೀಪಾವಳಿ ಸಮಯದಲ್ಲಿ ಆರ್ಥಿಕ ಒತ್ತಡವನ್ನು ಎದುರಿಸುವ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ಅದನ್ನು ಹೇಗೆ ನಿಭಾಯಿಸುವುದು ಎಂಬ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ. ರಿಯಾಲಿಸ್ಟಿಕ್ ಆಗಿರುವುದು ಅತೀ ಮುಖ್ಯ. ನಿಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಿದರೆ ಖಂಡಿತವಾಗಿ ಆರ್ಥಿಕ ಒತ್ತಡ ಉಂಟಾಗುತ್ತದೆ.

ನೀವು ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡದೆ ಜೊತೆಗೆಯೇ ಅಗತ್ಯವಾದ ವಸ್ತುಗಳನ್ನು ಕೂಡಾ ಖರೀದಿ ಮಾಡುವುದು ಮುಖ್ಯವಾಗುತ್ತದೆ. ಅಂದರೆ ಕೆಲವು ಖರ್ಚಿಗೆ "ನೋ" ಎಂದರೆ ಇನ್ನು ಕೆಲವು ಖರ್ಚನ್ನು ಕಡಿಮೆ ಮಾಡಿಕೊಳ್ಳಿ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಬಜೆಟ್ ಮೊದಲೇ ಪ್ಲ್ಯಾನ್ ಮಾಡಿ
ಹಬ್ಬದ ಸಮಯದಲ್ಲಿ ಹಣಕಾಸಿನ ಒತ್ತಡವನ್ನು ತಪ್ಪಿಸಲು ನಿಮ್ಮ ಬಜೆಟ್ ಅನ್ನು ಮುಂಚಿತವಾಗಿ ಯೋಜಿಸುವುದು ಉತ್ತಮ ಮಾರ್ಗವಾಗಿದೆ. ಹೊಸ ಬಟ್ಟೆಗಳು, ಉಡುಗೊರೆಗಳು, ಸಿಹಿತಿಂಡಿಗಳು ಮತ್ತು ಅಲಂಕಾರಗಳ ವೆಚ್ಚದಂತಹ ಎಲ್ಲ ವೆಚ್ಚಗಳನ್ನು ಮೊದಲು ಲೀಸ್ಟ್ ಮಾಡಿಕೊಳ್ಳಿ. ಒಮ್ಮೆ ನೀವು ನಿಮ್ಮ ಖರ್ಚುಗಳ ಲೀಸ್ಟ್ ಅನ್ನು ಹೊಂದಿದ್ದರೆ, ಅದಕ್ಕೆ ಅನುಗುಣವಾಗಿ ನಿಮ್ಮ ಹಣವನ್ನು ಹೊಂದಿಸಲು ಪ್ರಾರಂಭಿಸಬಹುದು.
ರಿಯಾಯಿತಿಗಳು, ಆಫರ್‌ಗಳನ್ನು ಪರಿಶೀಲಿಸಿ
ಸರಕು ಮತ್ತು ಸೇವೆಗಳ ವೆಚ್ಚವು ದೀಪಾವಳಿ ಸಮೀಪವಾಗುತ್ತಿದ್ದಂತೆ ಅಧಿಕವಾಗುತ್ತದೆ. ನೀವು ಬೇಗನೆ ಶಾಪಿಂಗ್ ಮಾಡಿದರೆ, ಉತ್ತಮ ಡೀಲ್‌ನಲ್ಲಿ ಖರೀದಿ ಮಾಡಬಹುದು. ನೀವು ಯಾವುದೇ ವಸ್ತು ಖರೀದಿಸುವ ಮೊದಲು, ವಿವಿಧ ಅಂಗಡಿಗಳ ಬೆಲೆ ಹೋಲಿಕೆ ಮಾಡಿ.
ಉತ್ತಮ ಬೆಲೆಗಳಿಗಾಗಿ ನೀವು ಆನ್‌ಲೈನ್‌ನಲ್ಲಿ ರಿಟೇಲ್ ವ್ಯಾಪಾರಿಗಳ ಬೆಲೆಯನ್ನು ಕೂಡಾ ಪರಿಶೀಲಿಸಬಹುದು. ದೀಪಾವಳಿಯ ಸಮಯದಲ್ಲಿ ಅನೇಕ ಆಫರ್‌ಗಳು, ರಿಯಾಯಿತಿಗಳು ಮತ್ತು ಕೂಪನ್‌ಗಳು ಲಭ್ಯವಾಗುತ್ತದೆ. ಇತ್ತೀಚಿನ ಡೀಲ್‌ಗಾಗಿ ನಿಮ್ಮ ಮೆಚ್ಚಿನ ಶಾಪ್‌ಗಳ ಆಫರ್‌ಗಳ ಬಗ್ಗೆ ಪರಿಶೀಲಿಸಿ.
"ಹಬ್ಬಗಳು ಸಮೀಪಿಸುತ್ತಿದ್ದಂತೆ, ಕೆಲವು ಸರಕುಗಳು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಇದು ಬೆಲೆ ಏರಿಕೆಗೆ ಕಾರಣವಾಗುತ್ತದೆ. ಮುಂಚಿತವಾಗಿ ಖರೀದಿ ಮಾಡುವ ಮೂಲಕ, ಕೊಂಚ ಆಫರ್ ಪಡೆಯಬಹುದು. ಇದರಿಂದ ಹಣ ಉಳಿತಾಯ ಮಾಡಬಹುದು," ಎಂದು ಬ್ಯಾಂಕ್‌ಬಜಾರ್ ಡಾಟ್ ಕಾಮ್‌ನ ಸಿಇಒ ಆದಿಲ್ ಶೆಟ್ಟಿ ಹೇಳಿದ್ದಾರೆ.
ಸ್ನೇಹಿತರು, ಕುಟುಂಬದೊಂದಿಗೆ ಆಚರಿಸಿ
ನೀವು ದೀಪಾವಳಿ ಆಚರಣೆ ಖರ್ಚು ಕಡಿಮೆ ಮಾಡಬೇಕಾದರೆ, ಸ್ನೇಹಿತರು ಮತ್ತು ಕುಟುಂಬದೊಂದಿಗೆ ದೀಪಾವಳಿ ಆಚರಿಸುವುದು ಉತ್ತಮ ಆಯ್ಕೆಯಾಗಿದೆ. ಇದರಿಂದಾಗಿ ಜೊತೆಯಾಗಿ ಊಟ ಮಾಡಬಹುದು, ಆಟ ಆಡಬಹುದು, ಜೊತೆಯಾಗಿ ಸಮಯ ಕಳೆಯಬಹುದು. ಪ್ರೀತಿಪಾತ್ರರ ಜೊತೆ ಆಚರಿಸುವುದು ಹೆಚ್ಚಿನ ಹಣವನ್ನು ಖರ್ಚು ಮಾಡದೆ ಹಬ್ಬವನ್ನು ಆನಂದಿಸಲು ಉತ್ತಮ ಮಾರ್ಗವಾಗಿದೆ.
ಅನಗತ್ಯ ಖರ್ಚುಗಳನ್ನು ತಪ್ಪಿಸಿ
ದೀಪಾವಳಿಯ ಸಮಯದಲ್ಲಿ ನೀವು ತಪ್ಪಿಸಬಹುದಾದ ಹಲವಾರು ಅನಗತ್ಯ ವೆಚ್ಚಗಳಿವೆ. ಉದಾಹರಣೆಗೆ, ನಿಮ್ಮ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆಗಳನ್ನು ಖರೀದಿಸುವ ಅಗತ್ಯವಿಲ್ಲ. ನೀವು ಎಲ್ಲರಿಗೂ ದುಬಾರಿ ಉಡುಗೊರೆಗಳನ್ನು ಖರೀದಿಸಬೇಕಾಗಿಲ್ಲ. ಬದಲಾಗಿ, ನಿಮ್ಮ ಹತ್ತಿರದ ಪ್ರೀತಿಪಾತ್ರರಿಗೆ ಮಾತ್ರ ಉಡುಗೊರೆ ಖರೀದಿಸಬಹುದು.
ಶೋಆಫ್‌ಗಾಗಿ ಅಧಿಕ ವೆಚ್ಚಬೇಡ
ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಮೆಚ್ಚಿಸಲು ಹೊಸ ಬಟ್ಟೆ, ಉಡುಗೊರೆಗಳು ಮತ್ತು ಅಲಂಕಾರಕ್ಕೆ ಸಾಕಷ್ಟು ಹಣವನ್ನು ಖರ್ಚು ಮಾಡಬೇಕೆಂದು ಸಾಮಾನ್ಯವಾಗಿ ಭಾವಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಬಜೆಟ್ ಮೇಲೆ ಗಮನ ಹರಿಸಲ್ಲ. ನಿಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ಹಣ ಖರ್ಚು ಮಾಡಿ ಒತ್ತಡಕ್ಕೆ ಒಳಗಾಗಬೇಡಿ.


Click it and Unblock the Notifications